ಸ್ಟೇಟಸ್ ಕತೆಗಳು (ಭಾಗ ೯೫೨)- ಹಕ್ಕಿ

ಸ್ಟೇಟಸ್ ಕತೆಗಳು (ಭಾಗ ೯೫೨)- ಹಕ್ಕಿ

ಓಯ್ ಸ್ವಾಮಿ, ಈ ಮಾತನ್ನ ನಿಮಗೆ ಹೇಳ್ತಾ ಇರೋದು, ನಿಮಗೆ ನಮ್ಮ ಮಾತು ಕೇಳ್ತಾನೆ ಇಲ್ವಾ? ಅನ್ಕೋತ್ತೇನೆ. ಆಗಾಗ ತಣ್ಣೀರು ಕುಡಿತಿರಿ, ಮೈಮೇಲೆ ನೀರು ಸುರಿದುಕೊಳ್ಳುತ್ತೀರಿ ಫ್ಯಾನಿನ ಕೆಳಗೆ ಕುಳಿತುಕೊಳ್ಳುತ್ತೀರಿ, ಎಸಿ ಕೋಣೆಯೊಳಗೆ ಉಸಿರಾಡುತ್ತೀರಿ? ಮಳೆ ಯಾವಾಗ ಬರುತ್ತೋ, ನೀರಿಲ್ಲ ಮುಂದೇನು ಮಾಡ್ಲಿ? ಹೀಗೆ ನಿಮ್ಮ ಬಗ್ಗೆ ಮಾತ್ರ ಯೋಚನೆ ಮಾಡುತ್ತೀರಿ?  ಆದರೂ ನಮ್ಮ ಬಗ್ಗೆ ನೀವು ಯಾವತ್ತಾದರೂ ಚಿಂತೆ ಮಾಡಿದಿರಾ? ನಾವು ಈ ಭೂಮಿಯಲ್ಲಿ ಬದುಕಿರುವುದಕ್ಕೆ ನೀವು ಒಂದಷ್ಟು ನೆಮ್ಮದಿಯಾಗಿದ್ದೀರಿ. ಕಾಡಿನ ನಡುವೆ ಹರಿಯುತ್ತಿದ್ದ ಪುಟ್ಟ ನದಿಗಳಿಗೆಲ್ಲ ಅಲ್ಲಲ್ಲಿ ತಡೆಗೋಡೆಗಳನ್ನು ಕಟ್ಟಿ ನಿಮ್ಮೂರಿಗೆ ನೀರು ಹರಿಸಿಕೊಂಡು ಬಿಟ್ಟಿದ್ದೀರಿ. ಒಂದು ಸ್ವಲ್ಪವೂ ನೀರು ಇಂಗದಂತೆ ಮಾಡಿಬಿಟ್ಟಿದಿರಿ ಅಲ್ವಾ? ನಿಮಗೆ ಒಂದು ಚೂರು ಅರ್ಥವಾಗುವುದಿಲ್ಲ .ನಮ್ಮ ಸುತ್ತಮುತ್ತ ಬದುಕುತ್ತಾ ಇರುವ ಪ್ರಾಣಿ ಪಕ್ಷಿಗಳು ಕೂಡ ಬದುಕಬೇಕು. ಅವುಗಳಿಗೂ ಬದುಕಿದೆ .ಅವುಗಳು ನೀರಿಗಾಗಿ ಸಾವಿರ ಕಿಲೋಮೀಟರ್ ಅಲೆದಾಡಿದರೂ ಸಹ ನೀರಿಲ್ಲದೆ ಸಾಯ್ತಾ ಇದ್ದಾವೆ ಅನ್ನೋದು ನಿಮ್ಮ ಅರಿವಿಗೆ ಬರ್ತಾನೆ ಇಲ್ವಾ? ಒಮ್ಮೆ ಕಾಡಿನ ನಡುವೆ ಬಂದು ಹೋಗಿ ,ದೇಹ ಬಳಲಿ ಬೆಂಡಾಗಿ ಸತ್ತ ಹೆಣಗಳು ಸಾವಿರ ಸಿಕ್ತಾ ಇದ್ದಾವೆ. ನನ್ನ ಜೊತೆಗೆ ಇದ್ದ ಅಪ್ಪ, ಅಮ್ಮ, ಗೆಳೆಯ, ಅಕ್ಕ, ತಂಗಿ ಎಲ್ಲರನ್ನ ಕಳೆದುಕೊಂಡು ಏಕಾಂಗಿಯಾಗಿ ನಾನೊಬ್ಬಳೇ ಆಕಾಶದಲ್ಲಿ ಹಾರಾಡ್ತಾಯಿದ್ದೇನೆ. ನೀರನ್ನ ಹುಡುಕ್ತಾ ಹುಡುಕ್ತಾ, ಬದುಕುವುದೇ ಬೇಡ ಅನಿಸಿಬಿಟ್ಟಿದೆ .ನಾವೇನು ತಪ್ಪು ಮಾಡಿದ್ದೇವೆ .ನಾವು ಪರಿಸರಕ್ಕೆ ಯಾವುದೇ ರೀತಿ ಹಾನಿಯನ್ನು ಮಾಡಿಲ್ಲ. ನೀರು ಹರಿಯುವುದನ್ನ ತಡೆ ಹಿಡಿದಿಲ್ಲ. ಪರಿಸರಕ್ಕೆ ಒಂದು ಚೂರು ತೊಂದರೆ ಮಾಡದ ನಾವು ಕೂಡ ನಿಮ್ಮಿಂದಾಗಿ ಕಷ್ಟ ಅನುಭವಿಸುತ್ತಿದ್ದೇವೆ. ನೀರನ್ನು ಉಳಿಸುವ ಯೋಚನೆಯನ್ನು ಮಾಡಿಕೊಳ್ಳಿ. ಈ ವರ್ಷ ಹೇಗೋ ದಾಟಿಬಿಡಬಹುದು ಆದರೆ ಮುಂದಿನ ವರ್ಷವೂ ಇದೇ ಪರಿಸ್ಥಿತಿ ಇರುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಹಕ್ಕಿ ಹಾರಿಹೋಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ