ನಿನ್ನ ಋಣಂ
ನಿನ್ನ ಋಣಂ
-------------
ಅನಂತ ಸೃಷ್ಟಿಯಿಂ ಅಪರೂಪ ಮೇಣ್ ಅನನ್ನ್ಯಂ,
ಕಮನೀಯಂ ಮೇಣ್ ದಿವ್ಯ ಗ್ರಹವಾದ ಈ ಧಾತ್ರಿಯೋಳ್,
ಎನ್ನವತರಣಂಕೆ ಕಾರಣಪುರುಷನಾದ
ಜನ್ಮದಾತನೆ, ನಿನ್ನ ಋಣಂ ನಾಂ ತೀರ್ವೆನೇಂ?
ಈ ಪುಣ್ಯಭೂಮಿಯ ಅಸ್ತಗಿರಿಯುದಯಮಂ ಕಾಣ್ಬ,
ಗಿರಿವನಗಳಂಗಳಲಿ ಮೊರೆದರಿವ ವೈತರಿಣಿಯಂ ಕೇಳ್ಬ,
ಸೃಷ್ಟಿಸೌಂದರ್ಯಸುಖನೀಂಟಿ ಆನಂದದಿಂ ನಲಿವ,
ಎನ್ನ ಸರ್ವೇಂದ್ರಿಯಗಳ್ ನಿನ್ನ ಋಣಂ ತೀರ್ಚುದೇಂ?
ಅಜ್ಞಾನವಳಿಪ ದಿವ್ಯವಿಧ್ಯೆಯನಗಿತ್ತೆ.
ಸರಿತಪ್ಪು ಮೋಸವಿಶ್ವಾಸಂಗಳ ಅರಿವೆನಗಿತ್ತೆ.
ಅಶಿಸ್ತಿನ ಕೊಳಕನ್ನು ಶಿಸ್ತಿನಿಂ ತೊಳೆದೆ.
ಜಗದ ಕ್ರೂರವೆನಗೆ ತಾಗವೋಲ್ ರಕ್ಷಿಸಿದೆ.
ಕುಡಿಯು ಕುಟ್ಮಲವಾಗಿ, ಕುಟ್ಮಲವರಳಿ
ಕುಸುಮವಾಗನ್ನೆಗಂ ವೃಕ್ಷ ಪೋಷಿಸುವಂತೆವೋಲ್,
ಪೂಜ್ಯ ಪಿತನೆ ನೀನೆನ್ನ ಪೋಷಿಸಿದೆ.
ಅಂದು ಶಿಶುವಿನಿಂದ ನೀನೆನ್ನ ಕೈಪಿಡಿದು
ನಡೆಸಲಲ್ತೆ, ನಾನಿಂದು ಬೆಳೆದು ಯೋಗ್ಯನಾಗಿರ್ಪೆನ್.
ಇಂದು ಬಾಳಂಚಿನಲಿ ಬಳಲಿ ನಡೆಯುತಿಹ
ತಂದೆಯೆ, ನಾನಿನ್ನ ಕೈಪಿಡಿದು ನಡೆಸಲೊಲ್ಲೆನೆಂಬೆನೇನ್?
ಪ್ರೇಮ ಮಮತೆಯೊಳ್ ಎನ್ನ ಸಲಹಿರುವ
ನಿನ್ನ ಸಲಹುವವಕಾಶವೆನ್ಗೆ ಸೌಭಾಗ್ಯಂ.
ನಿನ್ನ ಋಣವೆನ್ನ ಜೀವಕೆ ಬಲಂ.
ನಿನ್ನ ಸಲಹುವೆನೆ ಹಿಗ್ಗುವುದು ಮನಂ.
ಕೊರಗದಿರ್ ಪೂಜ್ಯ ಪಿತೃ,
ನಿನ್ನ ಪೋಷಣೆಯೆನಗೆ ಭಾರವಲ್ಲ ಭಾಗ್ಯಂ.
ಶಾಂತಿಯಲಿ ವಿಶ್ರಮಿಸು ನೀಯೆನ್ನ ಮಡಿಯೊಳ್,
ನೀನಿಂದು ನನಗೆ ಪಿತೃಶಿಶು.
Comments
ಉ: ನಿನ್ನ ಋಣಂ
In reply to ಉ: ನಿನ್ನ ಋಣಂ by raghumuliya
ಉ: ನಿನ್ನ ಋಣಂ
ಉ: ನಿನ್ನ ಋಣಂ
In reply to ಉ: ನಿನ್ನ ಋಣಂ by swara kamath
ಉ: ನಿನ್ನ ಋಣಂ
ಉ: ನಿನ್ನ ಋಣಂ