ನೀನಾರಿಗಾದೆಯೋ ಎಲೆ ಮೂಲಂಗಿ ಪ್ಯಾಂಟೇ?

ನೀನಾರಿಗಾದೆಯೋ ಎಲೆ ಮೂಲಂಗಿ ಪ್ಯಾಂಟೇ?

ಕವನ

೭೦-೮೦ರ ದಶಕದಲ್ಲಿ ಮೂಲಂಗಿ ಪ್ಯಾಂಟು ಅಂದರೆ ನಡುವಿಗಿಂತ ತುದಿಗಾಲಿನ ಹತ್ತಿರದ ಸುತ್ತಳದೆ ಬಹಳ ಕದಿಮೆ ಇರುತ್ತಿತ್ತು. ತದನಂತರ ಬಂದದ್ದೆ ಬೆಲ್-ಬಾಟಮ್ (ಘಂಟೆಯಾಕಾರದ ಬುಡವುಳ್ಳದ್ದು) ತದನಂತರ ಬಂದದ್ದು ಎಲಿಫ್ಯಾಂಟ್ ಬಾಟಮ್ಮು (ಆನೆಯ ಕಾಲು ತೂರ ಬಹುದಾದಷ್ಟು ದೊಡ್ಡದು) ಆಮೇಲೆ ಕಾಲ ಕ್ರಮೇಣ ಬಂದದ್ದು ಪಾರಲಲ್ ಪ್ಯಾಂಟು - ನಡು ಮತ್ತು ತಳದವರೆಗೆ ಒಂದೇ ಆಕಾರ ಮತ್ತು ಅಳತೆಯುಳ್ಳದ್ದು. ಮೂಲಂಗಿ ಪ್ಯಾಂಟಿನ ಜಮಾನದಲ್ಲಿ ನಮ್ಮಲ್ಲಿ ಪ್ರಚಲಿತವಿದ್ದ ಒಂದು ಹಾಸ್ಯ ಕವನವನ್ನು ನಿಮ್ಮ ಮುಂದಿಡುತ್ತಿದ್ದೇನೆ; ಅದು ಈ ರೀತಿ ಇದೆ. ಗಮನಿಸಿ ಆಗ ಪ್ಯಾಂಟು ತೊಡುವವರ ಸಂಖ್ಯೆಗಿಂತ ಲುಂಗಿ ಉಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

 

ಉಟ್ಟರೆ ಲುಂಗಿಯಾದೆ,

ಕಟ್ಟಿದರೆ ಪಂಚೆಯಾದೆ,

ಹಾಸಿಕೊಂಡರೆ ಹಾಸಿಗೆಯಾದೆ,

ಹೊದ್ದುಕೊಂಡರೆ ಹೊದಿಕೆಯಾದೆ (ಬೆಡ್ ಶೀಟಾದೆ),

ತಲೆಗೆ ಸುತ್ತಿದರೆ ಮುಂಡಾಸಾದೆ,

ವರೆಸಿಕೊಂಡರೆ ಟುವಾಲಾದೆ,

ನೀನಾರಿಗಾದೆಯೋ ಎಲೆ ಮೂಲಂಗಿ ಪ್ಯಾಂಟೇ?

(ಈ ಕವನ ನನ್ನ ಸ್ವಂತದ್ದೇನೂ ಅಲ್ಲ. ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಗೋವಿನ ಹಾಡು - ಬಹುಶಃ  ಮುಪ್ಪಿನ ಷಡಕ್ಷರಿ ಶಿವಯೋಗಿಗಳು ಬರೆದದ್ದು ಅಂದುಕೊಳ್ಳುತ್ತೇನೆ. ಆ ಹಾಡಿನ ದಾಟಿಯಲ್ಲಿ ಈ ಹಾಡು ಕೂಡ ಸಾಗುತ್ತದೆ ಇದನ್ನು ರಚಿಸಿದ ಮೂಲ ಕವಿ ಯಾರೋ ತಿಳಿಯದು. ನಮ್ಮ ಬಾಲ್ಯದ ನೆನಪು ಮೂಡಿ ಬಂದದ್ದರಿಂದ ಈ ಹಾಡನ್ನು ಹಾಕಿದ್ದೇನೆ; ಷಡಕ್ಷರಿಗಳ ಕ್ಷಮೆಕೋರಿ. ಚೆನ್ನಾಗಿದೆ ಎಂದು ಕೊಂಡರೆ ಒಮ್ಮೆ ನಕ್ಕುಬಿಡಿ!)

Comments