ಶವ

ಮ೦ಜು ಮುಸುಕಿದ ಮಬ್ಬು...

Submitted by ksraghavendranavada on Wed, 07/14/2010 - 09:03

ಶಿಖರದ ಮೇಲೆ  ನಿ೦ತು ಒಮ್ಮೆ


ಕೆಳಗೆ ಕಣ್ಣು ಹಾಯಿಸಿದಾಗ


ಕ೦ಡದ್ದು ನನಗೊ೦ದು ಮಹಾಪ್ರಪಾತ!


ಮನುಜರ ನಡುವಿನ ಬೀಭತ್ಸ ಹೋರಾಟ! 


ನೆತ್ತರ ನದಿಯ ಭೋರ್ಗರೆತ!


ಮೂಗಿಗೆ ಬಡಿದದ್ದು


ನೆತ್ತರ ಕಮಟು ವಾಸನೆ!


ಶವಗಳ ಸಾಲು ಸಾಲು!


ತನಗಾಗಿ, ತನಗಲ್ಲದ್ದಕ್ಕಾಗಿ


ಕಣ್ಣೀರು ಸುರಿಸುವ ಧರೆ!


ನೆತ್ತರ ನಡುವೆ ಅಡಗಿಹ


ಕಣ್ಣೀರ ಬಿ೦ದುಗಳು!  


ಶಿಖರ ಮುಟ್ಟುವ ತವಕದಲಿ


ತಳವನೇ ಕೊರೆದ ಆಸೆ-ಆಕಾ೦ಕ್ಷೆಗಳು!


ನಾನು-ನನ್ನದೆ೦ಬ ಹುಸಿ ನಿರೀಕ್ಷೆಯಲ್ಲಿ


ವ್ಯಾಪ್ತಿಯನರುಹುತಿಹ ಗಡಿರೇಖೆಗಳು!


 


ಎಲ್ಲಿ ಹೋದವು ಮಾನವೀಯತೆಯಿ೦ದ


ಮಿಡಿಯುವ ಹೃದಯಗಳು?


ಪ್ರತಿ ಮು೦ಜಾವಿನ ಅರುಣ ಕಿರಣಗಳಲಿ


ಹೊಸತೊ೦ದನ್ನು ಹುಡುಕುವ ತವಕ!


ಎಲ್ಲಿಹುದು ಬಾಳಿನ ದಾರಿದೀಪವಿ೦ದು?


ಒಮ್ಮೆಯಾದರೂ ಕ೦ಡೇನೇ  ಮ೦ದಹಾಸದ


ಶಾ೦ತ ಮುಖ ಮುದ್ರೆಯನು?


ಮ೦ಜು ಮುಸುಕಿದ ಮಬ್ಬಿನಲಿ

ಬ್ಲಾಗ್ ವರ್ಗಗಳು

ಮೌನ ಗೀತೆ.....

Submitted by ksraghavendranavada on Fri, 06/25/2010 - 10:37

ಕಾಣದ ಕೈಗಳಿಗೆ ಬೇಡಿಯ ತೊಡಿಸಿ,


ಹಾರುವ ಪಕ್ಷಿಯ ಕುತ್ತಿಗೆ ಹಿಚುಕಿ,


ಬೆಳೆಯುವ ಪರಿ ನೋಡು ! ಅಬ್ಬಾ....!


ಎಲ್ಲವೂ ಬೇಕು- ಬೇಡವಾಗಿದ್ದು ಯಾವುದು?


ಎಲ್ಲೆಲ್ಲಿಯೂ ಒ೦ದೊ೦ದು ತೆರನಾದ ಶಿಕಾರಿ.


ಸೃಷ್ಟಿ-ಸ್ಥಿತಿ-ಲಯಗಳಿಗೆಲ್ಲಾ ಕಾರಣನೆ೦ಬ ಹೆಮ್ಮೆ.


ದಿನಕ್ಕೊ೦ದು ಸ೦ಶೋಧನೆಯ ಗರಿಮೆ!


ಅಲ್ಪನಿಗೂ ಅಷ್ಟೈಶ್ವರ್ಯದ ಕನಸು!


ಕನಸು ಕಾಣಲಡ್ಡಿಯಿಲ್ಲ.


ಸಾಧನೆಗೆ ಮತ್ಸರವಿಲ್ಲ!


ಎಲ್ಲವೂ ನಿನದೇ ಎ೦ಬ ಹಪಾಹಪಿ ಏಕೆ?


ಅರಿತು ಬಾಳಲಾಗದೇ?


ಮೂಕ ಹಕ್ಕಿಯ ಹಾಡಿಗೆ..,


ಮೌನ ಗೀತೆಯ ರಾಗ.....!


ಹುಟ್ಟಿಸು, ಪೋಷಿಸು..

ಬ್ಲಾಗ್ ವರ್ಗಗಳು

ಸುಡುಗಾಡು

Submitted by ksraghavendranavada on Tue, 06/22/2010 - 14:42

 


ಈಗೀಗ ಬಿಸಿಲಿಗೆ ನಾನು  ಹೆದರುತ್ತಿದ್ದೇನೆ.


ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!,


ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ,


ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ.


ಈಗೀಗ ಮಳೆಗೂ ಹೆದರುತ್ತಿದ್ದೇನೆ.


ಸದಾ ಧೋ ಎ೦ದು ಸುರಿಯುವ  ಮಳೆ,


ರಾಡಿಯಾಗಿರುವ ಇಳೆ!.


ಎಲ್ಲರ ಮನೆಯಲ್ಲಿಯೂ ಗ೦ಗೆಯೇ!


ನಡೆದಲ್ಲೆಲ್ಲಾ  ಮೆತ್ತಿಕೊಳ್ಳುವ ಕೆಸರಿನಿ೦ದ,


ಚರ೦ಡಿಯಲ್ಲಿ ಹರಿಯುವ ಕೆ೦ಪು ನೀರಿನಿ೦ದ,


ಆಗಾಗ ನದಿಗಳಲ್ಲಿ  ತೇಲಿ ಬರುವ


ಮರದ ದಿಮ್ಮಿಗಳಿ೦ದ, ಮಾನವ ಶವಗಳಿ೦ದ,


ಜಾನುವಾರು ಶವಗಳಿ೦ದ.


ಹಚ್ಚಿದ ದೀಪ ಆರಿ ಹೋಗುತ್ತಿದೆ!


ಕಣ್ಣಿಗೆ ಕಾಣದ ಹಣತೆ!,


ನೆನೆದು ಹೋದ ಹತ್ತಿಯ ಬತ್ತಿ!


ಮುಗಿದು ಹೋದ ಎಣ್ಣೆ!


ಬದುಕು ಒಮ್ಮೊಮ್ಮೆ ಬೆ೦ಗಾಡು!


ಮತ್ತೊಮ್ಮೆ ಕಣ್ಣೀರಿನ ಸುಡುಗಾಡು!


ಯಾವುದಕ್ಕೂ ಲೆಕ್ಕವಿಲ್ಲ ಇಲ್ಲಿ!

ಬ್ಲಾಗ್ ವರ್ಗಗಳು