ರೊಟ್ಟಿ ಬಡಿಯಾಕ ಗಟ್ಟಿ ನಮ್ಮ ಅವ್ವ

ರೊಟ್ಟಿ ಬಡಿಯಾಕ ಗಟ್ಟಿ ನಮ್ಮ ಅವ್ವ

ಕವನ

ನಮ್ಮ ಅವ್ವನ ರಟ್ಟಿ 

ರೊಟ್ಟಿ ಬಡಿಯಾಕ ಗಟ್ಟಿ

ಜ್ವಾಳ ಹಸನಮಾಡಿ ಇಟ್ಟಿ

ತೊಗೊಂಡು ಗಿರಣಿಗೆ  ಹೊಂಟಿ 

 

ಒಲೆಮ್ಯಾಲೆ ಹೆಂಚು ಇಟ್ಟಿ

ಅದರೊಳಗೆ ನೀರು ಹಾಕಿ ಇಟ್ಟೆ

ಒಲೆಯಲ್ಲಿ ಕಟ್ಟಿಗೆ ಇಟ್ಟೆ

ಹಿಟ್ಟು ಕೊನಂಗಿಯಲ್ಲಿ ಹಾಕಿ ಇಟ್ಟೆ

 

ರೊಟ್ಟಿ ಬಡಿಯ್ಯಾಕ ಕುಂತಿ

ಕೊನಂಬಿಗಿಯೊಳಗೆ ಡೋಣಿ ಮಾಡಿ 

ಹಿಟ್ಟಲಿ ನೀರು ತಿರುಗಿಸಿ ತಿರುಗಿಸಿ 

ಹಿಟ್ಟಿಗೆ ಜಿಗುಟು ಹಾಕಿ ಬಿಟ್ಟೆ ಅವ್ವ 

 

ಹದಕ್ಕೆ ಕಲಸಿಕೊಂಡು ಬಿಟ್ಟು

ಅದನ್ನು ಕೈಯಿಂದ ಮಿಜ್ಜಿ ಮಿಜ್ಜಿ

ಹದಕ್ಕೆ ಹಿಟ್ಟು ಮಾಡಿ ಕೊಂಡೆವ್ವ

ಸರಿಯಾಗಿ ಹಿಟ್ಟು ಇಟ್ಟೆವ್ವ

 

ಒಣ ಹಿಟ್ಟು ಕೊನ್ಮಗಿಯಲ್ಲಿ ಹಾಕಿ

ಹಿಟ್ಟನ್ನು ಉಂಡೆ ತೆಗೆದು ಕೊಂಡು

ದುಂಡನೆ ಮಾಡಿಕೊಂಡು ಇಟ್ಟು 

ಅದರ ತಲೆಯ ಮೇಲೆ ಹೇಟು ಕೊಟ್ಟೆವ್ವ 

 

ಹಾಕಿ ಹಾಕಿ ಗೊಳಾಕಾರ ಮಾಡಿ

ಹಂಚಿ ನಲ್ಲಿ ಅದನ್ನು ಹಾಕಿ

ಅದರ ಮೇಲೆ ನೀರನ್ನು ಒರೆಸಿ 

ಮತ್ತೆ ಅದನ್ನು ಹೊರಳಿಸಿ ಹಾಕಿದಿ ಅವ್ವ

 

ಬೆಂದು ಬೆಂದು ರೊಟ್ಟಿ ಆಯ್ತು

ಅದನ್ನು ಕೆರಸಿಯಲ್ಲಿ ಹಾಕಿದಾಯ್ತು

ನಾನು ಕೈಹಾಕಿ ರೊಟ್ಟಿ ತೊಗೊಂಡು ಆಯ್ತು 

ತಾಟಿನಲ್ಲಿ  ಹಾಕೊಂಡು ಬಿಟ್ಟೆ ನಮ್ಮ ಅವ್ವ 

 

-ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಗದಗ

ಚಿತ್ರ ಕೃಪೆ : ಇಂಟರ್ನೆಟ್ ತಾಣ

ಚಿತ್ರ್