ಕಾರ್ಮೋಡ‍ ‍‍ ದುಗುಡ‌

ಕಾರ್ಮೋಡ‍ ‍‍ ದುಗುಡ‌

ಕವನ

        ಬಾನಲಿ  ಕವಿದಿತ್ತು  ಕಾರ್ಮೋಡ


       ಮನದಲಿ ಬೇರೂರಿತ್ತು  ದುಗುಡ


 


ಕಾರ್ಮೋಡವಾದರೋ ಆಗಸದಲಿ ಸೂಚಿಸುತಿದೆ


ಭುವಿಗೆ ಮಳೆ ಸುರಿಸುವೆನು


ಭೂ ತಾಯಿಯ ತಣಿಸುವೆನು


ರೈತರ ಬಾಳೆಲ್ಲಾ ಸಿಹಿ ಮಾಡುವೆನೆಂದು.


 


ದುಗುಡವಾದರೋ ಮನದಲಿ ಸೂಚಿಸುತಿದೆ


ನಾ ನಿನ್ನಲ್ಲೇ ಮನೆಮಾಡಿಹೆನು


ನೆಮ್ಮದಿಯ ನೆಲಸಮ ಮಾಡುವೆನು


ಬಾಳೆಲ್ಲಾ ಕಹಿ ಮಾಡುವೆನೆಂದು.


 


        ಮನವು  ತರ್ಕಿಸುತಿದೆ ಮೇಲು


        ಯಾವುದು...... ದುಗುಡವೋ, ಕಾರ್ಮೋಡವೋ


        ಕಡೆಗೆ ಕಾರ್ಮೋಡವೇ  ಮೇಲೆನ್ನಿಸಿದೆ.


 


ಶ್ರೀನಾಗರಾಜ್