ಸ್ಟೇಟಸ್ ಕತೆಗಳು (ಭಾಗ ೯೪೮)- ಹನಿ

ಸ್ಟೇಟಸ್ ಕತೆಗಳು (ಭಾಗ ೯೪೮)- ಹನಿ

ನಿಮಗೆಷ್ಟು ಸಲ ಹೇಳೋದು, ಕಣ್ಣಾ ಮುಚ್ಚಾಲೆ ಆಡಬೇಡಾ ಅಂತ. ಮೋಡದೆಡೆಯಲ್ಲಿ  ಕುಳಿತು ಭೂಮಿಗೆ ಬರುವುದ್ದಕ್ಕೆ ಕಾಯುತ್ತಿರುವ ಮಳೆಯ ಹನಿಗಳೇ ಯಾಕೆ ನಮ್ಮ ಮೇಲೆ ಕನಿಕರವಿಲ್ಲವೆ ಅಥವಾ ಸಮಯ ಬರಲೀ ಎಂದೇ. ನೀವು ನೆಲಕ್ಕಿಳಿಯದೇ ಸಮಯ ತುಂಬಾ ಆಯಿತು.‌ ಅವತ್ತು ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಓಡಿದವರು ಕೈಗೆ ಸಿಗುವ ಲಕ್ಷಣವೇ ಇಲ್ಲ.ನಾನು ಸೋತಿದ್ದೇನೆ. ನೀವೇ ಸರ್ವ ಶ್ರೇಷ್ಠ. ನಿಮಗೆ ಶರಣಾಗಿದ್ದೇನೆ. ಈಗಲಾದರೂ ಮುಖ ತೋರಿಸಿ. ಆಗಾಗ ಬಂದು ಕುಶಲೋಪರಿ ಮಾತನಾಡುತ್ತಾ ಇರಬೇಕು. ನನಗೇನೋ ನಿಮ್ಮ ಮುಖ ಭಾವ ಗಮನಿಸಿದರೆ ನಮ್ಮ ಮೇಲೆ ವಿಪರೀತ ಸಿಟ್ಟಿದೆ ನಮ್ಮ ಕೊಬ್ಬಿನ ಬೆವರು ಇಳಿಸುವದ್ದಕ್ಕೆ ಏನೋನೋ ಬಿಸಿಲಿನ ಆಟ ಆಡ್ತಾ ಇದ್ದೀರಿ ಅಂತ ಅನ್ನಿಸ್ತಿದೆ. ಆಟ ಸಾಕು. ಬನ್ನಿ ನಿಮ್ಮ ಜೊತೆ ಹೊಸ ಒಡಂಬಡಿಕೆ ಮಾಡೋಕೆ ನಾವು ತಯಾರಾಗಿದ್ದೇವೆ. ನೀವು ಹೇಳಿದಂತೆ ಕೇಳುತ್ತೇವೆ. ನೀವು ಬರಲೇ ಬೇಕು. ಮೋಡದ ಮರೆಯ ಕಣ್ಣಾ ಮುಚ್ಚಾಲೆ ಬಿಟ್ಟು ಕೈ ಹಿಡಿದು ಜೊತೆ ಸಾಗುವ. ಕೇಳಿಸ್ತಾ ಇದಿಯಾ ನನ್ನ ಮಾತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ