'ಸಂಪದದ ಅಂಗಳದಲ್ಲಿ ನನ್ನ ಕವಿತೆ'

'ಸಂಪದದ ಅಂಗಳದಲ್ಲಿ ನನ್ನ ಕವಿತೆ'

ಕವನ
ನಾನು ನನ್ನ ಕವಿತೆಗೆ ಮೀಯಿಸಿ,ತಲೆಬಾಚಿ ಸಿಂಗರಿಸಿ,ಗರಿಗರಿಯ ಉಡುಗೆಯ ತೊಡಿಸಿ, ಬಿಡುತ್ತೇನೆ ಆಡಲು ಸಂಪದದ ಅಂಗಳಕ್ಕೆ. ಹಲವರು ಬಳಿ ಸಾರಿ ಕೆನ್ನೆ ಹಿಂಡಿ ಮುಗುಳ್ನಗುತ್ತಾ ಸಾಗುತ್ತಾರೆ. ಮತ್ತೆ ಕೆಲವರು ದೂರದಿಂದಲೇ ನೋಡಿ ಸುಮ್ಮನಾಗುತ್ತಾರೆ. ಎಲ್ಲೋ ಕೆಲವರು ಮಾತಾಡಿಸಿ,ಮುದ್ದಿಸುತ್ತಾರೆ. ಹಲವು ದಿನ ಕವಿತೆ ಹಿಗ್ಗಿನಿಂದಲೇ ಮನೆಗೆ ಹಿಂದಿರುಗುತ್ತದೆ. ಅದ ಕಂಡು ಮನವು ಸಹ ಹಿಗ್ಗುತ್ತದೆ. ಕೆಲವು ದಿನ ಮನೆ ತಲುಪಿದಾಗ ಕವಿತೆ ಕಳೆಗುಂದಿರುತ್ತದೆ. ಆದರೂ ಬೇಸರಿಸದಿರುತ್ತೇನೆ.ಎಷ್ಟಾದರೂ ನನ್ನ ಕವಿತೆ. ಹೆತ್ತವರಿಗೆ ಹೆಗ್ಗಣವೂ ಮುದ್ದಾಲ್ಲವೇ?

Comments