ಶೃತಿ ಹೇಳಿದ ಶತಮಾನೋತ್ಸವದ ಸತ್ಯಗಳು...!

ಶೃತಿ ಹೇಳಿದ ಶತಮಾನೋತ್ಸವದ ಸತ್ಯಗಳು...!

ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿದೆ.  ಈ ಹಿನ್ನೆಲೆಯಲ್ಲಿ ಒಂದು ಅದ್ಧೂರಿ ಕಾರ್ಯಕ್ರಮ. ಅದು ಚೆನ್ನೈನಲ್ಲಿ.  ಕನ್ನಡ, ತೆಲುಗು,ತಮಿಳು, ಮಲೆಯಾಳಂ. ಹೀಗೆ ನಾಲ್ಕು ಭಾಷೆಯ ಚಿತ್ರರಂಗಕ್ಕೆ ಇದು ಜೀವಮಾನದ ಒಂದು ಅಪರೂಪದ ಸಂಭ್ರಮ. ಆದ್ರೆ, ಕನ್ನಡಿಗರಿಗೆ ಇದು ಅದ್ಧೂರಿ ಕೆಟ್ಟ ಅನುಭವ.ಈ ಅನುಭವನ್ನ ಸ್ವತ: ಅನುಭವಿಸಿ, ಫೋನ್ ಮೂಲಕ ಬೇಸರ ವ್ಯಕ್ತಪಡಿಸಿದವ್ರು ಶೃತಿ...ಏನ್ ಹೇಳಿದ್ರು. ಅವುಗಳನ್ನ ಇಲ್ಲಿ ಕೊಡ್ತಾ ಹೋಗುತ್ತವೇ. ಹೋದುತ್ತಾ ಹೋಗಿ...

ಕಾರ್ಯಕ್ರಮದ ಬಗ್ಗೆ ಹೇಳೋಕೆ ಒಳ್ಳೆದು ಏನೂ ಇಲ್ಲ;
ನಟಿ ಶೃತಿ ಮಾತು ಫೋನಿನಲ್ಲಿ ಶುರುವಾಗಿದ್ದೇ ಹೀಗೆ; ಇಡೀ ಕಾರ್ಯಕ್ರಮ ಅದ್ಧೂರಿಯಾಗಿತ್ತು. ಆದ್ರೆ, ಅನುಭವ ತುಂಬಾ ಕೆಟ್ಟದು. ಹೇಳಲಿಕ್ಕೆ ಆಗದ ಅನುಭವ ಅದು. ಹೀಗೆ ಶೃತಿ ಬೇಸರ ವ್ಯಕ್ತಪಡಿಸಿದ್ರು. ಹಾಗೆ ಮಾತು ಮುಂದುವರೆದಂತೆ, ಶೃತಿ ಒಂದೊಂದಾಗಿ ಕಹಿ ಅನುಭವವನ್ನ ವಿಸ್ತರಿಸುತ್ತಲೇ ಹೋದ್ರು. ಆಗ ಮೊದಲ ಬಂದ ಸತ್ಯ ಒಂದೇ. ಕನ್ನಡ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆ ಎಂಬುದು.
ಕನ್ನಡಿಗರೆಲ್ಲ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾರೆ. ಎದುರಿಗೆ ಪ್ರೇಕ್ಷಕರೇಯಿಲ್ಲ. ಯಾಕೆ. ಇದರ ಹಿಂದಿ  ಸತ್ಯ ಒಂದೇ. ನಮ್ಮಲ್ಲಿ ಇಲ್ಲದ ಒಗ್ಗಟ್ಟು...

ಒಗ್ಗಟ್ಟಿಲ್ಲದ ಕನ್ನಡ ಇಂಡಸ್ಟ್ರೀ;
ಕನ್ನಡದ ತಾರೆಯರಲ್ಲಿ ಒಗ್ಗಟ್ಟೇ ಇಲ್ಲ ಎಂಬ ನೋವು ಶೃತಿ ಅವರದು. ಕಾರಣ, ಯಾರೊಬ್ಬ ದೊಡ್ಡ ತಾರೆಯೆನಿಸಿಕೊಂಡವ್ರು ಇಲ್ಲಿ ಇರಲೇಯಿಲ್ಲ. ವೇದಿಕೆ ಮೇಲೆ ಯಾರಾದ್ರೂ ಇದ್ದರೆ ಮಾತ್ರ ಜನ ಬರೋಕೆ ಸಾಧ್ಯ. ಅದು ಇಲ್ಲದೇನೇ ಇಡೀ ಕನ್ನಡದ ಕಾರ್ಯಕ್ರಮ ನಿಜಕ್ಕೂ ಕಳೆಗುಂದಿತ್ತು. ಇದರಿಂದ ನೋವು ಇತ್ತು. ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದಿದ್ದೆ ಕನ್ನಡದ ಕಾರ್ಯಕ್ರಮದ ಮರೆಯಾದೆ ಇನ್ನೂ ಹಾಳಾಗಿ ಹೋಗುತ್ತಿತ್ತು. ಆದ್ರೆ, ಅಲ್ಲಿ ಕಾರ್ಯಕ್ರಮ ನೋಢಿ ಹೇಳೋರೆಯಿಲ್ಲದೆ ನಾವು ಕನ್ನಡದ ಕೆಲ ಕಲಾವಿದರು ಸೇಫು ಅಂದ್ರು ಶೃತಿ...

ಶತಮಾನೋತ್ಸವಕ್ಕೆ ಏಕೆ ಹೋದೇ..?
ಶತಮಾನೋತ್ಸವದ ಕನ್ನಡಿಗರ ಅವಾಂತರಗಳನ್ನ ಕಂಡ ಶೃತಿ ಅಲ್ಲಿಗೆ ಹೋಗಲೇಬಾರದಿತ್ತು ಅನ್ನೋ ಅಭಿಪ್ರಾಯಕ್ಕೆ ಬಂದಿದ್ದಾರೆ. ಮೊದಲ್ಲೇ ಗೊತ್ತಾಗಿದ್ದರೇ, ಕಂಡಿತ ಹೋಗುತ್ತಿರಲಿಲ್ಲ ಎಂಬುದು ಶೃತಿ ಈಗಿನ ಬೇಸರ. ಅಲ್ಲಿಗೆ ಹೋಗಿ ಆಗಿರೋದು ಏನೂ ಇಲ್ಲ. ಆಗಿರೋದೆಲ್ಲ ಅವಮಾನವೇ. ಆದ್ರೆ, ಅದು ಬೇರೆಯವರು ಮಾಡಿದಲ್ಲ. ನಾವು..ನಾವೇ ಮಾಡಿಕೊಂಡ ದೊಡ್ಡ ಅವಮಾನವದು ಅಂತ ನೋವಿನಿಂದ ಹೇಳಿಕೊಂಡ್ರು...

ನಮಲ್ಲಿಯೇ ಇದೆ ವ್ಯತ್ಯಾಸ;
ಕನ್ನಡದ ನಟರೆಲ್ಲ ಒಂದೇ. ಹೀಗೆ ವೇದಿಕೆ ಮೇಲೆ ಹೇಳೋಕೆ ಸಾಧ್ಯ. ಆದ್ರೆ, ಚಿಕ್ಕ ಕಲಾವಿದರು.ದೊಡ್ಡ ಕಲಾವಿದರು. ಈ ಥರದ ವ್ಯತ್ಯಾಸಗಳು ನಮ್ಮಲ್ಲಿಯೇ ಇವೆ. ಅದು ಚೆನ್ನೈನ ಅದ್ಧೂರಿ ಕಾರ್ಯಕ್ರಮದ ಸಂದರ್ಭದಲ್ಲೂ ಮುಂದುವರೆದಿದೆ. 22 ಕ್ಕೆ ಸಣ್ಣ ಕಲಾವಿದರ ಕಾರ್ಯಕ್ರಮವಂತೆ. 24 ಕ್ಕೆ ಕೊನೆ ದಿನ ದೊಡ್ಡ...ದೊಡ್ಡ ಸ್ಟಾರ್ ಗಳ ಕಾರ್ಯಕ್ರಮವಂತೆ. ಇನ್ನೂ ದೊಡ್ಡ ಸ್ಟಾರ್ ಗಳಿಗೆ ದೊಡ್ಡ ಹೋಟೆಲ್. ಚಿಕ್ಕ ತಾರೆಯರಿಗೆ ಚಿಕ್ಕ ಹೋಟೆಲ್ಲ. ಎಂಥಹ ವ್ಯತ್ಯಾಸವಿದು. ಈ ಕೆಟ್ಟ ಅನುಭವವನ್ನ ಎಂದು ಮರೆಯೋದಿಲ್ಲ ಅಂದ್ರು ಶೃತಿ.

ಡಾಕ್ಟರ್ ರಾಜ್ ಹೋದ್ಮೇಲೆ ಶಿಸ್ತು ಹೋಯಿತು;
ಅಪ್ಪಾಜಿ ಇದ್ದಾಗ ಎಲ್ಲವೂ ಸರಾಗವಾಗಿ ನಡೀತಿತ್ತು. ಈಗ ಎಲ್ಲವೂ ಸರಿಯಿಲ್ಲ. ಶಿಸ್ತು,ಸಂಯಮ. ಎಲ್ಲವನ್ನೂ ರಾಜ್​ಕುಮಾರ್ ಇದ್ದಾಗಲೇ ನೋಡಿದ್ದು. ಈಗ ಅದು ಕನ್ನಡ ಇಂಡಸ್ಟ್ರೀಯಲ್ಲಿ ಕಣ್ಮರೆಯಾಗಿದೆ ಅಂತ ರಾಜಕುಮಾರ್ ಅವರನ್ನ ಈ ವೇಳೆ ನೆನಪಿಸಿಕೊಂಡ್ರು ಶೃತಿ..

ಮಾಲಾಶ್ರೀ-ಸುಧಾರಾಣಿ ಬರಲೇಯಿಲ್ಲ;
ಮಾಲಾಶ್ರೀ ಹಾಗೂ ಸುಧಾರಾಣಿ ಕೂಡ ಕಾರ್ಯಕ್ರಮಕ್ಕೆ ಬರೋರಿದ್ದರು. ತಾಲೀಮು ಟೈಮ್ ನಲ್ಲಿಯೇ ಏನೋ ಆಯಿತು. ಅದೇನೂ ಅಂತ ಗೊತ್ತಿಲ್ಲ. ಆದ್ರೆ, ಆ ವೇಳೆಗೇನೆ  ಅವರು ಚೆನೈಗೆ ಬರೋಕೆ ಹಿಂಜರಿದರು. ಅದು ಒಂದು ರೀತಿ ಒಳ್ಳೆಯದೆ. ಅಲ್ಲಿಗೆ ಅವರು ಬಂದಿದ್ದರೇ ಕಂಡಿತ ಅವರಿಗೂ ಇನ್ನೂ ಬೇಸರವಾಗುತ್ತಿತ್ತು ಎಂಬುದನ್ನ ಹೇಳೋಕೆ ಮರೆಯಲಿಲ್ಲ ಶೃತಿ...

ಇವೆಲ್ಲ ಸೆಂಚುರಿ ಕಾರ್ಯಕ್ರಮದ ಸತ್ಯಗಳು. ಶೃತಿ ಹೇಳಿಕೊಂಡಿದ್ದಾರೆ. ಇನ್ನೂ ಕೆಲವ್ರು ಹೇಳಿಕೊಳ್ಳೋಕು ಹೋಗೋದಿಲ್ಲ. ಯಾಕೆಂದ್ರೆ, ಹಾಗೆ ಹೇಳಿದ್ರೆ ಕನ್ನಡಿಗರ ಮರೆಯಾದೇನೆ ಹೋಗುತ್ತದೆಂಬ ಸತ್ಯ ತಿಳಿದಂತಿದೆ. ಶೃತಿಯವ್ರಿಗೂ ಆ ಸತ್ಯ ಗೊತ್ತಿಲ್ಲ ಅನ್ಕೋಬೇಡಿ. ಬೇಸರದಿಂದಲೇ ಶೃತಿ ಎಲ್ಲವನ್ನೂ ಹೇಳಿಕೊಂಡಿದ್ದಾರೆ...

-ರೇವನ್ ಪಿ.ಜೇವೂರ್