ಹುಚ್ಚು ಮನಸ್ಸೇ..ಭಾಗ 4 (ಅಂತಿಮ ಭಾಗ‌)

ಹುಚ್ಚು ಮನಸ್ಸೇ..ಭಾಗ 4 (ಅಂತಿಮ ಭಾಗ‌)

ಹುಚ್ಚು ಮನಸ್ಸೇ..ಭಾಗ 4 (ಅಂತಿಮ ಭಾಗ‌)      

   ಅಜೇಯು ಒಂದು ನಿಮಿಷ ಯೋಚನೆ  ಮಾಡಿ ಆಮೇಲೆ  ರೀಸಿವ್ ಮಾಡಿದ್ದ ಕಾಲ್ ನಾ .ಆ ಕಡೆಯಿಂದ ನಾನು ರಮೇಶ ಅಂತ ಹೇಳಿದರು.ಅಜೇಯುಗೆ ರಮೇಶ ಅಂತ ಹೆಸರಿನ  ಯಾರು ಸ್ನೇಹಿತರಿರಲಿಲ್ಲ. ಆಗಾಗಿ ಅವನು ನನಗೆ ರಮೇಶ ಅನ್ನೋ  ಹೆಸರಿನವರು ಯಾರು ಪರಿಚಯವಿಲ್ಲ ಎಂದು ಹೇಳಿದನು.ರಮೇಶವು ನಾನು ಸುನೀತಾಳ ಸ್ನೇಹಿತ,ನಿಮ್ಮ ಜೊತೆ  ಸ್ವಲ್ಪ ಮಾತಾಡೊದ್ದಿತ್ತು ಅಂತ ಹೇಳಿದ ಅಜೇಯಗೆ.ಅದಕ್ಕೆ ಅಜೇಯು ಓಕೆ ಏನು  ಹೇಳಿ ರಮೇಶ ಅಂತ ಹೇಳಿದನು. ರಮೇಶವು ನಾನು ಸುನೀತಾ ತುಂಬಾ ದಿನಗಳಿಂದ ಪ್ರೀತಿಸುತ್ತಾಯಿದ್ದೀವಿ  ಅಂತ ಹೇಳಿದ.
          ಅಜೇಯಗೆ ಅದನ್ನು  ಕೇಳಿದ ತಕ್ಷಣ ಪುಲ್ ಶಾಕ್ ಆಯಿತ್ತು,ಮಾತೇ ಬರಲಿಲ್ಲ, ಸುಮ್ಮನೆ  ರಮೇಶ ಹೇಳಿದನು ಕೇಳುತ್ತಿದ್ದ. ರಮೇಶವು ಅವಳು ಕೂಡ ನನ್ನ ತುಂಬಾ ಪ್ರೀತಿಸುತ್ತಿದಾಳೆ,ನಿನ್ನ ಬಗ್ಗೆ  ಎಲ್ಲವೂ ಹೇಳಿದಾಳೆ ನನಗೆ ಅಂತ ಹೇಳಿದ.ಅಜೇಯಗೆ ರಮೇಶ ಹೇಳಿರುವ ಮಾತು ಕೇಳಿ ಆಶ್ಚರ್ಯ ವಾಗತ್ತಯಿತ್ತು,ಅವನು ಹೇಳಿದನು ನಂಬಲಾಗುತ್ತಿರಲಿಲ್ಲ. ಓಕೆ ರಮೇಶ ಏನು  ಹೇಳಿದಾಳೆ ನನ್ನ ಬಗ್ಗೆ  ಹೇಳಿ  ,ರಮೇಶವು ನೀವಿಬ್ಬರೂ ಪ್ರೀತಿ ಮಾಡಿರೋ  ವಿಷಯ,ನೀನು  ಅವಳಿಗೆ ನೀಡಿರುವ ಗೀಪ್ಟ್ ಗಳು,ಗ್ರೀಟಿಂಗ್ ಕಾಡ್ರಗಳು ಎಲ್ಲಾವನ್ನು ತೋರಿಸಿದಾಳೆ ನನಗೆ ಅಂತ ಹೇಳಿದನು.ಅಜೇಯ ಆಶ್ಚರ್ಯದ ಮೇಲೆ ಆಶ್ಚರ್ಯ ವಾಗುತ್ತಿತ್ತು ಅವನು ಹೇಳಿದನು  ಕೇಳಿ. ಅಜೇಯು ನಾವು  ಇವಾಗಲೂ ಪ್ರೀತಿ ಮಾಡುತ್ತಿದಿವಿ,ನಾವು ಏನೂ  ದೂರವಾಗಿಲ್ಲ,ಆದರೆ ಅವಳು ಯಾಕೆ ನಿನಗೆ ಹಾಗೆ ಹೇಳಿದಾಳೆ ಅಂತ ನನಗೆ ಅಥ೯ವಾಗುತ್ತಿಲ್ಲ ರಮೇಶ ಅಂತ ಹೇಳಿದ.ರಮೇಶವು ಸುನೀತಾಳು ನನ್ನ ಬಿಟ್ಟು  ಮತ್ತೆ  ಯಾರನು ಪ್ರೀತಿಸಿಲ್ಲ ವಂತೆ, ನೀನು  ತುಂಬಾ ಒತ್ತಡ ಮಾಡಿದ್ದಕ್ಕೆ  ನಿನ್ನ ಪ್ರೀತಿಸಿದ್ದಾಳೆಂತೆ ಅಜೇಯಗೆ ಹೇಳಿದ.ಅಜೇಯು ದಯವಿಟ್ಟು  ಸುಳ್ಳು  ಹೇಳ ಬೇಡಿ, ಸುನೀತಾಳ ಬಗ್ಗೆ  ನನಗೆ ಚೆನ್ನಾಗಿ ಗೊತ್ತು  ಅವಳು ನನಗೆ  ಹೀಗೆ  ಮೋಸ ಮಾಡೋದಿಲ್ಲ ಸಾಕು ನಿಲ್ಲಿಸಿ  ನಿಮ್ಮ ಸುಳ್ಳು  ಪುರಾಣವನ್ನು  ರಮೇಶ ಅಂತ ಹೇಳಿದ.ರಮೇಶವು ನಾನು ಸುಳ್ಳು  ಹೇಳುತ್ತಾಯಿಲ್ಲ ಅಜೇಯ ಅವಳು ನನಗೆ ಮಾಡಿದ ಮೆಸೇಜ್ ಗಳನ್ನು  ನಿಮ್ಮಗೆ ಕಳುಹಿಸುತ್ತಿನಿ ಒಂದು ಸಾರಿ ಆ ಮೆಸೇಜ್  ಗಳನ್ನು  ಓದ್ದಿ  ನಿಮಗೆ  ಅಥ೯ವಾಗತ್ತೆ ಎಲ್ಲವೂ. ಅಜೇಯು  ಆ ಮೆಸೇಜ್ ಗಳನ್ನು  ಓದಿದಾಗ ಸುನೀತಾಳು ತನಗೆ  ಪ್ರೀತಿಸಲು ಶುರು ಮಾಡಿದ್ದಾಗ ಹೇಳಿದ ಎಲ್ಲಾ  ಮಾತುಗಳು repeat ಆದ್ದಾಗಿತ್ತು.ಅವನಿಗೆ ಸುನೀತಾ ಏನು  ಹೇಳಿದಳು ಅದನ್ನೇ  ರಮೇಶಗು ಹೇಳಿದಳು.ಅಜೇಯಗೆ ಇವಾಗ ರಮೇಶ ಹೇಳಿದ ಮಾತುಗಳ ಮೇಲೆ ನಂಬಿಕೆ ಬರೋಕೆ  ಶುರುವಾಯಿತು. ಅಜೇಯಗೆ ಸುನೀತಾಳು ತನಗೇ  ಇಷ್ಟು  ದಿನಗಳಿಂದ ಯಾಕೆ avoid ಮಾಡುತ್ತಿದ್ದಳು ಅಥ೯ವಾಯಿತ್ತು. 
                    ರಮೇಶಹೇಳಿದ ಎಲ್ಲವನ್ನೂ  ಕೇಳಿದ ಅಜೇಯು ಕಡೆಗೆ ಒಂದು ಪ್ರಶ್ನೆಯನ್ನು ಕೇಳಿದ ರಮೇಶಗೆ ಅವಳು  ಹೇಳಿದನು  ನೀನು ಹೇಗೆ  ನಂಬಿದೆ, ಅವಳು ನನಗೆ ನಿಜವಾಗಿಯೂ  ಪ್ರೀತಿ ಮಾಡಿದಾಳೆ ಅದನ್ನು ಸಾಬೀತು  ಮಾಡಲು  ನನ್ನ ಹತ್ತಿರ ತುಂಬಾ ಸಾಕ್ಷಿಗಳು ಇದ್ದಾವೆ ಆದ್ದರೆ ಅದರ ಅವಶ್ಯಕತೆ  ನನಗಿಲ್ಲ ಬಿಡಿ ರಮೇಶ.ನನ್ನ ಹತ್ತಿರವು ಅವಳು ಮಾಡಿರುವ ಮೆಸೇಜ್ ಗಳು,ಕೊಟ್ಟಿರುವ ಗಿಪ್ಟಗಳು,  ಬರೆದಿರುವ ಪ್ರೇಮ ಪತ್ರಗಳು  ಎಲ್ಲವೂ ಇದ್ದಾವೆ ರಮೇಶ.ರಮೇಶನ ಹತ್ತಿರ ಅಜೇಯ ಪ್ರಶ್ನೆಗೆ ಯಾವ ಉತ್ತರವಿರಲಿಲ್ಲ, ಅದಕ್ಕೆ ಸುಮ್ಮನಾದನು.  ಅಜೇಯು ಸುನೀತಾಳು ನಿನಗೆ  ನಿಜವಾಗಲೂ  ಪ್ರೀತಿಸುತ್ತಿದ್ದಾಳೆ ಅಂತ ಇನ್ನೊಮ್ಮೆ  ಖಚಿತ ಪಡಿಸಿಕೊಳ್ಳು  ರಮೇಶ.ಅಜೇಯು ಅವಳು ನನಗೆ ಯಾಕೆ  ಮೋಸ ಮಾಡಿದಳು  ನನಗೆ ಅಥ೯ವಾಗಲಿಲ್ಲ ರಮೇಶ . ನೀವಿಬ್ಬರೂ  ಆದ್ದರು ಚೆನ್ನಾಗಿರಿ ರಮೇಶ ಅಂತ ಹೇಳಿದ ಕಷ್ಣದಲಿಯೇ,ಅಜೇಯಗೆ ದುಖಃ ತಡೆಯೋಕೆ  ಆಗದೇ ಅಳತೊಡಗಿದಿನು.ರಮೇಶವು ಎಷ್ಟು  ಸಮಾಧಾನ ಮಾಡಿದರು  ಅಜೇಯಗೆ ಅಳು ನಿಲ್ಲಲಿಲ್ಲ. ಕಡೆಗೆ ಅಜೇಯು ಅಳುತ್ತಾ  ಧನ್ಯವಾದಗಳು ರಮೇಶ,ನಾನು ಮತ್ತೆ ನಿಮ್ಮಿಬ್ಬರ ಜೀವನದಲ್ಲಿ ಮತ್ತೆ ಬರೋದಿಲ್ಲ ,  ನೀವಿಬ್ಬರೂ  ಚೆನ್ನಾಗಿರಿ,gud bye ರಮೇಶ ಅಂತ ಹೇಳಿ ಕಾಲ್ ಕಟ್ ಮಾಡಿದಿನು. ಅಜೇಯು ಕಾಲ್ ಕಟ್ ಆದ್ದ ಮೇಲೆ ತನ್ನ ಹುಚ್ಚು  ಮನಸ್ಸನು ಬೈಯುತ್ತಾಯಿದ್ದನು,ಇದ್ದಕ್ಕೆಲ್ಲ ನೀನೆ  ಕಾರಣ ಎಂದು.ಸ್ವಲ್ಪ ಸಮಯದ ನಂತರ ಅವನ ಹುಚ್ಚು ಮನಸ್ಸು  ಮತ್ತೆ ಸುಮ್ಮನೀರಲ್ಲಿಲ,ಅವಳು ಯಾಕೆ ಹೀಗೆ ಮಾಡಿದಳು,ನಾನು ಏನು  ತಪ್ಪು ಮಾಡಿದೆ ಕೇಳು ಅಂತ ಅವನಿಗೆ ಒತ್ತಾಯಿಸುತ್ತಿತ್ತು.ಅಜೇಯು ಸುನೀತಾಳಿಗೆ  ಕಾಲ್ ಮಾಡಿದ, ಸುನೀತಾಳು ರಿಸೀವ್ ಮಾಡಿದ ತಕ್ಷಣವೇ ಅಜೇಯ ಮೊದಲ ಪ್ರಶ್ನೆಯೆ ನಾನು ಏನು  ತಪ್ಪು  ಮಾಡಿದೆ?, ನನಗೆ ಯಾಕೆ ನೀನು  ಮೋಸ ಮಾಡದೇ? ಅಂತ ಕೇಳದ,

          ಸುನೀತಾಳಿಗೆ ಶಾಕ್ ಆಯಿತ್ತು.ಯಾಕೆ ಏನಾಯಿತು ಅಜೇಯು?  ಅಂತ ಕೇಳಿದಳು. ಅಜೇಯ ನನಗೆ ರಮೇಶವು ಎಲ್ಲವನ್ನೂ  ಹೇಳಿದಾನೆ, ನಿನ್ನ ಮೆಸೇಜ್ ಗಳನ್ನು  ತೋರಿಸಿದಾನೆ .ಅದನ್ನು  ಕೇಳಿದ ಸುನೀತಾಳಿಗೆ ಮಾತೇ ಬರಲಿಲ್ಲ,ಮೌನವಾಗಿ ಬಿಟ್ಟಳು. ಅಜೇಯು ನಾನು ಇಷ್ಟವಿರಲಿಲ್ಲ ಅಂದರೆ ನನಗೆ ನೇರವಾಗಿ  ಹೇಳಬಹುದಿತ್ತಲ್ಲ.ನನ್ನ ಒತ್ತಾಯದಿಂದ ನೀನು ನನ್ನನು ಪ್ರೀತಿಸಿದ್ದಿಯಾ?.,ಇಷ್ಟು  ದಿನ ನನ್ನ ಜೊತೆ ಪ್ರೀತಿಸುವಾಗೆ ನಾಟಕವ ವಾಡಿದ್ದಿಯಾ?.ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳದ.ಸುನೀತಾಳಿಂದ ಯಾವ ಉತ್ತರವು ಬರಲಿಲ್ಲ .ಅವಳು ಮೌನವಾಗಿದಳು.ಅಜೇಯು ಕಡೆಯದಾಗಿ ಅಳುತ್ತಾ ನೀನು ಸ್ವಲ್ಪನು ನನಗೆ ಪ್ರೀತಿಸಿಲ್ಲವೆ ಅಂತ ಕೇಳದ.ಸುನೀತಾಳು ಕಡೆಗೆ ಮೌನ ಮುರಿದಳು,ಅವನ ನೋವು ಕೇಳಿದ ಅವಳು ಅಳುತ್ತಾ ದಯವಿಟ್ಟು  ನನ್ನ ಕ್ಷಮಿಸಿ ಬಿಡು,ನಾನು ನಿನ್ನ ತುಂಬಾ ಮೋಸ ಮಾಡಿದೀನಿ, ಅವತ್ತು ನನ್ನ ಅಣ್ಣನ ಮೋಬ್ಯಲ್ ನಿಂದ ನಾನೆ ನೀನಗೆ ಮೇಸೇಜ್ ಮಾಡಿದ್ದು,ದಯವಿಟ್ಟು ಅವನಿಗೆ ಅದರ ಬಗ್ಗೆ ಏನು 

ಕೇಳಬೇಡ‌.ಅದಕ್ಕಿಂತ ಹೆಚ್ಚು  ಏನು  ಹೇಳೋಕ್ಕೆ ಆಗೋದಿಲ್ಲ,ಅಂತ ಹೇಳಿದಳು.ಅಜೇಯು ಕಡೆಯದಾಗಿ  ನಾನು ಮಾಡಿದ ತಪ್ಪು  ಏನು ಹೇಳಿಬಿಡು  ಸಾಕು ಅಂತ ಕೇಳಿದ.ಸುನೀತಾಳು ನಿನ್ನ ಯಾವ ಪ್ರಶ್ನೆಗು ನನ್ನ ಹತ್ತಿರ ಉತ್ತರವಿಲ್ಲ, ನನ್ನ ಕ್ಷಮಿಸಿ ಅಂತ ಹೇಳಿದಳು.ಅಜೇಯು ಕಡೆಯದಾಗಿ ನನಗೆ ಇಷ್ಟು  ದಿನ ಪ್ರೀತಿಸಿದಕ್ಕೆ ಅಥವಾ ಪ್ರೀತಿಸುವ ಹಾಗೆ ನಾಟಕ ಮಾಡಿದಕ್ಕೆ  ಧನ್ಯವಾದಗಳು, ನೀವಿಬ್ಬರು ಆದರೂ ಚೆನ್ನಾಗಿರಿ,ನನ್ನಿಂದ ಏನಾದರೂ  ತಪ್ಪಾಗೀದರೆ ದಯವಿಟ್ಟು  ಕ್ಷಮಿಸಿ, ನಾನು ಮತ್ತೆ  ನಿಮ್ಮ ಜೀವನದಲ್ಲಿ  ಬರೋದಿಲ್ಲ, ಕಾಲ್,ಮೆಸೇಜ್  ಮಾಡೋದಿಲ್ಲ,ನಾನು ನಿನಗೆ  ನಿಜವಾಗಿಯೂ ನನ್ನ ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸಿದ್ದಿನಿ ಅದ್ದು ಮಾತ್ರ ಸತ್ಯ, Good bye,God bless u ಸುನೀತಾ ಅಂತ ಹೇಳಿ ಕಾಲ್ ಕಟ್ ಮಾಡಿದ.

              ಅಜೇಯ ಮನಸ್ಸಿನಲ್ಲಿ ಅವಳು ಯಾಕೆ ಹೀಗೆ ಮಾಡಿದಳು ಏನೋ ಪ್ರಶ್ನೆ ಕಡೆಗು  ಯಕ್ಷ  ಪ್ರಶ್ನೆಯಾಗಿಯೇ ಉಳಿತ್ತು. ಅವನ ಹೃದಯಕ್ಕೆ ಆದ ಗಾಯ ಅವಳ ಒಂದು Sorry ಯಿಂದ ಸರಿಯಾಗುವುದೆ?.

ಓ ಹುಚ್ಚು ಮನಸ್ಸೇ....
ನೀನು  ಮಾಡಿರುವ ಅವಾಂತರ ಸಾಕು ... ಸ್ವಲ್ಪ ನೀ ನಿಲ್ಲು.....

Comments