ದುನಿಯಾ ವಿಜಿ ಕೈ ಹಿಡಿದ ಕಾಳಿ...!

ದುನಿಯಾ ವಿಜಿ ಕೈ ಹಿಡಿದ ಕಾಳಿ...!

ದುನಿಯಾ ವಿಜಿ ಬದುಕು ಬದಲಾಗಿದೆ..! ಕಾಳಿ ಆರಾಧಕ ಈಗ ಗೆಲುವಿನ ನಗು ಬೀರುತ್ತಿದ್ದಾರೆ. ಕಾರಣ, ಸ್ಪಷ್ಟ. ಮೊದಲ ನಿರ್ಮಾಣದ ಜಯಮ್ಮನ ಮಗ ಗೆಲುವು ಕಂಡಿದೆ. ಹೆಂಡ್ತಿ ಕೋರ್ಟು ಕಚೇರಿ ಅಂತ ಓಡಾಡುತ್ತಿರೋವಾಗ್ಲೇ, ಕಾಳಿ ದೇವಿ ವಿಜಯ್ ಗೆ ಎಂದೂ ಮರೆಯದ ಗೆಲುವು ಕೊಟ್ಟಿದ್ದಾಳೆ. 9 ಶಕ್ತಿ ದೇವಿಗಳ ವಿಶ್ವರೂಪ ವನ್ನ ಜಯಮ್ಮನ ಮಗ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ವಿಜಿ. ಇದೇ ಗೆಲುವಿನ ಸೂತ್ರವೊ ಏನೋ. ಆ ಮಾತು ಬೇರೆ. ಆದ್ರೆ, ಕಳೆದ ಮೂರು ವಾರದ ಹಿಂದೆ ತೆರೆಗೆ ಬಂದ ಜಯಮ್ಮನ ಮಗ ಈಗ ಕನ್ನಡದ ಯಶಸ್ವಿ ಚಿತ್ರವಾಗಿದೆ...

ದುನಿಯಾ ವಿಜಯ್ ಗೆ ಇದು ಚಿತ್ರ ಜೀವನದ ಅತ್ಯದ್ಭುತ ಸಿನಿಮಾ. ದುನಿಯಾ ಚಿತ್ರ ತೆರೆಗೆ ಬರೋ ಮುನ್ನವೆ, ವಿಜಯ್ ಕಾಳಿ ಆರಾಧಿಸಿದವ್ರು. ತಾನು ಹೊಸಬ. ತನ್ನನ್ನ ಗೆಲಿಸು ಎಂದು, ಕಾಳಿ ದೇವಸ್ಥಾನದ  ಮುಂದೆ ನಿಂತು ವಿಜಿ ಆಗಲೇ ಕೇಳಿದ್ದರು. ಅದರಂತೆ, ವಿಜಿಗೆ ಆರ್ಶೀವಾದ ಮಾಡಿದಳು ಕಾಳಿದೇವಿ. ಈಗ ವಿಜಿಗೆ ಮತ್ತೊಮ್ಮೆ ಜಯ ತಂದುಕೊಟ್ಟಿದ್ದಾಳೆ.  ಹಾಗಂತ ಇದನ್ನ ನಾನು ಹೇಳಿದ್ರೆ ತಪ್ಪಾಗುತ್ತದೆ. ಸ್ವತ; ವಿಜಯ್ ಹೇಳುತ್ತಿದ್ದಾರೆ. ಅದು ನಿಜ, ಅಂತ ಹೇಳೊಕೆ, ಜಯಮ್ಮನ ಮಗನ ಯಶಸ್ವಿ ಪ್ರದರ್ಶನ ಮತ್ತು ವಿಜಿ ಮುಖದಲ್ಲಿ ಮೂಡಿರೋ ಗೆಲುವಿನ ನಗು ಸಾಕ್ಷಿ..

ಜಯಮ್ಮನ ಮಗ ಚಿತ್ರಕ್ಕಾಗಿ ಸಂಶೋಧನೆ; ಜಯಮ್ಮನ ಮಗ ವಾಪಾಚಾರದ ಚಿತ್ರ. ಕಾಳಿ ದೇವಿ ಶಕ್ತಿಯ ಭಕ್ತಿನೂ ಇಲ್ಲಿದೆ. ಆದ್ರೆ, ಚಿತ್ರದ ಗಟ್ಟಿ ಎಳೆ ಒಂದೆ. ದೇವರು ಮತ್ತು ದೆವ್ವ. ಇವರೆಡರ ಮಧ್ಯೆದ ಆ ನಂಬಿಕೆಯ ಒಟ್ಟು ಚಿತ್ರಣ ಇಲ್ಲಿ ದೊರೆಯುತ್ತದೆ. ಇದನ್ನ ತೆರೆ ಮೇಲೆ ತರಲು ಇಡೀ ತಂಡ ಸಾಕಷ್ಟು ಸುತ್ತಿದೆ. ಕೊಳ್ಳಗಾಲದಂತ  ಊರಲ್ಲಿ ಈ ಮೊದ್ಲು ಮಾಡುತ್ತಿದ್ದ ಮಾಟ,ಮಂತ್ರ ಗಳ ಹಿಂದಿನ ರಹಸ್ಯವನ್ನ ಅಧ್ಯನ ಮಾಡಿದೆ ವಿಜಯ್ ತಂಡ.

ಕಾಳಿದೇವಿ ಗೆಟಪ್; ಕಾಳಿ ಶಕ್ತಿ ದೇವಿ. ಈಕೆಯ ಗೆಟಪ್ ಹಾಕಲು ಪವಿತ್ರ ಮನಸ್ಸಿರಬೇಕು. ಹಾಗನ್ನೋ ಒಂದು ನಂಬಿಕೆ ಇದೆ. ಅದನ್ನ ಪಾಲಿಸೋರು ಇದ್ದಾರೆ. ವಿಜಯ್ ಕೂಡ ಅದನ್ನ ನಂಬಿದವರೆ. ವಿಜಯ ಹೇಳೋವಂತೆ, ಕಾಳಿ ದೇವಿ ಆರಾಧಕರು ಸುಳ್ಳು ಹೇಳಲೇಬಾರದು. ಅದನ್ನ ವಿಜಿ ಅನುಸರಿಸಿದ್ದಾರೆ. ಕಾಳಿ ರೂಪ ತಾಳಿ ಕ್ಯಾಮೆರಾ ಮುಂದೆ ಬರೋ ಮೊದ್ಲು ವಿಜಯ್, ತಮ್ಮ ತಾಯಿ ಮುಂದೆ ಈ ವೇಷಧರಿಸಿ ತೋರಿದ್ದಾರೆ. ಅದನ್ನ ನೋಡಿದ ಅವರ ಅಮ್ಮ. ಸಾಕ್ಷಾತ ದೇವಿ ಬಂದಿದ್ದಾಳೆಂದು ಕೈಮುಗಿದು ಪೂಜಿಸಿದ್ದಾರೆ. ಬಳಿಕ ವೇ ವಿಜಯ್ ಕಾಳಿ ವೇಷ ಧರಿಸಿ ತೆರೆಗೆ ಬಂದಿದ್ದಾರೆ.

9 ಗೆಟಪ್ ನಲ್ಲಿ ವಿಜಯ್ ; ದುನಿಯಾ ವಿಜಯ್ ಆಗಾಗ ಪಾತ್ರಗಳ ಜತೆ ಪ್ರಯೋಗ ಮಾಡ್ತಾರೆ. ಜಯಮ್ಮನ ಮಗ ಚಿತ್ರದಲ್ಲಿ ಒಟ್ಟು 9 ಗೆಟಪ್ ಹಾಕಿದ್ದಾರೆ. ನಾಟಕದ ಹಿನ್ನೆಲೆಯಿಂದ ಬಂದ ವಿಜಯ್, ಈ ಚಿತ್ರದಲ್ಲಿ ಹೆಣ್ಣು ಪಾತ್ರವನ್ನೂ ಹಾಕಿದ್ದಾರೆ. ಅರ್ಜುನನ ಪಾತ್ರಕ್ಕೂ ಜೀವತುಂಬಿದ್ದಾರೆ. ವಿಶೇಷವೆಂದ್ರೆ, ಜಯಮ್ಮನ ಮಗನಾನು ಅನ್ನೋ ಗೀತೆಯಲ್ಲಿ ಬೇರೆ..ಬೇರೆ ವೇಷದಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನೋಂದು ಗೀತೆನೂ ಇಲ್ಲಿ ಬರುತ್ತದೆ. ಅದರಲ್ಲಂತೂ ವಿಜಿ, ಹಿಂದು, ಮುಸ್ಲಿ, ಕ್ರಿಶ್ಚಿಯನ್ ವೇಷಧರಿಸಿದ್ದಾರೆ...
 

ಜಯಮ್ಮನ ಮಗನ ಹಿಂದೆ ವಿಕಾಸ್; ವಿಕಾಸ್. ಈ ಹೆಸ್ರು ಈಗಲೇ ಕೇಳಿ ಬರುತ್ತಿದೆ.  ಆದ್ರೆ, ರಂಗೋಲಿ ಧಾರವಾಹಿ ನೋಡಿರೋ ಮಂದಿಗೆ ಇದು ಚಿರಪರಿಚಿತ ಹೆಸ್ರು. ಯಾಕೆಂದ್ರೆ, ಜಯಮ್ಮನ ಮಗ ಚಿತ್ರದ ನಿರ್ದೇಶಕ ವಿಕಾಸ್ ಈ ಮೊದ್ಲು ರಂಗೋಲಿ ಧಾರವಾಹಿಯಲ್ಲಿ ವಿಕಾಸ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಹೆಸರಿನಿಂದಲೇ ಜಯಮ್ಮನ ಮಗ ಸಿನಿಮಾ ನಿರ್ದೇಶನ ಮಾಡಿದ್ದಾರೆ. ವಿಕಾಸ್ ಮೂಲ ಹೆಸ್ರು. ರವಿಕಿರಣ್.

ಕನ್ನಡದಲ್ಲೊಬ್ಬ ಹೊಸ ವಿಲನ್  ಉದಯ; ಹೌದು.. ಎತ್ತರದ ನಿಲುವಿನ ಉದಯ್ ಎಂಬ ಯುವಕ ಕನ್ನಡಕ್ಕೆ ಪರಿಚಯವಾಗಿದ್ದಾರೆ. 6 ಅಡಿಗಿಂತಲೂ ಹೆಚ್ಚು ಎತ್ತರವಿರೋ ಈ ಯುವ ನಟ, ಮೂಲತ ಒಬ್ಬ ಆಟೋ ಚಾಲಕ. ವಿಜಯ್ ಗರಡಿ ಮನೆ ಸೇರಿ, ವಿಜಯ್ ಥರ ಮೊದ್ಲು ಫೈಟರ್  ಆಗಿ ಪರಿಚಯವಾಗಿದ್ದಾರೆ. ಸಣ್ಣ-ಪುಟ್ಟ ಪಾತ್ರಗಳಲ್ಲೂ ಉದಯ್ ಅಭಿನಯಿಸಿದ್ದಾರೆ. ಜಯಮ್ಮನ ಮಗ ಮಾತ್ರ ಉದಯ್  ಗೆ ದೊಡ್ಡ ಹೆಸ್ರು ತಂದುಕೊಟ್ಟಿದೆ. ವಾಪಾಚಾರ ಪ್ರಯೋಗಿಸೋ ಒಬ್ಬ ಮಂತ್ರವಾದಿಯಾಗಿ ಉದಯ್ ಇಲ್ಲಿ ಮನೋಜ್ಞನವಾಗಿ ಅಭಿನಯಿಸಿದ್ದಾರೆ.

ಇಷ್ಟೆಲ್ಲ ಹೇಳೋಕೆ  ಕಾರಣ, ಒಂದೇ. ಜಯಮ್ಮನ ಮಗ ಚಿತ್ರ ಚೆನ್ನಾಗಿದೆ. ಒಳ್ಳೆ ಕತೆ. ಉತ್ತಮ ನಿರೂಪಣೆ, ದೇವಿ ಭಕ್ತರಿಗೆ ಹೇಳಿ ಮಾಡಿಸಿದ ಚಿತ್ರವಿದಾಗಿದೆ. ಅದರಲ್ಲೂ ಹೆಣ್ಮಕ್ಕಳಿಗೆ ಇದು ಅತ್ಯುತ್ತಮ ಸಿನಿಮಾ. ಒಮ್ಮೆ ನೋಡಬಹುದು..

-ರೇವನ್

 

 

Comments

Submitted by makara Mon, 08/26/2013 - 18:40

ಅಂತೂ ಇಂಥೂ ಒಂದು ಕನ್ನಡ ಚಿತ್ರ ಗೆದ್ದಿರುವುದಕ್ಕೆ ಸಂತೋಷವಾಗುತ್ತಿದೆ. ಕನ್ನಡ ಚಿತ್ರಗಳ ಗುಣಮಟ್ಟ ಕುರಿತು ನಾಗರೀಕರೊಬ್ಬರು ಕೋರ್ಟ್ ಮೆಟ್ಟಿಲು ಹತ್ತಿದ್ದು ಇಲ್ಲಿ ಸ್ಮರಣೀಯ. ಅದು ವಾಪಾಚಾರ ಅಲ್ಲ ವಾಮಾಚರ. ವಾಮಾಚಾರ ಎಂದರೆ ಸವ್ಯಕ್ಕೆ (ಸರಿಯಾದುದಕ್ಕೆ) ವಿರುದ್ಧವಾದುದು ಎಂದು ಹೇಳಬಹುದು.