ಸುಮ್ಮನೆ

ಪದಕಟ್ಟಣೆಯ‌ ಅವಾಂತರಗಳು

Submitted by hamsanandi on Tue, 11/15/2016 - 21:28

ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು ಬೆಳೆದರೆ, ಅದು ಸೊಗಸು. ಇಲ್ಲದೆ ಹೋದರೆ, ಯಾವುದೋ ಮೈಯಿಗೆ ಯಾವುದೋ ತಲೆ ಅಂಟಿಸಿದಂತೆ, ಅಥವಾ ಅವಳ ಬಟ್ಟೆ ಇವಳಿಗಿಟ್ಟು ಅಂತಲೋ ಏನೋ ಬಿ ಎಂ ಶ್ರೀ ಅವರು ಹೇಳಿದ್ದಾರಲ್ಲ, ಹಾಗಾಗುತ್ತೆ.

ಸಂಸ್ಕೃತದ ಸುತ್ತ ತಪ್ಪು ತಿಳಿವಿನ ಹುತ್ತ

Submitted by hamsanandi on Sat, 01/23/2016 - 01:37

ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.
 
ಚೇತನಾ ಅವರು ಸೂಫಿ ತತ್ತ್ವಗಳನ್ನು ಚೆನ್ನಾಗಿ ಓದಿಕೊಂಡಿರುವುದರಿಂದ, ಅದರ ಉಲ್ಲೇಖದೊಂದಿಗೆ ತಮ್ಮ ಬರಹವನ್ನು ಆರಂಭಿಸುತ್ತಾರೆ. ನನಗೆ ಸೂಫಿ ತತ್ತ್ವಗಳ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದಿರುವುದರಿಂದ ಕೇವಲ ಆ ಭಾಗದ ಕೊನೆಯ ಎರಡು ಸಾಲುಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಈ ಇಡೀ ಬರಹದಲ್ಲಿ,  ಚೇತನಾ ಅವರ ಬರಹದ ಸಾಲುಗಳನ್ನು ಐಟಲಿಕ್ಸ್ ನಲ್ಲಿ, ನೇರಳೆ ಬಣ್ಣದಲ್ಲಿ ತೋರಿಸಿದ್ದೀನಿ:
 
ಚೇತನಾ ಹೀಗನ್ನುತ್ತಾರೆ:
 

ಬ್ಲಾಗ್ ಬರಹಗಳು ಮತ್ತೆ ಬರಹಗಳ ಗುಣಮಟ್ಟ

Submitted by hamsanandi on Tue, 09/07/2010 - 08:12

ನಾನಂತೂ ಕಾಲೇಜು ಮುಗಿದ ನಂತರ ಕಾಗದದಲ್ಲಿ, ಅದೂ ಕನ್ನಡದಲ್ಲಿ ಬರೆದದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ - ಸುಮಾರು ೯೬ ನೇ ಇಸವಿಯಲ್ಲಿ ಮಾಡಿದ್ದ ಒಂದು ಇಂಗ್ಲಿಷ್ ಕಥೆಯ ಅನುವಾದವಲ್ಲದೇ ಇನ್ನೇನನ್ನೂ ಕಾಗದದ ಮೇಲೆ ಬರೆದ ನೆನಪೇ ಇಲ್ಲ. ಎಷ್ಟೋ ಬಾರಿ ಒಳ್ಳೆಯ ಸುಭಾಷಿತಗಳನ್ನು ನೆನೆಸಿಕೊಂಡಾಗಲೆಲ್ಲ, ಅಥವಾ ಎಸ್ವಿ ಪರಮೇಶ್ವರ ಭಟ್ಟರ ಅಥವಾ ಪಾವೆಂ ಅವರ ಸುಭಾಷಿತಗಳ ಅನುವಾದಗಳನ್ನು ಓದಿದಾಗಲೆಲ್ಲ ನನಗೆ ಹೊಳೆದ ಕನ್ನಡಿಸುವ ಹೊಸ ಸಾಲುಗಳು ಹಾಗೇ ಗಾಳಿಯಲ್ಲೇ ಆರಿಹೋಗುತ್ತಿದ್ದಿದ್ದೂ ನಿಜ. ಈ ನಿಟ್ಟಿನಲ್ಲಿ ನೋಡಿದರೆ ಕಂಪ್ಯೂಟರಿನಲ್ಲಿ ಬರೆಯುವ, ಅಲ್ಲದೆ ಬರೆದದ್ದನ್ನು ನಾಲ್ಕಾರು ಜನ ಓದುವಂಥ ಅವಕಾಶ ಬಂದಿದ್ದು ಏನನ್ನಾದರೂ ಬರೆಯುತ್ತಿರಬೇಕೆಂಬ ಹುಮ್ಮಸ್ಸು ತಂದಿರುವುದಂತೂ ಅಷ್ಟೇ ನಿಜ.

ನಾ ನಿನ್ನನ್ನು ಪ್ರೀತಿಸುತ್ತೇನೆ....

Submitted by srinivasps on Sat, 06/26/2010 - 01:11

ಮನದಲೇನೋ ತೊಳಲಾಟ
ಅಂದಿಲ್ಲದ ಆಕರ್ಷಣೆ ಇಂದೇಕೆ??!
ತಡೆಹಿಡಿಯಲಾಗದ ಜ್ವಾಲಾಮುಖಿಯಂತೆ
ನನ್ನೊಳಗಿನ ಭಾವನೆಗಳು
ಒತ್ತರಿಸಿಕೊಂಡು ಬರಲೆತ್ನಿಸುತಿದೆ...
ಆದರೆ....ಈಗ ತಡವಾಗಿದೆ...

ಅಂದು ನೀನು ನನ್ನಲ್ಲಿ ಪ್ರೀತಿಯ ಪ್ರಸ್ತಾಪವನ್ನು
ಮೊಗವರಳಿಸಿ ಅದೆಷ್ಟು ಖುಷಿಯಲಿ ಮಾಡಿದ್ದೆ!
ಅಂದು ಕಂಡಿದ್ದ ನಿನ್ನ ಕಣ್ಣುಗಳ ಹೊಳಪು
ಇಂದಿಗೂ ಮರೆತಿಲ್ಲ...
ನೀನು... ನಾ ಕಂಡ
ಅತ್ಯಂತ ಸೊಗಾಸಾದ ವ್ಯಕ್ತಿಗಳಲ್ಲಿ ಒಬ್ಬ...
ನನ್ನ ನೆಚ್ಚಿನ ಗೆಳೆಯ!
ಆದರೂ...ನಿನ್ನ ಪ್ರೀತಿಯ ಪ್ರಸ್ತಾಪವನ್ನು ಅದೇಕೋ ಒಪ್ಪಲಿಲ್ಲ...
ಏಕೆಂಬುದು ನನಗೂ ಗೊತ್ತಿಲ್ಲ...
ಅಂದು ನಿನ್ನ ಬಗ್ಗೆ ಆ ರೀತಿ ಯೋಚನೆಗಳಿರಲಿಲ್ಲ...ಅಷ್ಟೆ!!

ಬ್ಲಾಗ್ ವರ್ಗಗಳು

ಸ೦ಪದಿಗರೇ ಪ್ರೀತಿ ಅ೦ದ್ರೆ ಏನು ಹೇಳಿ

Submitted by Harish Athreya on Fri, 04/23/2010 - 11:32

        ಪ್ರೀತಿ ಅನ್ನೋದು ಚರ್ಚೆ ವಿಷಯ ಅಲ್ಲ ಅದಕ್ಕೆ ಇದನ್ನ ಚರ್ಚೆ ಅನ್ನೋ ವರ್ಗಕ್ಕೆ ಸೇರಿಸಿಲ್ಲ.ಪ್ರೀತಿಗೆ ಹಲವಾರು ಜನ ನೂರಾರು ಸಾವಿರಾರು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.ಸಿನಿಮಾಗಳಲ್ಲಿ ಕೂಗಾಡಿದ್ದಾರೆ ಕಿರುಚಾಡಿದ್ದಾರೆ ಮಚ್ಚು ಲಾ೦ಗು ಹಿಡಿದಿದ್ದಾರೆ.ಕವಿಗಳು ನವಿರಾದ ಭಾವವೆ೦ತಲೂ.ವಿರಹಿಗಳು ಕಹಿಯಾದುದೆ೦ತಲೂ,ಸಿಹಿಯಾದ ನೋವೆ೦ತಲೂ ಹೇಳಿದ್ದಾರೆ. ಸುಮಾರು ಕಥೆ ಕವನ,ಸಿನಿಮಾ,ನಾಟಕಗಳ ಮುಖ್ಯ ವಸ್ತು ಪ್ರೀತಿಯೇ ಆಗಿರುತ್ತೆ.ಏನು ಈ ಪ್ರೀತಿ ಅ೦ದ್ರೆ? ಕಣ್ಣಿಗೆ ಕಾಣದ ಕೈಗೆ ಸಿಗದ ಆದರೆ ಸರ್ವವ್ಯಾಪಿಯಾಗಿರೋ ಈ ಪ್ರೀತಿ ಅ೦ದ್ರೆ ಏನು?.

ಬ್ಲಾಗ್ ವರ್ಗಗಳು

ಸುಮ್ಮನೆ

Submitted by Aravinda on Wed, 04/14/2010 - 11:53

ಕಳೆದ ಎರಡು ಮೂರು ವಾರಾಂತ್ಯಗಳಲ್ಲಿ ತಿರುಗಾಡಿದ್ದೇ ಕೆಲ್ಸ... ಫೋಟೋಗಳನ್ನು ಅಪ್ಲೋಡ್ ಮಾಡೋದಕ್ಕೆ ಈ ಸೋಮಾರಿತನ ಬಿಡ್ತಾ ಇಲ್ಲ.

***

ನಿಜ ನಾನು ಬರೆಯೋದು ಕಮ್ಮಿ ಆಗಿದೆ, ಹಂಗಂತ ಬರ್ಯೋದೇ ಬಿಟ್ಟೆ ಅಂತ ಅಲ್ಲ.

***

ನಿನ್ನೆ ಬೈಕ್ ಓಡಿಸುವಾಗ ಒಂದು ಕತೆ ಬರೆಯೋ ಐಡಿಯಾ ಬಂತು, ಅದನ್ನ ಬರೆದಿಡೋಕ್ಕೂ ಮುಂಚೆ ಮರ್ತೋಗ್ದದ್ರೆ ಸಾಕು.

***

Todo ಲಿಸ್ಟ್ ನಾಚಿಕೆನೇ ಇಲ್ಲದೇ ಬೆಳಿತಾ ಇದೆ...

***

ಊರಿಗೆ ಹೋಗದೇನೂ ಸುಮಾರು ದಿನ ಆಯ್ತು, ಮೋಸ್ಟ್ಲಿ ಮುಂದಿನ ವಾರ ಹೋಗ್ತೀನಿ.

***

ಬ್ಲಾಗ್ ವರ್ಗಗಳು

ಚ೦ಪಾ ಮತ್ತು ನಾ ಮರ್ದ್

Submitted by Harish Athreya on Fri, 03/19/2010 - 08:43

ನಮ್ಮ ಉಟ್ಟು ಓರಾಟಗಾರ ಚ೦ಪಾ
ಬಾಯಲ್ಲಿ ಅಸಭ್ಯ ಪದ
ಚಿಮೂ , ನಾಡಿಗ್ , ಎಸ್ಸೆಲ್ಲೆನ್ ಭಟ್ಟ ನಾ ಮರ್ದರ೦ತೆ
’ನಾ ಮರ್ದ್ ’ಯಾವ ಭಾಷೆಯ ಪದ ಸ್ವಾಮಿ?
ಕೇಳುತ್ತಿರುವೆನು ನಾ ಸಣ್ಣ ಕ್ರಿಮಿ
ಸಭೆಯೊಳಗೆ ನಾಮರ್ದರೆ೦ದು
ಕಳೆದುಕೊ೦ಡರಲ್ಲ ತಮ್ಮ ಮರ್ಯಾದೆಯನ್ನ
ಚ೦ಪಾಗೆ ಮರ್ಲಾಗಿರುವುದು ನಿಜವಣ್ಣ   (ಮರ್ಲ್ = ಹುಚ್ಚು)
ಚ೦ಪಾ ಮಾತಿನ ಧಾಟಿಗೆ ಏನ೦ತೀರಿ ಸ್ವಾಮಿ ಏನ೦ತೀರಿ ?

ಬ್ಲಾಗ್ ವರ್ಗಗಳು