ಮೋನಿಯ‌ ಜೋಕುಗಳು

ಮೂಡು ಬಂದು ಬಿದ್ರೆ…….

Submitted by Shobha Kaduvalli on Mon, 03/25/2013 - 11:44

ಮೋನಿ ಸಕುಟುಂಬ ಪರಿವಾರ ಸಮೇತನಾಗಿ ಒಂದು ಮದುವೆಗೆ ಹೊರಟಿದ್ದ.  ಸಕುಟುಂಬ ಅಂದರೆ, ಮೋನಿ, ಪದ್ದಿ ಮತ್ತು ಅವನ ಮಗ ಮೋಪ, ಸಪರಿವಾರ ಅಂದರೆ, ಅವನ ಜಿಗ್ರಿದೋಸ್ತ್ ಚಡ್ಡಿ ಸತೀಶ, ಅವನ ಹೆಂಡತಿ ಮತ್ತು ಮಗಳು.  ಮದುವೆ ಮೂಡಬಿದ್ರೆಯಲ್ಲಿ.  ಮೋನಿಯ ಹೊಚ್ಚ ಹೊಸಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮೋಪ ಗೊತ್ತಲ್ಲ ತರಲೆ ಸುಬ್ಬ… ಕಾರಿನಲ್ಲಿ ಮೋಪನ ತುಂಟಾಟ ಅಧಿಕವಾಗಿತ್ತು.  ಹೆತ್ತವರಿಗೆ ಹೆಗ್ಗಣ ಮುದ್ದೆಂಬಂತೆ ಮೋನಿಯ ಪರಿವಾರಕ್ಕೆ ಅವನ ತುಂಟಾಟ ಹಿತವಾಗಿತ್ತು ಆದರೆ ಚಡ್ಡಿ ಸತೀಶ ಮತ್ತವನ ಹೆಂಡತಿಗೆ ಅಸಮಾಧಾನವಾಗುತ್ತಿದ್ದರೂ, ದಾಕ್ಷಿಣ್ಯಕ್ಕೆ ಬಾಯಿ ಮುಚ್ಚಿ ಸಹಿಸುತ್ತಿದ್ದರು.  ಚಡ್ಡಿ ಸತೀಶನ ಮಗಳು ಮಾತ್ರ ಮೋಪನ ತುಂಟಾಟಗಳನ್ನು ಕಣ್ಣರಳಿಸಿ ನೋಡುತ್ತಾ ಆನಂದಿಸುತ್ತಿದ್ದಳು.  ಬಿರು ಬೇಸಿಗೆಯ ಸಖೆಯಿಂದಾಗಿ, ಎ.ಸಿ.

ಬ್ಲಾಗ್ ವರ್ಗಗಳು

.....ಸರಿಯಾಗಿ ಹೇಳ್ತಾಳ?

Submitted by Shobha Kaduvalli on Thu, 02/07/2013 - 20:13

"ಮಮ್ಮೀ ಇವತ್ತು ಡ್ಯಾಡಿ ನನಗೆ ಕಿಸ್ ಮಾಡಲೇ ಇಲ್ಲ" ಮೋನಿಯ ಪುಟಾಣಿ ಮಗ ಅಮ್ಮನಿಗೆ ವರದಿ ಒಪ್ಪಿಸಿದ, ಸಪ್ಪೆ ದನಿಯಲ್ಲಿ.

"ನೀನು ಬಹುಶಃ ಟೇಬಲ್ಸ್ ಸರಿಯಾಗಿ ಹೇಳಲಿಲ್ಲ, ಅದಕ್ಕೆ ಡ್ಯಾಡಿ ಕಿಸ್ ಮಾಡಲಿಲ್ಲ ಅನ್ನಿಸುತ್ತೆ ಪುಟ್ಟಾ" ಪದ್ದಿ ಮಗನನ್ನು ಮುದ್ದು ಮಾಡುತ್ತಾ ಸಮಾಧಾನಿಸಿದಳು.  

ಬ್ಲಾಗ್ ವರ್ಗಗಳು

ರೀಲು

Submitted by Shobha Kaduvalli on Sun, 01/20/2013 - 15:54

ಮೋನಿ ಮತ್ತು ಚೆಡ್ಡಿ ಸತೀಶ ಇಬ್ಬರೂ ಜಿಗ್ರಿ  ದೋಸ್ತಿಗಳು.  ಇಬ್ಬರ ಪತ್ನಿಯರೂ ಬಜಾರಿಯರು.  ಅದರೇನು ಪ್ರೀತಿಸಿ ಮದುವೆಯಾಗಿದ್ದರಲ್ಲ, ಭೇಟಿಯಾದಾಗಲೆಲ್ಲ ತಮ್ಮ ತಮ್ಮ ಹೆಂಡತಿಯರನ್ನು ಹೊಗಳಿಕೊಳ್ಳುವುದೇ ಕೆಲಸವಾಗಿತ್ತು.  ಒಮ್ಮೆ ಇಬ್ಬರೂ ತೃಪ್ತಿ ರೆಸ್ಟೋರೆಂಟಿನಲ್ಲಿ S. K. C. ಹೊಡೆಯುತ್ತಾ ತಮ್ಮ ತಮ್ಮ ಪತ್ನಿಯರನ್ನು ಹೊಗಳಿಕೊಳ್ಳುತ್ತಿದ್ದರು...ಚಡ್ಡಿ ಸತೀಶ..

ಬ್ಲಾಗ್ ವರ್ಗಗಳು