ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೧) - ಅಂಬಿಕಾತನಯದತ್ತ

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ ೧೮೯೬ರ ಜನವರಿ ೩೧ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (೧೯೧೮) ಪದವಿ ಪಡೆದರು.

Image

ಒಂದೆಲೆ ಮೇಲಿನ ಕಾಡು

ಪುಸ್ತಕದ ಲೇಖಕ/ಕವಿಯ ಹೆಸರು
ಸ.ವೆಂ. ಪೂರ್ಣಿಮಾ
ಪ್ರಕಾಶಕರು
ಹಾಡ್ಲಹಳ್ಳಿ ಪಬ್ಲಿಕೇಷನ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

ಒಂದೆಲೆ ಮೇಲಿನ ಕಾಡು -ಊರು ಮನೆ ಮಾತು ಎನ್ನುವ ಕೃತಿಯನ್ನು ಸ ವೆಂ ಪೂರ್ಣಿಮಾ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಕೇಶವ ಮಳಗಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ...

ಭಾವನಾತ್ಮಕ ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಒಳ ಅರ್ಥ ಮಾತ್ರ ವಿಶಾಲವಾಗಿದೆ ಮತ್ತು ತಂದೆ ತಾಯಿ ಅಜ್ಜ ಅಜ್ಜಿ ಮೊದಲಾದ ಹಿರಿಯರನ್ನು ನಿರ್ಲಕ್ಷಿಸುವವರ ಆತ್ಮಕ್ಕೆ ನೇರವಾಗಿ ಚುಚ್ಚುತ್ತದೆ. ನೀವು ಈಗಾಗಲೇ ಇದನ್ನು ನೋಡಿರಬಹುದು ಅಥವಾ ಕೇಳಿರಬಹುದು‌.

Image

ಸ್ಟೇಟಸ್ ಕತೆಗಳು (ಭಾಗ ೯೫೨)- ಹಕ್ಕಿ

ಓಯ್ ಸ್ವಾಮಿ, ಈ ಮಾತನ್ನ ನಿಮಗೆ ಹೇಳ್ತಾ ಇರೋದು, ನಿಮಗೆ ನಮ್ಮ ಮಾತು ಕೇಳ್ತಾನೆ ಇಲ್ವಾ? ಅನ್ಕೋತ್ತೇನೆ. ಆಗಾಗ ತಣ್ಣೀರು ಕುಡಿತಿರಿ, ಮೈಮೇಲೆ ನೀರು ಸುರಿದುಕೊಳ್ಳುತ್ತೀರಿ ಫ್ಯಾನಿನ ಕೆಳಗೆ ಕುಳಿತುಕೊಳ್ಳುತ್ತೀರಿ, ಎಸಿ ಕೋಣೆಯೊಳಗೆ ಉಸಿರಾಡುತ್ತೀರಿ? ಮಳೆ ಯಾವಾಗ ಬರುತ್ತೋ, ನೀರಿಲ್ಲ ಮುಂದೇನು ಮಾಡ್ಲಿ?

Image

ದೇಹ ಪ್ರೇಮ

ದೇಹ, ದೇಶ ಮತ್ತು ದೇವ ಈ ಮೂರಂಶಗಳು ಮನುಷ್ಯನ ವಿಕಾಸದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿವೆ. ಇವುಗಳೊಳಗಿನ ಸಂಬಂಧವೂ ಅವಿನಾಭಾವ. ಲೇಖನವನ್ನು ದೇಹ ಪ್ರೇಮಕ್ಕಷ್ಟೇ ಮೀಸಲಿಟ್ಟು ಮುಂದುವರಿಯುವೆ. ತಾಯಿಯ ಗರ್ಭದೊಳಗೆ ನವಮಾಸ ನಮ್ಮ ಬೆಳವಣಿಗೆಯ ನಂತರವೇ ನಮ್ಮ ಜನನವಾಗಿದೆ.

Image

ಕಾರ್ಮಿಕ ಬಂಧುಗಳಿಗೆ ಶುಭಾಶಯಗಳು

‘ಕಾರ್ಮಿಕರು’ ಎಂದೊಡನೆ ಮೊದಲು ಕಣ್ಣೆದುರು ಬರುವುದು ‘ದುಡಿಯುವ ಒಂದು ವರ್ಗ’ ಬರುಬರುತ್ತಾ ಅವರಲ್ಲಿಯೂ ಸಂಘಟನೆಗಳು ಹುಟ್ಟಿಕೊಂಡವು. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್ಮಿಕರಿಗೂ ಒಂದು ದಿನ ಬೇಕೆಂದು ಈ ವಿಶೇಷ ದಿನ ಹುಟ್ಟಿಕೊಂಡಿತು.

Image

ಕಾಡುಹಂದಿಯ ಕಣ್ಣು ನನ್ನ ಮೇಲೆ..! (ಭಾಗ 2)

ಆದರೆ ಈ ಹಂದಿಗಳು ಮತ್ತು ಆನೆಗಳು ಅಪಾಯದ ಸಂದರ್ಭದಲ್ಲಿ ಎದುರುಗಡೆ ಇರುವ ಶತ್ರುಗಳನ್ನು ಹೊಡೆದುರುಳಿಸುವ ಕನಿಷ್ಟ ಪ್ರಯತ್ನವನ್ನು ಮಾಡೇ ಮಾಡುತ್ತವೆ. ಹಂದಿ ತಿವಿಯಲು ಬಂದಾಗ ಅದು ಬರುವ ಸರಳರೇಖೆಯಿಂದ ಆಚೆ-ಈಚೆ ಸರಿಯಬೇಕು ಎಂದು ಅಪ್ಪ, ಅಣ್ಣ ಇತರರು ಹೇಳಿದ್ದು ಕೇಳಿದ್ದೇನೆ. ಅದು ನನಗೆ ಅರಿವಿದೆ ಆದರೆ ಆ ಸರ್ಕಾರಿ ಜಾಲಿ ಗಿಡಗಳ ಮುಳ್ಳಿನ ವ್ಯೂಹದಲ್ಲಿ ಅರ್ಧ ಅಡಿಯೂ ಸರಿದಾಡಲು ಸ್ಥಳಾವಕಾಶ ಇರಲಿಲ್ಲ..!

Image

ನೀತಿ-ನಡತೆಯ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವಿವಿಧ ಲೇಖಕರು
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.50/-

ನವಕರ್ನಾಟಕ ಪ್ರಕಾಶನದ “ಕಿರಿಯರ ಕಥಾಮಾಲೆ”ಯಲ್ಲಿ ಪ್ರಕಟವಾಗಿರುವ ಈ ಸಂಕಲನದಲ್ಲಿ ವಿವಿಧ ಲೇಖಕರ 13 ಕತೆಗಳಿವೆ. ಪ. ರಾಮಕೃಷ್ಣ ಶಾಸ್ತ್ರಿ, ಪಳಕಳ ಸೀತಾರಾಮ ಭಟ್ಟ, ಸಂಪಟೂರು ವಿಶ್ವನಾಥ್, ದೊಡ್ಡಬಾಣಗೆರೆ ಪ್ರಕಾಶಮೂರ್ತಿ ಮತ್ತು ವಿ. ರಾಮಚಂದ್ರ ಶಾಸ್ತ್ರಿ ಬರೆದಿರುವ ಕತೆಗಳು.

ತೆಂಗಿನ ಮರಗಳ ಶಿರ ಸ್ವಚ್ಛತೆ ಮತ್ತು ಇಳುವರಿ

ಯಾರ ತೆಂಗಿನ ಮರದಲ್ಲಿ ಪ್ರತೀ ವರ್ಷವೂ ಅಧಿಕ ಇಳುವರಿ ಬರುತ್ತದೆಯೋ ಅಂತವರ ತೆಂಗಿನ ಮರದ ಶಿರಭಾಗವನ್ನು ಒಮ್ಮೆ ನೋಡಿ. ಬಹಳ ಸ್ವಚ್ಚವಾಗಿ ಇರುತ್ತದೆ. ತೆಂಗಿನ ಮರಗಳಿಗೆ ಗೊಬ್ಬರ, ನೀರು ಕೊಡುವುದಲ್ಲದೆ ಅಗತ್ಯವಾಗಿ ಮಾಡಬೇಕಾದ ಕೆಲಸ ಶಿರ ಭಾಗದ ಸ್ವಚ್ಚತೆ. ಹೀಗೆ ಮಾಡುವುದರಿಂದ ಮರ ಆರೋಗ್ಯವಾಗಿರುತ್ತದೆ. ಉತ್ತಮ ಇಳುವರಿಯೂ ಬರುತ್ತದೆ.

Image