ನಲ್ಮೆಯ ಗೆಳೆಯ
ನನ್ನಂತರಾಳದಲಿ ಹುದುಗಿದ ನೋವಿನ ಉಪಶಮನ
ನೀನಾದೆಯಲ್ಲ, ನನ್ನ ಗೆಳೆಯ
ನನ್ನಾಸೆಯ ಮೊಗ್ಗನು ಚಿಗುರಿಸಿ
ನೀನಾದೆ, ನನ್ನ ಮನಸಿನ ಒಡೆಯ
ನಿನ್ನ ಕಂಗಳಿಂದ ಮನ ಸೆಳೆದು
ಪ್ರೀತಿಯ ಜಾಲದಲಿ ನನ್ನ ಬಂಧಿಸಿದೆ
ನನ್ನೆಲ್ಲ ನೋವಿಗೂ ನೀ ಸ್ಪಂದಿಸಿದೆ
ನನ್ನೊಳಗೇ ನೀ ಮನೆಮಾಡಿದೆ
ಜೀವನದ ಪ್ರತಿ ಹಂತದಲೂ ನೀನಿರು ನನ್ನೊಡನೆ
ನನ್ನ ಬೆಂಗಾವಲಾಗಿ, ಸ್ಪೂರ್ತಿಯಾಗಿ, ಪ್ರೇರಣೆಯಾಗಿ
ಸಾವಿರ ತೊಂದರೆಗಳೇ ಬರಲಿ, ನಾ ಎದರಿಸುವೆ
ನೀನಿದ್ದರೆ, ನನ್ನೊಳಗೊಂದಾಗಿ
ಲೌಕಿಕ ಸುಖವನ್ನು ತ್ಯಜಿಸುವೆ
ಮೋಹಮಾಯೆಗಳಿಂದ ಬಿಡುಗಡೆ ಪಡೆವೆ
ನೀನಿರು ನನ್ನೊಂದಿಗೆ ಗೆಳೆಯ, ಕೇವಲ ನೀನಿರು
ದೇಹ ತ್ಯಜಿಸಿದರೂ, ಆತ್ಮದಿಂ ನಿನ್ನೊಂದಿಗಿರುವೆ
ಅನ್ವೇಷಾ