ಹಾಡು ಹಳೇಯದು..ದೃಶ್ಯ ನವನವೀನ...!

ಹಾಡು ಹಳೇಯದು..ದೃಶ್ಯ ನವನವೀನ...!

ಮತ್ತೆ ಮಿಡಿದ ತಂನಂ ಹಾಡು..! ಅಭಿನೇತ್ರಿ ಚಿತ್ರದಲ್ಲಿ ಎರಡು ಕನಸು ಸಾಂಗ್.ರಿಮಿಕ್ಸ್ ಅಲ್ಲ....ರೀಅರೇಂಜ್​ಮೆಂಟ್.ಮನೋಮೂರ್ತಿ ಸಂಗೀತದಲ್ಲಿ ತಂನಂ. ಆಗ ಜಾನಕಿ-ಪಿಬಿಎಸ್​-ಈಗ ಶಾನ್-ಶ್ರೇಯಾ
-----
ಹೃದಯ ಬಡಿಯೋದು ಲಬ್ ಡಬ್ ಅಂತ. ಆದರೆ, ಚಿತ್ರ ಸಾಹಿತಿ ಚಿ.ಉದಯ್​ಶಂಕರ್, 1974 ರಲ್ಲಿ ತಂನಂ ಅಂತ ಬರೆದ್ರು. ರಾಜನ್-ನಾಗೇಂದ್ರ ಒಳ್ಳೆ ಸಾಲುಗಳಿಗೆ ಅತ್ತುತ್ತಮ ಸಂಗೀತ ಕೊಟ್ರು. ಎರಡು ಕನಸು ಚಿತ್ರದಲ್ಲಿ ಬಳಕೆಯಾದ ಈ ಗೀತೆಗೆ ಡಾಕ್ಟರ್ ರಾಜ್​ಹಾಗೂ ಕಲ್ಪನಾ ಅಭಿನಯಸಿದರು.ಆಗ ಇದು ದಾಂಪತ್ಯ ಗೀಥೆಯ ಸವಿ ನೆನಪಿನ ತನ್ಮಯತೆಯ ಗೀತೆ ಆಯಿತು. ಈಗ ಇದೇ ಹಾಡಿನ ಬಗ್ಗೆ ಒಂದಷ್ಟು ಹೊಸ ವಿಷ್ಯ ಹೇಳೋದಿದೆ. ಬನ್ನಿ....ಏನೂ ಅಂತ ಹೇಳ್ತಿನಿ...

ಎರಡು ಕನಸು. ಎದೆಯಲ್ಲಿ ಪ್ರೀತಿಸಿದ ಹುಡುಗಿ ನೆನಪು. ಮದುವೆ ಆದ ಹುಡುಗಿಯ ಜೊತೆಗೆ ಸಂಸಾರ.  ಟಚ್ಚೇ ಮಾಡದೇ ಜೀವನ ಸಾಗಿಸೋ ಡಾಕ್ಟರ್ ರಾಜ್ ಪಾತ್ರ. ಪತಿಯ ಒಂದು ನೋಟಕ್ಕೆ,ಒಂದೇ ಒಂದು ಸ್ಪರ್ಶಕ್ಕೆ ಹಾತೊರೆಯೋ ಪತ್ನಿಪಾತ್ರಧಾರಿ ಕಲ್ಪನಾ...ಇವರ ಮೇಲೆ ಈ ಗೀತೆ ಚಿತ್ರಿತವಾಗಿತ್ತು. ಆದರೆ, ಇದು ಕಲ್ಪನಾ ಕಾಣೋ ಡ್ರೀಮ್ ಸಾಂಗ್...

ಎರಡು ಕನಸು ಚಿತ್ರದ ವಿಶೇಷತೆಯಲ್ಲಿ ಎಲ್ಲವೂ ಎರಡೆರಡೇ ಇದೆ. ನಿರ್ದೇಶಕರಲ್ಲಿ ಈ ಚಿತ್ರಕ್ಕೆ ದೊರೆ-ಭಗವಾನ್  ಇಬ್ಬರಾದರೆ, ಸಂಗೀತದಲ್ಲೂ ಜೋಡಿಯಿದೆ. ರಾಜನ್ ಮತ್ತು ನಾಗೇಂದ್ರ. ಇನ್ನು ಗೀತ ರಚನೆಯ ವಿಷ್ಯಕ್ಕೆ ಬಂದ್ರೆ, ಚಿ.ಉದಯ್ ಶಂಕರ್​ ಅವ್ರು ಸರಳ ಪದಗಳನ್ನೇ ಬಳಕೆ ಮಾಡಿದ್ದಾರೆ. ಆದರೆ, ಪ್ರತಿ ಪದವೂ ಅರ್ಥಗರ್ಭಿತ. ಅಷ್ಟೇ ಹೃಯಕ್ಕೆ ಇಳಿಯುತ್ತವೆ....

ಇದೇ ಹಾಡನ್ನ ಮತ್ತೆ ಕೇಳೋ ಅವಕಾಶ ಬಂದಿದೆ. ಕೇಳಬೇಕು ಅನ್ನೋರು ಯುಟ್ಯೂಬ್​ಗೆ ಹೋಗಬಹುದು ಅಂತ ನೀವು ಕೇಳಬಹುದು. ಆದರೆ, ಇದೇ ಕ್ಲಾಸಿಕ್ ಸಾಂಗ್ ಮತ್ತೊಮ್ಮೆ ರೀಅರೇಂಜ್ ಆಗಿದೆ. ಸಾಹಿತ್ಯದಲ್ಲಿ ನೋ ಚೇಂಜಸ್. ಕಲ್ಪನಾ ಪಾತ್ರಕ್ಕೆ ಪೂಜಾ ಬಂದಿದ್ದಾರೆ. ರಾಜ್ ಪಾತ್ರವನ್ನ ಶ್ರೀನಗರ ಕಿಟ್ಟಿ ನಿಭಾಯಿಸಿದ್ದಾರೆ. ಇದರ ಚಿತ್ರ ರೂಪ...ನೂತನ..ವಿನೂತನ...

ಅಭಿನೇತ್ರಿ ಚಿತ್ರಕ್ಕೆ ಈ ಗೀತೆ ಬಳಸಲಾಗಿದೆ. ಸಂಗೀತ ನಿರ್ದೇಶಕ ಮನೋ ಮೂರ್ತಿ ಅದೇ ಸಂಗೀತವನ್ನ ರೀಅರೇಂಜ್ ಮಾಡಿದ್ದಾರೆ. ಚಿ.ಉದಯ್ ಶಂಕರ್​ ಅವರ ರಚನೆಗೇನೆ, ಇಲ್ಲಿ ಬಾಲಿವುಡ್​ ಗಾಯರಾದ ಶಾನ್ ಮತ್ತು ಶ್ರೇಯಾ ಧ್ವನಿಯಾಗಿದ್ದಾರೆ. ಹಾಡು ಸಖತ್ ಆಗಿದೆ. ಚಿತ್ರೀಕರಣವೂ ಕೊಂಚ ಹಾಟ್..ಹಾಟ್ ಆಗಿದೆ..

ಒಳ್ಳೆ ಹಾಡು ಅಂತಲೇ ನಿರ್ದೇಶಕ ಸತೀಶ್ ಪ್ರಧಾನ್ ಈ ಇದೇ ಗೀತೆಯನ್ನ ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಮಹತ್ವದ ಸನ್ನಿವೇಶದಲ್ಲಿಯೇ ಬರೋ ಈ ಹಾಡು ಕತೆಗೆ ಪೂರಕವಾಗಿಯೂ ಇದೆ. ಆದರೆ, ಇದು ಸಿನಿಮಾದಲ್ಲಿ ಬರೋ ಒಂದು ಸಿನಿಮಾ ಸಾಂಗ್...ಇಷ್ಟು ಬಿಟ್ಟರೇ, ಸದ್ಯ ಚಿತ್ರ ತಂಡ ಈ ಬಗ್ಗೆ ಏನೂ ಬಿಟ್ಟುಕೊಟ್ಟಿಲ್ಲ. ಬದಲಾಗಿ ಈ ಹಾಡಿನ ಗುಂಗು ಎಲ್ಲರಿಗೂ ಹಿಡಿಸೋಕೆ ಮುಂದಾಗಿದೆ....

-ರೇವನ್ ಪಿ.ಜೇವೂರ್