ಭಾಗ‌ 71

ಭಾಗ‌ 71

...ಈ ಕಥೆ ಹಿಂದೆ ಕೂಡಾ ಸರಿಯುವುದು

(ಕಂಪೌಂಡರ್ ಹೇಳೋದನ್ನೂ ಕೇಳದೆ ಔಟ್ ಸೈಡ್ ಪೇಷಂಟ್ ವೈಧ್ಯರ ರೂಂ ಒಳಗೆ ಹೋಗ್ತಾನೆ)

ನಾಯಕ : ಯಾರಿದ್ದಾರೆ ಒಳಗೆ ,ಯಾರ್ರೀ ಇನ್ಚಾರ್ಜ್ ಇವತ್ತು ,(ಬಾಗಿಲನ್ನು ದೂಡುತ್ತ ಒಳಗೆ ಹೋಗುತ್ತಾನೆ ಆ ಬಾಗಿಲು ಕುಯ್ನ್ ಅಂತ ಸೌಂಡ್ ಮಾಡತ್ತೆ)

(ಅಲ್ಲಿ ಲೇಡಿ ಡಾಕ್ಟರ್ ಒಬ್ಬರು ಒಂದು ತಾತನಿಗೆ ಪಲ್ಸ್ ಚೆಕ್ ಮಾಡ್ತಾ ಕೂತಿರ್ತಾಳೆ, ನಮ್ಮ ನಾಯಕಿ,)

ನಾಯಕಿ : (ಎದ್ದು ನಿಲ್ಲುತ್ತಾ, ಕೋಪದಲ್ಲಿ) ಯಾಕ್ರೀ ಯಾಕ್ರೀ...ಏನ್ ಅಷ್ಟ್ ಅರ್ಜೆಂಟಾ, ಇಲ್ಲಿ ಒಬ್ರನ್ನ ಚೆಕ್ ಮಾಡ್ತಾ ಇಲ್ವಾ, ಯೇ ಕಂಪೌಂಡರ್ ಎಲ್ಲಿದ್ದೀರ್ರಿ..ಯಾಕ್ರೀ ಎಲ್ಲರನ್ನು ಒಳಗೆ ಬಿಡ್ತೀರ ಒಬ್ಬೋಬ್ರಾಗೆ ಕಳ್ಸಿ ಅಂತ ಹೇಳಿಲ್ವಾ..

ಕಂಪೌಂಡರ್ : ಅಲ್ಲ ಮೇಡಂ ಅದು....ಪೋಲಿಸ್ ಸಾಹೆಬ್ರೂ...

ನಾಯಕ : (ಇದೆಲ್ಲದನ್ನು ನೋಡ್ತಾ ನಿಂತಿರ್ತಾನೆ) ಔಟ್ ಸೈಡ್ ಪೇಷಂಟ್ ನೋಡ್ಲಿಕ್ಕೆ ತಾನೇ ನೀವು ಇರೋದು, ಅಲ್ಲಿ ಒಬ್ಬನ್ ಜೀವ ಹೋಗ್ತಾ ಇದೆ..ಬನ್ನಿ ಬನ್ನಿ (ಆಕೆಯ ಕೈ ಹಿಡಿದು ಎಳೆದುಕೊಂಡು ಹೋಗ್ತಾನೆ).

ನಾಯಕಿ : (ಜೀವದ ವಿಷಯ ಅಂತ ಸುಮ್ಮನಾಗಿ) ಕೈ ಹ್ನಾ... ಕೈ ಬಿಡ್ರಿ ಸರ್ (ನಾಯಕ ಕೈ ಬಿಡ್ತಾನೆ ನಾಯಕಿ ಕೈಯನ್ನು ಉಜ್ಜಿಕೊಳ್ಳುತ್ತಾ ಬಳೆಗಳನ್ನು ಸರಿ ಮಾಡ್ಕೊತಾ ಸ್ಟ್ರೆಚ್ಚರ್ನಲ್ಲಿರೋ ಪೇಷಂಟ್ ಕಡೆ ನೋಡ್ತಾಳೆ)

(ಹೋಗುವಾಗ ದಾರಿಯಲ್ಲಿ)

ನಾಯಕ : ಇವ್ನಿಗೆ ಕತ್ತಿಯಲ್ಲಿ ಪೆಟ್ಟು ಬಿದ್ದಿದೆ ಬೇಗ ಟ್ರೀಟ್ಮೆಂಟ್ ಶುರು ಮಾಡಿ ಇಲ್ದಿದ್ರೆ ಒಂದ್ ಅರ್ದ ಗಂಟೆಲ್ಲಿ ಸಾಯ್ತಾನೆ, ಬೇಗ ಬೇಗ ನರ್ಸ್ ಕರ್ಕೊಂಡ್ ಹೋಗ್ರಿ

(ನಡೆದುಕೊಂಡು ಬಂದು ಸ್ಟ್ರೆಚರ್ ಹತ್ತಿರ ನಿಲ್ತಾರೆ, ನರ್ಸ್ ಮುಂದೆ ಬರ್ತಾಳೆ)

ನಾಯಕಿ : (ಆ ಪೇಷಂಟನ್ನು ನೋಡ್ತಾ ಗಾಯವನ್ನು ಒಬ್ಸೆರ್ವ್ ಮಾಡ್ತಾ )ಏನಾಯ್ತು, ಇವರ ಬೆನ್ನಿಗೆ ಹೇಗೆ ಕತ್ತಿ ಬಿತ್ತು ಯಾರ ಜೋತೆನಾದ್ರೆ ಜಗಳ ಮಾಡಿದ್ರಾ ಸರ್ ಇಲ್ಲಾ ಇವ್ರಿಗೆ ಬೇಡ್ದೆ ಇರೋ ಯಾರಾದ್ರೂ ಕಡ್ದ್ರಾ, ಅವ್ರನ್ನ ಅರೆಸ್ಟ್ ಮಾಡಿದ್ರಾ, ಎಫ್ ಐ ಆರ್ ಹಾಕಿದ್ರಾ...ನರ್ಸ್ ಒಂದ್ ಕಾಪಿ ಇಸ್ಕೊಂಡ್ ಬಿಡಿ .

ನಾಯಕ : ಅದೆಲ್ಲಾ ಯಾಕ್ ಇವಾಗ, ಅದು ನಮ್ ಕೆಲ್ಸ, ನಾನ್ ನೋಡ್ಕೊಳ್ತೀನಿ ಅದ್ರ ಬಗ್ಗೆ. ಅವನ ಜೀವ ಹೋಗೋದ್ರೊಳಗೆ ಟ್ರೀಟ್ಮೆಂಟ್ ಶುರು ಮಾಡಿ ಬೇಗ, ಎಫ್ ಐ ಆರ್ ನಾನು ರೆಡಿ ಮಾಡಿ ಕೊಡ್ತೀನಿ, ಯೇ ಕಂಪೌಂಡರ್ ಕರ್ಕೊಂಡೋಗೋ.

(ಕಂಪೌಂಡರ್ ಸ್ಟ್ರೆಚ್ಚರ್ ಮೇಲೆ ಕೈ ಇಡ್ತಾನೆ)

ನಾಯಕಿ : ಅಣ್ಣಾ, ನಿಲ್ಲಿ ಸೊಲ್ಪ, ಸರ್, ನೀವು ಎಫ್ ಐ ಆರ್ ರೆಡಿ ಮಾಡಿ ತನ್ನಿ, ನಂತರ ಟ್ರೀಟ್ಮೆಂಟ್ ಶುರು ಮಾಡೋಣ

ನಾಯಕ : ರೀ..(ಸಿಟ್ಟಾಗುತ್ತಾ ) ಹೇಳಿದ್ರೆ ಅರ್ಥ ಆಗಲ್ವ ನಿಮಗೆ ಹೀಗೆ ಬಿಟ್ರೆ ಇನ್ನೊಂದ್ ಸೊಲ್ಪ ಹೊತ್ತಲ್ಲಿ ಅವ್ನು ಸಾಯ್ತಾನೆ..ಈಗಾಗ್ಲೇ ಲೇಟ್ ಆಗಿದೆ, ಕರ್ಕೊಂಡೋಗ್ರಿ ..ಲೋ ಕರ್ಕೊಂಡ್ ಹೋಗೋ.

ನಾಯಕಿ : ಸರ್ ಅವ್ನಿಗೆ ಏನ್ ಆಗಲ್ಲ..ನೀವು ಎಫ್ ಐ ಆರ್ ರೆಡಿ ಮಾಡಿ ತನ್ನಿ ಹೋಗಿ...ಅವ್ನ ಜೀವಕ್ಕೆ ನಾನ್ ಗ್ಯಾರಂಟಿ ಕೊಡ್ತೀನಿ,

ನಾಯಕ : ಮೂರು ವರ್ಷದ ಎಕ್ಸ್ಪೀರಿಯೆನ್ಸ್ ನಂದು, ಬರ್ಕೊಡ್ತೀನಿ ಬೇಕಿದ್ರೆ, ಇನ್ನು ಹದಿನೈದು ನಿಮಿಷದಲ್ಲಿ ಸಾಯ್ತಾನೆ ನೀವು ಟ್ರೀಟ್ಮೆಂಟ್ ಶುರು ಮಾಡದೆ ಹೋದ್ರೆ, ಮರ್ಯಾದೆಯಿಂದ ಹೇಳ್ತಾ ಇದೀನಿ ಒಳಗೆ ಕರ್ಕೊಂಡ್ ಹೋಗಿ.

ನಾಯಕಿ : ಗಲಾಟೆ ಮಾಡ್ಬೇಡಿ ಇದು ಹಾಸ್ಪಿಟಲ್..ನಿಮ್ ಸ್ಟೇಷನ್ ಅಲ್ಲ, ನಿಮ್ದೇನ್ ರೀ ಮೂರು ವರ್ಷ, ನಾನು ಐದು ವರ್ಷ ಬರೀ ಇದ್ರ ಬಗ್ಗೆನೇ ಓದಿದೀನಿ ಇದರ ಅಂಗಾಂಗಗಳ್ನೂ ಸ್ಟಡಿ ಮಾಡಿದೀನಿ ಇದು ನನ್ನ ಸಿಕ್ಸ್ತ್ ಇಯರ್, ರೂಲ್ಸ್ ಪ್ರಕಾರ ಹೀಗೆಲ್ಲಾ ಮಾಡಕ್ಕಾಗಲ್ಲ ಇದು ನಿಮಗೆ ಗೊತ್ತಿಲ್ದೆ ಏನೂ ಇಲ್ಲ

(ಕಂಪೌಂಡರ್ ಕಡೆ ತಿರುಗಿ) ಅಣ್ಣಾ ಇವ್ರು ಎಫ್ ಐ ಆರ್ ಕೊಡೊ ವರೆಗೂ ಈ ಪೇಷಂಟ್ ನ ಒಳಗೆ ಕರ್ಕೊಳ್ ಬೇಡಿ , ಅಕಸ್ಮಾತ್ ಏನಾದ್ರೂ ಹಂಗೇ ಒಳಗೆ ಕಳ್ಸಿದ್ರೋ ಅವ್ರ ಜೊತೆ ನಿಮ್ ಮೇಲೂ ಕಂಪ್ಲೇಂಟ್ ಕೊಡ್ಬೇಕಾಗುತ್ತೆ ಹುಷಾರ್ .

(ಇದನ್ನೆಲ್ಲಾ ಕೇಳ್ಸಿಕೊಳ್ತಾ ಇದ್ದ ನಾಯಕ ಫುಲ್ ಸಿಟ್ಟಾಗ್ತಾನೆ..ಕೈ ಎತ್ತಿಕೊಂಡು ಬಂದು ನಾಯಕಿಯ ಕೆನ್ನೆಗೆ ಒಂದು ಪೆಟ್ಟು ಕೊಡ್ತಾನೆ ನಾಯಕಿ ಶಾಕಲ್ಲಿ ಕೆನ್ನೆ ಮೇಲೆ ಕೈ ಇತ್ತು ಅವನ ಕಡೆನೇ ನೋಡ್ತಾ ಇರ್ತಾಳೆ)

(ಪೆಟ್ಟು ಬಿದ್ದ ಕೂಡಲೇ ಕಂಪೌಂಡರ್ ಸ್ಟ್ರೆಚ್ಚರ್ ಎಳ್ಕೊಂಡ್ ಓದ್ತಾನೆ ನರ್ಸ್ ಕೂಡಾ ಅವ್ನ ಹಿಂದೇನೆ ಓಡ್ತಾಳೆ ನಾಯಕ ಅಲ್ಲಿ ಇರೋವ್ರನ್ನೆಲ್ಲಾ ಓಡಿಸ್ತಾನೆ ಗುಂಪು ಖಾಲಿಯಾಗುತ್ತಿರುತ್ತೆ ಆ ಹೊತ್ತಿಗೆ ನಾಯಕ ನಾಯಕಿಯ ಕಡೆ ತಿರುಗ್ತಾನೆ ಆಕೆ ಅವನನ್ನೇ ನೋಡ್ತಾ ಇರ್ತಾಳೆ ಅವನು ಒಂದು ಕ್ಷಣ ನೋಡಿ ತಪ್ಪಿತಸ್ಥನಂತೆ ತಲೆ ಬಗ್ಗಿಸುತ್ತಾ ಆಕೆಯ ಕಡೆ ನೋಡತ್ತಾ ಮತ್ತೆ ತಲೆ ಬಗ್ಗಿಸುತ್ತಾ  ನಾಯಕಿ ಕಣ್ಣಲ್ಲಿ ಒಂದು ಹನಿ ನೀರು ಬರುತ್ತಿರುತ್ತೆ ಅದನ್ನು ನಾಯಕ ನೋಡ್ತಾ  ಬೆನ್ನು ತೋರಿಸಿ ಹೋಗ್ತಾ ಫೋನ್ ತಗೊಂಡು ಎಫ್ ಐ ಆರ್ ರೆಡಿ ಮಾಡ್ಲಿಕ್ಕೆ ಹೇಳ್ತಾನೆ )

ಮುಂದುವರೆಯುವುದು...