ಪಶ್ಚಿಮದಲ್ಲಿ ಲಕ್ಷ್ಮಣ

ಕಥೆ : ಪಶ್ಚಿಮದಲ್ಲಿ ಲಕ್ಷ್ಮಣ

Submitted by partha1059 on Fri, 02/24/2012 - 23:02
ಮದ್ಯಾನದ ಬೋಜನದ ನಂತರ , ಅಂತಃಪುರದಲ್ಲಿ ಸ್ವಲ್ಪಕಾಲ ಮಲಗಿ ವಿಶ್ರಾಂತಿ ಪಡೆಯುವುದು ಲಕ್ಷ್ಮಣನ ಅಭ್ಯಾಸ, ಆದರೆ ಇಂದೇಕೊ ಆ ರೀತಿ ವಿಶ್ರಾಂತಿಗೆ ಹೋಗದೆ ಅರಮನೆಯ ಹಜಾರದಲ್ಲಿ ಸುಖಾಸನದ ಮೇಲೆ ಸುಮ್ಮನೆ ಕುಳಿತಿದ್ದ. ಊಟ ಮುಗಿಸಿ ಬಂದ ಊರ್ಮಿಳಾದೇವಿ ಲಕ್ಷ್ಮಣನತ್ತ ನಡೆದುಬಂದಳು, ಸ್ವಲ್ಪ ಆಶ್ಚರ್ಯದಿಂದಲೆ ಕೇಳಿದಳು, "ಇದೇನು ಇಲ್ಲಿ ಕುಳಿತಿರಿ? ಮಲಗಿ ವಿಶ್ರಾಂತಿ ಪಡೆಯುವದಿಲ್ಲವೆ?" ತುಸು ಅನ್ಯ ಮನಸ್ಕತೆಯಿಂದ ನುಡಿದ ಲಕ್ಷ್ಮಣ , "ಸ್ವಲ್ಪ ಅರಮನೆಯತ್ತ ಹೋಗಿ ಬರೋಣವೆಂದು ಅನ್ನಿಸಿತು, ಹಾಗಾಗಿ ಕುಳಿತೆ" ನಗುತ್ತ, ಊರ್ಮಿಳ ಅಂದಳು "ಈ ಬಿರು ಬಿಸಿಲಿನಲ್ಲಿಯೆ, ಸ್ವಲ್ಪ ಬಿಸಿಲು ಕಂದಲಿ ಬಿಡಿ, ಹೋದರಾದಿತು, ಅಣ್ಣನ ಅರಮನೆಗೆ ತಾನೆ" ಲಕ್ಷ್ಮಣ ಸ್ವಲ್ಪ ಸಂಕೋಚ, ಸ್ವಲ್ಪ ಗಲಿಬಿಲಿ, ಮತ್ತೇನೊ ಭಾವ ತುಂಬಿ ನುಡಿದ "ಇಲ್ಲ ಕೆಲಸವಿದೆ, ಅರಮನೆಗೆ ಹೋಗಬೇಕೆನಿಸಿದೆ, ನಿನಗೆ ಬೇಸರವೆ?" , ಊರ್ಮಿಳ ಜೋರಾಗಿ ನಕ್ಕುಬಿಟ್ಟಳು.
ಬ್ಲಾಗ್ ವರ್ಗಗಳು