ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಬ್ಲ್ಯಾಕ್ ಕಾಫಿ’ ಸೇವನೆಯಿಂದ ಲಾಭವಿದೆಯೇ?

ಮೊದಲೆಲ್ಲಾ ಕಾಫಿ ಹುಡಿಯನ್ನು ಡಿಕಾಕ್ಷನ್ ಮಾಡಿ, ಅದಕ್ಕೆ ಸಕ್ಕರೆ ಮತ್ತು ಹಾಲನ್ನು ಸೇರಿಸಿ ಕುಡಿಯುವುದು ಬಹಳ ಆಹ್ಲಾದವೆನಿಸುತ್ತಿತ್ತು. ಕ್ರಮೇಣ ಇನ್ ಸ್ಟಂಟ್ ಕಾಫಿ ಹುಡಿಗಳು ಬಂದವು. ಈಗ ಇನ್ ಸ್ಟಂಟ್ ಕಾಫಿಯೇ ಬಂದಿದೆ. ಪ್ಯಾಕೆಟ್ ತುಂಡರಿಸಿ ಬಿಸಿ ನೀರಿಗೆ ಹಾಕಿದರಾಯಿತು. ನಿಮಿಷದಲ್ಲಿ ಕಾಫಿ ತಯಾರು. ಕಾಫಿ ಹುಡಿ, ಹಾಲು, ಸಕ್ಕರೆ ಎಲ್ಲವೂ ಆ ಪ್ಯಾಕೆಟ್ ನಲ್ಲೇ ಇದೆ.

Image

ಭಾವರೇಖೆ

ಪುಸ್ತಕದ ಲೇಖಕ/ಕವಿಯ ಹೆಸರು
ನಂದನ ಕುಪ್ಪಳ್ಳಿ
ಪ್ರಕಾಶಕರು
ಸುವ್ವಿ ಪಬ್ಲಿಕೇಷನ್, ಶಿಕಾರಿಪುರ, ಶಿವಮೊಗ್ಗ
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಭಾವರೇಖೆ ( ಒಂದು ಅನಂತ ಭಾವ) ನಂಕು ( ನಂದನ ಕುಪ್ಪಳ್ಳಿ) 

ಬದುಕಿನ ಸಾರ್ಥಕತೆಯ ಹೆದ್ದಾರಿಯಲ್ಲಿ ಸಾಗುತ್ತಿರುವವರನ್ನು ನೆನೆಯುತ್ತಾ...

ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಎಂಬ ಹೆಸರಿನ ಸಾಮಾಜಿಕ ಜಾಲತಾಣಗಳ ಅಕೌಂಟಿನ ಯುವತಿಯೊಬ್ಬಳು ರಾಜ್ಯಾದ್ಯಂತ ಸಂಚರಿಸಿ ಸರ್ಕಾರಿ ಶಾಲೆಯ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುತ್ತಾ, ಗೋಡೆಗಳಿಗೆ ಚಿತ್ರ ಬಿಡಿಸುತ್ತಾ, ನಿರಂತರವಾಗಿ ಸಾಕಷ್ಟು ಶ್ರಮ ಪಡುತ್ತಾ ಸಮಾಜ ಸೇವೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೯೬೮)- ಕಾರಣ

ನಡಿಯೋಕೆ ಸಾಧ್ಯವಾಗ್ತಾ ಇಲ್ಲ. ಬ್ಯಾಗ್ ತುಂಬಾ ಭಾರವಾಗಿದೆ. ಅದರಲ್ಲಿ ರಾಶಿ ರಾಶಿ ಕಾರಣಗಳನ್ನ ತುಂಬಿಸಿಕೊಂಡಿದ್ದೇನೆ. ನಾನು ಅಂತಲ್ಲ ಯಾರೆಲ್ಲ ಇಲ್ಲಿ ನಡೆಯುವುದಕ್ಕೆ ಕಷ್ಟಪಡ್ತಾ ಇದ್ದಾರೋ ಅವರೆಲ್ಲರೂ ಕೂಡ ಕಾರಣಗಳನ್ನು ತಮ್ಮ ಬ್ಯಾಗಿನಲ್ಲಿ ವಿಪರೀತವಾಗಿ ತುಂಬಿಸಿಕೊಂಡವರು.

Image

ಜೇನು ತಿನ್ನುವ ಓತಿಕ್ಯಾತ (ಭಾಗ 1)

ನಮ್ಮದು ಅಪ್ಪಟ ಬಯಲು ಸೀಮೆ. ಗಾಳಿಕಾಲದಲ್ಲಿ ಊಟ ಸಾಕಾಗದೇ ತಿನ್ನುವಂತದ್ದೆಂದು ಯಾರಾದರು ಏನನ್ನಾದರೂ ಕೊಟ್ಟರೆ ಅದನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುವ ಹಸಿವು ನಮ್ಮನ್ನು ಕಾಡುತ್ತಿತ್ತು. ಮುಂಗಾರು ಮಳೆ ಬರುವವರೆಗೆ ನಮಗೆ ಮುದ್ದೆ ಬಿಟ್ಟರೆ ತಿನ್ನಲು ಅಂತ ಇದ್ದ ಏಕ ಮಾತ್ರ ವಸ್ತು ಅಂದರೆ ಅದು ಮನೆಗೆ ತಿನ್ನಲು ಅಂತ ತೆಗೆದಿರಿಸಿದ ಕಡಲೆಕಾಯಿ ಮಾತ್ರ.

Image

ಪ್ರವಾಸ ಕಥನ ; ಅಮೇರಿಕಾ... ಅಮೇರಿಕಾ... (ಭಾಗ 3)

ಪ್ರಕೃತಿಯ ಈ ಭವ್ಯ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್ 8,992 ಚದರ ಕಿ ಮೀ ಸುತ್ತಳತೆಯಲ್ಲಿ ಹರಡಿಕೊಂಡಿದೆ. ಇಲ್ಲಿ ಸುಮಾರು 10,000 ವಿವಿಧ ಬಗೆಯ ಬಿಸಿ ನೀರಿನ ತಾಣಗಳು ಕಂಡು ಬರುತ್ತವೆ. ಇಲ್ಲಿ 67 ಬಗೆಯ ಹಾಲುಣಿಸುವ ಸಸ್ತನಿಗಳು ಹಾಗೂ 285 ವಿಭಿನ್ನ ಪಕ್ಷಿ ಸಂಕುಲಗಳು ಕಂಡುಬರುತ್ತವೆ.

Image

ದೊರೆತ ಅವಕಾಶದ ಸದುಪಯೋಗ ಬಹುಮುಖ್ಯ

ನಮ್ಮ ಜೀವನದಲ್ಲಿ ನಮಗೆ ಬಹಳಷ್ಟು ಅವಕಾಶಗಳು ಬರುತ್ತವೆ. ಆದರೆ ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹುಮುಖ್ಯ. ಅವಕಾಶ ಮತ್ತು ಅದೃಷ್ಟಗಳು ತುಂಬಾ ಸಮಯ ಇರುವುದಿಲ್ಲ. ಸಿಕ್ಕಾಗ ಬಾಚಿಕೊಳ್ಳುವುದೇ ಜಾಣತನ. ಕೈಗೆ ಸಿಕ್ಕಿದ ಬಳಿಕ ಅವುಗಳನ್ನು ಚೆನ್ನಾಗಿ ಬಳಸಿಕೊಳ್ಳುವುದೂ ಒಂದು ಬಗೆಯ ಕಲೆ ಎನ್ನಬಹುದು. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಕುರಿತಾದ ಒಂದು ಪುಟ್ಟ ನೀತಿ ಕಥೆ ಇಲ್ಲಿದೆ.

Image

ಸೋಲು ಬದುಕಿನ ಅಂತ್ಯ ಅಲ್ಲ

ಎಸ್ಸೆಸ್ಸೆಲ್ಸಿ ಫೇಲ್ ಆದ ಬೇಸರದಿಂದ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಯ ಕೆಟ್ಟ ನಿರ್ಧಾರಕ್ಕೆ ಮೊರೆ ಹೋದರು. ಪರೀಕ್ಷೆಯ ಭಯ, ಪೋಷಕರ ಭೀತಿ, ಶಿಕ್ಷಕರ ಒತ್ತಡಕ್ಕೆ ಬೆದರಿ ನಿತ್ಯ ಸಾವಿಗೆ ಶರಣಾಗುತ್ತಿರುವ ಯುವಕ/ಯುವತಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.

Image

ಒಂದು ಅಂತರಂಗದ ಅಭಿಯಾನ....

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ವರ್ಷದ ಬೇಸಿಗೆಯ ತಾಪಮಾನ ಬಹುತೇಕ ಇಡೀ ಕರ್ನಾಟಕದ ಜನರನ್ನು ಅಲುಗಾಡಿಸಿ ಬಿಟ್ಟಿತು. ಅದರಲ್ಲೂ ಮಧ್ಯಮ, ಕೆಳಮಧ್ಯಮ ಮತ್ತು ಬಡವರ್ಗದ ಜನರು ತಾಪಮಾನದ ಏರಿಕೆಯಿಂದ ತತ್ತರಿಸಿ ಹೋದರು. ಕೆಲವು ಜೀವಗಳು ಹೊರಟೇ ಹೋದವು. ಇನ್ನೊಂದಷ್ಟು ಜನ ಅನಾರೋಗ್ಯಗಳಿಗೆ ತುತ್ತಾದರು.

Image