ಪಾರ್ಥನ ಸಣ್ಣಕತೆಗಳು

ಕತೆ: ಕನಸಿನ ಮಾಯಾಜಿಂಕೆ (ಜಿಂಕೆಯ ಹಿಂದೆ)

Submitted by partha1059 on Sun, 07/20/2014 - 11:29

ಕತೆ: ಕನಸಿನ ಮಾಯಾಜಿಂಕೆ   (ಜಿಂಕೆಯ ಹಿಂದೆ)  

 

ಭಾರತದ ಬೇರೆ ಬೇರೆ ನಗರಗಳಲ್ಲಿ ಸರ್ವೀಸಿನ ಬಹಳಷ್ಟು ವರ್ಷಗಳನ್ನು ಕಳೆದು, ನಿವೃತ್ತನಾಗಲು ಐದು ವರ್ಷಗಳು ಇವೆ ಎನ್ನುವಾಗ  ಬೆಂಗಳೂರಿಗೆ ಬಂದು ನೆಲೆಸಿದ್ದವನು ವಿಶ್ವನಾಥ.  

ಬ್ಲಾಗ್ ವರ್ಗಗಳು

ಹೀಗೊಂದು ಕತೆ

Submitted by partha1059 on Sun, 08/25/2013 - 16:57

ಹೀಗೊಂದು ಕತೆ

===========

 

'ಈ ಕಾರು ಯಾರದು?" 

 

ಶೃತಿ ಕೇಳಿದಾಗ, ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಹಾರುತ್ತಿದ್ದ ಅವಳ ಮುಂಗುರುಳು ದಿಟ್ಟಿಸುತ್ತ ನುಡಿದ ಕಿರಣ

 

"ಇದಾ ನಮ್ಮದೆ ,  ತೆಗೆದುಕೊಂಡು ಆರು ತಿಂಗಳಾಯಿತು, ನನಗೆ ಅಂತಾನೆ ಅಪ್ಪ  ತೆಗೆದುಕೊಂಡರು"

 

ವಾಕ್ಯದ ಕಡೆಯಲ್ಲೊಂದು ಸುಳ್ಳು ಸೇರಿತು. ಅದು ಅವಳನ್ನು ಮರಳು ಮಾಡಲು ಆಡಿದ ಸುಳ್ಳು.

 

ಬ್ಲಾಗ್ ವರ್ಗಗಳು

ಬೆಂಗಳೂರಿನಲ್ಲಿ ಕ್ಲೌಡ್ ಬರ್ಷ್ಟ್ .. ಅಷಾಡ .. ಅಮಾವಾಸ್ಯೆ ಇತ್ಯಾದಿ

Submitted by partha1059 on Wed, 07/03/2013 - 22:07
 
 
 
ರಾತ್ರಿ ಮಲಗುವಾಗ ಕೇದಾರದ  ರುದ್ರಭಯಂಕರ ಮಳೆಯ ಬಗ್ಗೆ  ಟೀವಿ ವರದಿ ನೋಡುತ್ತ ಇದ್ದವನು ಹಾಗೆಯೆ ಮಲಗಿದ್ದೆ. ಮಲಗಿ ಸ್ವಲ್ಪ ಕಾಲವಾಗಿತ್ತೇನೊ ಏಕೊ ಎಚ್ಚರವೆನಿಸಿತು. ಹೊರಗೆ ಪಟ ಪಟ ಎನ್ನುವ ಸತತ ಶಬ್ದ. 
'ಓಹೋ ರಾತ್ರಿ ಮಳೆ ಪ್ರಾರಂಬವಾಯಿತು' ಅಂದುಕೊಂಡೆ,
ಬ್ಲಾಗ್ ವರ್ಗಗಳು

ಕತೆ ಪತ್ತೆದಾರಿ : ಹೀಗೊಂದು ಕಿಡ್ನಾಪ್

Submitted by partha1059 on Mon, 06/17/2013 - 17:45

 ಪ್ರಿಯಾಸೆಲ್ವರಾಜ್ ಬೆಂಗಳೂರಿನಲ್ಲಿಯೆ ಪ್ರಸಿದ್ದಳಾಗಿದ್ದ ಕ್ರಿಮಿನಲ್ ಅಡ್ವೊಕೇಟ್ .ಆಕೆ ಕೊಲೆ ದರೋಡೆಗಿಂತ , ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂದಿಸಿದ ಕೇಸ್ ಗಳನ್ನು ಹ್ಯಾಂಡಲ್ ಮಾಡಿರುವುದೆ ಜಾಸ್ತಿ. ಅದಕ್ಕೆ ಕಾರಣ ಅದರಲ್ಲಿ ಬರುತ್ತಿದ್ದ ಹಣ.  ಆಕೆ ಕೋರ್ಟ್ ನಲ್ಲಿ ಗೆದ್ದ ಕೇಸುಗಳಿಗಿಂತ ಹೊರಗೆ ಸೆಟ್ಲ್ ಮಾಡಿರುವ ಕೇಸ್ ಗಳೆ ಜಾಸ್ತಿ ಇದ್ದವು, ತಾನು ತೆಗೆದುಕೊಂಡ ಕೇಸ್ ಗೆಲ್ಲಲ್ಲು ಆಕೆ ಎಲ್ಲ ರೀತಿಯಲ್ಲು ಪ್ರಯತ್ನ ಪಡುತ್ತಿದ್ದಳು.

ಬ್ಲಾಗ್ ವರ್ಗಗಳು

ಕತೆ : ಮನಸೆ

Submitted by partha1059 on Fri, 06/14/2013 - 14:13

ಅವನ ಮನಸಿಗೆ ವಿಚಿತ್ರವೆನಿಸಿತ್ತು. ಅವನು ಎಂದು ಆ ಲೋಕಕ್ಕೆ ಬಂದ ನೆನಪಿಲ್ಲ. ಅಂದು ಕೊಳ್ಳುತ್ತಿದ್ದ
" ಹುಟ್ಟಿ ಐವತ್ತು ವರ್ಷಗಳಾಯಿತೇನೊ ಎಂದು ಈ ಅನುಭವವಾಗಿರಲಿಲ್ಲವೆ " ಎಂದು.
ರಾತ್ರಿ ಮಲಗಿ ಅರ್ಧ ಒಂದು ಘಂಟೆ ಕಳೆದಿತ್ತೇನೊ ಅವನ ಮನ ಅದ್ಯಾವುದೋ ಲೋಕವನ್ನು ಪ್ರವೇಶಿಸಿತ್ತು. ಗಾಳಿಯಲ್ಲಿ ತೇಲುವ ಸುಂದರ ಅನುಭವ. ಸುತ್ತಲು ಕಾಮನ ಬಿಲ್ಲು ಕಟ್ಟಿರುವಂತೆ ವರ್ಣಗಳ ಲೋಕ. ನಡೆಯುವಾಗಲು ತೇಲುತ್ತಿರುವ ಅನುಭವ. ಯಾವುದೆ ಬಂಧನವಿಲ್ಲದ ಸುಮದುರ ಅನುಭವ.

ನಂತರ ಗಮನಿಸಿದ ತಾನೋಬ್ಬನೆ ಅಲ್ಲ ಅಲ್ಲಿರುವುದು, ತನ್ನಂತೆ ನೂರಾರು ಸಾವಿರಾರು ಮನಸುಗಳು ಅಲ್ಲಿ ವಿಹರಿಸುತ್ತಿವೆಯಲ್ಲ. ಹಾಗಾದರೆ ಇದು ಯಾವ ಲೋಕ. ಒಡನೆ ಅವನಿಗೆ ಒಂದು ಅನುಮಾನ ಆವರಿಸಿತು.

ಸರಣಿ
ಬ್ಲಾಗ್ ವರ್ಗಗಳು

ಕತೆ : ಭಾಗಿರಥಿ

Submitted by partha1059 on Mon, 05/27/2013 - 14:41

ಗಂಗೋತ್ರಿಯ ಹೋಟೆಲ್ 'ಮಂದಾಕಿನಿ' ಕೊಠಡಿಯ ಕಿಟಿಕಿಯಿಂದ ಒಮ್ಮೆ ಹೊರಗಡೆ  ನೋಡಿದೆ,  ಹಸಿರು ಬೆಟ್ಟಗಳ ಸಾಲು. ಕೊರೆಯುವ ಚಳಿ. ಬೆಂಗಳೂರಿನಂತಲ್ಲದೆ ಅಲ್ಲಿಯದೇ ಆದ ಸಂಸ್ಕೃತಿ, ಜನಗಳು, ಮನೆಗಳು, ರಸ್ತೆ ಎಲ್ಲವೂ ಹೊಸ ಲೋಕವೊಂದನ್ನು ನನ್ನೊಳಗೆ ಸೃಷ್ಟಿಸಿತ್ತು.

"ದ ಗ್ರೇಟ್ ಹಿಮಾಲಯನ್ ಟ್ರಕ್ಕಿಂಗ್ ಅಸೋಸಿಯೇಷನ್" 

ನನ್ನ ಹಲವು ವರ್ಷಗಳ ಕನಸಿಗೆ ನಿಜ ರೂಪ ಕೊಡಲು ಸಿದ್ದವಾಗಿದ್ದ ಸಂಸ್ಥೆ. 

ಬ್ಲಾಗ್ ವರ್ಗಗಳು

ಕೋಡುವಳ್ಳಿಯ ಕರೆ ( ‍ ಚಂದ್ರಾ ಚಂದ್ರಾ..)

Submitted by partha1059 on Mon, 03/25/2013 - 17:13

ಭಾಗ - 2

ಎಲ್ಲರು ಮಾತನಾಡುತ್ತ , ಮನೆಯಲ್ಲಿ ಗಲಾಟೆ ಎಬ್ಬಿಸುತ್ತಲೆ ಊಟದ ಕೊಟಡಿಯಲ್ಲಿ ಸೇರಿ ಇಡ್ಲಿ ತಿಂದು ಗಸಗಸೆ ಪಾಯಸಿ ಕುಡಿದರು. ಮನೆಯಲ್ಲಿ ಎಂದು ಪಾಯಸ ಕುಡಿಯದ ಕೀರ್ತನ ಇಲ್ಲಿ ಎರಡು ಲೋಟ ಕುಡಿದಿದ್ದಳು, ಅಚಲ ಇಲ್ಲಿಯ ತಿಂಡಿಯನ್ನು ತನ್ನ ಕೇರಳದ ಇಡ್ಲಿಯಂತದೆ ತಿಂಡಿ 'ಪುಟ್ಟು'ವಿಗೆ ಹೋಲಿಸುತ್ತ ಸಾಕಷ್ಟು ತಿಂದಳು. ಶಾಲಿನೆ ಒಬ್ಬಳೆ ಸ್ವಲ್ಪ ಗಂಭೀರವಾಗಿದ್ದವಳು. ಅವರು ತಿನ್ನುತ್ತಿರಬೇಕಾದಲ್ಲಿ, ಚಿತ್ರಾಳ ಚಿಕ್ಕಪ್ಪ  ಹಾಗು ಮಕ್ಕಳು ಅಬಿ, ಅಜಯ್ ಸಹ ಜೊತೆ ಸೇರಿದರು, ಅವರಿಬ್ಬರ ಮಾತುಗಳು ಎಲ್ಲರಿಗು ಇಷ್ಟವಾಯಿತು. 

ಬ್ಲಾಗ್ ವರ್ಗಗಳು