ಪ್ರವಾಸ

ದೇವರಾಯನ ದುರ್ಗದ ಚಾರಣ - 2014

Submitted by partha1059 on Tue, 02/25/2014 - 12:10

ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ.  ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨ ನೇ ದಿನಾಂಕ ಎಲ್ಲರೂ ಸೇರಿ ಹೋಗಿ ಬರುವದೆಂದು ಒಮ್ಮತದಿಂದ (?) ತೀರ್ಮಾನವಾಯಿತು. ಹಿಂದಿನ ದಿನವೆ ಸಂಜೆ ತುಮಕೂರಿಗೆ ನಾನು ಹೋಗಿದ್ದೆ. 

ಸರಣಿ
ಬ್ಲಾಗ್ ವರ್ಗಗಳು

ಆವಲಕೊಂಡ ಅಥವ ಆವಲಬೆಟ್ಟ

Submitted by partha1059 on Mon, 02/10/2014 - 21:12

ಆವಲಕೊಂಡ ಅಥವ ಆವಲಬೆಟ್ಟ
 

ಬೆಂಗಳೂರಿನ ಗಜಿಬಿಜಿ, ದೂಳಿನ ರಸ್ತೆಗಳು, ಎತ್ತನೋಡಿದರು ತುಂಬಿರುವ ವಾಹನಗಳ ಸಾಲು ಇವುಗಳ ಸಹವಾಸ ಬೇಸರವಾಗಿ, ಎಲ್ಲಿಯಾದರು ದೂರ ಪ್ರಕೃತಿ ದತ್ತ ವಾದ ಜಾಗಕ್ಕೆ ಹೋಗೋಣವೆ ಎಂದು ಕೊಳ್ಳುವರಿಗೆ ಎಲ್ಲರೂ  ಕೊಡುವ ಸಲಹೆಗಳೆಂದರೆ, ಕೇರಳ, ಮಂಗಳೂರು ಎಂದು ಬೇರೆ ಬೇರೆ ಹೆಸರುಗಳು. 

ಆದರೆ ಅಲ್ಲಿಗೆಲ್ಲ ಹೋಗಿಬರಲು ಸಾಕಷ್ಟು ತಯಾರಿ ಇರಬೇಕು. ರಜಾ, ಹಣ ಎಲ್ಲ ಹೊಂದಿಸಿಕೊಳ್ಳಬೇಕು. ಬೆಂಗಳೂರಿನ ಸುತ್ತಮುತ್ತಲೂ ಒಂದೇ ದಿನದಲ್ಲಿ ಹೋಗಿಬರಬಹುದಾದ ಜಾಗ ಹುಡುಕಲು ಹೊರಟರೆ ಅಲ್ಲಿರುವ ಜನಪ್ರವಾಹದ  ಭಯ. 

ಸರಣಿ
ಬ್ಲಾಗ್ ವರ್ಗಗಳು

ಸಾಗರ ಪ್ರವಾಸ ‍_ ಬೆಂಗಳೂರಿನಿಂದ ಸಾಗರಕ್ಕೆ

Submitted by partha1059 on Sat, 01/25/2014 - 12:20

ಸಾಗರ ಪ್ರವಾಸ ‍_ ಬೆಂಗಳೂರಿನಿಂದ ಸಾಗರಕ್ಕೆ 

ಮಕ್ಕಳಿಗೆ ರಜಾ ಬಂತು ಎಂದರೆ   ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್ನೆ ಜನವರಿ 16 ರಿಂದ ಮೂರು ದಿನ ಬೆಂಗಳೂರಿನಿಂದ ಹೊರಗೆ ಹೋಗುವ ಕಾರ್ಯಕ್ರಮ. ಮೊದಲಿಗೆ ಮಗಳು ಹೇಳಿದ್ದು 
"ಅಪ್ಪ ಕೇರಳ ಕಡೆ ಸೈಟ್ ಸೀಯಿಂಗ್ ಚೆನ್ನಾಗಿರುತ್ತೆ ಅನ್ನುತ್ತಾರೆ ಗೆಳತಿಯರೆಲ್ಲ,  ಅಲ್ಲಿಗೆ ಹೋಗೋಣ" ಎಂದು. 

ಸರಣಿ
ಬ್ಲಾಗ್ ವರ್ಗಗಳು

ಶಿಲ್ಪ ಕೌಶಲ

Submitted by devaru.rbhat on Tue, 02/09/2010 - 16:23

ಶಿಲ್ಪ ಕಲೆಯ ಅಧ್ಬುತ ಗಳನ್ನು ಕಂಡಿದ್ದೇವೆ. ಬೇಲೂರಿನ ಶಿಲಾ ಬಾಲಿಕೆ ಕಂಡಿದ್ದೇವೆ. ಅಲ್ಲಿನ ಶಿಲ್ಪಗಳಲ್ಲಿ ಮೂಗು - ಬಾಯಿಗಳಿಗೆ ಸಂಬಂಧ ಕಲ್ಪಿಸುವ ರಂಧ್ರಗಳನ್ನು ಕಂಡಿದ್ದೇವೆ. ದೇವಾಲಯದ ಎದುರಿನ ಗರುಡ ಗಂಭಗಳಡಿ ಕಾಗದ, ದಾರಗಳನ್ನು ತೂರಿಸಿ ನೋಡಿದ್ದೇವೆ. ಏಕ ಶಿಲೆಯ ಗೊಮ್ಮಟ, ಒಂದೇಕಲ್ಲಿನಲ್ಲಿ ಕೆತ್ತಿದ ಸರಪಳಿ ಹೀಗೆ ಅನೇಕ ಅಧ್ಬುತಗಳನ್ನು ಶಿಲ್ಪಿಗಳು ಸೃಷ್ಟಿಸಿದ್ದಾರೆ. ಹಾಗೆ ಹೈದರಾ ಬಾದಿನ ಸಾಲರ್ ಜಂಗ್‌  ಮ್ಯೂಸಿಯಂನಲ್ಲಿ ಅಮೃತ ಶಿಲೆಯಲ್ಲಿ ಕೆತ್ತಿದ ಮುಸುಕು ಧಾರಿ ಮಹಿಳೆಯನ್ನು ಕಂಡಿದ್ದೇವೆ.

ಸರಣಿ
ಬ್ಲಾಗ್ ವರ್ಗಗಳು

ನಾ ಕಂಡ ನವಿಲು

Submitted by Nagaraj.G on Mon, 12/21/2009 - 16:01

ಇತ್ತಿಚೆಗೆ ಕೆಲಸದ ನಿಮಿತ್ತ ಮದುರೈಗೆ ಹೋಗಿದ್ದೆ. ಕೆಲಸ ಇದ್ದದ್ದು ಮದುರೈನಿಂದ ಮೂವತ್ತು ಕಿ.ಮೀ ದೂರದಲ್ಲಿ. ನಾನು ಮದುರೈನಲ್ಲಿ ತಂಗಿದ್ದು ಅಲ್ಲಿಂದ ದಿನಾಲು ಹೋಗಿ ಬರುತ್ತಿದ್ದೆ. ಮೊದಲನೇ ದಿನ ಮೂವತ್ತು ಕಿ.ಮೀ ಪ್ರಯಾಣದಲ್ಲಿ ಒಂದು ಪುಸ್ತಕ ಓದುತ್ತಾ ಕುಳಿತಿದ್ದೆ ಕಿಟಕಿಯ ಹೊರಗೆ ಅಷ್ಟೊಂದು ಕಣ್ಣಾಯಿಸಲಿಲ್ಲ. ಅಕಸ್ಮಾತಾಗಿ ಒಮ್ಮೆ ಕಣ್ಣಾಯಿಸಿದೆ  ನಾಲ್ಕೈದು ನವಿಲುಗಳ ಗುಂಪು ಕಾಳು ಹುಡುಕುತ್ತಾ ರಸ್ತೆಯ ಬದಿಯಲ್ಲಿ ಇದ್ದವು ಅದನ್ನು ಕಂಡು ನನಗೆ ಆಶ್ಚರ್ಯ ಒಂದು ಕಡೆ ಇನ್ನೊಂಡು ಕಡೆ ಖುಷಿಯೋ ಖುಷಿ ಏನಪ್ಪಾ ಇವು ರಸ್ತೆಯ ಬದಿಯಲ್ಲಿ ಒಳ್ಳೆ ಕೋಳಿಗಳ ಥರಾ ಕಾಗೆಗಳ ಥರಾ ಮೇಯ್ತಾ ಇದೆಯಲ್ಲ ಅಂತ. ಕ್ಯಾಮಾರ ಬ್ಯಾಗ್ನಲ್ಲಿ ಇತ್ತು ಹೊರ ತೆಗೆಯವಷ್ಟರಲ್ಲಿ ಬಸ್ ಮುಂದೆ ಹೋಗಿತ್ತು  :( 

ಬ್ಲಾಗ್ ವರ್ಗಗಳು