ಅಂತಃಸ್ಫುರಣ

ಸಂತೆ - ವ್ಯಾಪಾರ

Submitted by prasannasp on Tue, 06/05/2012 - 17:52

"ಈರುಳ್ಳಿ - ಆಲೂಗೆಡ್ಡೆ 5, ಬೆಂಡೇಕಾಯಿ ಎಂಟು, ಬೀನ್ಸು ಕ್ಯಾರೆಟ್ ಹತ್ತು, ಹತ್ತು, ಹತ್ರೂಪಾಯಿ.. ಈರುಳ್ಳಿ - ಆಲೂಗೆಡ್ಡೆ... .."

(ಕ್ಯಾರೆಟ್ ಹತ್ ರೂಪಾಯಿಗೆ? ಇಷ್ಟು ಕಡಿಮೆ ಯಾವಾಗ್ ಆಯ್ತು? ಇರ್ಲಿ, ಒಂದೆರಡ್ ಕೇಜಿ ತಗಂಡ್ ಹೋದ್ರೆ ಹಲ್ವ ಮಾಡ್ಬೋದು!)

'ಎರಡು ಕೇಜಿ ಕ್ಯಾರೆಟ್ ಕೊಡಪ್ಪ.'

"ತಗೊಳ್ಳಿ ಸಾರ್, ಮತ್ತೇನು ಬೇಕು?"

'ಏನೂ ಬೇಡ. ಸಾಕು'

"ಎಂಭತ್ತು ರೂಪಾಯಿ ಕೊಡಿ."

'ಎಂಭತ್ತು? ಕ್ಯಾರೆಟ್ ಹತ್ತು ರೂಪಾಯಿ ಅಂತಿದ್ದೆ? ಅಲ್ಲಿಗೆ ಇಪ್ಪತ್ತೇ ತಾನೇ ಆಗೋದು?'

"ಕಾಲು ಕೇಜಿಗೆ ಹತ್ತು ರೂಪಾಯಿ!"

'......?!?!?!'

ಬ್ಲಾಗ್ ವರ್ಗಗಳು

ಮನುಷ್ಯ V/s. ಸಸ್ಯ

Submitted by prasannasp on Wed, 09/07/2011 - 16:28

ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು ದೂರುವುದೇ ಇಲ್ಲ. ಒಂದು ಮಳೆ ಬಿದ್ದರೆ ಸಾಕು ಎಲ್ಲೆಡೆ ಎದ್ದುನಿಲ್ಲುತ್ತವೆ. ಅವು ಹಾಗಿರುವುದರಿಂದಲೇ ನಾವು ಉಸಿರಾಡಲು ಆಗುತ್ತಿರುವುದು ಅಲ್ವಾ?

ಬ್ಲಾಗ್ ವರ್ಗಗಳು

ಟ್ವಿಟರಿನಲ್ಲಿ #Kannada

Submitted by prasannasp on Fri, 08/26/2011 - 09:26

ಟ್ವಿಟರಿನಲ್ಲಿ ಕನ್ನಡ ಟ್ವೀಟ್‌ಗಳನ್ನು ಅಥವಾ #Kannada ಹ್ಯಾಶ್‌ಟ್ಯಾಗ್ ಹೊಂದಿದ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಲು @hashKannada ಎನ್ನುವ ಹೊಸ ಖಾತೆ ತೆರೆದಿದ್ದೇನೆ. ಅದು ಟ್ವಿಟರಿನಲ್ಲಿ #Kannada ಇರುವ ಟ್ವೀಟ್‌ಗಳನ್ನು ರೀಟ್ವೀಟ್ ಮಾಡುತ್ತದೆ. ಇದರಿಂದ ಕನ್ನಡದ (ಅಥವಾ ಕನ್ನಡದ ಬಗ್ಗೆ ಇರುವ) ಟ್ವೀಟ್‌ಗಳನ್ನು ಒಂದೆಡೆ ಪಡೆಯಲು ಸಹಾಯಕ. ನೀವು ಟ್ವಿಟರ್‌ನಲ್ಲಿದ್ದರೆ @hashKannadaವನ್ನು ಫಾಲೋ ಮಾಡಬಹುದು.

ಬ್ಲಾಗ್ ವರ್ಗಗಳು

ಹೇರ್ ಕಟಿಂಗ್ ಶಾಪ್‌ನಲ್ಲಿ ಟಿವಿ..

Submitted by prasannasp on Thu, 08/18/2011 - 10:10

ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್‌ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿರಲಿ ಎನ್ನುವುದು ಅವರ ಉದ್ದೇಶ. ಆದರೆ ಇವತ್ತು ಒಂದು ಕಟಿಂಗ್ ಶಾಪಿಗೆ ಹೋಗಿದ್ದೆ.

ಬ್ಲಾಗ್ ವರ್ಗಗಳು

ಡ್ರೀಮ್ಸ್

Submitted by prasannasp on Mon, 08/01/2011 - 09:00

ಜಪಾನಿನವರಾದ ಅಕಿರ ಕುರೊಸವ ಅವರ ಡ್ರೀಮ್ಸ್ ಚಲನಚಿತ್ರವನ್ನು ಹಿಂದೊಮ್ಮೆ ನೋಡಿದ್ದೆ. ಅದರಲ್ಲಿ "Mount Fuji in Red" ಅನ್ನೋ ಒಂದು ಡ್ರೀಮ್ ಇದೆ. ಜಪಾನಿನ ಆರು ನ್ಯೂಕ್ಲಿಯಾರ್‍ ರಿಯಾಕ್ಟರ್‌ಗಳು ಸ್ಫೋಟಗೊಂಡರೆ ಏನಾಗಬಹುದೆಂದು ಆತ ಬಹಳ ಹಿಂದೆಯೇ ಆಲೋಚಿಸಿದ್ದ. ಮೊನ್ನೆ ಫುಕುಶಿಮಾದಲ್ಲಿ ಅವನು ಅಂದುಕೊಂಡಂತೆಯೇ ನಡೆಯಿತು. YouTubeನಲ್ಲಿ ಹುಡುಕಿದಾಗ ಅದರ ವೀಡಿಯೋ ಸಿಕ್ಕಿತು. ಕೆಳಗೆ ಅದನ್ನು ಲಗತ್ತಿಸಿದ್ದೇನೆ. ದಯವಿಟ್ಟು ಒಮ್ಮೆ ನೋಡಿ ಅದರ ಬಗ್ಗೆ ಆಲೋಚಿಸಿ, ಹಾಗೂ ಪೂರ್ತಿ ಡ್ರೀಮ್ ಸಿನೆಮಾ ಸಿಕ್ಕಿದರೆ ನೋಡಿ. ತುಂಬಾ ಚೆನ್ನಾಗಿದೆ.

 

ಬ್ಲಾಗ್ ವರ್ಗಗಳು

ನನ್ನ ಕಂಪ್ಯೂಟರ್‍ ಹಾಳಾಗಿದೆ, ಸ್ವಲ್ಪ ನೋಡ್ತೀಯಾ..?

Submitted by prasannasp on Wed, 03/16/2011 - 11:40

ಹಲೋ.. ಯಾರು ಪ್ರಸನ್ನನಾ?

ಹೌದು.

ನಾನು ಗೋಪಾಲರಾವ್ ಮಾತಾಡುದು..

ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ?

ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ.

ಯಾಕೆ? ಏನಾಗಿದೆ?

ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ ನೀನೇ ಒಂಚೂರು ಬಂದು ನೋಡ್ತೀಯಾ?

ಸರಿ, ನಾಳೆ ಬಂದ್ರೆ ಆಗುತ್ತಾ?

ಆಯ್ತು ಪರ್ವಾಗಿಲ್ಲ, ನಿಂಗೆ ಟೈಮಾದಾಗ ಬಾ.

ಹಾಗಾದ್ರೆ ನಾಳೆ ಸಂಜೆ ಬರ್ತೀನಿ.

ಆಯ್ತು, ಹಂಗಾದ್ರೆ ಫೋನ್ ಇಡ್ತೀನಿ.

*******************
(ಗೋಪಾಲರಾಯರ ಮನೆಯಲ್ಲಿ)

ಬ್ಲಾಗ್ ವರ್ಗಗಳು

ಮಲೆನಾಡಿನ factಗಳು... ಭಾಗ-1

Submitted by prasannasp on Wed, 12/22/2010 - 10:45

ಮಲೆನಾಡಿನ ಕೆಲವು ವಸ್ತುಸ್ಥಿತಿಗಳನ್ನು ಹಾಸ್ಯಭರಿತ ಧಾಟಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ಸರಿ, ಇಲ್ಲದಿದ್ದರೆ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ,

1. ಭಟ್ರ ಮನೆ ಕೊಟ್ಟಿಗೆಯಲ್ಲಿ ನೇತು ಹಾಕಿರೋ ಚೀಲದಲ್ಲಿ ಕೋಳಿ ಕೂಗ್ತಿದೆ ಅಂದ್ರೆ, ಅವತ್ತು ಭಟ್ರ ಮನೇಲಿ ಹರಕೆ ಇದೆ ಅಂತ ಅರ್ಥ!

2. ದೀಪಾವಳಿ ಬಿಟ್ಟು ಬೇರೆ ಟೈಮಲ್ಲಿ ಪಟಾಕಿ ಅಥ್ವಾ ಈಡಿನ ಸೌಂಡು ಕೇಳ್ತು ಅಂದ್ರೆ, ಯಾರೋ ಹೊಗೆ ಹಾಕಿಸ್ಕೊಂಡಿದಾರೆ ಅಂತ ಅರ್ಥ!

3. ಮನೇಲಿ ನೆಲದ ಮೇಲೆ ರಕ್ತದ ಕಲೆ ಆಗಿದೆ ಅಂದ್ರೆ, ಯಾರೋ ತೋಟದಿಂದ ಇಂಬ್ಳ ಹತ್ತಿಸ್ಕೊಂಡು ಬಂದಿದಾರೆ ಅಂತ ಅರ್ಥ!

4. ಯಾರ್ದಾದ್ರೂ ಮನೇಲಿ ಹುರುಳಿ ಸಾರು ಆಗಿದೆ ಅಂದ್ರೆ, ಹೂಟೆ ಶುರುವಾಯ್ತು ಅಂತ ಅರ್ಥ!

ಬ್ಲಾಗ್ ವರ್ಗಗಳು

ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?

Submitted by prasannasp on Tue, 12/21/2010 - 16:41

ನಮ್ಮ ಜೀವಶಾಸ್ತ್ರದ ಮೇಷ್ಟ್ರು ಒಂದು ಸಲ ಇದ್ದಕ್ಕಿದ್ದಂತೆ "ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?" ಅಂತ ಕೇಳಿದರು. ಬಸ್ಸು, ಲಾರಿಯಲ್ಲಿ ಬರುವ ಉತ್ಸರ್ಜಿತ ಹೊಗೆ (exhaust gas) ಇಂಗಾಲದ ಡೈ ಆಕ್ಸೈಡ್ (ಕಾರ್ಬನ್ ಡೈ ಆಕ್ಸೈಡ್) ಅಲ್ವಾ, ಅದು ಕಪ್ಪು ಬಣ್ಣ ಇರುತ್ತೆ. ಹಾಗಾಗಿ ಇಂಗಾಲದ ಡೈ ಆಕ್ಸೈಡ್ ಬಣ್ಣ ಕಪ್ಪು ಎಂದು ಕಲ್ಪಿಸಿಕೊಂಡು ಎಲ್ಲರೂ ಜೋರಾಗಿ "ಕಪ್ಪು" ಅಂತ ಕೂಗಿದ್ವಿ. ತಕ್ಷಣ ಅವರು , " ಹಾಗಾದರೆ ನಾವು ಉಸಿರು ಬಿಟ್ಟಾಗ ಮೂಗಿಂದ ಇಂಗಾಲದ ಡೈ ಆಕ್ಸೈಡ್ ಅನಿಲ ಹೊರಬರುತ್ತಲ್ಲ, ಅದು ಸಿಗರೇಟ್ ಹೊಗೆ ತರಹ ಕಪ್ಪಗೆ ಇರಬೇಕಿತ್ತು. ಏಕಿಲ್ಲ?" ಎಂದು ಕೇಳಿದರು. ಆಗ ನಾವು ಹೇಳಿದ್ದು ತಪ್ಪು ಉತ್ತರ ಎಂದು ಗೊತ್ತಾದರೂ, ಮೂಗಿಂದ ಕಪ್ಪು ಹೊಗೆ ಬರುವುದನ್ನು ಕಲ್ಪಿಸಿಕೊಂಡು ಎಲ್ಲರೂ ಜೋರಾಗಿ ನಕ್ಕಿದೆವು. :-)

ಬ್ಲಾಗ್ ವರ್ಗಗಳು

ಈ ಸಮೀಕರಣವನ್ನು ಬಿಡಿಸಿ

Submitted by prasannasp on Fri, 10/15/2010 - 16:50

ಈ ಕೆಳಗಿನ ಸಮೀಕರಣವನ್ನು ಬಿಡಿಸಿ ಉತ್ಪನ್ನ ತಿಳಿಸಿದವರಿಗೆ ಅದನ್ನೇ ಉಡುಗೊರೆಯಾಗಿ ನೀಡಲಾಗುವುದು. ತಡ ಮಾಡಬೇಡಿ, ಈಗಲೇ ಬಿಡಿಸಿ. :-)

C12H22O11 + NaCl + H2O + C6H8O7 -----} ?

ಬ್ಲಾಗ್ ವರ್ಗಗಳು