ಅಪ್ಪಟ ಕನ್ನಡಿಗರ ಬೆಂಕಿಪಟ್ಣ...!

ಅಪ್ಪಟ ಕನ್ನಡಿಗರ ಬೆಂಕಿಪಟ್ಣ...!

ಬೆಂಕಿಪಟ್ಣ. ಎಲ್ಲರೂ ಇದನ್ನ ಬಳಸೋದು ಯಾತಕ್ಕೆ..? ಒಂದು ಮನೆ ದೀಪ ಬೆಳಗೋಕೆ. ಇನ್ನು ಕೆಲವ್ರು ಬೀಡೀ ಸೇದೋಕೆ. ಆದರೆ, ಈಗ ಕನ್ನಡ ಚಿತ್ರವೊಂದಕ್ಕೆ ಇದೆ ‘ಬೆಂಕಿಪಟ್ಣ’ ಟೈಟಲ್ ಆಗಿದೆ. ಹೊಸ ಥರದ ಕತೆಯನ್ನೇ ಹೇಳ್ತಿರೋ ಈ ಬೆಂಕಿಪಟ್ಣದ ಕಥೆ ಏನೂ ಅಂತ ಯಾರು ಬಿಟ್ಟುಕೊಟ್ಟಿಲ್ಲ. ಬಿಟ್ಟುಕೊಟ್ಟದ್ದು ಮಾತ್ರ ಹಲವು ವಿಷ್ಯಗಳು.ಅದನ್ನ ಹೇಳ್ತಾ ಹೋಗ್ತೀನಿ ಕೇಳಿ...

ಬೆಂಕಿಪಟ್ಣ ಒಂದು ನೈಜಕಥೆ ಆಧರಿಸಿದ ಚಿತ್ರ.ನಿರ್ದೇಶಕ ಟಿ.ಕೆ.ದಯಾನಂದ್, ಮೊದಲ ಪ್ರಯತ್ನದಲ್ಲಿಯೇ ಒಳ್ಳೆ ಕೆಲಸ ಮಾಡಿದ್ದಾರೆ. ಆ ಒಂದು ಮೆಚ್ಚುಗೆ ಈಗಲೇ ಸಿಕ್ಕಿದೆ. ಯಾಕೆಂದ್ರೆ, ಟಿ.ಕೆ.ದಯಾನಂದ್ ಒಬ್ಬ ಕಥೆಗಾರ.ಅದಕ್ಕೂ ಮೊದ್ಲು ಒಬ್ಬ ಪರ್ತಕರ್ತ. ಸಂಶೋಧನಾತ್ಮಕ ಮನಸ್ಸು ಇದೆ. ಅದೇ ಮಸ್ಥಿತಿನೇ ನೈಜ ಪಾತ್ರಗಳನ್ನ ತೆರೆಗೆ ತರೋಕೆ ಸಾಧ್ಯವಾಗಿದೆ ಅನಿಸುತ್ತದೆ..

ಬೆಂಕಿಪಟ್ಣ ಅಂತಹ ಒಂದು ಸಿನಿಮಾ. ಈಗ ಶೂಟಿಂಗ್ ಮುಗಿದಿದೆ. ಬರೋ ಇನ್ನೊಂದೂವರೆ ತಿಂಗಳಲ್ಲಿ ಸಿನಿಮಾನೂ ತೆರೆಕಾಣ್ತಿದೆ. ಆದರೆ, ಅದಕ್ಕೆ ಪೂರಕವೆಂಬಂತೆ, ಲೈವ್ ಸಂಗೀತವಾದ್ಯಗಳನ್ನ ಬಳಸಿಕೊಂಡು ರಾಗಗಳನ್ನ ಸಂಯೋಜಿಸಿರೊ ಹಾಡುಗಳು ಬಿಡುಗಡೆಯಾಗಿವೆ. ಹಾಗೆ ಮಾಡಿರೋ ಹಾಡುಗಳಿಗೂ ಈಗಲೇ ಮೆಚ್ಚಿಗೆ ಸಿಕ್ಕಿದೆ. ಜಯಂತ್ ಕಾಯ್ಕಿಣಿ,ಹೃದಯಶಿವ ರಂತಹ ಚಿತ್ರ ಸಾಹಿತಿಗಳು ‘ಬೆಂಕಿಪಟ್ಣಕ್ಕೆ’ ಗೀತೆ ರಚಿಸಿಕೊಟ್ಟಿದ್ದಾರೆ..ಸ್ವೀವ್ ಕೌಶಿಕ್ ಸಂಗೀತದಲ್ಲಿ ಚಿತ್ರದ ಹಾಡು ಟಚ್ ಆಗುತ್ತವೆ...

ಆದರೆ, ಚಿತ್ರದಲ್ಲಿ ಹೆಚ್ಚು ಸೆಳೆಯೋದು ಅರುಣ್ ಸಾಗರ್ ಪಾತ್ರ. ಇಲಿಪಾಶಾನ ಮಾರೋ ವ್ಯಕ್ತಿಯ ಪಾತ್ರವಿದು. ತಮ್ಮ ವಯಸ್ಸನ್ನ ಮೀರಿರೋ ಪಾತ್ರವೂ ಹೌದು. ಆಪ್ತ ಮತ್ತು ವಿಭಿನ್ನ ಅನಿಸೋ ಈ ಕ್ಯಾರೆಕ್ಟರ್ ಬೇಡೋ ಗೆಟಪ್​ನ್ನ ಸ್ವತ: ಅರುಣ್ ಸಾಗರ್ ಮಾಡಿಕೊಂಡಿದ್ದಾರೆ. ಇದೇ ಪಾತ್ರದ ಜೊತೆ..ಜೊತೆಗೆ ಪ್ರತಾಪ್ ನಾರಾಯಣ್ ಎಂಬ ಯುವ ನಟನೂ ಬೆಂಕಿಪಟ್ಣದಲ್ಲಿ ಅಭಿನಯಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಈ ಪಾತ್ರ ಬಿಟ್ರೇ, ನಿಮ್ಮನ್ನ ಕಂಡಿತ ಸೆಳೆಯೋದು, ಬಿಗ್ ಬಾಸ್ ಅನುಶ್ರೀ ನಿಭಾಹಿಸಿರೋ ‘ಪಾನಿ’ ಹೆಸರಿನ ರೋಲ್. ಇದು ಟಿಪಿಕಲ್ ಕ್ಯಾರೆಕ್ಟರ್. ತೀರಲೋಕಲ್ಲೂ ಅಲ್ಲ. ಅತ್ತ ಸ್ಟಾಂಡರ್ಡೂ ಅಲ್ಲ. ಹಾಗಿದೆ ಅನುಶ್ರೀ ಪಾತ್ರ. ಅದನ್ನ ನಿಭಾಹಿಸೋಕೆ ಅನುಶ್ರಿ ಸೂಕ್ತ ತಯಾರಿನೂ ಮಾಡಿಕೊಂಡಂತಿದೆ. ನಿರ್ದೇಶಕ ಟಿ.ಕೆ.ದಯಾನಂದ್ ಕತೆ ಹೇಳಿದಾಗೆ, ಅನುಶ್ರೀ ಒಬ್ಬ ಅನುಶ್ರೀಯಾಗಿಯೇ ಕಥೆಯನ್ನ ಕೇಳಿದ್ದಾರೆ. ಕೊನೆ..ಕೊನೆಗೆ ಅನುಶ್ರೀ ‘ಪಾನಿ’ಅನ್ನೋ ಪಾತ್ರವೇ ಆಗಿ ಹೋಗಿದ್ದಾರೆ. ಹಾಗಿದೆ ಇದರ ಒಳಹರಿವು...

ಇಷ್ಟೆಲ್ಲ ಹೇಳೋಕೆ ಕಾರಣವೂ ಇದೆ. ಬೆಂಕಿಪಟ್ಣ ಅಪ್ಪಟ ಕನ್ನಡಿಗರ ಚಿತ್ರ. ಹೊರಗಿನ ಯಾವೊಬ್ಬ ವ್ಯಕ್ತಿನೂ ಚಿತ್ರಕ್ಕೆ ಕೆಲಸ ಮಾಡಿಲ್ಲ. ಎಲ್ಲರೂ ಕನ್ನಡದ ನೆಲದವ್ರೇ. ಕನ್ನಡದ ನೆಲದ ಕತೇನೇ ಇದು. ನಿರ್ದೇಶಕ ಟಿ.ಕೆ.ದಯಾನಂದ್ ದೀಪಾವಳಿ ಸಂಚಿಕೆಯಲ್ಲಿ ಬರೆದ ಮತ್ತು ಬಹುಮಾನ ವಿಜೇತ ಕಥೆನೇ ಈಗ ಬೆಂಕಿಪಟ್ಣ ಆಗಿದೆ. ಇಷ್ಟೆಲ್ಲ ಪಾತ್ರವರ್ಗದ ಬಗ್ಗೆ ಹೇಳೋಕೆ ತುಂಬಾ ಖುಷಿನೂ ಆಗುತ್ತದೆ. ಟ್ರೈಲರ್ ಮತ್ತು ಹಾಡುಗಳು ಅಷ್ಟೊಂದು ಸಂತೋಷ ಕೊಡುತ್ತವೆ. ಇಡೀ ಸಿನಿಮಾ ನೋಡಿದಾಗ ಆಗೋ ಆ ಅನುಭವಕ್ಕೆ ಎಲ್ಲರೂ ಕಾಯೋ ಥರವೇ ಈ ಬೆಂಕಿಪಟ್ಣ, ಕುತೂಹಲ ಕೆರಳಿಸಿದೆ..

-ರೇವನ್ ಪಿ.ಜೇವೂರ್

ಚಿತ್ರ: kannada.oneindia.in