ಚಿನ್ನ.....
ಕವನ
ನಲ್ಲೆಯನ್ನ 'ಚಿನ್ನ -ಚಿನ್ನಾ-ನನ್ ಬಂಗಾರ
ಎಂದ ತಪ್ಪಿಗೆ(!)
ತಿಂಗಳ ಕೊನೆಯಲ್ಲಿ ಬಿತ್ತಪ್ಪ ಟ್ಯಾಕ್ಸು !!
'ಏರಿದವ ಇಳಿಯಲೇ ಬೇಕು'
ಅನುಭವದ ನುಡಿ,ಆದರೇನು
ಚಿನ್ನಕ್ಕದು ಅನ್ವಯವಲ್ಲ!!
ಹಳದಿ ಲೋಹದ ಮಾಯೆಗೆ
ನನ್ನವಳು ಮರುಳಾಗಿರಲು,
ನಲ್ಲೆಯ ಪ್ರೀತಿಯಲಿ ನಾ
ಮುಳುಗಿರಲು,
ಚಿನ್ನಾ , ನೀನೆ ಚಿನ್ನಾ-ಚೆನ್ನ , ನಿನಗೇಕೆ ಚಿನ್ನಾ? ಅಂದುಳಿಯುವುದು0ಟೆ!!