ಇನ್ನಷ್ಟು ಹನಿಗಳು...

ಇನ್ನಷ್ಟು ಹನಿಗಳು...

ಕವನ

ಚಾಣಾಕ್ಷರು 

ರಾಜಕೀಯದಲಿ

ಯಾರೂ ಸದಾ

ಪರಮ ಶತ್ರುಗಳಲ್ಲ;

ಯಾವಾಗ

ಬೇಕಾದರೂ

ಹೆಗಲ ಮಿತ್ರ....

 

ಇದ ಪ್ರಾಕ್ಟಿಕಲ್ ಆಗಿ

ತೋರಿಸಿದವರೇ

ಗೌಡ್ರ ಕುಟುಂಬ-

ಇದು ಅವರ

ಪರಮ ಚಾಣಾಕ್ಷ

ರಾಜಕೀಯ ತಂತ್ರ!

***

ಸಿದ್ಧಾಂತ 

ಸಿದ್ಧಾಂತವಿಲ್ಲದ

ಜೀವನ;

ರಾಜಕೀಯ

ಬಹಳಕಾಲ

ಇರದು

ಗೆಳೆಯಾ...

 

ಇದರಿಂದ

ಯಾರೂ

ಗಳಿಸಲಾರರು

ಸತ್ವ ಭರಿತ

ಸಮಾಜದ

ಬೆಳೆಯಾ!

***

ಸುಳ್ಳಿನ ನಾಯಕರು 

ಲೋಕಸಭಾ

ಅಭ್ಯರ್ಥಿಗಳಿಗೆ

ಕೋಟಿ ಕೋಟಿ

ಇದ್ದರೂ

ಕಾರಿಲ್ಲಾ

ಮನೆಯಿಲ್ಲಾ....

 

ಸತ್ಯದ ಮಾಲಿಕ

ನೀವಲ್ಲಾ ನೀವಲ್ಲಾ...

ಮಹಾ ಸುಳ್ಳಿನ 

ನಾಯಕರೇ ಎಲ್ಲಾ...

ನಿಮ್ಮನೆ ನಾವು-

ಆರಿಸಬೇಕಲ್ಲಾ!

***

ಮಜಾ...

ಯಾವ ಸರ್ಕಾರವೇ

ಬರಲೀ

ಕರ್ನಾಟಕದ

ನಸೀಬು ಯಾವತ್ತೂ

ಖೋಟಾನೇ 

ನಿಜಾ....

 

ಅನುದಾನ

ಕೊಟ್ಟರೆ

ರಾಜಕಾರಣಿಗಳು

ಮಾಡ್ತಾರೆ

ಇನ್ನಿಲ್ಲದಂತೆ

ಮಜಾ!

***

ಚಿನ್ನದ ಬಿಸ್ಕತ್! 

ನಿಜ-

ಹೆಣ್ಣು

ಮಕ್ಕಳಿಗೆ

ಬಂಗಾರದ

ಆಭರಣಗಳ

ತೊಡುವ ಹುಚ್ಚು....

 

ಆದರೆ

ರಾಜಕಾರಣಿ

ಹೆಣ್ಣು ಮಕ್ಕಳಿಗೆ

ಚಿನ್ನದ ಬಿಸ್ಕತ್ತೇ

ಬಲು

ಅಚ್ಚು ಮೆಚ್ಚು!

***

ಅಯಸ್ಕಾಂತ ಧ್ರುವಗಳು

ಅಚ್ಚರಿಯೇಕೆ

ಹೊಟ್ಟುರಿ ಏಕೆ?

ಯುಡ್ಯೂರಪ್ಪ

ಉತ್ತರ ಧ್ರುವ;

ದೇವೇಗೌಡ್ರು

ದಕ್ಷಿಣ ಧ್ರುವ....

 

ಆಗಲಿಬಿಡಿ

ತಪ್ಪೇನು?

ಅವರೀಗ ಒಂದೇ

ಅಯಸ್ಕಾಂತದ

ಮಾದರಿಯ

ಎರಡು ಧ್ರುವ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್