ಕವಿ ಕಾಣದನ್ನ ಕ್ರೇಜಿ ಕಂಡ.ಆದರೆ...?

ಕವಿ ಕಾಣದನ್ನ ಕ್ರೇಜಿ ಕಂಡ.ಆದರೆ...?

ಕನಸುಗಾರನ ನೂರಾರು ಕನಸು..! ಸಾಕಾರಗೊಂಡವು ಹಲವು ಕಲ್ಪನೆ.ಎದೆಯಲ್ಲಿ ಅಡಗಿವೆ ಹಲವು ಮುತ್ತು.ಈ ಚೆಂದಮಾಮನ ಆ ಸಿನಿಮಾಗಳು. ಸಾವಿರ ಕನಸುಗಳ ಸರದಾರ.ಮುಗಿಯದ ಕ್ರೇಜಿ ಸಿನಿಮಾಗಳ ಕಥೆ.ರವಿಚಂದ್ರನ್ ಸಿನಿಮಾಗಳ ಹಳೇ ನನೆಪು      ಅಪೂರ್ವ ಎಲ್ಲಿಗೆ ಬಂತು...ಯಾವಾಗ ರಿಲೀಸ್.ಲವ್ ಯು ಆಲಿಯಾ ಈಗ ರಿಲೀಸ್ ಗೆ ರೆಡಿ. ಮುಂಗಾರು ಮಳೆ-2 ದಲ್ಲಿ ರವಿಚಂದ್ರನ್ ಅಭಿನಯ.ಬ್ಯುಜಿಯಾಗಿರೋ ಕ್ರೇಜಿ ಸ್ಟಾರ್ ರವಿಚಂದ್ರನ್.   
------
ರವಿ ಕಾಣದನ್ನ ಕವಿ ಕಾಣುತ್ತಾನೆ. ಕ್ರೇಜಿ ಕಾಣೋದನ್ನ ಕ್ರೇಜಿನೇ ನಸನು ಮಾಡ್ತಾನೆ. ಇದು ನಮ್ಮ ಸ್ಯಾಂಡಲ್​ವುಡ್ ಚೆಂದಮಾಮ ರವಿಚಂದ್ರನ್ ಕಥೆ. ಎದೆಯಲ್ಲಿ ದಿನಕ್ಕೊಂದು ಹೊಸ ವಿಚಾರ ಮೊಳಕೆ ಒಡೆಯುತ್ತದೆ. ಪರಿಪೂರ್ಣ ಕಥೆನೂ ಆಗಿ ಬಿಡುತ್ತದೆ. ಆದರೆ, ಈ ಸಿನಿಮಾ ಕೃಷಿಕನ ಹಲವು ಸಿನಿಮಾ ಮುಗಿಯದೇ ಉಳಿದಿವೆ. ಆ ಸಿನಿಮಾಗಳ ನೆನಪು. ಹೊಸ ಸಿನಿಮಾಗಳ ಕಥೆ. ಎಲ್ಲವನ್ನೂ ಹೇಳ್ತೀವಿ. ಬನ್ನಿ ....

ಸಾವಿರ ಕನಸುಗಳ ಸರದಾರ...!
----
ರವಿಚಂದ್ರನ್. ಕನಸುಗಾರ. ಇದು ಹೇಳಬೇಕಿಲ್ಲ. ಬೆಳ್ಳಿ ಪರದೆ ಮೇಲೆ ಅವು ಮೂಡಿ ಬರ್ತಾನೆ ಇವೆ. ಬಂದವು ಯುವ ಹೃದವನ್ನ ತಟ್ಟಿವೆ. ತಾಕಿವೆ. ಕಾಡಿವೆ. ಅದು ರವಿಚಂದ್ರನ್ ಸಿನಿಮಾಗಳ ಶಕ್ತಿ ಮತ್ತು ಸಿನಿಮಾ ಪ್ರೀತಿ...

ರವಿಚಂದ್ರನ್ ಅವ್ರಿಗೆ ಸಿನಿಮಾನೇ ಉಸಿರು. ಸಿನಿಮಾನೇ ಎಲ್ಲ. ಇದು ರವಿಚಂದ್ರನ್. ದಿನವೂ ಹೊಸ ವಿಚಾರ ಮೊಳಕೆ ಒಡೆಯುತ್ತದೆ. ಮೊಳಕೆಯೊಡೆದು ಕಥೆನೂ ಆಗಿವೆ.

50 ರಿಂದ 60 ಕಥೆಗಳು ಸಿದ್ಧ..!
----

ಆದರೆ, ರವಿಚಂದ್ರನ್ ಹೆಸರಲ್ಲಿ ಅನೌನ್ಸ್ ಆದ ಕೆಲವು ಸಿನಿಮಾಗಳು ಹಂಗೇ ಇವೆ. ಆ  ಸಿನಿಮಾಗಳು ಏನಾದವು ಎಂಬ ಪ್ರಶ್ನೆಗಳನ್ನೂ ಬಿಟ್ಟು ಹೋಗಿವೆ.

ಚಂದಮಾಮ,ದಶಕಂಠ,ಚಪ್ಪಾಳೆ,ಶಕುನಿ.
---

ಆದರೆ, ರವಿಚಂದ್ರನ್ ಅಭಿನಯದ ಶೃಂಗಾರ ಚಿತ್ರ ಮುಹೂರ್ತ ಮುಗಿಸಿ, ನಿಂತೇ ಹೋಗಿದೆ. ಇದು ಬಿಟ್ಟರೇ, ರವಿಚಂದ್ರನ್ ಒಂದು ದೊಡ್ಡ ಕನಸು ಕಂಡಿದ್ದರು. ಆ ಕನಸಲ್ಲಿ ಇಡೀ ಇಂಡಸ್ಟ್ರೀನೇ ಇನ್ವಾಲ್ ಆಗೋದಿತ್ತು. 20 ಜನ ಡೈರೆಕ್ಟರ್.  ಚಿತ್ರರಂಗದ ಎಲ್ಲ ನಾಯಕರು ಈ ಚಿತ್ರದಲ್ಲಿ ನಟಿಸೋರಿದ್ದರು. ಅದೇನ್ ಆಯ್ತೋ  ಏನೋ. ಈ ಸಿನಿಮಾ ಸ್ಟಾಪ್ ಆಯ್ತು.

‘ಮದುವೆ ಮನೆ’ ರವಿ ಕಂಡ ದೊಡ್ಡ ಕನಸು..!
----

ರವಿಚಂದ್ರನ್ ಅಭಿನಯದ ಮಂಜಿನ ಹನಿ, ಕ್ರೇಜಿ ಕಂಡ ಮತ್ತೊಂದು ಅಗಾಧವಾದ ಕನಸು. ಇದು ಚಿತ್ರರೂಪ ಪಡೆದಿದ್ದರು, ಸ್ವತ; ರವಿಚಂದ್ರನ್ ಅವರಿಗೆ ತೃಪ್ತಿ ನೀಡದ ಕಾರಣ, ಮಂಜಿನ ಹನಿ ಇನ್ನೂ ಪರಿಪೂರ್ಣವಾಗಿ ಚಿತ್ರರೂಪ ಪಡೆದಿಲ್ಲ.ಆದರೂ, ಈ ಸಿನಿಮಾ ಬಗ್ಗೆ ಜನರಲ್ಲಿ ಒಂದು ಕತೂಹಲ ಇದ್ದೇ ಇದೆ...

ಪ್ರೇಮಲೋಕದಲ್ಲಿ ರಣಧೀರ್ ಚಿತ್ರವೂ ರವಿಚಂದ್ರನ್ ಹೊಸ ಕನಸು. ಪುತ್ರ ಮನೋರಂಜನ್ ಪರಿಚಯಿಸ್ತಿರೋ ಸಿನಿಮಾ. ಅದ್ಧೂರಿಯಾಗಿಯೇ ಮುಹೂರ್ತ ಆಗಿದೆ. ಆದರೆ, ಅಪೂರ್ವದಲ್ಲಿ ಈಗ ಕ್ರೇಜಿ ಬ್ಯುಜಿ. ಹಂಗಾಗಿ, ಪುತ್ರನ ಚಿತ್ರ ಸ್ವಲ್ಪ ಹಿಂದಕ್ಕೆ ಹೋಗಿದೆ. ಅಷ್ಟೆ.

ಅಪೂರ್ವ ಚಿತ್ರ ತುಂಬಾ ನಿರೀಕ್ಷೆ ಹುಟ್ಟುಹಾಕಿದೆ. ಇದರ ಕ್ರೇಜ್ ಎಷ್ಟಿದೇ ಅಂದ್ರೆ, ಅಭಿಮಾನಿಗಳಷ್ಟೇ ಅಲ್ಲ. ಸ್ವತ: ಕ್ರೇಜಿ ಸ್ಟಾರ್ ಸದಾ ಇದರ ಧ್ಯಾನದಲ್ಲಿಯೇ ಇರ್ತಾರೆ. ಯಾವಾಗಲಾದರೂ ಕೇಳಿ. ಅಪೂರ್ವ ಅಂತಾರೆ. ಇನ್ನೇನೂ ಬಿಡುಗಡೆ ಹಂತಕ್ಕೂ ಬಂದು ತಲುಪಿದೆ ಅಪೂರ್ವ. ಆದರೆ, ಅದಕ್ಕೂ ಮೊದಲು ರವಿಚಂದ್ರನ್ ಅಭಿನಯದ ಲವ್ ಯು ಆಲಿಯಾ ತೆರೆಗೆ ಬರಲು ಸಜ್ಜಾಗಿದೆ..

ಮುಂಗಾರು ಮಳೆ -2 ದಲ್ಲಿ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಆರ್.ಚಂದ್ರು ನಿರ್ದೇಶನದ ಲಕ್ಷ್ಮಣ ಚಿತ್ರದಲೂ ರವಿಚಂದ್ರನ್ ನಟಿಸುತ್ತಿದ್ದಾರೆ. ರಿಯಾಲಿಟಿ ಷೋಗಳಲ್ಲೂ ರವಿ ಕಾಣಿಸಿಕೊಳ್ತಾರೆ. ರೇಡಿಯೋದಲ್ಲೂ ಸತ್ಯದರ್ಶನ ಮಾಡಿಸುತ್ತಿರುತ್ತಾರೆ. ಒಟ್ಟಾರೆ, ರವಿಚಂದ್ರನ್ ಬ್ಯುಜಿ...ಬ್ಯುಜಿ...
-ರೇವನ್ ಪಿ.ಜೇವೂರ್