ಮಹಾಭಾರತ

ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧

Submitted by makara on Sat, 04/08/2017 - 19:02

ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
೧. ಕಟಪಯಾದಿ ಪದ್ಧತಿಯಲ್ಲಿ ಸಂಖ್ಯೆಗಳನ್ನು ಅಕ್ಷರಗಳ ಮೂಲಕ ಸಂಕೇತಿಸುವ ಮೂರು ವಿಧಾನಗಳಿವೆ. 
೨. ಮೊದಲನೆಯ ಪದ್ಧತಿಯ ಸೂತ್ರ ಹಾಗು ಅವುಗಳ ಅರ್ಥವನ್ನು ಕೆಳಗಡೆ ವಿವರಿಸಲಾಗಿದೆ – 
(ಕೋಷ್ಟಕ - ೧ನ್ನು ನೋಡಿ)
 
ಕಾದಿ ನವ = ’ಕ’ ದಿಂದ ’ಝ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.   
ಟಾದಿ ನವ = ’ಟ’ ದಿಂದ ’ಧ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.   
ಪಾದಿ ಪಂಚಕ = ’ಪ’ ದಿಂದ ’ಮ’ ದವರೆಗಿನ ಅಕ್ಷರಗಳು (ಐದು) ಒಂದರಿಂದ ಐದರವರೆಗಿನ (೧ರಿಂದ ೫) ಅಂಕೆಗಳನ್ನು ಸೂಚಿಸುತ್ತವೆ.    

ಕತೆ : ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ

Submitted by partha1059 on Sat, 04/07/2012 - 22:11
ಯಾರೋ ಬಿಟ್ಟ ಬಾಣ ತಾಕಿ ರಕ್ತ ಚಿಮ್ಮಿದಾಗ, ಅಷ್ಟು ನೋವಾಗಿರಲಿಲ್ಲ, ಸ್ನೇಹಿತರೇ, ಆದರೆ, ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ ಎಂದರಿತಾಗ ಈ ಹೃದಯ ಛಿದ್ರವಾಯಿತು! --ಆಸುಹೆಗ್ಡೆ (ಫೇಸ್ ಬುಕ್'ನಲ್ಲಿ) ====================================== ಸರಿಯಾಗಿ ಹತ್ತನೇ ದಿನ ಕೌರವರ ಸೇನಾಧಿಪತಿ ನೆಲಕ್ಕುರುಳಿದ್ದರು. ಕುರು ಪಾಂಡವರ ಮೆಚ್ಚಿನ ತಾತ, ವಂಶಕ್ಕೆ ಹಿರಿಯ, ಭೀಷ್ಮಾಚಾರ್ಯ, ಆರ್ಜುನನು ಹೂಡಿದ ಬಾಣಕ್ಕೆ ಎದೆಯೊಡ್ಡಿ ರಕ್ತಸುರಿಸುತ್ತ ರಥದಿಂದ ಉರುಳಿ ಕೆಳಗೆ ಬಿದ್ದಾಗ, ಅಂದಿನ ಯುದ್ಧಕ್ಕೆ ವಿರಾಮದ ಘೋಷಣೆಯಾಗಿತ್ತು. ಸಂಜೆಯ ಇಳಿಬಿಸಿಲಿನಲ್ಲಿ ನೊರಜುಕಲ್ಲಿನ ನೆಲದ ಮೇಲೆ ಮಲಗಿದ್ದ ಭೀಷ್ಮರು ಕಣ್ಣು ಮುಚ್ಚಿದ್ದರು. ಸುತ್ತಲು ಒಡಾಡುತ್ತಿದ್ದವರ ಧ್ವನಿ ಅವರಿಗೆ ಸ್ವಷ್ಟವಾಗಿ ಕೇಳಿಸುತ್ತಿತ್ತು. ಸನಿಹದಲ್ಲಿಯೇ ದುರ್ಯೋಧನನ ಧ್ವನಿ ಕೇಳಿಸಿತು "ಬೇಗ ತನ್ನಿ , ಅವರನ್ನು ನಿಧಾನವಾಗಿ ಎತ್ತಿ ಮಲಗಿಸಿ, ಗುಡಾರಕ್ಕೆ ಕರೆದೊಯ್ಯೋಣ, ವೈದ್ಯರು ಉಪಚಾರ ನಡೆಸಲಿ, ಸರಿಹೋದಾರು".
ಸರಣಿ
ಬ್ಲಾಗ್ ವರ್ಗಗಳು