ನಿನ್ನ ಹೆಸರು....

ನಿನ್ನ ಹೆಸರು....

ನಗುವ ನಿನ್ನ ಮುಖ ಕಂಡೊಡನೆ
ಚಂದಿರನು ನಾಚುವನು ತನ್ನೊಳಗೆ
ಹೂವನ್ನು ನಾಚಿಸುವೆ ಚೆಲುವೆ ಹೇಳಿ ಬಿಡು ನಿನ್ನ ಹೆಸರು

ಚಂದ್ರ ,ತಾರೆಗಳ ಬೆಳಕು ನಿನ್ನ ಕಣ್ಣಗಳು
ನನ್ನ ನೋಡಿ ಹಾಗೆ ಮಿನುಗುತಿರಲು
ಗೊತ್ತಾಯಿತು ಚೆಲುವೆ ಆ ಬೆಳಕೆ ನಿನ್ನ ಹೆಸರು

ಬೆಳದಿಂಗಳ ರಾತ್ರಿಯಲಿ ನನ್ನ ಮನದಂಗಳದಲಿ
ಬೆಳಗುತಿರುವ ನಿನ್ನ ನಗು ಮುಖದ ಛಾಯೆ
ಮೆದುದನಿಯಲಿ ಕಿವಿಯಲಿ ಉಸಿರು ಬಿಡು ನಿನ್ನ ಹೆಸರು

ನಸುಕಿನಲಿ ಕಿರಣಗಳ ಕಂಡು ನಗುವ ಕುಸುಮದ ಹಾಗೆ
ಸಂಜೆ ತಂಪಿನ ಸಾಗರದ ಪ್ರತಿ ಅಲೆಅಲೆ ಹಾಗೆ
ನವಿಲಗರಿಯ ನೂರಾರು ಬಣ್ಣದ ಹಾಗೆ
ನನ್ನ ಹೄದಯದ ಪ್ರತಿ ಕೋಣೆಯಲ್ಲೂ ಬರೆದುಬಿಡು ನಿನ್ನ ಹೆಸರು