Skip to main content

ಲೇಖಕರು: ಶಶಿಧರ ಹೆಬ್ಬಾರ ಹಾಲಾಡಿ, ಬೆಂಗಳೂರು

 ನಿಜ ಹೇಳಬೇಕೆಂದರೆ, ನಾವು ನೋಡಲು ಹೋಗಿದ್ದು, ಕೆರೆಕಟ್ಟೆ ಘಾಟಿಯನ್ನಲ್ಲ. ನಮ್ಮ ಜೀವನಗತಿಯು ನೆಮ್ಮದಿಯಿಂದ ಕೂಡಿರಲಿ ಎಂದು ಪ್ರಾರ್ಥಿಸಲು ಪುಣ್ಯ ಕ್ಷೇತ್ರವೊಂದನ್ನು ಸಂದರ್ಶಿಸಲು ಹೊರಟವರು, ಶಿರಾಡಿ ಘಾಟಿಯ ಅಲಭ್ಯತೆಯಿಂದಾಗಿ, ಅನಿವಾರ್ಯವಾಗಿ ಕೆರೆಕಟ್ಟೆ ಘಾಟಿಯ ಮೂಲಕ ಸಾಗಬೇಕಾಯಿತು. ಅದರಿಂದಾದ ಒಂದು ಅಪರೂಪದ ಅನುಭವವೆಂದರೆ, ಅಲ್ಲಿನ ದಟ್ಟ ಕಾಡನ್ನು ನೋಡಲು ದೊರೆತ ಅವಕಾಶ. ಜೊತೆಗೆ, ನಮ್ಮ ಮುಖ್ಯ ಗಮ್ಯಸ್ಥಾನದ ನೆನಪಾದಾಗಲೆಲ್ಲ, ಕೆರೆಕಟ್ಟೆ ಘಾಟಿಯ ಸ್ನಿಗ್ದ ಸೌಂದರ್ಯದ ನೆನಪಾಗುವಂತಾಯಿತು. ಕರ್ನಾಟಕ ರಾಜ್ಯದಲ್ಲಿ ಯಾವುದೇ ರಸ್ತೆ ಮೂಲಕ ಸಾಗುವಾಗ, ನೋಟಕ್ಕೆ ದಕ್ಕುವ ಅತ್ಯುತ್ತಮ ಕಾಡುಗಳಲ್ಲಿ ಕೆರೆಕಟ್ಟೆ ರಸ್ತೆಯ ಆಸು ಪಾಸಿನಲ್ಲಿರುವ ಅರಣ್ಯವು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಕುದುರೆಮುಖ ರಕ್ಷಿತ ಅರಣ್ಯದಲ್ಲಿ ಸಾಗುವ ಈ ರಸ್ತೆಯು ಶೃಂಗೇರಿಯಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ಕೆರೆಕಟ್ಟೆ ಗ್ರಾಮದ ಮೂಲಕ ಸಾಗಿ, ಎಸ್.ಕೆ.ಬಾರ್ಡರ್ ಮೂಲಕ ಹಾದು, ಸುಮಾರು 40 ಕಿ.ಮೀ. ದೂರದಲ್ಲಿರುವ ಮಾಳ ಗ್ರಾಮವನ್ನು ತಲುಪುವಷ್ಟರಲ್ಲಿ ಅತಿ ನಿಬಿಡ ಕಾಡಿನ ಅಭೂತ ಪೂರ್ವ ದರ್ಶನವನ್ನು ನೀಡುತ್ತದೆ. ಕುದುರೆ ಮುಖ ರಕ್ಷಿತ ಅರಣ್ಯವನ್ನು ಕೆರೆಕಟ್ಟೆ ಹತ್ತಿರ ಪ್ರವೇಶಿಸುವಾಗ ಅರಣ್ಯ ಇಲಾಖೆಯ...

April 21, 2015
0 ಪ್ರತಿಕ್ರಿಯೆಗಳು
117 ಓದು

ಮೊಬೈಲಿನಲ್ಲಿ ಸಂಪದ

ಸಂಪದ ಆರ್ಕೈವ್

ರುಚಿ ಸಂಪದ

ಪುಸ್ತಕ ಸಂಪದ

ಇತ್ತೀಚಿನ ಪ್ರತಿಕ್ರಿಯೆಗಳು