ಕೆಮ್ಮುಆಯಣ ರಾಮ-ಯಣ

ಕೆಮ್ಮುಆಯಣ ರಾಮ-ಯಣ

~~
"ನಮಸ್ಕಾರ ಎಕ್ಸ್ ಎಂ ಎಲ್ ಏ ಸುಬ್ಬರಾಯರಿಗೆ , ಏನು ತುರ್ತ್ತ ಆಗಿ ಬರೋಕ್ಕೆ ಹೇಳಿದಿರಿ , ಏನು ವಿಷ್ಯ , ಅದು ಲಾಯರ್ ನ ಮನೆಗೆ ಕರಿಸಿದಿರಿ ಅಂದರೆ" ಅಂತ ಹೇಳುತ್ತಾ ಸುಬ್ಬುರಾಯರು ಕೂತ್ತಿದ ಹಾಸಿಗೆ ಹತ್ತಿರ ಬಂದರು ಲಾಯರ್ ಗೋಪಿ.
ಅಕ್ಚ್ಚು ಅಕ್ಚ್ಚು ಅಂತ ಮೂರು ಬಾರಿ ಗೋಪಿ ಮುಖದ ಮೇಲೆ ಸೀನುತ್ತ "ಬನ್ನಿ ಸ್ವಾಮಿ ಬನ್ನಿ , ಹಾಸಿನರಿಗೆ " ಅಂತ ಹೇಳುತ್ತಾ ಕೆಮ್ಮಲು ಶುರು ಮಾಡಿದರು.
ಗೋಪಿ ಒಳ್ಳ ಒಳ್ಳಗೆ ಈ ನನ್ನ ಮಗ ಮುಖದ ಮೇಲೆ ....
ಹುಸಿ ನಗುತ್ತ "ಏನು ಕೆಮ್ಮು ಜಾಸ್ತಿ ಆಗಿದೆ , ಡಾಕ್ಟರ ಹತ್ತೀರ ಹೋಗಿಲ್ಲವೇ "
"ಅವರೇ ಇಲ್ಲಿಗೆ ಬಂದಿದರು , ಎನ್ನೋ ಓದರಿ ಹೊದ್ದರು , ದೊಡ್ಡ ಟ್ರೀಟ್ಮೆಂಟ್ ಆಗಬೇಕು , ಅಮೇರಿಕಾ ಗೆ ಹೋಗಿ ಟ್ರೀಟ್ಮೆಂಟ್ ತಗೊಂಡು ಬನ್ನಿ ಅಂತ ಹೇಳಿದರು"
'ಸರಿ ಸರಿ , ಇವಾಗ ನನ್ನಗೆ ಬರೋದಕ್ಕೆ ಹೇಳಿದ ವಿಷಯ ಏನು, ಯಾವುದಾದರು ಕೇಸ್ ಇಂದ ತಲೆ ನೋವು ಆಗಿ ವೀಸಾ ಸಿಗುತ್ತಾ ಇಲ್ಲವ ಹೆಂಗೆ"
"ನನ್ನ ಮೇಲೆ ಯಾವ ನನ್ನ ಮಗ ಕೇಸ್ ಹಾಕುವವನು ಯಾರಿದರೆ, ಎಲ್ಲ ನನ್ನ ಹಾಗೆ ಬ್ಲಾಕ್ ಮನಿ ಮಾಡಿ ಒಂದಲ್ಲ ಒಂದು ಕೇಸ್ ನಲ್ಲಿ ಇರುವವರೇ , ಒಬ್ಬರು ಜುಟ್ಟು ಒಬ್ಬರ ಕೈ ಅಲ್ಲಿ , ಅದು ಬಿಡಿ, ಇವಾಗ ನಿಮ್ಮಗೆ ಹೇಳಿ ಕಳಿಸಿದು ನನ್ನ ವಿಲ್ ಬಗೆ ಮಾತು ಆಡೋದಕ್ಕೆ '
"ಒಹ್ ಹಾಗೆ , ಇವಗಲೇ ಏನು ಅವಸರ , ಸರಿ , ನಿಮ್ಮ ಮಗನ ಹೆಸರಿಗೆ ವಿಲ್ ಮಾಡಬೇಕ್ಕ"
"ಆ ಬೊ.. ನನ್ನ ಮಗನ ಹೆಸರಿಗ "
"ಮತ್ತೆ "
"ನೋಡಿ ಸ್ವಾಮಿ ಲಾಯರ್ ಹತ್ತೀರ , ಡಾಕ್ಟರ ಹತ್ತೀರ ಮುಚ್ಚು ಮರೆ ಏನು , ನಾನು ಗದುಗೆ ನಲ್ಲಿ ಇದ್ದಾಗ  ಬೇಕಾದಷ್ಟು ಬೇನಾಮಿ ಆಸ್ತಿ ಮಾಡಿದ್ದೀನಿ, ಅದನ್ನೆಲ್ಲಾ ತಗೊಂಡು ನನ್ನ ಸೆಕ್ರೆಟರಿ ವಿಮಲಾ ಜೊತೆ ಅಮೇರಿಕಾ ಗೆ ಹೋಗಿ ಸೆಟ್ಲ್ ಆಗೋಣ ಅಂತ ಇದೀನಿ , ಅದಕ್ಕೆ ನಿಮ್ಮ ಸಹಾಯ ಬೇಕು , ಕೆಲವಂದು ತಕರಾರು ಗಳಿಗೆ ನಿಮ್ಮಿಂದ ಮುಕ್ತಾಯ ಬೇಕು"
"ಒಹ್ ಸರಿ , ಹೌದು ನಿಮ್ಮ ಮಗ ಎಲ್ಲಿ , ಅವನಿಗೆ ಏನು ಇಲ್ಲವ , ನಿಮ್ಮ ವಯಸ್ಸು ಎಷ್ಟು , ಇವಾಗಲು ರಸಿಕತೆ ಕಡಿಮೆ ಆಗಿಲ್ಲ "

"ನನ್ನಗೆ ಇವಾಗ ೬೫ , ಅದು ಹೆಂಗೆ ಕಡಿಮೆ ಆಗುತೆ , ಅದು ೨೨ ರ  ಹುಡುಗಿ ಪಕ್ಕದಲ್ಲಿ ಇದ್ದಾಗ "
"ಅದು ಸರಿ" , ಅಷ್ಟರಲ್ಲಿ ಮನೆ ಬೆಲ್ ರಿಂಗ್ ಆಯಿತು . 
"ರಾಯರೇ ನೀವು ಮಲಗಿ , ನಾನೇ ಯಾರು ಅಂತ ನೋಡುತೀನಿ  ಅಂತ ಹೇಳುತ್ತಾ ಹೋಗಿ ಬಾಗಿಲು ತೆಗೆದರು.
ರಾಯರ ಮಗ ಕಲ್ಯಾಣ ಒಳ್ಳಗೆ ಬರುತ್ತಾ "ನಮಸ್ಕಾರ ಗೋಪಿ ಅವರಿಗೆ , ನಾನೇ ನಿಮ್ಮನ ನೋಡೋಕ್ಕೆ ಬರಬೇಕು ಅಂತ ಇದೆ , ನೀವೇ ಬಂದಿದು ಒಳ್ಳೆಯದು ಆಯಿತು , ಅಪ್ಪ ಬರೋಕ್ಕೆ ಹೇಳಿದ್ರ "
"ಇಲ್ಲ , ಇಲ್ಲ , ನಿಮ್ಮ ಅಪ್ಪನವರ ನೋಡೋಕ್ಕೆ ನಾನು ಬಂದೆ , ಅದು ಇರಲಿ ಹೇಳು "
"ಏನು ಇಲ್ಲ ಸರ್ , ನಾನು ನನ್ನ ತಂದೆ ಅವರಿಗೆ ಕ್ಷಯ ಇದೆ ಅಂತ ತಿಳಿದ ಮೇಲೆ ಆ ವಿಮಲಾ ನ ಕರೆಸಿ ನನ್ನ ಅಪ್ಪನ ಹತ್ತೀರ ಸೆಕ್ರೆಟರಿ ಆಗಿ ಸೇರಿಸಿದೆ , ಅವಳು ಅವರ ಜೊತೆ ಸಲುಗೆ ಇಂದ ಇರೋಕ್ಕೆ ಹೇಳಿದೆ , ಅವಳು ಹಾಗೆ ಮಾಡಿದಳು , ಟೈಮ್ ನೋಡಿಕೊಂಡು ನಮ್ಮ ಅಪ್ಪನ ಆಸ್ತಿ ನ ನನ್ನ ಹೆಸರಿಗೆ ಬರೆಸಿಕೊಂಡು ಇದೀನಿ , ವೀಸಾ ಗೆ ಅಪ್ಲೈ ಮಾಡಿದಿನಿ ಜೊತೆ ಗೆ ವಿಮಲಾ ಗು ಕೂಡ , ಇಬ್ಬರು ಅಮೇರಿಕಾ ಗೆ ಹೋಗಿ ಸೆಟ್ಲ್ ಆಗೋಣ ಅಂತ , ಅದರ ಫಾರ್ಮಾಲಿಟಿಸ್ ಬಗೆ ವಿಚಾರಿಸೋಣ ಅಂತ ಬರೋಣ ಅಂತ ಇದೆ , ಹೇಳಿ ಯಾವಾಗ ಬರಲ್ಲಿ " ಅಂತ ಗೋಪಿ ನೋಡಿಕೊಂಡು ಜೋರು ಧ್ವನಿ ಅಲ್ಲಿ ಹೇಳಿದ
ಇದನ ಕೇಳಿಸಿಕೊಂಡ ರಾಯರ ಕೆಮ್ಮು ನಿಂತು , ರಾಯರು "ಹೇಯ್ ರಾಮ " ಅಂತ ಹೇಳುತ್ತಾ .........

Comments

Submitted by ಸೀಲೈಫ್೫೩೭ Thu, 06/25/2015 - 19:23

ಸರ್ ಚಂದ್ರು, ತಮ್ಮ ಹಳೆ ಸ್ನೇಹಿತ. ಮುಂದಿನ ಭಾಗ ಯಾವಾಗ ಪ್ರಚರಿಸುತೇರಿ?