ಜನ್ಮದಿನ

ಹಿರಿಯ ಸ೦ಪದಿಗ ಕವಿ ನಾಗರಾಜರಿಗೆ ಜನ್ಮದಿನದ ಶುಭಾಶಯಗಳು.

Submitted by manju787 on Thu, 10/07/2010 - 10:47

ಈ ದಿನ ನಮ್ಮ ನಲ್ಮೆಯ ಹಿರಿಯ ಸ೦ಪದಿಗ ಕವಿ ನಾಗರಾಜರ ಜನ್ಮದಿನ. ೫೯ ವಸ೦ತಗಳನ್ನು ಪೂರೈಸಿ ೬೦ ನೆಯ ವಸ೦ತಕ್ಕೆ ಕಾಲಿಟ್ಟಿರುವ ಹಿರಿಯ ಚೇತನಕ್ಕೆ ಭಗವ೦ತನು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಹರಸಲೆ೦ದು ಹಾರೈಸುವೆ.  ತಮ್ಮ "ಸೇವಾ ಪುರಾಣ"ದ ಮೂಲಕ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿದವರು, "ಮೂಢ ಉವಾಚ"ದಲ್ಲಿ ಅತ್ಯುತ್ತಮವಾದ ಮಾತುಗಳನ್ನು ಬರೆದವರ ಬಾಳು ಬ೦ಗಾರವಾಗಲಿ.

ಸರಣಿ
ಬ್ಲಾಗ್ ವರ್ಗಗಳು

ನಾಲ್ಕು ಗೋಡೆಗಳು

Submitted by ksraghavendranavada on Wed, 06/23/2010 - 13:14

ಮೂವತ್ತಾರು ವಸ೦ತಗಳ ಹಿ೦ದೆ


ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ!


ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ!


ಹುಟ್ಟಿದ ಕೂಡಲೇ ಒದ್ದೆ ….


ಅಮ್ಮನ ಮಡಿಲಿಗದು ಮಹಾ ಪ್ರಹಾರ!


ಎತ್ತಿ ಹಿಡಿದ ದಾದಿಯ ಕೈ ಕಚ್ಚಿದೆ…


ಅಮ್ಮಾ ಎನ್ನಲಿಲ್ಲ.. ಅಳಲಿಲ್ಲ..


ಕೇವಲ ನಗುವೊ೦ದೇ ಇತ್ತು.


 


ಬೆಳೆದ೦ತೆ.. ಇಟ್ಟಲೆಲ್ಲಾ ಆನೆಯ ಹೆಜ್ಜೆ.


ಎಲ್ಲವೂ ನನ್ನದೇ ಸಾಮ್ರಾಜ್ಯ!


ಕಾಲಡಿಯಲಿ ತುಳಿದೆ ಎಲ್ಲರನೂ…


ಕೈಗೆ ಸಿಕ್ಕವರ ತರಿದೆ..


ಎಲ್ಲೆಲ್ಲೂ ವಿಜಯ ಯಾತ್ರೆಯೇ..


 


ಇ೦ದಿಗೆ ಮೂವತ್ತಾರರ ಭರ್ತಿ..


ಒಮ್ಮೆ ನೋಡುವೆ ಎಲ್ಲೆಲ್ಲೂ..


ಯಾರಿದ್ದಾರೆ ಇಲ್ಲಿ?


ನಾಲ್ಕು ಗೋಡೆಗಳ ನಡುವೆಯೇ


ಮನಸ್ಸಿಗೂ ಬೇಲಿ….


ಬೆಳಕಿನ ಅರಿವಾಗುತ್ತಿಲ್ಲ… ಕತ್ತಲೆ ಕಾಣುತ್ತಿಲ್ಲ…


ಬಿಸಿಲು,ಮಳೆ,ಚಳಿ ಎಲ್ಲವೂ ಒ೦ದೇ…


 


ಗೋಡೆ ಕೆಡವುವರು ಯಾರಾದರೂ

ಬ್ಲಾಗ್ ವರ್ಗಗಳು