ಮುಂಜಾನೆ

ಇಬ್ಬನಿ...

Submitted by anil.ramesh on Wed, 06/17/2009 - 12:14

ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.

ಸೂರ್ಯಮೂರ್ತೇ ನಮೋಸ್ತುತೇ!

Submitted by anil.ramesh on Mon, 05/04/2009 - 12:31

ಸೂರ್ಯಮೂರ್ತೇ ನಮೋಸ್ತುತೇ!

ಶನಿವಾರ ಬೆಳಿಗ್ಗೆ ರವಿಯು ಉದಯಿಸುತ್ತಿರುವಾಗ ನಮ್ಮ ಮನೆಯ ಮಹಡಿಯಿಂದ ಹೀಗೆ ಕಾಣಿಸಿದ. ಆಗ ಸೆರೆಹಿಡಿದ ಚಿತ್ರ.

ಉದಯರವಿ

ಹೀಗೊಂದು ಬೆಳಗು

Submitted by kalpana on Thu, 02/28/2008 - 22:16

ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ.