ಅಂತರಂಗದ ಅನ್ವೇಷಣೆ

ಅಂತರಂಗದ ಅನ್ವೇಷಣೆ

ಕವನ

ನೋವಲ್ಲಿ ನಗುವ ಹುಡುಕುತ 

ಇರುಳಲ್ಲಿ ಹಗಲ ಹುಡುಕುತ
ಕಹಿಯಲ್ಲಿ ಸವಿಯ ಹುಡುಕುತ

ಕಷ್ಟದಲ್ಲಿ ಹಿತವ ಹುಡುಕುತ
ದೂರದಲ್ಲಿ ಸನಿಹವ ಹುಡುಕುತ
ಅಸಾಧ್ಯದಲ್ಲಿ ಸಾಧ್ಯವ ಹುಡುಕುತ

ಸಂತೆಯಲ್ಲಿ  ಮೌನವ ಹುಡುಕುತ
ನೆನಪಲ್ಲಿ ಮರೆವ ಹುಡುಕುತ
ಮೌನದಲ್ಲಿ ಭಾಷೆ ಹುಡುಕುತ

ಅಂತ್ಯದಲ್ಲಿ ಆದಿಯ ಹುಡುಕುತ
ಬದುಕಲ್ಲಿ ಬಾಳ್ವೆಯ ಹುಡುಕುತ
ಮನದ ಕಡಲಲ್ಲಿ ಆಸೆಗಳ ಅಲೆಗಳಲ್ಲಿ ಆಶಾಕಿರಣದ ಹನಿಯ ಹುಡುಕುತ

 

Comments