ಭ್ರಷ್ಟಾಚಾರ ಮುಕ್ತ ಭಾರತ ಮೂರು ಮಾಗ್ರಗಳು

ಭ್ರಷ್ಟಾಚಾರ ಮುಕ್ತ ಭಾರತ ಮೂರು ಮಾಗ್ರಗಳು

ನಮ್ಮ ದೇಶದ ಜನರು ದಿನ ಬೇಳಗ್ಗಾದರೆ ಭ್ರಷ್ಟಾಚಾರದ ಬಗ್ಗೆ  ಕೇಳಿ ಕೇಳಿ ಸಾಕಾಗಿದೆ.ನಮ್ಮ ದೇಶದಲ್ಲಿ  ಭ್ರಷ್ಟಾಚಾರ ಇಲ್ಲದ ಸಕಾ೯ರರೀ ಕಚೇರಿ ಹುಡುಕೋದು  ಅಂದರೆ  ಸಾವು ಇಲ್ಲದ ಮನೆ ಹುಡುಕಿದಾಗೆ.
ನಮ್ಮ ದೇಶದ ಜನರು ಭ್ರಷ್ಟಾಚಾರ ಮುಕ್ತ ಭಾರತದ ಕನಸು ಕಾಣೋದ್ದನೆ ಬಿಟ್ಟಿದ್ದಾರೆ. ಯಾಕೆಂದರೆ  ಇದ್ದರ ಬೇರುಗಳು ನಮ್ಮ ದೇಶದಲ್ಲಿ  ತುಂಬ ಆಳವಾಗಿ ಹರಡಿವೆ. ಯಾವ ಪಕ್ಷವು ಅಧಿಕಾರಕ್ಕೆ  ಬಂದರು ಭ್ರಷ್ಟಾಚಾರವನ್ನು ಕಡಿಮೆ ಮಾಡೋಕೆ  ಆಗಲಿಲ್ಲ.  ನಮ್ಮ ದೇಶದ ಈ ಸ್ಥಿತಿಗೆ ಯಾರು ಕಾರಣ ನಮ್ಮ ರಾಜಕಾರಣಿಗಳೇ? ನಮ್ಮ ದೇಶದ ಸಾಮಾನ್ಯ ಜನರೇ? ನಮ್ಮ ದೇಶದ ಕಾನೂನ ವ್ಯವಸ್ಥೆಯೇ? ನಮ್ಮ ದೇಶದ ದೊಡ್ಡ ದೊಡ್ಡ ಉದೋಗ್ಯಪತ್ತಿಗಳೇ? ಉತ್ತರ ಹುಡುಕೋದು ತುಂಬ ಕಷ್ಟ ಯಾಕೆಂದರೆ  ನಮ್ಮ ಜನರು ಒಬ್ಬಬ್ಬರು ಒಂದೊಂದು  ಕಾರಣ ಹೇಳುತ್ತಾರೆ.
ಅಮೆರಿಕಾ,ಸಿಂಗಾಪೂರ, ಇಂಗ್ಲೆಂಡ್, ದುಬೈ ದೇಶಗಳ ಹಾಗೆ ನಮ್ಮ ದೇಶವು ಆಗ ಬಹುವುದೇ.Yes ಆಗಬಹುವುದು ಮೂರು ದಾರಿಗಳುಯಿವೆ
1) ಪ್ರತಿಯೊಂದು  ಸಕಾ೯ರೀ ಸೇವೆಯನ್ನು  Online ಮಾಡಬೇಕು.ಇದರಿಂದ ಪೂತಿ೯ ತಡೆಯೋಕೆ  ಆಗಲ್ಲ.  ಆದರೂ ಒಂದು ಇಷ್ಟು  ಶೇಕಡಾವಾರು  ಕಡಿಮೆ ಮಾಡಬಹುವುದು.
2) ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನು  ತನ್ನಗೆ ಏಷ್ಷೆ ತೋದರೆ ಆದರೂ  ಲಂಚ ಕೊಡಬಾರದು, ತೇಗಿದು ಕೊಳಬಾರದು ಅಂತ ದೃಢ ಸಂಕಲ್ಪ ಮಾಡಬೇಕು.
3) ನಮ್ಮ ದೇಶದಲ್ಲಿರುವ ಆಸ್ತಿ  ಹಕ್ಕು ಕಾಯ್ದೆ  ತೇಗಿಯಬೇಕು.ಅಂದರೆ  ದೇಶದ ಎಲ್ಲಾ ಭೂಮಿಯು ಸಕಾ೯ರದ ಹೆಸರಿನಲ್ಲಿ  ಇರಬೇಕು. ಯಾರು ಭೂಮಿಯನ್ನು  ಕೋಡುಕೊಳುವ,ಮಾರುವ ಹಾಗೆ ಇರಬಾರದು. ಸಕಾ೯ರವೆ ಮನೆ ಕಟ್ಟಿಸಿ ಜನರಿಗೆ ಅವರ ಕುಟುಂಬದ ಜನ ಸಂಖ್ಯೆ ಯ ಆಧಾರದ ಮೇಲೆ  1 BHK, 2 BHK ಮನೆಗಳನ್ನು  ತಿಂಗಳ ಬಾಡಿಗೆಗೆ  ಕೊಡಬೇಕು.ರೈತರಿಗೂ  ಇದೇ ರೀತಿಯಲ್ಲಿ  ಹೊಲವನ್ನು  ಒಂದು ವಷ೯ಕ್ಕೆ ಇಂತಿಷ್ಟು  ಅಂಥ Tax ತೆಗಿದುಕೊಂಡು ಬೆಳೆಯಲು  ಕೊಡಬೇಕು. ಮುಂದಿನ ವಷ೯ ಅವರು  ದುಡಿಮೆಯನ್ನು  ನೋಡಿ Renewal ಮಾಡಬೇಕು.
1000 Rs ಮೇಲಪ್ಟ ಎಲ್ಲಾ  ವ್ಯವಹಾರಗಳನ್ನು ಬ್ಯಾಂಕುಗಳ ಮುಖಾಂತರವೆ ಮಾಡಬೇಕು  ಅಂತ ಕಾಯ್ದೆ ಜಾರಿಮಾಡಬೇಕು. ಎಲ್ಲಾ  ಸಣ್ಣ ದೊಡ್ಡ ಅಂಗಡಿಯವರಿಗೆ ATM Card Reader machine ಗಳನ್ನು  ಉಚಿತವಾಗಿ  ಕೊಡಬೇಕು. 

                       1000Rs ಮೇಲಪ್ಟ ಎಲ್ಲಾ  ವ್ಯವಹಾರಗಳನ್ನು Debit Card ಯಿಂದ ಮಾಡಬೇಕು  ಅಂಥ ಕಾಯ್ದೆಯನ್ನು  ಮಾಡಬೇಕು.  ಇದನ್ನ ಎಲ್ಲಾ  ಮಾಡೋದು ಅಷ್ಟು  ಸುಲಭವಲ್ಲ ನಮ್ಮ ದೇಶದಲ್ಲಿ ಯಾಕೆಂದರೆ  ನಮ್ಮದು ಪ್ರಜಾಪ್ರಭುತ್ವವುಳ ದೇಶ. ಈ ರೀತಿಯ ಕಾಯ್ದೆ ನಮ್ಮ ನೆರೆ  ದೇಶ ಚೀನಾದಲ್ಲಿ ಇದೆ.ಅದಕ್ಕೆ ಆ ದೇಶ ಅಷ್ಟೊಂದು  ವೇಗವಾಗಿ  ಬೆಳೆಯುತ್ತಿದೆ. ಜಗತ್ತಿನ ದೊಡ್ಡಣ್ಣ ಅಂತೆಯೇ   ಕರೆಯುವ ಅಮೆರಿಕ ದೇಶದ ಜೊತೆ  Competition ಮಾಡುತ್ತಿದೆ.ನಮ್ಮ ಪ್ರಧಾನ ಮಂತ್ರಿಯವರು ಚೀನಾ ಪ್ರವಾಸದಲ್ಲಿದ್ದಾರೆ ಅವರು ಆ ದೇಶದಲ್ಲಿರುವ ಕಾನೂನು ವ್ಯವಸ್ಥೆಯನ್ನು ಸ್ಪಲ್ಪ ನೋಡಿಕೊಂಡು  ಬಂದು  ನಮ್ಮ ದೇಶದಲ್ಲಿ  ಜಾರಿಮಾಡಬೇಕು.ನಾನು ಮೇಲೆ  ಹೇಳಿದ ಮೂರು ಕಾಯ್ದೆಯನ್ನು ಬದಲಾವಣೆ  ಮಾಡಿದರೆ ನಮ್ಮ ದೇಶದಲ್ಲಿ  99% ಭ್ರಷ್ಟಾಚಾರ ಕಡಿಮೆ  ಮಾಡಬಹುದು. ಮುಂದೆ  ಒಂದು  ದಿನ ಹೀಗೆ  ಆಗಬಹುದು  ಅಂಥ ಆಸೆ ಇಟ್ಟಿಕೊಳ್ಳಬೇಕು.

Comments

Submitted by Nagaraj Bhadra Wed, 05/27/2015 - 10:25

In reply to by kavinagaraj

Yes.ಆದರೇ ನಾನು ಹೇಳಿರೋ ಏಲ್ಲಾವು ನಮ್ಮ‌ ನೆರೆ ದೇಶ‌ ಚೀನಾದಲ್ಲಿದೆ.ನಾವು ಪ್ರಯತ್ನ ಮಾಡಬಹುದಲ್ಲ‌.

Submitted by kavinagaraj Wed, 05/27/2015 - 20:28

In reply to by Nagaraj Bhadra

ಚೀನಾದಲ್ಲಿ ಜನರಿಗೆ ಸ್ವಾತಂತ್ರ್ಯವಿಲ್ಲ, ಆದ್ದರಿಂದ ಅಲ್ಲಿನ ಜನರು ಸುಖಿಗಳಲ್ಲ! ಆದರೆ ಸುಯೋಗ್ಯ ಮತ್ತು ಧೀರೋದಾತ್ತವಾದ ನಾಯಕತ್ವ ದೇಶಕ್ಕೆ ಅಗತ್ಯವಿದೆ. ಆಗ ಮಾತ್ರ ಏನಾದರೂ ನಿರೀಕ್ಷಿಸಬಹುದು.

Submitted by Nagaraj Bhadra Thu, 05/28/2015 - 19:39

In reply to by kavinagaraj

ಭಾರತದಲ್ಲಿ ಸಾಮಾನ್ಯ ಜನರಿಗೆ ಸ್ವಾತಂತ್ರ್ಯವಿಲ್ಲ ಸರ್.ಇಲ್ಲಿ ಶ್ರೀಮಂತರಿಗೆ ಮಾತ್ರವಿದೆ.ಈ ಹಾಳಾದ ವ್ಯವಸ್ಥೆಗಿಂತ ಸ್ವಾತಂತ್ರ್ಯವಿಲ್ಲದೆ ಇರುವುದು ಲೇಸು ಸರ್. ಚೀನಾ ರೀತಿಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗುತ್ತವೆ ಅಲ್ಲ.