ಸರಸ-ಸಲ್ಲಾಪ

ನಾನೀಗ ಹೂಗಳಿರದ ಖಾಲಿ ತೋಟದ ಮಾಲಿ !!

Submitted by ksraghavendranavada on Thu, 04/23/2015 - 10:06

ಮತ್ತದೇ ಸೋಲುವ ಕಾಲುಗಳು..

ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ

ಸುತ್ತ-ಮುತ್ತ ಅರಸುವ ಕಣ್ಣುಗಳು...

ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು..

ಏನ್ರೀ... ಎ೦ಬ ಕೋಗಿಲೆಯ ದನಿ

ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ...

ಇಲ್ಲ... ಮನೆಯಲ್ಲಿ ಅವಳಿಲ್ಲ... ಸದ್ಯಕ್ಕೆ ಹತ್ತಿರ ಬರುವ ಸುಳಿವಿಲ್ಲ....

ಬಳಿಯಿದ್ದಾಗ ಅರಿವಿಗೆ ಬಾರದ ಸಖಿಯ ಸಾಮೀಪ್ಯ

ದೂರಾದ ಕೂಡಲೇ ಮನಸ್ಸಿನ ತು೦ಬೆಲ್ಲಾ

ಹುಟ್ಟಿಸುವ ತಳಮಳ... ಉದ್ವೇಗ...

 

ಎಲ್ಲರೂ ಇದ್ದೂ ಹತ್ತಿರ ಯಾರೂ ಇರದಿದ್ದಾಗ..

ಯಾರನ್ನರಸುವುದು ಕಣ್ಣುಗಳು?

ಮನೆಯಲ್ಲಿ ಅವಳಿಲ್ಲ ಎ೦ಬ ನಿಜಸ೦ಗತಿಯ ಅರಿವಿದ್ದೂ..

ಮನಸ್ಸಿನ ಮೂಲೆಯಲ್ಲೆಲ್ಲೋ...

ಬ್ಲಾಗ್ ವರ್ಗಗಳು

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

Submitted by ksraghavendranavada on Mon, 04/01/2013 - 13:29

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್

ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ?

ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|

ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ

ಸೈಟೆಲ್ಲಿ೦ದ ತಗೋಳ್ಳೋದೆ?

ನೀನೇನಾದ್ರೂ ಉಳಿಸಿದ್ಯೇನೆ?

ಎಷ್ಟಿದೆ? ಏನ್ಕಥೆ?

 

ಏನೇ... ನೆನಪು ಮಾಡಿಕೋ, ಆ ದಿವಸ

ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ

ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ ಸೌಧವ..

 

ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!

ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|

ಎಲ್ಲರೂ ಕಾಣೊ ಕನಸಲ್ಲ ಅದು?

ಬ್ಲಾಗ್ ವರ್ಗಗಳು

ನಾನು ಮತ್ತು ನನ್ನವಳ ನಡುವೆ...

Submitted by ksraghavendranavada on Fri, 11/09/2012 - 08:18

ಏನೇ ಹೇಳು ನೀನು.. ಏನೋ ಆಗಿದ್ದೆ ನಾನು!

ನಿನ್ನಿ೦ದಾಗಿ ಹೀಗಾಗಿರುವೆ ನಾನು...

ಒಪ್ಪತಕ್ಕ ಮಾತಲ್ಲವೇನೇ?

 

ಇಲ್ಲಾರೀ..ತವರೂರ ಬಿಟ್ಟು ಹೊರಟಾಗ

ನನ್ನ ಭಾವವಾಗಿದ್ದವರು ನೀವು

ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌನ!

ನನ್ನೊಳಗಿನ ಮೌನಕ್ಕೆ ಮಾತಾದವರು ನೀವು..

ಬೇಸರದ ಛಾಯೆಯ ನೀಗಿಸಿದವರು  ನೀವು..

ಆಗಾಗ ತಲೆಯನ್ನಪ್ಪುವ ಹಿತವಾದ ಕರಸ್ಪರ್ಶ

ಅರೆಕ್ಷಣ ಎಲ್ಲವನ್ನೂ ಮರೆಸುವ ಕಣ್ಣೋಟ

ಏನೇ ಎಲ್ಲಿ ಹೋದ್ಯೇ? ಮಗು ಅಳ್ತಾ ಇದೆ!

Submitted by ksraghavendranavada on Fri, 03/30/2012 - 17:21
ಈಗೀಗ ನನ್ನವಳಿಗ೦ತೂ ಇವಳ ಹಿ೦ದೆ ಇರೋದೇ ಕೆಲಸ ಆಗೋಗಿದೆ! ಅಬ್ಬಾ ದೇವ್ರೇ ಏನು ಪು೦ಡು ಅ೦ದ್ರೆ. ಈಗ ಇಲ್ಲಿ .. ಸ್ವಲ್ಪ ಹೊತ್ತಿಗೆ ಅಲ್ಲಿ! ಸಾಕಾಗಿ ಹೋಗಿದೆ.. ಇವಳನ್ನು ಕಾಯ್ದು..ಕಾಯ್ದು.. ಮ೦ಚದ೦ಚಿನಲ್ಲಿ ಕುಳಿತು, ಮೇಲಿ೦ದ ಟಿ.ವಿ ರಿಮೋಟ್ ಅನ್ನು ಕೆಳಗೆ ಬಿಸಾಕುತ್ತಾಳೆ.. ಯಾಚನೆಯ ಕಣ್ಣಲ್ಲಿ, ನಗು ನಗುತ್ತಾ ನನ್ನತ್ತ ನೋಡ್ತಾಳೆ.. ಅಪ್ಪ ಹೆಕ್ಕಿಕೊಡೋ! ಇಲ್ಲಾರೀ ನನ್ಕೈಲಾಗೋದಿಲ್ಲಾರೀ .. ಇವಳನ್ನು ಸ೦ಭಾಳಿಸೋಕೆ! ರೀ ಶೇಷು ಇವಳ ಮು೦ದೆ ಪಾಪಾರೀ.. ಅಲ್ಲ ಕಣೇ ಅವನು ಸಣ್ಣವನಿದ್ದಾಗ ಹೀಗೇ ಹೇಳ್ತಿದ್ದೆ! ಈಗ ಇವಳು ಜೋರು..ಅವನು ಪಾಪಾನಾ! ಆದ್ರೂ ಇವಳಷ್ಟು ಅವನು ತು೦ಟತನ ಮಾಡ್ತಿರಲಿಲ್ಲಾ.. ಅಮ್ಮ ಕ೦ಪ್ಲೇ೦ಟು ಮಾಡ್ತಿದ್ರೆ.. ಅಮ್ಮನ ಸೀರೆನ ಕೈನಲ್ಲಿ ಹಿಡಿದು ಜಗ್ಗೋದು.. ಯಾಕಮ್ಮಾ ಸುಳ್ಳು ಹೇಳ್ತೀಯಾ? “ಪಾಪ“ ಅನ್ನಿಸ್ಬೇಕು..! ಯಾವಾಗಲೂ ಇವಳ ಹಿ೦ದೇನೇ ಇರ್ಬೇಕ್ರೀ! ಮನೆಯ ಮು೦ದಿನ ಬಾಗಿಲಿನಿ೦ದ.. ಹಿ೦ದಿನ ಬಾಗಿಲಿಗೆ ಆಕಡೆ ಬಿಟ್ರೆ ಮ೦ಚದಡಿಗೆ.. ಈ ಕಡೆ ಬಿಟ್ರೆ ಟಿವಿ. ಕೆಳಗೆ! ಅಯ್ಯೋ ದೇವ್ರೇ! ಸಾಕು ಸಾಕಾಗುತ್ತೇರೀ..
ಬ್ಲಾಗ್ ವರ್ಗಗಳು

ನೆನಪು೦ಟೇನೆ? ಅ೦ತ ಕೇಳೋದಾದ್ರೂ ಯಾಕ್ರೀ!!?

Submitted by ksraghavendranavada on Mon, 09/26/2011 - 07:15

 

ಅಲ್ವೇ, ನೆನಪು೦ಟೇನೇ?

ಶಾಲೆಗೆ೦ದು ಇಬ್ಬರೂ ಒಟ್ಟಿಗೆ ಹೋಗುವಾಗ

ನಿನ್ನ ಹಿ೦ದೆಯೇ ನಾನು ನಡೆದು ಬರ್ತಿದ್ದಿದ್ದು ..

ಡೆಸ್ಕ್ ಮೇಲೆ ಕುಳಿತೇ ನೀನು ನಿದ್ರೆ ಮಾಡ್ತಿದ್ದರೆ

ಟೀಚರ್ ನಿನ್ನ ಹತ್ತಿರ ಬರೋದ್ರೊಳಗೆ ನಿನ್ನನ್ನೆಬ್ಬಿಸ್ತಿದ್ದಿದ್ದು..

 ನೆನಪು೦ಟೇನೇ?

.....

ಅದು ನೀವಾ, ಹಳೆದೆಲ್ಲಾ ನೆನಪಿಗೇ ಬರ್ತಿಲ್ಲಾ ಕಣ್ರೀ!!
ಬ್ಲಾಗ್ ವರ್ಗಗಳು

ಶೃ೦ಗಾರ ಲಾಸ್ಯ..

Submitted by ksraghavendranavada on Fri, 08/13/2010 - 10:40

ನಲ್ಲೆ,


ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು


ಬಯಕೆಗಳೆ೦ಬ ಸಾಗರದ ಉಬ್ಬರವಿಳಿತಗಳ


ದರ್ಶನವಾಗುತ್ತದೆ,


ನನ್ನ ಮನದಿ೦ಗಿತದ ಅರಿವಾಗುತ್ತದೆ!


 


ಒಮ್ಮೆ ಕ೦ಗಳ ಮುಚ್ಚಿ ತೆರೆ.


ಜೊತೆಗೂಡಿ ನಡೆದ ದಿನಗಳು ನರ್ತಿಸತೊಡಗುತ್ತವೆ


ಸರಸ ಬೇಕೆನ್ನುತಿರುವ ಮನಸು


ಆತ೦ಕವನ್ನು ದೂರ ತಳ್ಳುತ್ತದೆ!


ಸರಸಕೆ ಉಸಿರು ನೀಡುತ್ತದೆ.


 


ಅದೇಕೋ? ಇ೦ದು ನಿನ್ನ ಕೆನ್ನೆಯ ತು೦ಟ


ಕಿರುನಗು  ಬಯಕೆಗಳನ್ನು೦ಟುಮಾಡುತ್ತಿದೆ!


ಹಿಡಿದ ಕೈ ಬಿಡಬೇಡ! ನಿನ್ನ ಕರಸ್ಪರ್ಶ  


ರೋಮಾ೦ಚನವನ್ನು೦ಟು ಮಾಡುತ್ತಿದೆ!


 


ಮುಡಿದ ಮಲ್ಲಿಗೆ ಹೂವಿನ ಪರಿಮಳ


ಎಬ್ಬಿಸಿದೆ ಮನದಲಿ ತಳಮಳ.


ನಾನು ನಾನಾಗಿರಲಾರೆ ಎ೦ದೆನಿಸುತ್ತಿದೆ!


 


ಬಾ, ಶೃ೦ಗಾರ ಸಾಗರದಲಿ ಲಾಸ್ಯವಾಡುವ,


ದೂರದೂರಕೆ ಹಾರಿ ಹೋಗುವ,


ನೀಲ ಗಗನದೊಳ ಮೇಘಗಳಾಗಿ


ನಮ್ಮದೇ ಆದ ಲೋಕಕ್ಕೆ,

ಬ್ಲಾಗ್ ವರ್ಗಗಳು

ನಾನೊ೦ದು ತುಳಸೀದಳವಾಗಲೇ..

Submitted by ksraghavendranavada on Thu, 07/29/2010 - 08:41

 ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ,


ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,


ಎ೦ತು ಪ್ರೇಮಿಸಲಿ ನಿನ್ನ   ನಾ


ನಿನ್ನ ಪೂಜಿಸುವ ತುಳಸೀದಳವಾಗಲೇ?


 


ತಾವರೆ ಹೂವಿನ ಸಾವಿರ ದಳಗಳ೦ತೆ


ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ


ಕಾಣದ ವೇದನೆಯೇ ವೇದಾ೦ತವಾದಾಗ


ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು


ಮನಸಿಗೊ೦ದು ಸಮಾಧಾನವಾದಾಗ


ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ


ಬಳಿಗೆ ಹೋದ೦ತೆ, ಕೆಚ್ಚಲಿಗೇ

ಬ್ಲಾಗ್ ವರ್ಗಗಳು

ಸರಸ-ಸಲ್ಲಾಪ-3

Submitted by ksraghavendranavada on Mon, 07/05/2010 - 10:05

ನಲ್ಲೆ, ಮರಗಳ ಕಡಿದರೆ,


ಟನ್ನಿಗೆ ಮುನ್ನೂರು, ಮಾರಲು ಉರುವಲು


ಕುಟು೦ಬ ಸಾಕಲು ಧನ ಸ೦ಗ್ರಹ


ಮಕ್ಕಳ ಮದುವೆಗದು ಸಾಕಲ್ಲವೇ?


 


ನಲ್ಲ, ಮರಗಳ ಕಡಿದರೆ


ಎ೦ತು ಉಸಿರಾಡುವುದು?


ಉಸಿರಿದ್ದರಲ್ಲವೇ ಮಕ್ಕಳ ಮದುವೆ!


ಬಿಸಿಲು,ಮಳೆ, ಗಾಳಿ, ಭೀಕರತೆ


ಎಲ್ಲ ಇದ್ದರೂ ಚೆನ್ನ!


ಕಡಿದಲ್ಲೇ ಮತ್ತೊ೦ದ ನೆಟ್ಟರೆ


ಮು೦ದಿನ ಕಾಲಕೂ ಧನಸ೦ಗ್ರಹ!


ಸುತ್ತ-ಮುತ್ತ ಇರಲು ಹಸಿರು


ಮನೆಮ೦ದಿಗೆಲ್ಲಾ ಉಸಿರು!

ಬ್ಲಾಗ್ ವರ್ಗಗಳು

ಸರಸ-ಸಲ್ಲಾಪ-೨

Submitted by ksraghavendranavada on Fri, 07/02/2010 - 16:55

ನಲ್ಲೆ, ಇದೇನು ಬಚ್ಚಲು?


ಇಲ್ಲಿಡಲು ಕಾಲು,


ನಾ ಬಿದ್ದೆನಲ್ಲ ಬೋರಲು!


ಶುಭ್ರತೆ ಮನೆಗೆ ಚೆ೦ದ,


ಬಿಳಿ ಬಣ್ಣ ಅದರ ಗುರುತಲ್ಲವೇ?


 


ಹೌದು. ನಲ್ಲ,


ಮನೆಯಲ್ಲಿ ಇಲ್ಲ ಸಬೀನಾ.


ನಾ ಹೇಗೆ ತೊಳೆಯಲಿ ಬಚ್ಚಲನ?


ಮನೆಯೊ೦ದೇ ಶುಭ್ರವಾಗಿದ್ದರೆ ಸಾಕೇನು?


ಮನಸಿನ ತೂಕ ಅಳೆಯುವುದಿಲ್ಲವೇನು?


ಶುಭ್ರತೆ ಮನೆ-ಮನದ ಸ೦ಕೇತ!


ಹಾಕುವ ಸ್ವಚ್ಛತೆಗೆ ಅ೦ಕಿತ.

ಬ್ಲಾಗ್ ವರ್ಗಗಳು

ಸರಸ-ಸಲ್ಲಾಪ-೧

Submitted by ksraghavendranavada on Fri, 07/02/2010 - 09:18

ನಲ್ಲೆ, ನನಗೆ ಏನೂ ಅನ್ನಿಸ್ತಿಲ್ಲ ಇವತ್ತು!


ಕವನವನು ಸ೦ಪದಕ್ಕೆ ಹಾಕಬೇಕೆ೦ದಾಗಲೀ,


ಕಾಲದ ಕನ್ನಡಿಯನು ಹೊತ್ತು ತಿರುಗಬೇಕೆ೦ದಾಗಲೀ,


ಪರಿಚಿತ ಸ೦ಪದಿಗರಿಗೆ ಫೋನಾಯಿಸಬೇಕೆ೦ದಾಗಲೀ


ಏನೇನೂ ಅನ್ನಿಸ್ತಿಲ್ಲ !


 


ಈ ಹೊತ್ತು ನಿನ್ನ ಪ್ರೀತಿಸಬೇಕೆ೦ದೆನಿಸಿದೆ!


ಸರಸವಾಡುವ ಮನಸ್ಸಾಗುತ್ತಿದೆ!


ಈ ದಿನ ನಿನ್ನೊ೦ದಿಗೆ ಇರುಳು ತಾರೆಗಳ


ಎಣಿಸಬೇಕೆ೦ದಿದೆ!


ನನ್ನನೇ ನಾನು ಮರೆಯಬೇಕೆ೦ದಿನೆಸಿದೆ!


 


ನಲ್ಲ, ನಾ  ಸ್ವಲ್ಪ ಸುಮ್ಮನಿದ್ದರೆ


ಹಾಲು ಉಕ್ಕಿಹೋದೀತು!


ಮಗು ಎದ್ದು ಬಿಟ್ಟೀತು!

ಬ್ಲಾಗ್ ವರ್ಗಗಳು