ಅಕ್ಷರದ ಮರಣ

ಅಕ್ಷರದ ಮರಣ

ಗುರುವ ಎದೆಯಿಂದ
ಜಾರಿ ಬಿದ್ದ ಅಕ್ಷರವೊಂದು,
ಹತ್ತಾಗಿ, ನೂರಾಗಿ, ಸಾವಿರವಾಗಿ 
ಬಾಯ್ತೆರೆದು ಕಾಯುವ 
ಶಿಷ್ಯರ ಎದೆಯೊಳಗೆ 
ಮೊಳಕೆಯೊಡೆದು 
ಮನನದ ಪೋಷಕಾಂಶ ಹೀರಿ 
ತಲೆಯೆತ್ತಿ ಗಿಡವಾಗಿ
ಹೆಮ್ಮರವಾಗಿ ಬೆಳೆದು,

ಕೊನೆಗೊಮ್ಮೆ,,,
ಗುರುವನ್ನೇ ಮರೆತು 
ಗುರಿಯ ಕಡೆಗೆ,
ಬೆಳಕಿನ ರಂದ್ರದಲಿ ಹಾರಿ. 
ಕಲಿತ ನೆಲದ ಋಣವ 
ಕಡೆಗಣಿಸಿ 
ಯಾವುದೋ ದೇಶದಲಿ 
ಫಲವ ನೀಡಿ,
ಕೊನೆಗೆ ಅಲ್ಲಿಯೇ ಬೀಜ ಬಿತ್ತಿ,

ಮರಣವಪ್ಪುವುದು,,,,

-- ಜೀ ಕೇ ನ

Comments

Submitted by ಗಣೇಶ Sun, 10/26/2014 - 18:29

ಇಲ್ಲಿ ಬಿತ್ತಿದ್ದು
ಅಲ್ಲಿ ಫಲ ನೀಡಿತು..
>>ಕೊನೆಗೆ ಅಲ್ಲಿಯೇ ಬೀಜ ಬಿತ್ತಿ,
ಇಲ್ಲಿ ಫಲ ನೀಡಬಹುದು.
ಅಕ್ಷರದ ಮರಣ ಅಲ್ಲ
ಅಕ್ಷರದ ಪಯಣ...ಇದುವೇ ಜೀವನ..
-ನವೀನರೆ, ನಿಮ್ಮ ಕವನ ಚೆನ್ನಾಗಿದೆ.

Submitted by naveengkn Mon, 10/27/2014 - 09:04

In reply to by ಗಣೇಶ

ಮರಣವನ್ನು, ಪಯಣವನ್ನಾಗಿ ಬದಲಾಯಿಸಿದ ನಿಮ್ಮ ಧನಾತ್ಮಕ ಚಿಂತನೆ ಬಹಳ ಹಿಡಿಸಿತು ಗಣೇಶರೆ,,,,,,, ಧನ್ಯವಾದಗಳು,,,,