May 2024

  • May 21, 2024
    ಬರಹ: Ashwin Rao K P
    ಸ್ಪರ್ಶದಿಂದ ಸ್ವರೂಪ ತಿಳಿಯುವಿಕೆ : ಮಣ್ಣಿನ ಫಲವತ್ತತೆಯು ಅದರ ಸ್ವರೂಪವನ್ನು ಅವಲಂಭಿಸಿರುವುದರಿಂದ ವ್ಯವಸಾಯ ಮಾಡುವವರು ಯಾವುದಾದರೊಂದು ಮಣ್ಣು ಯಾವ ಸ್ವರೂಪದ್ದೆಂದು ಹೇಳಲು ಶಕ್ತರಾಗಬೇಕು. ಪ್ರಯೋಗಶಾಲೆಯಲ್ಲಿ ಅದನ್ನು ಪರೀಕ್ಷಿಸಲು…
  • May 21, 2024
    ಬರಹ: Ashwin Rao K P
    ದೇಶದಲ್ಲೀಗ ನಡೆಯುತ್ತಿರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಜಾರಿಯಲ್ಲಿರುವ ಚುನಾವಣ ನೀತಿ ಸಂಹಿತೆಯಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಲು ಕೇಂದ್ರ ಚುನಾವಣ ಆಯೋಗ ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ.…
  • May 21, 2024
    ಬರಹ: Shreerama Diwana
    ಸರ್ವೇ ಜನೋ ಸುಖಿನೋ ಭವಂತು. ನಮ್ಮ ನೆರೆಯ ದೇಶ ಮತ್ತು ಒಂದು ಕಾಲದ ನಮ್ಮದೇ ದೇಶದ ಭಾಗವಾಗಿದ್ದ ಪಾಕಿಸ್ತಾನ ಇತ್ತೀಚಿನ ಸುದ್ದಿಗಳ ಪ್ರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಮತ್ತು ದಿವಾಳಿತನದ ಅಂಚಿನಲ್ಲಿದೆ. ದೇಶವೇ ಇರಲಿ, ವೈಯಕ್ತಿಕ ಬದುಕೇ…
  • May 21, 2024
    ಬರಹ: ಬರಹಗಾರರ ಬಳಗ
    ಅರ್ಥಮಾಡಿಕೊಳ್ಳಬೇಕಾದ್ದು ಯಾರು? ತಾಯಿಯೋ ಮಗನೋ? ಇಬ್ಬರ ಮನಸ್ಸಿನಲ್ಲಿಯೂ ತಾವು ಸರಿ ಅವರು ತಪ್ಪು. ಅವರವರ ನೆಲೆಯಲ್ಲಿ ಅವರವರ ಯೋಚನೆ ವಿಧಾನವನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಒಮ್ಮೆ ಅವರು ತಮ್ಮ ಸ್ಥಳವನ್ನು ಬಿಟ್ಟು ಅವರ ಸ್ಥಳವನ್ನು…
  • May 21, 2024
    ಬರಹ: ಬರಹಗಾರರ ಬಳಗ
    ಇಂದು ನಾನು ಪತಂಜಲಿ ಯೋಗ ಸೂತ್ರ ಗ್ರಂಥ ಓದುವಾಗ, ಎರಡನೇ ಪಾದ, ಎರಡನೇ ಸೂತ್ರದಲ್ಲಿ ಒಂದು ಪದ ಓದಿದೆ. ಸಮಾಧಿ ಭಾವದರ್ಶನ. ಇದು ನಮಗೆ ಲಾಭವಾಗಬಹುದು ಎಂದು, ಇದರ ಕುರಿತು ಬರೆಯುತ್ತಿದ್ದೇನೆ. ಸಮಾಧಿ ಎಂದರೆ ಮನಸ್ಸು ಮಗ್ನವಾಗುವುದು, ತಲ್ಲೀನ…
  • May 21, 2024
    ಬರಹ: ಬರಹಗಾರರ ಬಳಗ
    ನಾನು ತದೇಕ ಚಿತ್ತದಿಂದ ಆ ಓತೀಕ್ಯಾತವನ್ನು ನೋಡುತ್ತಾ ಕುಳಿತೆ... ಜೇನುಗೂಡು ಸಮೀಪದಲ್ಲೇ ಇದೆ. ನೋಡಲು ಶುರುಮಾಡಿ 20-30 ಸೆಕೆಂಡ್ ಆಗಿರಬಹುದು. ತನ್ನ ಎರಡೂ ಮುಂಗಾಲುಗಳನ್ನು ಕೊಂಚ ಬಗ್ಗಿಸಿ ಜೇನುಗೂಡುಗಳಿಂದ ಬಗ್ಗಿ ಒಂದು ಹುಳವನ್ನು ಬಾಯಲ್ಲಿ…
  • May 21, 2024
    ಬರಹ: ಬರಹಗಾರರ ಬಳಗ
    ಶುಕ್ಲಪಕ್ಷದ ವೈಶಾಖ ಚತುರ್ದಶಿ ನಿನ್ನ ಆರಾಧನೆ ಜಯಂತಿ ನಮಗೆ ಖುಷಿ/ ಕೃಪೆ ದೋರು ಮಹಾಮಹಿಮ ನಾರಸಿಂಹ ಜಗದ ಜೀವರ ಉಸಿರ ರಕ್ಷಿಸು ಘನಮಹಿಮ//   ಭಗವಾನ್ ವಿಷ್ಣುವಿನ ನಾಲ್ಕನೆಯ ಅವತಾರದಲಿ ಕಂಬದಲುದಿಸಿದೆ ದುಷ್ಟ ಸಂಹಾರವೇ ಮೂಲ ಮಂತ್ರವೆಂದೆನಿಸಿದೆ/…
  • May 20, 2024
    ಬರಹ: Ashwin Rao K P
    ನೀವು ತಿಳಿದೋ / ತಿಳಿಯದೆಯೋ ಮಾಡುವ ಯಾವುದೇ ತಪ್ಪಿಗೆ ಕ್ಷಮೆ ಎಂಬುದು ಇರುತ್ತದೆ ಎಂಬುದು ಬಹಳ ಹಿಂದಿನ ಮಾತು. ಆದರೆ ಪ್ರತಿಯೊಂದು ತಪ್ಪಿಗೆ ತನ್ನದೇ ಆದ ಶಿಕ್ಷೆ ಇದ್ದೇ ಇರುತ್ತದೆ. ತಪ್ಪು ಮಾಡಿದವನು ಅದರ ಪ್ರತಿಫಲ ಉಣ್ಣಲೇ ಬೇಕು. ಕೆಲವು…
  • May 20, 2024
    ಬರಹ: Ashwin Rao K P
    ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು…
  • May 20, 2024
    ಬರಹ: Shreerama Diwana
    ಶ್ರೀ ಎಚ್ ಡಿ ದೇವೇಗೌಡ 92, ನಾಟ್ ಔಟ್ ಅವರು ಶತಕವನ್ನು ಬಾರಿಸಲಿ ಎಂದು ಹಾರೈಸುತ್ತಾ… ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿಯ ಸಾಮಾನ್ಯ ರೈತ ಕುಟುಂಬದ ವ್ಯಕ್ತಿಯೊಬ್ಬರು ಬೃಹತ್ ಭಾರತದ ಪ್ರಧಾನಿಯಾಗಿ…
  • May 20, 2024
    ಬರಹ: ಬರಹಗಾರರ ಬಳಗ
    ಆ ಕನ್ನಡಿ ಎಲ್ಲಿ ಸಿಗುತ್ತೆ ? ಅದನ್ನಾದರೂ ಹೇಳಿ ಮಾರಾಯರೇ!. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದೇನೆ. ಮೊನ್ನೆ ಕೂದಲು ಕಟ್ ಮಾಡೋ ಅಂಗಡಿಗೆ ಹೋಗಿದ್ದೆ. ಎಲ್ಲಾ ಆದ್ಮೇಲೆ ಕೊನೆಯಲ್ಲಿ ನನ್ನ ಮುಖವನ್ನು ನಾನೇ ಕನ್ನಡಿಯಲ್ಲಿ ನೋಡಿದಾಗ ಮತ್ತೊಂದು…
  • May 20, 2024
    ಬರಹ: ಬರಹಗಾರರ ಬಳಗ
    ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉತ್ತಮ ಸಾಧನೆ ಮಾಡಿದ ಮಕ್ಕಳ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಟ್ಟುಕೊಂಡರೆ, ಕಳಪೆ ಸಾಧನೆ ತೋರಿದ ಮಕ್ಕಳ ಹೆತ್ತವರು ಒಂದಷ್ಟು ಕೊರಗಿರಬಹುದು. ಉಳಿದಂತೆ ಇವುಗಳ ಮಧ್ಯೆ ಇರುವವರು…
  • May 20, 2024
    ಬರಹ: ಬರಹಗಾರರ ಬಳಗ
    ನಗುವೆಂ‌ಬ ಸಿರಿಯೊಂದು ಮೊಗದಲ್ಲಿ ಅರಳಿರಲಿ ಬಿಗುಮಾನ ಬದಿಗಿರಿಸಿ ನಗು ಮೂಡಿಬರಲಿ   ಚಿಗುರೆಲೆಯ ತಳಿರಂತೆ ಮಿಗಿಲೆನಿಪ ಬೆಳೆಯಂತೆ ಮಗುವಂತೆ ಮತ್ತೊಮ್ಮೆ ನಗು ಮೂಡಿಬರಲಿ   ಅವಸರದ ಬದುಕಿನಲಿ ಬೆವರಿಳಿವ ದುಡಿಮೆಯಲಿ ಅವನೆಲ್ಲ ಮರೆತೊಮ್ಮೆ ನಗು…
  • May 19, 2024
    ಬರಹ: Kavitha Mahesh
    ಮಸಾಲೆ ಸಾಮಾಗ್ರಿಗಳನ್ನು ಬೇರೆಬೇರೆಯಾಗಿ ಹುರಿದು ಸೇರಿಸಿ ಹುಡಿ ಮಾಡಿಟ್ಟುಕೊಳ್ಳಿ. ಮೈದಾ, ಕಡಲೆ ಹಾಗೂ ಅಕ್ಕಿ ಹಿಟ್ಟುಗಳಿಗೆ ಅರಶಿನ, ಖಾರದ ಹುಡಿ, ಉಪ್ಪು, ಎರಡು ಚಮಚ ಬಿಸಿ ಎಣ್ಣೆ ಹಾಕಿ ಪೂರಿ ಹದಕ್ಕೆ ಗಟ್ಟಿಯಾಗಿ ಕಲಸಿ. ನಂತರ ಚಪಾತಿಯಂತೆ…
  • May 19, 2024
    ಬರಹ: Shreerama Diwana
    ನನ್ನ ಹುಟ್ಟಿಸಿದ ನೋವಿಗೇ ನನ್ನಮ್ಮ ತೀರಿಕೊಂಡಿದ್ದಳು. ಅಮ್ಮನನ್ನು ಕೊಂದ ಪಾಪಿ ಎನ್ನುವ ಅಪವಾದ ಹೊತ್ತೇ ಜನಿಸಿದೆನು. ಅಮ್ಮ, ಅಮ್ಮನ ಎದೆ ಹಾಲು, ಅಮ್ಮನ ಕ್ಯೆತುತ್ತು, ಅಮ್ಮನ ಪ್ರೀತಿ ಇಂದಿಗೂ ಅನುಭವವೇ ಆಗಿಲ್ಲ. ಆದರೆ ಅಪ್ಪನಲ್ಲದೆ ಇನ್ನೊಂದು…
  • May 19, 2024
    ಬರಹ: ಬರಹಗಾರರ ಬಳಗ
    ಅಧಿಕಾರ ಯಾರದ್ದು? ಹಾಗೆ ಸುಲಭದಲ್ಲಿ ಅಧಿಕಾರ ಸಿಗೋದಿಲ್ಲ. ಅದನ್ನ ಪಡೆದುಕೊಳ್ಳಬೇಕು. ಅದಕ್ಕೆ ಒಂದಷ್ಟು ಅರ್ಹತೆಗಳು ಇರಬೇಕು. ಆ ಮರದಲ್ಲಿರುವ ಹಣ್ಣುಗಳನ್ನು ಹಕ್ಕಿಗಳು ಬಂದು ತಿನ್ನುತ್ತವೆ. ಅರ್ಧಂಬರ್ಧ ತಿಂದ ಹಣ್ಣುಗಳು ನೆಲಕ್ಕುರುಳಿದರೆ,…
  • May 19, 2024
    ಬರಹ: ಬರಹಗಾರರ ಬಳಗ
    ಒಂದು ದಿನ ಈಚ ನಮ್ಮ ಮನೆಗೆ ಏನೋ ಸಂತಸದ ಸುದ್ದಿಯನ್ನು ಹೊತ್ತು ತಂದಂತೆ ಬಂದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ "ದೊಣ್ಣೆ ಕಾಟ (ಓತೀಕ್ಯಾತ) ಹೊಡೆದು ಮಣ್ಣಲ್ಲಿ ಹೂತಿಟ್ಟರೆ ದುಡ್ಡು ಸಿಗುವುದಂತೆ" ಯಾರ್ಯಾರಿಗೋ ಎಷ್ಟೆಷ್ಟೋ ಹಣ ಸಿಕ್ಕಿತಂತೆ.…
  • May 19, 2024
    ಬರಹ: ಬರಹಗಾರರ ಬಳಗ
    ನೀ ಬಾರೋ ಬಳಿಗೆ ಕೈಹಿಡಿದು ಅನುದಿನವು ಕಾಪಾಡುಯೆಂದೆಂದೂ ಮುದದಿ ಸೆಳೆಯುತ ಒಲವಿನಲಿ ಮುದ್ದಿಸೆ ಬೆಸುಗೆಯಿಂದಲಿ ತಬ್ಬುತ ವಿರಹವನು ಮರೆಸುತಿರು ನಾನು ನೀನಾಗುತಲೆ ಬದುಕಿಂದು
  • May 18, 2024
    ಬರಹ: Ashwin Rao K P
    ಕೂಬಸ್ ಮಾರುಕಟ್ಟೆಗೆ ಹೋದಾಗ ತಂಗಿಯ ಮಗ ಆಟದ ಸಾಮಾನಿನ ಅಂಗಡಿಯ ಮುಂದೆ ನಿಂತು ‘ಕೂಬಸ್' ಬೇಕು ಎಂದು ಹಠ ಮಾಡತೊಡಗಿದ. ಸರಿ, ಅಂಗಡಿಯವನಿಗೆ ಬಸ್ಸು ತೋರಿಸಪ್ಪಾ ಎಂದಿದ್ದಾಯಿತು. ಯಾವುದನ್ನು ತೋರಿಸಿದರೂ, ಇದಲ್ಲ ‘ಕೂಬಸ್' ಬೇಕು ಎನ್ನತೊಡಗಿದ.…
  • May 18, 2024
    ಬರಹ: Ashwin Rao K P
    ಬೆಂಗಳೂರಿನಲ್ಲಿ ಕಳೆದ ಮೇ ೬ ರಿಂದ ೧೨ ರ ನಡುವೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ೧ ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಅಲ್ಪಸ್ವಲ್ಪ ಮಳೆಗೇ…