ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀತಿ ಸಂಹಿತೆ ಸಡಿಲಿಕೆ : ಆಡಳಿತ ಯಂತ್ರ ಚುರುಕಾಗಲಿ

ದೇಶದಲ್ಲೀಗ ನಡೆಯುತ್ತಿರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಜಾರಿಯಲ್ಲಿರುವ ಚುನಾವಣ ನೀತಿ ಸಂಹಿತೆಯಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಲು ಕೇಂದ್ರ ಚುನಾವಣ ಆಯೋಗ ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ.

Image

ಬುದ್ದ ಪ್ರಜ್ಞೆಯ ಬೆಳಕಿನಲ್ಲಿ ಪಾಕಿಸ್ತಾನದ ದುಸ್ಥಿತಿ ಕಂಡಾಗ....

ಸರ್ವೇ ಜನೋ ಸುಖಿನೋ ಭವಂತು. ನಮ್ಮ ನೆರೆಯ ದೇಶ ಮತ್ತು ಒಂದು ಕಾಲದ ನಮ್ಮದೇ ದೇಶದ ಭಾಗವಾಗಿದ್ದ ಪಾಕಿಸ್ತಾನ ಇತ್ತೀಚಿನ ಸುದ್ದಿಗಳ ಪ್ರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಮತ್ತು ದಿವಾಳಿತನದ ಅಂಚಿನಲ್ಲಿದೆ. ದೇಶವೇ ಇರಲಿ, ವೈಯಕ್ತಿಕ ಬದುಕೇ ಇರಲಿ, ನಮ್ಮ ಕ್ರಿಯೆ ಪ್ರತಿಕ್ರಿಯೆಗಳು ನಮ್ಮ ಜೀವನಮಟ್ಟವನ್ನು ನಿರ್ಧರಿಸುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೯೭೨)- ಅಜೇಯ

ಅರ್ಥಮಾಡಿಕೊಳ್ಳಬೇಕಾದ್ದು ಯಾರು? ತಾಯಿಯೋ ಮಗನೋ? ಇಬ್ಬರ ಮನಸ್ಸಿನಲ್ಲಿಯೂ ತಾವು ಸರಿ ಅವರು ತಪ್ಪು. ಅವರವರ ನೆಲೆಯಲ್ಲಿ ಅವರವರ ಯೋಚನೆ ವಿಧಾನವನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಒಮ್ಮೆ ಅವರು ತಮ್ಮ ಸ್ಥಳವನ್ನು ಬಿಟ್ಟು ಅವರ ಸ್ಥಳವನ್ನು ಆಶ್ರಯಿಸಿಕೊಂಡು ಅಲ್ಲಿಂದ ಯೋಚಿಸಬೇಕಾಗಿದೆ. ಆಗ ನಿಜದ ನಿಲುವು ತಿಳಿಯುತ್ತದೆ.

Image

ತನ್ಮಯತೆ !

ಇಂದು ನಾನು ಪತಂಜಲಿ ಯೋಗ ಸೂತ್ರ ಗ್ರಂಥ ಓದುವಾಗ, ಎರಡನೇ ಪಾದ, ಎರಡನೇ ಸೂತ್ರದಲ್ಲಿ ಒಂದು ಪದ ಓದಿದೆ. ಸಮಾಧಿ ಭಾವದರ್ಶನ. ಇದು ನಮಗೆ ಲಾಭವಾಗಬಹುದು ಎಂದು, ಇದರ ಕುರಿತು ಬರೆಯುತ್ತಿದ್ದೇನೆ.

Image

ಜೇನು ತಿನ್ನುವ ಓತಿಕ್ಯಾತ (ಭಾಗ 3)

ನಾನು ತದೇಕ ಚಿತ್ತದಿಂದ ಆ ಓತೀಕ್ಯಾತವನ್ನು ನೋಡುತ್ತಾ ಕುಳಿತೆ... ಜೇನುಗೂಡು ಸಮೀಪದಲ್ಲೇ ಇದೆ. ನೋಡಲು ಶುರುಮಾಡಿ 20-30 ಸೆಕೆಂಡ್ ಆಗಿರಬಹುದು. ತನ್ನ ಎರಡೂ ಮುಂಗಾಲುಗಳನ್ನು ಕೊಂಚ ಬಗ್ಗಿಸಿ ಜೇನುಗೂಡುಗಳಿಂದ ಬಗ್ಗಿ ಒಂದು ಹುಳವನ್ನು ಬಾಯಲ್ಲಿ ಕಚ್ಚಿ ಹಿಂದೆ ಸರಿದುಕೊಂಡಿತು. ಸ್ಪಸ್ಟತೆ ಅನ್ನಿಸದೇ ಖಾತರಿಗಾಗಿ ಮತ್ತೇ ಅದನ್ನೇ ನೋಡುತ್ತಾ ಕುಳಿತೆವು. ಏನಾಶ್ಚರ್ಯ?

Image

ಕ್ಷಮಾಪಣೆಯಿಂದ ಶಿಕ್ಷೆಗೆ ಮುಕ್ತಿ ಸಿಗುವುದೇ?

ನೀವು ತಿಳಿದೋ / ತಿಳಿಯದೆಯೋ ಮಾಡುವ ಯಾವುದೇ ತಪ್ಪಿಗೆ ಕ್ಷಮೆ ಎಂಬುದು ಇರುತ್ತದೆ ಎಂಬುದು ಬಹಳ ಹಿಂದಿನ ಮಾತು. ಆದರೆ ಪ್ರತಿಯೊಂದು ತಪ್ಪಿಗೆ ತನ್ನದೇ ಆದ ಶಿಕ್ಷೆ ಇದ್ದೇ ಇರುತ್ತದೆ. ತಪ್ಪು ಮಾಡಿದವನು ಅದರ ಪ್ರತಿಫಲ ಉಣ್ಣಲೇ ಬೇಕು. ಕೆಲವು ತಪ್ಪುಗಳಿಗೆ ಶಿಕ್ಷೆ ಇರುವುದಿಲ್ಲವಾದುದರಿಂದ ಅವುಗಳಿಗೆ ಕ್ಷಮಾಪಣೆ ಸಾಕಾಗುತ್ತದೆ.

Image

ಅಬೋಟ್ಟಾಬಾದ್

ಪುಸ್ತಕದ ಲೇಖಕ/ಕವಿಯ ಹೆಸರು
ಸಂತೋಷಕುಮಾರ ಮೆಹೆಂದಳೆ
ಪ್ರಕಾಶಕರು
ಸ್ನೇಹ ಬುಕ್ ಹೌಸ್, ಶ್ರೀನಗರ, ಬೆಂಗಳೂರು - ೫೬೦೦೫೦
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೧

ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು ಕಾಶ್ಮೀರದ ಉಗ್ರವಾದವಾಗಲೀ, ಅಘೋರಿಗಳ ವಿಸ್ಮಯ ಲೋಕವಾಗಲೀ, ವೈಜಯಂತಿಪುರದ ರಾಜಮನೆತನವಾಗಲಿ ಅದರ ವಿಷಯ ಸಂಗ್ರಹಣೆಯ ಹಿಂದಿನ ಶ್ರಮ ಮೆಹೆಂದಳೆ ಅವರಿಗೇ ಗೊತ್ತು.

ಎಚ್ ಡಿ ದೇವೇಗೌಡ ಅವರಿಗೆ ಜನುಮದಿನದ ಶುಭಾಶಯ ಕೋರುತ್ತಾ...

ಶ್ರೀ ಎಚ್ ಡಿ ದೇವೇಗೌಡ 92, ನಾಟ್ ಔಟ್ ಅವರು ಶತಕವನ್ನು ಬಾರಿಸಲಿ ಎಂದು ಹಾರೈಸುತ್ತಾ… ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿಯ ಸಾಮಾನ್ಯ ರೈತ ಕುಟುಂಬದ ವ್ಯಕ್ತಿಯೊಬ್ಬರು ಬೃಹತ್ ಭಾರತದ ಪ್ರಧಾನಿಯಾಗಿ ಅಧಿಕಾರಕ್ಕೆ ಏರುವುದು ಎಷ್ಟು ಸೋಜಿಗವೋ, ದೇವೇಗೌಡರ ವ್ಯಕ್ತಿತ್ವವನ್ನು ವಿಮರ್ಶೆಗೆ ಒಳಪಡಿಸುವುದು ಸಹ ಅಷ್ಟೇ ಸಂಕೀರ್ಣ.

Image

ಸ್ಟೇಟಸ್ ಕತೆಗಳು (ಭಾಗ ೯೭೧)- ಎಲ್ಲಿ ಸಿಗುತ್ತೆ ?

ಆ ಕನ್ನಡಿ ಎಲ್ಲಿ ಸಿಗುತ್ತೆ ? ಅದನ್ನಾದರೂ ಹೇಳಿ ಮಾರಾಯರೇ!. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದೇನೆ. ಮೊನ್ನೆ ಕೂದಲು ಕಟ್ ಮಾಡೋ ಅಂಗಡಿಗೆ ಹೋಗಿದ್ದೆ. ಎಲ್ಲಾ ಆದ್ಮೇಲೆ ಕೊನೆಯಲ್ಲಿ ನನ್ನ ಮುಖವನ್ನು ನಾನೇ ಕನ್ನಡಿಯಲ್ಲಿ ನೋಡಿದಾಗ ಮತ್ತೊಂದು ಅದ್ಭುತ ಕ್ಷಣ. ನನ್ನ ಮುಖದ ಸೌಂದರ್ಯವನ್ನು ನೋಡಿ ನನ್ನ ಹಿಂದೆ ಎಲ್ಲರೂ ಬರಲೇಬೇಕಿತ್ತು.

Image