ಜ್ವರ ಬಂದಾಗ ಅಮ್ಮ ನೆನಪಾಗುತ್ತಾರೆ.

ಜ್ವರ ಬಂದಾಗ ಅಮ್ಮ ನೆನಪಾಗುತ್ತಾರೆ.

                             [quote]      ಥುತ್ತೀರಿ ಈ ಬ್ಯಾಚುಲರ್ ಲೈಫ್ ಯಾರಿಗೂ ಬೇಡ ಕಣ್ರೀ!  ಇಂಥದೊಂದು ಸಣ್ಣ ಉದ್ಘಾರ ನನ್ನ ಬಾಯಿಂದ ಹೊರ ಬೀಳಬೇಕಾದರೆ  ಮೂರು ದಿನ ಬೇಕಾಗಿತ್ತು.  ಮೊನ್ನೆ ಮೊನ್ನೆ ತಾನೇ ಮೂರು ದಿನಗಳ ಹಿಂದೆ ಬೆಂಗಳೂರಲ್ಲಿ ಮಳೆ ಬಿತ್ತಲ್ಲ ಸ್ವಾಮಿ ಆ ಮಳೆಯಲ್ಲಿ ನೆನೆದು ಒದ್ದೆ ಮುದ್ದೆಯಾಗಿ  ಆಫೀಸಿನಿಂದ ಮನೆ ಸೇರಿದ್ದಕ್ಕೆ ಆದಾಗಲೇ ಶೀತಮ್ಮನವರು ನಮ್ಮ ನಾಸಿಕದಲ್ಲಿ ದಯಮಾಡಿಸಿದ್ದರು.  ನಾನು ಕೂಡ ಜ್ವರದಮ್ಮನ ನೀರಿಕ್ಷೆಯ್ಲ್ಲಿದ್ದೆ ಅವರೂ ಕೂಡ  ಸತಾಯಿಸದೇ ಮಾರನೇ ದಿನ ಬೆಳಿಗ್ಗೆ ಏಳುತ್ತಲೇ ಮೈ ಬೆಚ್ಚಗೆ ಮಾಡಿಸಿ ವಕ್ಕರಿಸಿಬಿಟ್ಟಿದ್ದಾರೆ.  ಗಂಟಲು ಕಟ್ಟಿಸಿ ಉಸಿರನ್ನು ಏರುಪೇರು ಮಾಡಿ ಒಟ್ಟಾರೆಯಾಗಿ ಜೀವವನ್ನು ಸುಸ್ತು  ಮಾಡಿಸಿ ಹಟಕ್ಕೆ ಬಿದ್ದವರಂತೆ,  ನಡು ಬೆನ್ನಿನ ಕೋಲನ್ನು ಮಂಚಕ್ಕೆ ನೆಟ್ಟಗೆ ಅಂಟಿಸಿ ಬಿಟ್ಟಿದ್ದರು.                       

                                   ನಮಗೋ  ಈ ಪ್ರಕೃತಿಯ ಜೊತೆಗೆ ಒಂದು ವಿಚಿತ್ರವಾದ ನಂಟಿದೆ ಅನಿಸಿಬಿಟ್ಟಿದೆ.  ಯಾವಾಗಲೂ ವಾತವರಣದಲ್ಲಿ ಒಂದು  ಸಣ್ಣ ಸಹಜ ಬದಲಾವಣೆ ಕೂಡ ನಮ್ಮ ಆರೋಗ್ಹ್ಯದಲ್ಲಿ ಏರುಪೇರಾಗುವುದು ಸಹಜವಾಗಿಬಿಟ್ಟಿದೆ.  ಇದನ್ನು ನಾನು ಏಸ್ಟೋ ಬಾರಿ ಪರಿಕ್ಷೀಸಿ ಅನುಭವಕ್ಕೆ ತೆಗೆದುಕೊಂಡು ಖಾತ್ರಿಪಡಿಸಿಕೊಂಡಿದ್ದೇನೆ. ಅದಲ್ಲದೇ ಮೊನ್ನೆ ಮಾತ್ರ ಜ್ವರ ಬರಲು ಕಾರಣವಾಗಿದ್ದು ಹುಯ್ಯಿದಂತ ಮಳೆ ಮತ್ತು ನಾನು ಆ ಮಳೆಯಲ್ಲಿ ನೆಂದದ್ದು.    ಕಡಲ ತಡಿಯ ಊರು  ನಮ್ಮ  ಊರು , ಉದ್ದ್ಯೋಗದ ಸಲುವಾಗಿ  ಬೆಂಗಳೂರಿಗೆ  ಬಂದು ಈಗ್ಗೆ ಆರೇಳು ವರ್ಷಗಳೇ ಕಳೆದಿದೆ. ಈ ಬ್ಯಾಚುಲರ್ ಲೈಫ ನ  ಗೋಳು ಹೇಳತೀರದು ಕಣ್ರಿ,  ಒಂದು ಕಾಹಿಲೆ ಕಸಾಲೆ ಬಂತೆಂದ್ರೆ ಯಾರು ಕೇಳೋರಿಲ್ಲ ರೀ,  ಜ್ವರ ಬಂತೆಂದರೆ ಒಂದು ಹೊತ್ತಿಗೆ ನಮಗೆ ನಾವೇ ಡಾಕ್ಟ್ರು ಆಗಿಬಿಡ್ತಿವಿ ಕಣ್ರೀ.  ಒಂದು ಕ್ರೊಸೀನ್ ಮತ್ತು ಒಂದು ಸಿಟ್ರಜಿನ್  ತೆಗೆದುಕೊಂಡು ಮತ್ತೆ ರಗ್ಗನ್ನು ಎಳೆದು ಮುಸುಕು ಹಾಕಿ ಮಲಗಿ ಬಿಟ್ರೆ  ಬೆಳಿಗ್ಗೆ ಜ್ವರ ಬಿಟ್ರೆ ಆಫೀಸು ಇಲ್ಲಾಂದ್ರೆ ಡಾಕ್ಟ್ರು ಶಾಪು ಎಡತಾಕುತ್ತೇವೆ.                       

                                  ಆದರೆ ಮೊನ್ನೆ ಮಾತ್ರ ನನ್ನ ನಸೀಬದಲ್ಲಿ ಡಾಕ್ಟ್ರು ಶಾಪ್ಗೆ  ಹೋಗಲೇಬೇಕಾಯ್ತು ನೋಡಿ.  ಯಥಾಪ್ರಕಾರ  ವಾತಾವರಣದ ದಯೆಯಿಂದ ಹೆಚ್ಚು ಜನ ಆಸ್ಪತ್ರೆಗೆ ಬಂದಿದ್ದರು.  ಆದಾಗಲೇ ಅರ್ದ ಜ್ವರ ದಲ್ಲಿ ಕಾಯುತ್ತಿದ್ದ ನನಗೆ ಅಲ್ಲಿನ ಉದ್ದ ಸರದಿ ನೋಡಿ ಜ್ವರದ ತಾಪಮಾನ ಮತ್ತಷ್ಟು ಏರಿತ್ತು. ಅಮೇಲೆ ನನ್ನ ಸರದಿ ಬಂದಾಕ್ಷಣ ಒಳಕ್ಕೆ ಹೋದೆ,  ಡಾಕ್ಟ್ರು ಕೂಡ ಪರಿಚಯಸ್ತ್ರೆ ಆಗಿದ್ರು ಪರಿಚಯ ಹೇಗೆಂದರೆ ಕಳೆದ ಆರೇಳು  ವರ್ಷಗಳಿಂದ ಹುಷಾರಿಲ್ಲದಾಗ  ನಾನು ಖಾಯಂ ಆಗಿ ಈ ಡಾಕ್ಟ್ರು ಬಳಿ ತೋರಿಸುತ್ತಿದ್ದೆ.  ಡಾಕ್ಟ್ರು  ಸ್ವಲ್ಪ ಹೊತ್ತು ನಾಡಿ ಪರೀಕ್ಷಿಸಿ ಒಂದಿಷ್ಟು ಔಷಧ ಬರೆದು ಕೊಟ್ರು.  ಇಂಜೆಕ್ಷನ್ ಕೊಟ್ಟರೆ ಮಾತ್ರ ಬೇಗ ಕಾಹಿಲೆ ವಾಸಿಯಾಗುತ್ತದೆಂಬ ದೃಢ ನಂಬಿಕೆ ಇರುವ ನನಗೆ; ತಿರುಗಿ ಕೇಳಿದೆ ಸಾರ್  ಇಂಜೆಕ್ಷನ್ ಕೊಡಿ ಎಂದು. ನಮ್ಮ  ಬಗ್ಗೆ ಗೂತ್ತ್ತ್ತಿದ್ದ ಅವ್ರು ನೆನ್ನೆ ನೀವೆ ಯವುದಾದರು ಟ್ಯಾಬ್ಲ್ಸೆಟ ತಿಂದಿದ್ದರೆ ಇಂಜೆಕ್ಷನ್ ಬೇಡ ಎಂದರು  ಅದಕ್ಕೆ ಹೌದೆಂದು ತಲೆಯಾಡಿಸಿ ಫೀಸನ್ನು ಕೊಟ್ಟಿ ಹೊರ ಬಂದೆ.                  

                                    ಹಾಗೆ ಆಸ್ಪತ್ರೆಯಿಂದ ಹೊರಬಿದ್ದ ನಾನು ನೇರ ಔಷಧ ಅಂಗಡಿಗೆ ಹೋಗಿ ಲಗುಬಗೆಯಿಂದ ಔಷಧ ಪ್ಯಾಕ ಮಾಡಿಕೊಂಡು ದಾರಿಯಲ್ಲಿ ಕೋರಮಂಗಲದ ಶಾಂತಿಸಾಗರದಲ್ಲಿ ನಾಲಗಗೆ ರುಚಿಸದಿದ್ದರು ಎರಡೆರಡು ಇಡ್ಲಿ ತಿಂದು ಬೆಚ್ಚನೆಯ ಚಾ ಹೀರಿ ಮನೆಗೆ ಹೋದೆ.  ಮನೆಗೆ ಹೋಗುತ್ತಲೇ ಫೋನ್ ಮಾಡಿ ಇವತ್ತು ಆಫೀಸಿಗೆ ಬರುವುದಿಲ್ಲ್ಲವೆಂದು ಮ್ಯಾನೇಜರ್ಗೆ ವಿಷಯ ತಿಳಿಸಬೇಕೆಂದು ಯೋಚಿಸುತ್ತಿರುವಾಗಲೇ ಫೋನು ರಿಂಗಣಿಸಿದೆ;  ನೋಡುತ್ತೆನೆ ಮ್ಯಾನೇಜರ್ ಕರೆ ಮಾಡಿದ್ದ. ಕರೆ ಸ್ವಿಕರೀಸಿದೆ, ಆ ಕಡೆಯಿಂದ ಒಂದೇ ಉಸಿರಿನಲ್ಲಿ ತಾನು ಇವತ್ತು ಅಫೀಸ್ಗೆ ಬರುವುದಿಲ್ಲವೆಂದು ಹೇಳಿ ನಾನು ಮಾಡಬೇಕಾದ ಕೆಲಸದ ಪಟ್ಟಿ ಕೊಟ್ಟು ನನ್ನ ಮಾತು ಕಿವಿಗೆ ಹಾಕಿಕೊಳ್ಳುವಸ್ಟು ವ್ಯವಧಾನವಿಲ್ಲ್ಲದೆ ಫೋನ್ ಕುಕ್ಕಿದ.  ಎಲಾ ಇವನ ನಾನು ಹೇಳ ಬೇಕಾಗಿದ್ದನ್ನು ಇವ್ನು ನನಗೆ ಹೇಳ್ತಿದ್ದ್ನ್ನಲ್ಲ  ಅಂತ ಅಂದುಕೊಂಡೆ,  ಆಮೇಲೆ ಅನ್ನಿಸ್ತು  ಬಹುಶಃ ಆತನಿಗೂ ಹುಶಾರು ಇರಲ್ಲಿಲ್ಲ . ಆದ್ದರಿಂದ ಆತ ನನ್ನ ಬಗ್ಗೆ ಕೇಳುವ ಗೋಜಿಗೆ ಹೋಗಲಿಲ್ಲ,    ಆದರೆ  ತನಗೆ ಹುಷಾರಿಲ್ಲದಾಗ ಉಳಿದವರೆಲ್ಲರೂ  ಚೆನ್ನಾಗಿಯೇ ಇರುತ್ತಾರೆನ್ನುವುದು ಸುಳ್ಳು ಅನ್ನೋದನ್ನ ಆತನಿಗೆ ಹೇಗೆ ಮನವರಿಕೆ ಮಾಡುವುದು ನಾಕಾಣೆ.                              

                                      ಇನ್ನು ಆಫೀಸಿಗೆ ಯಾತ್ರೆ ಮಾಡಲೇ ಬೇಕಾಗಿದೆ. ಡಾಕ್ಟ್ರು ಕೊಟ್ಟ ಗುಳಿಗೆಗಳನ್ನು ನುಂಗಿಕೊಂಡು ಇದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಬೈಕ್ ಹತ್ತಿ ಆಫೀಸ್ ಕಡೆ ಮುಖಮಾಡಿ ಹೊರಟೆ. ಆಫೀಸ್ಗೆ ಹೋದ ನಂತರ ಸಲ್ಪ ಹೊತ್ತು ಕೆಲಸ ಮಾಡಿ ಸುಸ್ತಾದಂತಾಯಿತು.  ನೋಡುತ್ತೇನೆ ಗುಳಿಗೆಗಳು ಆಗಲೇ ಕೆಲಸ ಶುರು ಮಾಡಿ ಬಿಟ್ಟಿದ್ದೆ.  ಇನ್ನ್ನು ಕೆಲಸ ಮಾಡಲು ಸಾದ್ಯ್ವೈಲ್ಲವೆಂದು ಮತ್ತೆ ಮನೇಗೆ ಹೊರಟೆ.  ಮನೆಗೆ ಬಂದು ಹಾಸಿಗೆ ಮೇಲೆ ಬೋರಲು ಬಿದ್ದೆ.  ಹಾಗೆ ಮನದಲ್ಲಿ ಯೋಚನೆ ಶುರುವಾಯಿತು, ಇದೇ ಜ್ವರ ಬಂದ ಪರಿಸ್ಥಿತಿಯಲ್ಲಿ ನಾನು ನಮ್ಮ ಊರಿನ ಮನೆಯ್ಲ್ಲೆನಾದ್ರು ಇದ್ದಿದ್ದರೆ ನಮ್ಮ ತಾಯಿ ಚನ್ನಾಗಿ ಆರಯ್ಕೆ ಮಾಡುತ್ತಿದ್ದರು. ಜ್ವರದಿಂದ ದೇಹ ಬಳಲಿದ್ದು ಸಹಜ ದೇಹಾಲಸ್ಯದಿಂದ ಕೆಲವೊಮ್ಮೆ ರೇಗಿದರು ಸ್ವಲ್ಪವು ಬೇಸರಿಸಿಕೊಳ್ಳದೆ, ನಮಗೆ ಕಾಲ ಕಾಲಕ್ಕೆ ಕುಸುಬುಲಕ್ಕಿ ಗಂಜಿ ಮಾಡಿ ಕೂಟ್ಟು ಸಲಹುತ್ತಿದ್ದಳು. ನಮಗೆ ಮನೆಮದ್ದು ಮಾಡಿ ಕೊಟ್ಟು ಮೂರೇ ದಿನದಲ್ಲಿ ಚಿಗುರಿಕೊಂಡು ಜಿಂಕೆ ತರಹ ಓಡಾಡುವಂತೆ ಮಾಡುತ್ತಿದ್ದಳು. ಕುಸುಬುಲ್ಲಕ್ಕಿ ಜೊತೆಗೆ ಒಂದು ಅಪ್ಪೆ ಮಿಡಿ ಉಪ್ಪಿನಕಾಯಿ ಇದ್ರೆ ಮುಗಿತು, ವಾವ್ ಜ್ವರದಲ್ಲಿ ನಾಲಗೆ ರುಚಿಸದಿದ್ದ್ರು ಕೂಡ ಗಂಜಿ ತಾನಾಗಿ ಗಂಟಲೊಳಗೆ ಇಳಿದುಬಿಡುತ್ತಿತ್ತು ಅದರಿಂದಲೇ ಶಕ್ತಿ ಬರುತ್ತಿತ್ತು ಜೊತೆಗೆ ಅಮ್ಮನ ಹಾರೈಕೆ.  ಅವಾಗ ಹೋದ ಜೀವ ವಾಪಾಸು ಬಂದಂತಾಗುತ್ತಿತ್ತು.                

                                      ಬೆಂಗಳೂರಿಗೆ ಬಂದಿದಕ್ಕೆ ಮತ್ತು ಇಲ್ಲ್ಲಿ ಕೆಲಸ ಕೊಟ್ಟವರಿಗೆ ಮನಸಾರೆ ಬ್ಯಯೀದೇ;  ನಂತರ ವಾಸ್ತವಿಕತೆಯ  ಅರಿವಾಗಿ ಸುಮ್ಮನಾದೆ. ಇಸ್ಟ್ಟಕ್ಕೆ ನೆನಪಾದ ಅಮ್ಮನಿಗೆ ಫೋನಾಯಿಸಿದೆ, ನಾನು ಹುಷಾರಿಲ್ಲ ಎಂದು ಹೇಳಿದರೆ ಎಲ್ಲಿ ಬೇಜಾರು ಮಾಡುತ್ತ್ತಾಳೋ ಎಂದು  ನೆನ್ನೆ ಹುಷಾರಿಲ್ಲಗಿತ್ತು ಇವತ್ತು ಆರಾಮಾಗಿದ್ದೇನೆ ಎಂದು ಹೇಳಿದೆ, ಆದರೂ ಅದಕ್ಕೂ ಆಕೆ ಕಳವಳ ವ್ಯಕ್ತ ಪಡಿಸಿ ಮತ್ತೆ ಕೆಲವೊಂದು ಮನೆ ಮದ್ದುಹೇಳಿ, ಗಂಜಿ ಮಾಡಿಕೊಂಡು ಕುಡಿ ಎಂದು ಹೇಳಿ ಕೊನೆಗೆ ಈ ಒಂಟಿ ಜೀವನಕ್ಕೆ ಇತಿಶ್ರೀ ಹಾಡಲು ನಿನಗೊಂದು ಹುಡುಗಿ ನೋಡಿದ್ದೆನೆಂದು ಹೇಳಲು ಮರೆಯ್ಲ್ಲಿಲ್ಲ. ಇತ್ತ ಯಥಾ ಪ್ರಕಾರ ಚಲನ ದೂರವಾಣಿಯ ಸಂಪರ್ಕ ಕಡಿತಗೊಳ್ಳುತ್ತದೆ. ನಾನು ಹಾಗೆಯೇ ಕುಸುಬಲಕ್ಕಿಯ ಗಂಜಿಯ ಜೊತೆ ಮಿಡಿ ಉಪ್ಪಿನಕಾಯಿ  ನೆನೆಸಿಕೊಂಡು ಮಲಯಾಳಿ ಚೇಟನ ಮೆಸ್ ನತ್ತ ಹೊರಟೆ.[/quote]