ಸಂಪದ

ಸಂದರ್ಶನಗಳ ಸ್ಲೈಡ್ ನೋಡಿದ್ರ?

Submitted by hpn on Tue, 02/15/2011 - 15:16

ಸಂಪದ ಸಂದರ್ಶನಗಳು

 

ಮೇಲಿನ ಚಿತ್ರದಲ್ಲಿರುವಂತೆ ಮುಖಪುಟದಲ್ಲಿ ನಿನ್ನೆಯಿಂದ ಸಂದರ್ಶನಗಳ ಸ್ಲೈಡ್ ಲಭ್ಯವಿದೆ. ಸಂಪದದಲ್ಲಿ ಕೆಲವು ಕನ್ನಡ ಸಾಹಿತ್ಯ ದಿಗ್ಗಜರ ಸಂದರ್ಶನಗಳು ಇರುವುದರ ಬಗ್ಗೆ ಹಲವು ಬಾರಿ ಸದಸ್ಯರಿಗೆ ಗೊತ್ತಾಗದೇ ಹೋಗುತ್ತಿರುವ ಬಗ್ಗೆ ಸಲಹೆಗಳನ್ನು ಕಳುಹಿಸಿದ್ದಿರಿ. ಈಗ ಇದೋ ಹೊಸತೊಂದು ಫೀಚರ್ ನಿಮ್ಮ ಮುಂದಿದೆ. 

 

ಈ ಸ್ಲೈಡ್ ಬಳಸಿ ಸಂದರ್ಶನಗಳೆಲ್ಲವನ್ನೂ ವೀಕ್ಷಿಸಿ ಸುಲಭವಾಗಿ ಆಯ್ಕೆ ಮಾಡಬಹುದು.

ಸಂಪದ ಸಮ್ಮಿಲನಕ್ಕೊಂದು ಬ್ಯಾನರ್

Submitted by hpn on Sun, 11/21/2010 - 23:28

ಸಂಪದ ಸಮ್ಮಿಲನಕ್ಕೊಂದು ಬ್ಯಾನರ್.. ಹೇಗಿದೆ?

 

ಹಾಗೆಯೇ, ಮುಂದಿನ ತಿಂಗಳು ಐದನೆಯ ತಾರೀಖು ಅರ್ಧ ದಿನ ಸಂಪದಿಗರೊಡನೆ. ಈಗಿನಿಂದಲೇ ಬಿಡುವು ಮಾಡಿಟ್ಟುಕೊಳ್ಳುತ್ತೀರಲ್ವ?

ಒಂದಷ್ಟು ಕಾಫಿ ಜೊತೆ ನಾವೆಲ್ಲರೂ ಜೊತೆಗೂಡಿ ಸಮಯ ಕಳೆಯೋಣ, ಆಗಬಹುದೊ?

 

ಆ ದಿನದ ಕಾರ್ಯಕ್ರಮದ ಪೂರ್ಣ ವಿವರ ಮತ್ತು ಅಧಿಕೃತ ಪುಟ ಸದ್ಯದಲ್ಲೇ ಸಂಪದದಲ್ಲಿ ಹಾಕಲಾಗುವುದು.

 

ಬ್ಲಾಗ್ ವರ್ಗಗಳು

ಬದಲಾವಣೆ ಮತ್ತು ಹೊಂದಾಣಿಕೆ

Submitted by prasannasp on Wed, 11/03/2010 - 12:30

ನಾವೆಲ್ಲಾ ಬದಲಾವಣೆಗೆ ಎಷ್ಟು ಬೇಗ ಹೊಂದಿಕೊಳ್ಳುತ್ತೇವಲ್ಲಾ ಅಂತ ಆಶ್ಚರ್ಯ ಆಗುತ್ತದೆ. ಮೊನ್ನೆ ಸಂಪದ ಬದಲಾದಾಗ ಛೇ! ಇದೇನು, ನೋಡಲು ತುಂಬಾ ಕಷ್ಟ ಆಗುತ್ತಿದೆಯಲ್ಲಾ, ಮೊದಲಿದ್ದಿದ್ದೇ ಚೆನ್ನಾಗಿತ್ತು ಅಂತ ಅನಿಸುತ್ತಿತ್ತು. ಆದರೆ ಒಂದೆರಡು ದಿನ ಕಳೆದ ಮೇಲೆ, ಮೊದಲಿಗಿಂತ ಈಗಲೇ ಚೆನ್ನಾಗಿದೆ ಎಂದೆನಿಸುತ್ತಿದೆ. ಇನ್ನೊಂದಿಷ್ಟು ಸಣ್ಣ ಪುಟ್ಟ ಬದಲಾವಣೆಗಳಾದರೆ, ಸಂಪದ ಮೊದಲಿಗಿಂತ ಸಾಕಷ್ಟು ಉತ್ತಮವಾಗಿ ಕಾಣುತ್ತದೆ. ಸಂಪದದ ಹೊಸ ರೂಪಕ್ಕಾಗಿ ಶ್ರಮಿಸಿದ ಹರಿಪ್ರಸಾದ್ ನಾಡಿಗ್ ಅವರಿಗೂ ಹಾಗೂ ಎಲ್ಲ ನಿರ್ವಾಹಕರಿಗೂ ನನ್ನ ಕೃತಜ್ಞತೆಗಳು.

ಬ್ಲಾಗ್ ವರ್ಗಗಳು

ಸಂಪದಕ್ಕೊಂದು ಗೀತೆ ಬರೆದರೆ ಹೇಗೆ?

Submitted by prasannasp on Wed, 10/06/2010 - 10:18

ರಾಷ್ಟ್ರಗೀತೆ, ನಾಡಗೀತೆಯ ರೀತಿ ಸಂಪದಕ್ಕೊಂದು ಗೀತೆ (ಸಂಪದಗೀತೆ) ಬರೆದರೆ ಹೇಗಿರುತ್ತೆ? ಗೀತೆ ಬರೆದರೆ ಸಂಪದ ಸಮ್ಮಿಲನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಪ್ರಾರಂಭದಲ್ಲಿ ಪ್ರಾರ್ಥನೆಯ ರೀತಿ ಹಾಡಬಹುದು. ಸಂಪದದ ವೃತ್ತಿಪರ ಮತ್ತು ಹವ್ಯಾಸಿ ಕವಿಗಳು ಇದರ ಬಗ್ಗೆ ಗಮನ ಹರಿಸಬೇಕಾಗಿ ವಿನಂತಿ.

ಇನ್ನೊಂದು ವಿಷಯ, ತುಂಬಾ ಜನ ಕವಿತೆ ಬರೆದು ಒಬ್ಬರ ಗೀತೆ ಮಾತ್ರಾ ಆಯ್ಕೆಯಾದಾಗ ಉಳಿದವರಿಗೆ ಬೇಸರವಾಗುವುದು ಸಹಜ. ಆದರೆ ಅದೇ ವಿಷಯವನ್ನು ಇಟ್ಟುಕೊಂಡು ನನ್ನ ಕವಿತೆಯೇ ಚೆನ್ನಾಗಿದೆ ಎಂದು ವಾದಿಸುವುದು ಅಥವಾ ವೈಯಕ್ತಿಕ ದ್ವೇಷ ಸಾಧಿಸುವುದು ಮಾಡುವುದಾದರೆ ಈ ವಿಷಯದಲ್ಲಿ ಮುಂದುವರೆಯುವುದೇ ಬೇಡವೇನೋ. ಇದರ ಬಗ್ಗೆ ನಿಮ್ಮೆಲ್ಲರ ಅನಿಸಿಕೆ ಏನು?

ಬ್ಲಾಗ್ ವರ್ಗಗಳು

"ಸಂಪದ" ಸಹೃದಯರೇ

Submitted by mdnprabhakar on Wed, 06/03/2009 - 14:05

ಬಂದಿಹೆನು "ಸಂಪದ" ಕೆ
ಬರಮಾಡಿಕೋ ಎನ್ನ
" ಬರವಣಿಗೆ " ತಂದಿಹೆನು
ಓದಿ ಹರಸೆನ್ನ.

ಸಂಪಿಗೆಯ ಗುಂಪೊಂದು
"ಸಂಪದ"ವೇ ಆಗಿಹುದು
ಆಗ ಬಯಸುವೆ ನಾನು
ಆ ಗುಂಪೊಂದರ "ಹೂ "ವ.

ಆಕ್ಕರೆಯ ನಗೆಯವರೇ
ಸಕ್ಕರೆಯ ಮಾತಿನವರೇ
ತಪ್ಪಿದರೆ ತಿದ್ದುವ
ಸಹೃದಯ ಓದುಗರೇ.

ನನಗಿಂತ ಕಿರಿಯರಿಲ್ಲ
ನಿಮಗಿಂತ ಹಿರಿಯರಿಲ್ಲ
ನನ್ನ ತಿದ್ದಿ ಹರಸುವ ಭಾರ
ಹಿರಿಯರದೇ ಎಲ್ಲಾ.

ಸಿರಿಗನ್ನಡಂ ಗೆಲ್ಗೆ

ಬ್ಲಾಗ್ ವರ್ಗಗಳು

ಮನಸ್ಸು ತುಂಬಾ ಬೇಸರದಲ್ಲಿದೆ

Submitted by Nagaraj.G on Tue, 04/28/2009 - 11:10

ಇತ್ತಿಚೆಗೆ ಯಾಕೋ ತುಂಬಾ ಬೇಸರವಾಗ್ತಾ ಇದೆ ಯಾಕೆ ಅಂತ ಯೋಚನೆ ಮಾಡ್ತ ಇದ್ದಾಗ ಗೊತ್ತಾಯ್ತು. ಯಾಕೆ ಬೇಸರ ಅಂತಿರಾ ಸಂಪದದ ಕೆಲವು ಗೆಳೆಯರು ನಾಪತ್ತೆಯಾಗಿದ್ದಾರೆ. ಉದಾ: ಅರವಿಂದ್, ಸುಪ್ರಿತ್, ಇಂಚರಾ, ಗೌಡ ಹೀಗೆ ಹಲವಾರು ಜನ ಇದರ ಜೊತೆಗೆ ಅವರ ಬರಹಗಳು ನೋಡಿ ಸಹ ಸಾಕಷ್ಟು ದಿನಗಳಾದವು.

ಬ್ಲಾಗ್ ವರ್ಗಗಳು

ಸಂಪದದಲ್ಲಿ ಯಾಕೆ ಹೀಗೆ....?

Submitted by Nagaraj.G on Mon, 04/06/2009 - 12:35

ಸಂಪದ.ನೆಟ್ ಕನ್ನಡಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಕಾರಣ ಏನಪ್ಪ ಅಂದ್ರೆ , ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಒಂದು ಸಮರ್ಥ ವೇದಿಕೆಯಾಗಿದೆ ನಮ್ಮ ಈ ಸಂಪದ .

ಬ್ಲಾಗ್ ವರ್ಗಗಳು

ಸಂಪದಕ್ಕೆ ನಾನು ಬರುತ್ತೇನೆ

Submitted by kavyarashmi on Sun, 02/01/2009 - 22:03

ನಮಸ್ಕಾರ ಸಂಪದ ಮಿತ್ರರೆ ನಾನು ಸಹ ಸಂಪದ ಸಮುದಾಯಕ್ಕೆ ಪಾದಾರ್ಪಣೆ ಮಾಡ್ತಾ ಇದ್ದೇನೆ. ನನ್ನನ್ನೂ ಸಹ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ಅಂದಹಾಗೆ ಸಂಪದದಲ್ಲಿ ಹಲವಾರು ಜನ ಸೇರಿದ್ದು ಓಳ್ಳೋಳ್ಳೆ ಬರಹಗಳನ್ನೇ ಬರೀತಾ ಇದ್ದಾರೆ. ನನ್ನನ್ನು ಮತ್ತೆ ನನ್ನ ಬರಹಗಳನ್ನು ಸಹ ಆಶೀರ್ವಾದಿಸಿ. ;)

ಪ್ರೀತಿಯಿಂದ
ಕಾವ್ಯ

ಬ್ಲಾಗ್ ವರ್ಗಗಳು