ದುನಿಯಾ ವಿಜಿ ಶ್ವಾನ ಪ್ರೇಮ..!

ದುನಿಯಾ ವಿಜಿ ಶ್ವಾನ ಪ್ರೇಮ..!

ಶ್ವಾನ ಪ್ರಿಯ ದುನಿಯಾ ವಿಜಿ..!ಮನೆಯಲ್ಲಿವೆ ಎರಡು ಜರ್ಮನ್ ಶಫರ್ಡ್​.ಪುಟ್ಟ ಮಕ್ಕಳಂತೆ ಸಲಹುತ್ತಾರೆ ದುನಿಯಾ ವಿಜಿ.ಸಿಂಬಾ-ಟೆಡಿ ಅಂತ ಹೆಸರೂ ಇಟ್ಟಾರೆ.ನಾಯಿ ನಿಯತ್ತಿಗೆ ಕಳೆದು ಹೋದ ವಿಜಿ...

ದುನಿಯಾ ವಿಜಯ್. ಶ್ವಾನ ಪ್ರೇಮಿ. ಮಕ್ಕಳಂತೆ ಅವುಗಳನ್ನ ಪ್ರೀತಿಸೋದು, ಸಲಹೋದು ಇಷ್ಟ. ಅದಕ್ಕೆ ಅವರ ಹೊಸಕೆರೆ ಹಳ್ಳಿ ಮನೆಗೆ ಕಾಲಿಟ್ಟರೆ ಸಾಕು.ಮನೆಯ ಆ ವಿಶೇಷ ಸದಸ್ಯರು ನಿಮನ್ನ ಸ್ವಾಗತಿಸುತ್ತಾರೆ. ಬನ್ನಿ ಅವರನ್ನ ಮೀಟ್ ಮಾಡಿಸುತ್ತೇನೆ...

ದುನಿಯಾ ವಿಜಿ. ರಫ್ ಅಂಡ್ ಟಫ್ ಮ್ಯಾನ್. ಆದರೆ, ನಾಯಿಗಳನ್ನ ಕಂಡ್ರೆ ಮನಸ್ಸು ಕರಗುತ್ತದೆ. ಮಕ್ಕಳಂತೆ ಅವುಗಳನ್ನ ಪ್ರೀತಿಸುತ್ತಾರೆ. ಸಾಕುತ್ತಾರೆ. ಸಲಹುತ್ತಾರೆ. ಹಂಗೆ ವಿಜಿಯ ರಿಯಲ್ ದುನಿಯಾದಲ್ಲಿ ಬೆಳದವ್ರು ಸಿಂಬಾ ಮತ್ತು ಟೆಡಿ...

ವಿಜಿ ಮನೆಯಲ್ಲಿ ಇರೊ ನಾಯಿಗಳು ಜರ್ಮನ್ ಶಫರ್ಡ್ ಜಾತಿಗೆ ಸೇರಿದವು.ಹೆಚ್ಚು ಕಡಿಮೆ ಎರಡೂ ನಾಯಿಗಳು, 9 ರಿಂದ 10 ತಿಂಗಳಿನವು. ವಿಜಿ ಅವುಗಳನ್ನ ಪುಟ್ಟ ಮಕ್ಕಳಂತೆ ನೋಡಿಕೊಳ್ತಾರೆ.

ಹೊಸಕೆರೆ ಹಳ್ಳಿಯ ತಮ್ಮ ಮನೆಯಲ್ಲಿ ವಿಜಿ ಈ ಎರಡೂ ನಾಯಿಗಳನ್ನ ಪ್ರೀತಿಯಿಂದ ಸಾಕಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದರೂ, ಇವುಗಳಿದ್ದರೆ ಆಯ್ತು. ನಿಶ್ಚಿಂತೆಯಿಂದಲೇ ವಿಜಿ ಹೊರಗಡೆ ಶೂಟಿಂಗ್ ಹೋಗ್ತಾರೆ. ಅಷ್ಟು ನಂಬಿಗಸ್ತ ಈ ನಾಯಿಗಳು ವೆಲ್ ಟ್ರೇನ್ಡ್. ಅಮೃತ ಹೆಸರಿನ ಸ್ನೇಹಿತರು ಈ ನಾಯಿಗಳನ್ನ ತಂದು ಕೊಟ್ಟಿದ್ದಾರೆ. ಅಷ್ಟೇ ಪ್ರೀತಿಯಿಂದಲೇ ವಿಜಿ ಎರಡೂ ನಾಯಿಗಳನ್ನ ನೋಡಿಕೊಳ್ತಿದ್ದಾರೆ.ಇದು ದುನಿಯಾ ವಿಜಿಯ ಶ್ವಾನ ಪ್ರೀತಿ..

-ರೇವನ್