ಒಂದು ಅಂತರಂಗದ ಅಭಿಯಾನ....
1 day ago - Shreerama Diwanaಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ವರ್ಷದ ಬೇಸಿಗೆಯ ತಾಪಮಾನ ಬಹುತೇಕ ಇಡೀ ಕರ್ನಾಟಕದ ಜನರನ್ನು ಅಲುಗಾಡಿಸಿ ಬಿಟ್ಟಿತು. ಅದರಲ್ಲೂ ಮಧ್ಯಮ, ಕೆಳಮಧ್ಯಮ ಮತ್ತು ಬಡವರ್ಗದ ಜನರು ತಾಪಮಾನದ ಏರಿಕೆಯಿಂದ ತತ್ತರಿಸಿ ಹೋದರು. ಕೆಲವು ಜೀವಗಳು ಹೊರಟೇ ಹೋದವು. ಇನ್ನೊಂದಷ್ಟು ಜನ ಅನಾರೋಗ್ಯಗಳಿಗೆ ತುತ್ತಾದರು. ಪ್ರಾಣಿಪಕ್ಷಿಗಳು ಕಣ್ಣ ಮುಂದೆಯೇ ತುಂಬಾ ಒದ್ದಾಡಿದವು.
ಈಗ ಎರಡು ಮೂರು ದಿನದಿಂದ ಸ್ವಲ್ಪಮಟ್ಟಿಗೆ ಉಷ್ಣಾಂಶ ಕಡಿಮೆಯಾಗಿದೆ. ಆದರೆ ಆ ತಾಪಮಾನದ ಹೊಡೆತ ನಮಗೆ ಒಂದು ಬಹುದೊಡ್ಡ ಪಾಠವಾಗಬೇಕು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ವರ್ಷ ಹೀಗೆ ಒಂದೊಂದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಜಾಸ್ತಿಯಾಗುತ್ತಾ ಹೋಗುತ್ತದೆ ಎಂದು ಯಾರೋ ಬರೆದ ಒಂದು ಲೇಖನ ಪ್ರಸಾರವಾಗುತ್ತಿದೆ. ಅದು ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ. ಆದರೆ ಮುಂದೆಯೂ ಪರಿಸರವನ್ನು ಹೀಗೇ ನಿರ್ಲಕ್ಷಿಸಿದರೆ ಖಂಡಿತವಾಗಿಯೂ ತಾಪಮಾನದ ಹೊಡೆತಕ್ಕೆ ನಾವೆಲ್ಲರೂ ನಾಶವಾಗುವುದು ನಿಶ್ಚಿತ. ಅದಕ್ಕಾಗಿ ಆ ಹಂತ ತಲುಪುವ ಮುನ್ನವೇ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ ಮತ್ತು ಆ ನಿಟ್ಟಿನಲ್ಲಿ ಒಂದಷ್ಟು ಕೆಲಸ ಮಾಡಬೇಕಾಗಿದೆ.
ಮುಖ್ಯವಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ಈ ವರ್ಷದ ಈಗ ಪ್ರಾರಂಭವಾಗಿರುವ ಮಳೆಗಾಲದಲ್ಲಿ ಕನಿಷ್ಠ ಒಂದು ಲಕ್ಷ ಗಿಡಗಳನ್ನು ಬೆಳೆಸುವ ಪ್ರತಿಜ್ಞೆ ಮಾಡಬೇಕು. ಹಾಗೆಯೇ ಹೋಬಳಿ ಮಟ್ಟದಲ್ಲಿ 10 ಲಕ್ಷ ಗಿಡಗಳು, ತಾಲೂಕು ಮಟ್ಟದಲ್ಲಿ 50 ಲಕ್ಷದಷ್ಟು ಗಿಡಗಳು ಮತ್ತು ಗ್ರೇಡ್-ಒನ್ ನಗರಗಳಲ್ಲಿ ಅಂದರೆ ಜಿಲ್ಲಾಮಟ್ಟದಲ್ಲಿ ಒಂದು ಕೋಟಿ ಗಿಡಮರಗಳನ್ನು ನೆಡುವ ಕಾರ್ಯಕ್ರಮವನ್ನು ತತ್ ಕ್ಷಣದಿಂದಲೇ ಹಮ್ಮಿಕೊಳ್ಳಬೇಕು. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಜಂಟಿ ನೇತೃತ್ವದಲ್ಲಿ ಇದನ್ನು ಆರಂಭಿಸಬೇಕು. ಅಂದರೆ… ಮುಂದೆ ಓದಿ...