‍ನೆಲಕಡಲೆ ಟಿಕ್ಕಿ

‍ನೆಲಕಡಲೆ ಟಿಕ್ಕಿ

ಬೇಕಿರುವ ಸಾಮಗ್ರಿ
  • ಚೆನ್ನಾಗಿ ಕೆಂಪಗೆ ಹುರಿದಿಟ್ಟ ನೆಲಕಡಲೆ ಬೀಜ ವನ್ನು ವರಟಾಗಿ ರುಬ್ಬಿ ‍  1/2 ಕಪ್ 
  • ಕಡಲೆ ಹಿಟ್ಟು 1/2 ಕಪ್ 
  • ಗೋಧಿ ಹಿಟ್ಟು 1/3 ಕಪ್ 
  • ಸಕ್ಕರೆ ರುಚಿಗೆ 
  • ಉಪ್ಪು ರುಚಿಗೆ 
  • ಪಾಲಕ್ ಸೊಪ್ಪು 1/2 ಕಪ್ 
  •  ಸಣ್ಣಗೆ ಹೆಚ್ಚಿದ ಹಸಿರು ಮೆಣಸು 
  • ಲಿಂಬೆ ರಸ‌ 1 ಚಮಚ‌  
  • ಕರಿಯಲು ತಕ್ಕ ಎಣ್ಣೆ 
ತಯಾರಿಸುವ ವಿಧಾನ
  • ಮೇಲ್ಕಂಡ ಸಾಮಾಗ್ರಿಗಳೆಲ್ಲವನ್ನು ಸೇರಿಸಿ, ಹಾಗೆ ಬೆರೆಸಿಕೊಳ್ಳಿ. ತದ ನಂತರ ತಕ್ಕ ಮಟ್ಟಿಗೆ ನೀರು ಹಾಕಿ ಬೆರೆಸಿಕೊಳ್ಳಿ. 
  • ತವಾ/ nonstick pan ನಲ್ಲಿ 2 ‍ರಿಂದ‌ 3 ಚಮಚ ಎಣ್ಣೆ ಹಾಕಿ
  • ತವಾ ಕಾದ ಮೇಲೆ, ಬೆರೆಸಿದ ಮಿಶ್ರಣವನ್ನು ಹದವಾಗಿ ಅಂಗುಲದಷ್ಟು ಅಗಲಕ್ಕೆ ತಟ್ಟಿ, ಕಾದ ಕಾವಲಿಯ ಮೇಲೆ ಒಂದೊಂದಾಗಿ ಇಡಿ. 
  • ಎಣ್ಣೆ ಬೇಕಾದಲ್ಲಿ ಇನ್ನಷ್ಟು ಬಳಸಬಹುದು. 
  • ಎರಡು ಬದಿಯಲ್ಲಿ ಕೆಂಪಾಗಿ ಕಾಯಿಸಿ (ಈ ರೀತಿ ಕಾಯಿಸುವ ವಿಧಾನ‌ಕ್ಕೆ shallow fry ಎಂದು english ನಲ್ಲಿ ಹೇಳುತ್ತಾರೆ) 
  • ಬಿಸಿ ಬಿಸಿ ಬಡಿಸಿ. 

 

ರುಚಿ ಕೃಪೆ: ತರಲಾ ದಲಾಲ್. ಇವರು ತಮ್ಮ‌ ಪುಸ್ತಕದಲ್ಲಿ, ಈ ರುಚಿ ವಿಟಾಮಿನ್ ಗಳಿಂದ‌ ಕೂಡಿದೆ ಎಂದು ಬರೆದಿದ್ದಾರೆ.

Comments

Submitted by ಗಣೇಶ Thu, 09/19/2013 - 00:19

ರಾತ್ರಿ ಲೇಟಾಗಿ ಸಂಪದ ಎಂಟ್ರಿ ಆಗುವುದರಿಂದ ನನಗೆ ತುಂಬಾ ಲಾಸ್. ಒಂದೇ ಟಿಕ್ಕಿ ಉಳಿದಿದೆ.:)
ಟಿ.ವಿಯ ಅಡುಗೆ ಕಾರ್ಯಕ್ರಮದಲ್ಲಿ ನೋಡಿದ "ಎಗ್‌ಲೆಸ್ ಕೇಕ್" ಒಮ್ಮೆ ಮಾಡಿದ್ದೆವು. ಸಂಪದದಲ್ಲಿ ಹಾಕಲೆಂದು ತಯಾರಿ ಮಾಡುವ ಪ್ರತೀ ಹಂತದಲ್ಲೂ ಫೋಟೋ ತೆಗೆದೆ. ಮಾಡಿಯಾದ ಮೇಲೆ ತಿನ್ನಲು ಪ್ರಾರಂಭಿಸಿದ್ದೇ...ಕೊನೆಗೆ ಒಂದು ತುಂಡು ಉಳಿದಾಗ ಫೋಟೋದ ನೆನಪಾಯಿತು.:) ಒಂದೇ ಟಿಕ್ಕಿ ನೋಡಿದಾಗ ನೆನಪಾಯಿತು..

Submitted by ಗಣೇಶ Fri, 09/20/2013 - 00:22

In reply to by ಸುಮ ನಾಡಿಗ್

ಸುಮ ಅವರೆ, "ಜೊತೆಗೆ ರುಚಿಯ ಕೃಪೆ ನಿಮ್ಮದಾಗಿರುತ್ತದೆ.." - :) ಕೃಪೆ ಟಿ.ವಿಯ ಯವುದೋ ಚಾನಲ್‌ನ ಅಡುಗೆ ಕಾರ್ಯಕ್ರಮ. ಟಿಕ್ಕಿ ಖಾಲಿ ಮಾಡಿದ್ದು ನೋಡಿದಾಗ "ಕೇಕ್‌ನ ಪೂರ್ಣ ಫೋಟೋ" ಹಾಕುವಿರಿ ಎಂಬ ನಂಬಿಕೆ ನನಗಿಲ್ಲ:). ಫೋಟೋಗಳು ಸಿಕ್ಕಿದರೆ ಈ ಶನಿವಾರವೇ ಹಾಕುವೆ.

Submitted by nageshamysore Thu, 09/19/2013 - 12:53

ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ಸಿಂಗಪುರದಲ್ಲಿ ಆಗಾಗ್ಗೆ ಪೂರ್ಣ ಶಾಖಾಹಾರಿ / ಸಾಧ್ಯವಿದ್ದಷ್ಟು ಆರೋಗ್ಯಪೂರಕ ಹೊಸರುಚಿ ಪ್ರಯೋಗ ಮಾಡುತ್ತಿರುತ್ತಾರೆ. ಅವರ ರುಚಿಮೂಲ ಕೇಳಿದ್ದಕ್ಕೆ ಈ ಕೆಳಗಿನ ಸೈಟುಗಳನ್ನು ಹೆಸರಿಸಿದರು. ಉಪಯೋಗವಾದೀತಾ ನೋಡಿ (ಲಿಂಕು ತೆರೆಯಲು ತೊಂದರೆಯಾಗದೆಂದು ಭಾವಿಸುವೆ)

All these are totally eggless
 
Very innovative : http://gayathriscook...
 
Beautiful presentation with unfailing recipes : http://www.divinetas...
 
Great variety of egg replacers and very healthy bend of mind :http://www.egglessco...

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು