ಕಿರುಚಿತ್ರದ ಪ್ರಯತ್ನ "ದಿ ಪೆನ್"

ಕಿರುಚಿತ್ರದ ಪ್ರಯತ್ನ "ದಿ ಪೆನ್"

 ಬಹಳ ದಿನಗಳಿಂದ, ಚಲಿಸುವ ಚಿತ್ರವನ್ನು ಮಾಡುವ ಹಂಬಲದಿಂದ ಆಲೋಚಿಸುತ್ತಿದ್ದೆ, ಒಂದಿಲ್ಲೊಂದು ಕಾರಣಗಳಿಗೆ ಸದಾ ಸೆಳೆಯುವ ಸಿನಿಮಾ, ಅದರ ಒಳ ಹೊಕ್ಕು ನೋಡುವ-ಮಾಡುವ ಪ್ರಯತ್ನ ಬಹಳ ಖುಷಿ ಕೊಡುತ್ತಿತ್ತು,,,,, 

    ಸಿನಿಮಾದ ವಿಷಯ ಬಂದಾಗ ಅದರಲ್ಲಿನ ನಟರು, ಕ್ಯಾಮರ, ಲೈಟ್, ಅದಕ್ಕೆ ತಕ್ಕ ಮ್ಯೂಸಿಕ್, ಹೀಗೆ ಹಲವಾರು ರೀತಿಗಳಲ್ಲಿ, ಗಾಬರಿಗೊಳಿಸಿ ಕೆಲವೊಮ್ಮೆ ವಿಷಯವನ್ನು ಅಲ್ಲಿಗೇ ಬಿಡುವ ಆಲೋಚನೆ ಬರುವಂತಾಗುತ್ತದೆ, ಆದರೂ ಸಿನಿಮಾ ಎನ್ನುವ ಅದ್ವಿತೀಯ ಆಸೆ ಏನಾದರೂ ಮಾಡಲೇ ಬೇಕು ಎಂದು ಪ್ರೇರೇಪಿಸುತ್ತಿತ್ತು.

ಆ ಉತ್ಕಟತೆಯನ್ನು ತಡೆಯಲಾರದೆ, ಇರುವ ಕೆಲವು ಸಾಮಗ್ರಿಗಳನ್ನು ಉಪಯೋಗಿಸಿ, ಕಿರಿದಾದ ಚಿತ್ರ ಮಾಡಿದ್ದೇನೆ, ಬಿಡುವಿದ್ದಾಗ ಒಮ್ಮೆ ಕಣ್ಣು ಹಾಯಿಸಿ.

ಲಿಂಕ್ : https://www.youtube.com/watch?v=ULv06NoWRMY

ಚಿತ್ರದ ಶೀರ್ಷಿಕೆ : ದಿ ಪೆನ್ 

ಚಿತ್ರದ ಪ್ರಾರಂಭಿಕ ಸಾರಾಂಶ : ಬಹಳ ಹಿಂದೆ ಹಕ್ಕಿಯ ಗರಿಗಳನ್ನು ಹಾಗು ಇಂಕನ್ನು ಉಪಯೋಗಿಸಿ, ತಮ್ಮ  ಆಲೋಚನೆಗಳನ್ನು ಪೇಪರ್ ನ ಮೇಲೆ ಬರೆಯುತ್ತಿದ್ದರು, ,,,,,, ಇದನ್ನು ತೋರಿಸುವ ಚಿತ್ರವೊಂದನ್ನು ನೋಡಿದ ವ್ಯಕ್ತಿಯೊಬ್ಬ, ಗರಿಗಳಿಂದ ಬರೆಯುವ ಕಷ್ಟದ ಕೆಲಸವನ್ನು ಸುಲಭ ಮಾಡಿದ "ಪೆನ್ನಿನ" ಬಗ್ಗೆ ಪುಸ್ತಕ ಒಂದನ್ನು ಬರೆಯುವ ಆಲೋಚನೆ ಮಾಡುತ್ತಾನೆ,,,,,, ಮುಂದೆ,,,,,

(ಬಹಳ ಅಂದವಾಗಿ ಚಿತ್ರ ಬರೆದುಕೊಟ್ಟ ಉಷಾರಿಗೆ, ಹಾಗು ಕಥೆಗೆ ಜೊತೆಯಾದ ವಿನಯ್ ಗೆ,,, ಧನ್ಯವಾದಗಳು)

ಇಲ್ಲಿ ಕ್ಲಿಕ್ಕಿಸಿ 

Comments