ಸಿಂಗಲ್ ಡೈಲಾಗ್..ಮಿನಿಂಗ್ ಡಬಲ್. ‘ಅನುಭವ’ದ ಅನುಭವ ಹಂಚಿಕೊಂಡ ಕಾಶಿನಾಥ್

ಸಿಂಗಲ್ ಡೈಲಾಗ್..ಮಿನಿಂಗ್ ಡಬಲ್. ‘ಅನುಭವ’ದ ಅನುಭವ ಹಂಚಿಕೊಂಡ ಕಾಶಿನಾಥ್

ಸೂಪರ್​ ಸ್ಟಾರ್ ಉಪೇಂದ್ರ. ಮಾಡೊ ಎಲ್ಲ ಕೆಲಸವೂ ಸೂಪರ್. ಎತ್ತಿಕೊಳ್ಳುವ ವಿಷ್ಯ. ಪ್ರಚಲಿತ. ಪರಿಣಾಮಕಾರಿ. ವಿ.ಮನೋಹರ್. ಸಂಗೀತ ನಿರ್ದೇಶಕ್ರು. ಇವರ ಹಾಡುಗಳೂ ಈಗಲೂ ಕೇಳುಗರ ಮನದಲ್ಲಿ ಹೊಸ ಭಾವ ಮೂಡಿಸುತ್ತವೆ. ಇವರ ಗುರುಗಳಾದ ಕಾಶಿನಾಥ್ ಅವ್ರ ಚಿತ್ರಗಳ ಪರಿಣಾಮ ಕೇಳಬೇಕೆ. ಇವರ ಮೊದಲ ಅನುಭವವೇ ಸೂಪರ್. ಈ ಅನುವಭ ಕೇಳೋ ಅವಕಾಶವೂ ಸಿಕ್ಕಿತ್ತು. ಹಾಗೆ ಕೇಳ್ತಾ..ಕೇಳ್ತಾ ಹೋದಾಗ, ಸೂಪರ್ ಡೈರೆಕ್ಟರ್​ ಮಾತು ಎಲೆಲ್ಲಿಗೋ ಹೋಯಿತು. ಆದ್ರೂ, ಅನುವಭದ ಟ್ರ್ಯಾಕ್ ಬಿಡಲಿಲ್ಲ. ಹಾಗೆ ಕಾಶಿ ಅವರನ್ನ ಸಂದರ್ಶಿಸಿ ಬರೆದಿ ಒಂದಷ್ಟು ವಿಷ್ಯಗಳ ಸ್ಕ್ರಿಪ್ಟ್ ಇದೆ ಓದಿ..

ಕನ್ನಡದ ಮಟ್ಟಿಗೆ ಅನುಭವ 80 ರ ದಶಕದ ಹೊಸ ಸಂಚಲನ ಮೂಡಿಸಿದ ಸಿನಿಮಾ. ಸಂಪ್ರದಾಯಸ್ತರ ಕೆಂಗಣಿಗೆ ಗುರಿಯಾದ ಚಿತ್ರ. ಕಾಶಿನಾಥ್ ಎಂಬ ಬುದ್ದಿವಂತ ನಿದೇರ್ಶಕ್ರು ಪರಿಚಯವಾಗಿದ್ದು ಈ ಒಂದು ಹೊಸ ಅನುಭವದಿಂದಲೇ. ಆದ್ರೆ, ಇದನ್ನ ವಯಸ್ಕರ ಸಿನಿಮಾ ಎಂದೆ ಪ್ರಮಾಣಿಕರಿಸಲಾಗಿದೆ. ಸರಿ ಸುಮಾರಿ 30 ವರ್ಷದ ಬಳಿಕ ಈ ಚಿತ್ರ ಮಾತು ಈಗೇಕೆ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಕಾರಣವೂ ಇದೆ.

ಅನುಭವದ ಅನುಭವವೇ ಬೇರೆ. 1984 ರಲ್ಲಿ ಬಂದಿದ್ದ ಈ ಅನುಭವ ಚಿತ್ರ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಿತ್ತು. ದ್ವಂದ್ವಾರ್ಥದ ಸಂಭಾಷಣೆಯ ಸೋಂಕು ಇಲ್ಲದ ಕಾಲ್ಲದಲ್ಲಿ, ಇದು ಹಿಡಿಸಿದ ಗುಂಗು ಈಗಲೂ ಇದೆ. ಆದರೆ, ಇದು ಮಸಾಲಾ ಸಿನಿಮಾ ಎಂದೆ ಕರೆಸಿಕೊಳ್ಳುತ್ತದೆ.

ಚಿತ್ರಕ್ಕೆ ಅದೆಲ್ಲಿಂದ ಅನುಭವ ಎಂದು ಹೆಸ್ರು ಇಟ್ಟರೋ. ತೆರೆಗೆ ಬಂದ್ಮೇಲೆ ಚಿತ್ರ ವೀಕ್ಷಿಸಿದ ಪ್ರೇಕ್ಷಕ್ರು ಎಲ್ಲೆಡೆ ಅನುಭವದ ಅನುಭವ ಹಂಚಿಕೊಂಡ್ರು. ಕಾರಣ, ಚಿತ್ರದಲ್ಲಿ ಎಲಿಮೆಂಟ್ಸ ಹಾಗಿತ್ತು. ನಿರ್ದೇಶಕ ಕಾಶೀನಾಥ್ ಅವ್ರು ಅಂತಹ ವಿಷ್ಯವನ್ನೇ ಎತ್ತಿಕೊಂಡು ಬಂದಿದ್ದರು. ಅದರಲ್ಲೂ ಮೊದಲ ಕನ್ನಡ ಚಿತ್ರ ಬೇರೆ. ತುಂಬಾ ಅನುಭವಿಸಿ ನಿರ್ದೇಶಿಸಿದ್ದರು. ತಾವೇ ನಾಯಕರಾಗಿಯೂ ಬಂದು ಪ್ರೇಕ್ಷಕರಿಗೆ ಹೊಸದೊಂದು ಶಾಖ್ ಕೊಟ್ಟಿದ್ದರು.

ಅನುಭದಲ್ಲಿ ಇರೋದು ಎರಡನೇ ಎರಡು ಹಾಡು. ಅವುಗಳನ್ನ ಸಂಗೀತ ನಿರ್ದೇಶಕ ವಿ.ಮನೋಹರ್ ಬರೆದಿದ್ದಾರೆ. ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿದ್ದ ಮನೋಹರ್ ಈ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರು ಬರೆದ ಎರಡು ಹಾಡುಗಳಲ್ಲಿ ‘ಹೋದೆಯ ದೂರ ಓ ಜೊತೆಗಾರ’ ಎಂಬ ಗೀತೆ ಈಗಲೂ ಪ್ರಚಲಿತ.

ಅನುಭವದ ಹೊಸ ಅನುಭವ: ಅನುಭವ ಚಿತ್ರ ಹಲವರಿಗೆ ಹಲವು ಅನುಭವ ನೀಡಿದೆ. ಆದ್ರೆ, ಇದನ್ನ ಸೃಷ್ಠಿ ಮಾಡಿದ ನಿರ್ದೇಶಕ ಕಾಶಿನಾಥ್ ಇದರ ಬಗ್ಗೆ ಹೇಳೋಕೆ ಹೊರಟರೆ ಒಂದು ಪುಸ್ತಕ ಬರೆಯೋಕೆ ಬೇಕಾಗೋವಷ್ಟು ಅನುಭವದ ಬುದ್ದಿನೇ ತೆರೆದುಕೊಳ್ಳುತ್ತದೆ. ಅವುಗಳಲ್ಲಿಯ ಒಂದಷ್ಟು ಇಂಟ್ರಸ್ಟಿಂಗ್ ವಿಚಾರಗಳೂ ಇಲ್ಲಿವೆ.

ಅನುಭವ ಚಿತ್ರ ನಿರ್ದೇಶಕ ಕಾಶಿನಾಥ್ ಅವರಿಗೆ ಮೊದಲ ಚಿತ್ರ. ನಟನೆ ಮತ್ತು ನಿರ್ಮಾಣವೂ ಮೊದಲ್ಲು. ಇಷ್ಟೆಲ್ಲ ಮೊದಲ ಅನುಭವ ನೀಡಿದ ಈ ಚಿತ್ರ ನಿರ್ಮಾಣದ, ಅನುಭವದ ಕತೆನೂ ರೋಚಕ. ಅದೇನಪ್ಪ ಅಂದ್ರೆ, ಕತೆ ಮಾಡಿಕೊಂಡು ಸಿನಿಮಾ ಮಾಡಬೇಕು ಎಂದು ವಿತರಕರೊಬ್ಬರ ಕಡೆಗೆ ಹೋಗಿದ್ದರು ಕಾಶಿನಾಥ್. ಅಷ್ಟೇ ಪ್ರೀತಿಯಿಂದ ಕತೆಯನ್ನೂ ಕೇಳಿದ್ದರು ಅವ್ರು. ಅಷ್ಟೇ ಅಲ್ಲ. ಕತೆನೂ ಚೆನ್ನಾಗಿದೆ ಮಾಡೋಣ ಎಂದ್ರು. ಆದ್ರೆ, ಹಾಗೆ ಕತೆ ಕೇಳಿದ ಆ ವ್ಯಕ್ತಿ ಒಂದು ಪ್ರಶ್ನೆನೂ ಕೇಳಿದ್ದರು. ಸರಿ. ಚಿತ್ರಕ್ಕೆ ಹೀರೋ ಯಾರು ಅಂತ...? ಆಗ ಕಾಶಿಯವ್ರು ‘ನಾನೇ ಹೀರೋ ಅಂದ್ರತಂತೆ’. ಆ ಮೇಲೆ ಅಷ್ಟೆ. ಚಿತ್ರ ಮಾಡಿಕೊಂಡು ಬನ್ನಿ. ಬಳಿಕ ನೋಡೋ ಅಂದ್ರಂತೆ. ಆ ವಿತರಕ್ರು..

ಅನುಭವಕ್ಕೆ ಸೆನ್ಸಾರ್ ಸ್ಟ್ರೋಕ್; ಅನುಭವ ಚಿತ್ರ ನೈಜತೆಗೆ ತುಂಬಾ ಹತ್ತಿರವಾಗಿರೋ ಚಿತ್ರ. ಕತೆಯಲ್ಲಿ ಬರೋ ಪ್ರತಿ ಪಾತ್ರವೂ ನಮ್ಮಲ್ಲಿಯೇ ಇದ್ದವೇನೋ ಅನ್ನೋ ಮಟ್ಟಿಗೆ ಮನಸ್ಸಿನಲ್ಲಿ ಇಳಿಯುತ್ತವೆ. ಹಾಸ್ಯವೂ ಅಷ್ಟೇ, ನಾವು-ನೀವು ಮಾತನಾಡೋ ಶೈಲಿಯಲ್ಲಿಯೇ ಇವೆ. ಆದ್ರೆ, ಕುಂದಾಪುರದ ಮಂದಿ ಮಾತಾಡೋ ಮಾತುನ್ನ ಚಿತ್ರದ ಒಂದು ಪ್ರಮುಖ ಕ್ಯಾರೆಕ್ಟರ್​ನಿಂದ ಹೇಳಿಸಲಾಗಿದೆ. ಇಷ್ಟು ಬಿಟ್ಟರೆ, ಉತ್ಸಾಹಿ ಯುವಕ. ಬಾಲ್ಯದ ಬದುಕಿನಿಂದ ಹೊರಗಡೆ ಬರದೇ ಇರೋ ಹುಡುಗಿ. ಇವರ ಮದುವೆಯಾದ್ರೆ ಏನ್​ ಆಗುತ್ತದೆಂಬುದು ಕತೆ. ಇದನ್ನ ನೋಡಿದ ಸೆನ್ಸಾರ್​ ಆಫೀಸರ್ ಕಾಶಿ ಅವರಿಗೆ ಹೊಗಳದೋದು ದೂರ ಉಳಿಯಿತು. ಬೈದದ್ದೆ ಹೆಚ್ಚು. ಸುಮಾರು 5 ಸಾವಿರ ಸಿನಿಮಾ ನೋಡಿದ್ದೇನೆ. ಇಲ್ಲಿವರೆಗೂ ಇಷ್ಟು ಕೆಟ್ಟ ಅನುಭವ ಆಗಿಲ್ಲ ಅಂದ್ರು. ಕಾರಣ. ಚಿತ್ರದಲ್ಲಿ ಸೆನ್ಸಾರ್ ಆಫೀಸರ್ ಹೋಲುವ ಒಂದು ಕ್ಯಾರೆಕ್ಟರೂ ಇತ್ತು. ಇದಕ್ಕೆನೆ ಸೆನ್ಸಾರ್ ಆಫೀಸರ್ ಕೆಂಡಾಮಂಡಲವಾದ್ರೂ ಅನೋ ಅನುಭವ ಹಂಚಿಕೊಂಡ್ರು ಕಾಶಿ.

ಆದ್ರೆ, ಅನುಭವ ಸುಮ್ಮನೆ ಹೊಳೆದ ಕತೆಯೆಲ್ಲ ಬಿಡಿ. ಸತ್ಯ ಜೀತ್​ ರೇ ಅವ್ರ ಬಾಲಿಕಾ ವಧು ಚಿತ್ರದ ಸ್ಪೂರ್ತಿನೂ ಇದೆ. ಜೊತೆಗೆ ಕಾಶಿನಾಥ್ ಅವ್ರ ಅಮ್ಮ ಒಮ್ಮೆ ಒಂದು ಕತೆ ಹೇಳಿದ್ದರು. ಅದರ ಸ್ಪೂರ್ತಿಯಿಂದಲೂ ಅನುಭವ ಚಿತ್ರದ ಕತೆ ಮಾಡಿಕೊಂಡಿದ್ದರು ಕಾಶಿನಾಥ್. ಆದ್ರೆ, ಕಾಶಿ ಅವ್ರ ಅಮ್ಮ ಹೇಳಿದ ಆ ಕತೇ ಯಾವುದು..? ಅಂತೀರಿ. ಫಸ್ಟ್ ನೈಟ್​ ಕತೆ. ಅದು ತಮ್ಮ ಫಸ್ಟ್ ನೈಟ್​ ಕತೆ ಅಲ್ಲವೇ ಅಲ್ಲ. ಸಂಬಂಧಿಗಳ ಮನೆಯಲ್ಲಿ ನಡೆದ ಘಟನೆ. ಹೊಸದಾಗಿ ಮದುವೆಯಾದವ್ರನ್ನ ಪ್ರಸ್ತದ ರೂಮಿಗೆ ಕಳಿಸಿದ್ದಾರೆ. ಅದಾಗಿ ಕೆಲವೇ ನಿಮಿಷದಲ್ಲಿ ಹುಡುಗಿ ಚೀರಿಕೊಂಡು ಓಡಿ ಬಂದಿದ್ದಾಳೆ. ಇದರಿಂದ ಸಿಟ್ಟಾದ ಆ ಉತ್ಸಾಹಿ ಯುವಕ, ನನಗೆ ಹೆಂಡ್ತಿನೇ ಬೇಡ ಅಂದಿದ್ದಾರೆ. ಆ ಮೇಲೆ ಸಂಬಾಳಿಸಿ ಕಳಿಸಿ, ಕೆಟ್ಟು ಹೋಗಲಿದ್ದ ಸಂಸಾರವನ್ನ ಅವತ್ತೇ ಸರಿ ಮಾಡಿದ್ದು ಆಗಿದೆ. ಇದೇ ಕಥೆಯನ್ನ ಇಟ್ಟುಕೊಂಡು ಅನುಭವದ ಕತೆಯನ್ನ ಹೆಣೆದಿದ್ದರು ಕಾಶಿನಾಥ್..

ಕಾಶಿಯವರ ಇನ್ನೊಂದು ಕ್ವಾಲಿಟಿ ತುಂಬಾ ಇಷ್ಟವಾಗುತ್ತದೆ. ತಮ್ಮ ಚಿತ್ರ ಜೀವನದ ಅಷ್ಟೂ ಸಿನಿಮಾಗಳಲ್ಲಿ ಕಾಶಿ ಮಾಡಿರೋ ಚಿತ್ರಗಳು ಲೋ ಬಜೆಟ್. ಲೋ ಬಜೆಟ್ ಆದ್ರೂ, ಕತೆಗೆ ಹೆಚ್ಚು ಒತ್ತು ಕೊಡೋದು ಕಾಶಿ ಸ್ಪೆಷಾಲಿಟಿ. ತಮ್ಮ ಸುತ್ತ-ಮುತ್ತಲು ಕಾಣೋ ವ್ಯಕ್ತಿಗಳನ್ನೇ ಕ್ಯಾರೆಕ್ಟರ್​ ಆಗಿ ತೆರೆ ಮೇಲೆ ತರೋದು ಕಾಶಿ ಸದಾ ಮಾಡೋ ಒಂದು ವಿಶೇಷ ಜಾಣ್ಮೆ. ಕತೆಯಲ್ಲೂ ಅದೇ ನೈಜತೆಯನ್ನ ಮುಂದುವರೆಸಿಕೊಂಡು ಬಂದಿರೋ ಕಾಶಿಯವ್ರು. ಅನುಭವ ಚಿತ್ರದ ಅಷ್ಟೂ ಕ್ಯಾರೆಕ್ಟರ್​ಗಳನ್ನ ಹಾಗೇ ಡಿಸೈನ್​ ಮಾಡಿದ್ದಾರೆ. ಅದಕ್ಕೇನೆ ಅನುಭವ ನೋಡುಗರಿಗೆ ತುಂಬಾ ರಿಯಲಿಸ್ಟಿಕ್ ಅನಿಸುತ್ತದೆ.

ಕಾಶಿನಾಥ್ ಅವ್ರು ಅನುಭವ ಚಿತ್ರ ಕೇವಲ ಸುಮಾರು 3 ಲಕ್ಷದಲ್ಲಿ ನಿರ್ಮಾಣ ಮಾಡಿದ್ದರು. ಅಪ್ಪ ಕೊಟ್ಟ ದುಡ್ಡಿನಲ್ಲಿಯೇ ಸಿನಿಮಾ ನಿರ್ಮಿಸಿದ್ದ ಕಾಶಿನಾಥ್ ಅವ್ರು, ಚಿತ್ರ ತೆರೆಗೆ ಬಂದ್ಮೇಲೆ ದುಡ್ಡು ಮಾಡಿಕೊಂಡ್ರು. ಅಷ್ಟೇ ಅಲ್ಲ. ಹಿಂದಿಯಲ್ಲೂ ಇದು ‘ಅನುಭವ’ ಎಂದೇ ನಿರ್ಮಾಣಗೊಂಡಿತ್ತು. ಆದ್ರೆ, ಕಾಶಿನಾಥ್ ಇಲ್ಲಿ ಡೈರೆಕ್ಷನ್​ ಹೊಣೆ ಮಾತ್ರ ಹೊತ್ತುಕೊಂಡಿದ್ದರು. ನಾಯಕರಾಗಿ ಶೇಖರ್ ಸುಮಾನ್, ಕಾಶಿನಾಥ್ ಪಾತ್ರ ಮಾಡಿದ್ದರು. ಅಭಿನಯ ಅವರ ಪಾತ್ರವನ್ನ ಅಲ್ಲಿ ಪದ್ಮಿನಿ ಕೋಲಾಪುರಿ ನಿರ್ವಹಿಸಿದ್ದರು. ಇದರ ಅನುಭವವೂ ಸೂಪರ್...

ಈಗ ಕನ್ನಡದ ಅನುಭವ ಇದೇ 29 ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಕೆಲಸ ಮಾಡಿದ್ದ, ಮೇಕಪ್​ ಕಲಾವಿದ ಬಸವರಾಜು ಅವ್ರು ಚಿತ್ರವನ್ನ ವಿತರಿಸುತ್ತಿದ್ದಾರೆ. ಬೆಂಗಳೂರಿನ ಸಂತೋಷ ಥಿಯೇಟರ್​ ಸೇರಿದಂತೆ ಕರ್ನಾಟಕದ ಪ್ರಮುಖ ನಗರದಲ್ಲಿ ಅನುಭವ, ಸಿನಿಮಾ ಸ್ಕೋಪ್​ನಲ್ಲಿ ಬರ್ತಾಯಿದೆ. ಆದರೆ, ಇದರ ರೀ..ರಿಲೀಸ್ ಹಿಂದಿನ ಸತ್ಯ ಸಿಂಪಲ್​ ಆಗಿದೆ. ಇತ್ತೀಚಿಗೆ ಡಬಲ್ ಮೀನಿಂಗ್ ಡೈಲಾಗ್​ಗಳಿಂದ ಸುದ್ದಿ ಮಾಡಿದ್ದ ಸಿಂಪಲ್ಲ್ ಆಗ ಒಂದ ಲವ್​ ಸ್ಟೋರಿ ಸಿನಿಮಾ ಹೊಸ ಸಂಚಲನ ಮೂಡಿಸಿದೆ. ಡಬಲ್​ ಮೀನಿಂಗ್ ಥರದ ಡೈಲಾಗ್​ಗಳಿಗೆ ಜನ ಕಂಡಿತ ನಗ್ತಾರೆ. ಚಿತ್ರ ಗೆಲ್ಲಿಸುತ್ತಾರೆ. ಅದೇ ಒಂದು ಐಡಿಯಾದಿಂದ ಅನುಭವವನ್ನ ಮತ್ತೆ ರಿಲೀಸ್ ಮಾಡೋ ಪ್ಲಾನ್ ಹಾಕಿದ್ದಾರೆ ಬಸವರಾಜು. 35 ಎಂಎಂನಲ್ಲಿದ್ದ ಅನುಭವ ಈ ಮೂಲಕ ಸಿನಿಮಾ ಸ್ಕೋಪ್ ರೂಪ ಪಡೆದಿದೆ. ಈ ಹೊಸ ರೂಪದಲ್ಲಿ ತಮ್ಮದೇ ಅನುಭವ ಚಿತ್ರವನ್ನ ನೋಡಬೇಕೆಂದು ಸ್ವತ: ಕಾಶಿನಾಥ್ ಅವ್ರೂ ತುಂಬಾ ಉತ್ಸುಕರಾಗಿದ್ದಾರೆ.

-ರೇವನ್​.ಪಿ.ಜೇವೂರ್