ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನುಷ್ಯ ಸಂಬಂಧಗಳು...

ರಕ್ತ ಸಂಬಂಧಗಳನ್ನು ಹೊರತುಪಡಿಸಿ ಇತರ ಸಂಬಂಧಗಳ ಗಟ್ಟಿತನ ( ಗಾಡತೆ ) ಮತ್ತು ಪೊಳ್ಳು ( ಟೊಳ್ಳು - ಜೊಳ್ಳು ) ತನ. ರಕ್ತ ಸಂಬಂಧಗಳಾದ ತಂದೆ ತಾಯಿ ಅಜ್ಜ ಅಜ್ಜಿ ಮಕ್ಕಳು ಚಿಕ್ಕಪ್ಪ ದೊಡ್ಡಪ್ಪ ಮುಂತಾದವುಗಳು ಆಯ್ಕೆಗಳಲ್ಲ ಅನಿವಾರ್ಯಗಳು. ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಆ ಸಂಬಂಧಗಳು ಸ್ವಾಭಾವಿಕವಾಗಿಯೇ ಹುಟ್ಟಿನಿಂದಲೇ ನಮ್ಮವರು ಎಂಬ ಅಂತರಾಳದ ಭಾವ ಒಳಗೊಂಡಿರುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೯೭೮)- ಕ್ಷಣ

ಕ್ಷಣವನ್ನು ಭಗವಂತ ಸೃಷ್ಟಿ ಮಾಡುತ್ತಾನೆ. ನಾನು ಆ ಕ್ಷಣದ ನಡುವೆ ದಾಟಿ ಹೋಗಬೇಕಷ್ಟೇ. ಎರಡು ತಂಡಗಳ ನಡುವೆ ಅದ್ಭುತವಾದ ಕ್ರಿಕೆಟ್ ಪಂದ್ಯಾಟವೊಂದು ನಡೀತಾ ಇತ್ತು. ಇಬ್ಬರಿಗೂ ಗೆಲುವು ಬೇಕಾಗಿದೆ. ಗೆಲುವು ತಮ್ಮದೆಂದು ಎಲ್ಲರ ಮುಂದೆ ಸಾರಿ ಹೇಳಬೇಕಾಗಿದೆ. ಅದಕ್ಕಾಗಿ ಅಂಗಳದಲ್ಲಿ ಬೆವರು ಹರಿಸುತ್ತಿದ್ದಾರೆ. ಅಂತಿಮ ಎರಡು ಎಸೆತಗಳ ಮುಂದೆ ಐದು ಓಟಗಳ ಅವಶ್ಯಕತೆ.

Image

ವಿಸ್ಮಯ ಜಗತ್ತಿನಲ್ಲಿ ಬೆರಗು ಮೂಡಿಸಿದ ಕನಸುಗಾರ !

ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದು ಜಗತ್ತಿನ ಅಗರ್ಭ ಶ್ರೀಮಂತ. ಮೃತ್ಯು ಪಾಶಕ್ಕೆ ಕೊರಳೊಡ್ಡುವ ಮುನ್ನ ಮನದಾಳದ ಮಾತುಗಳು ಹೊರಹೊಮ್ಮುತ್ತಿವೆ. ವ್ಯಾಪಾರ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನ ಗಿಟ್ಟಿಸಿ, ಗೆಲುವಿನ ಪ್ರತಿರೂಪ ಆತನಾಗಿದ್ದ. ಆತನಿಗೆ ಉಸಿರಾಡಲು ಜೋಡಿಸಿರುವ ಯಂತ್ರಗಳ ಮಧ್ಯೆ ಮೃತ್ಯು ದೇವತೆ ನಗುತ್ತಿರುವ ಶಬ್ಧ ಕೇಳಿಸುತ್ತಿದೆ. "ಪ್ರಪಂಚದ ಅತ್ಯಂತ ದುಬಾರಿ ಮಂಚ ಯಾವುದು ಗೊತ್ತಾ?

Image

ಟೊಮೆಟೋ ಗೊಜ್ಜು

Image

ತೆಂಗಿನ ಕಾಯಿ, ಮೆಣಸಿನ ಹುಡಿ, ಇಂಗು, ಹುರಿಗಡಲೆ, ಅರಶಿನ ಹಾಗೂ ಜೀರಿಗೆ ಸೇರಿಸಿ ತರಿತರಿಯಾಗಿ ರುಬ್ಬಿ ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ಒಗ್ಗರಣೆಗೆ ಕತ್ತರಿಸಿದ ಈರುಳ್ಳಿ, ಟೊಮೆಟೋಗಳನ್ನು ಹಾಕಿ ಬಾಡಿಸಿ, ಸ್ವಲ್ಪ ನೀರು , ರುಬ್ಬಿದ ಮಸಾಲೆ, ಬೆಲ್ಲ, ಉಪ್ಪು ಹಾಕಿ ಕುದಿಸಿ.

ಬೇಕಿರುವ ಸಾಮಗ್ರಿ

ಟೊಮೆಟೊ ಹಣ್ಣು (ಕತ್ತರಿಸಿದ್ದು) - ೨ ಕಪ್, ಕತ್ತರಿಸಿದ ಈರುಳ್ಳಿ ಅರ್ಧ ಕಪ್, ತೆಂಗಿನ ತುರಿ - ಅರ್ಧ ಕಪ್, ಮೆಣಸಿನ ಹುಡಿ - ೨ ಚಮಚ, ಇಂಗು - ಕಾಲು ಚಮಚ, ಹುರಿಗಡಲೆ - ೩ ಚಮಚ, ಅರಶಿನ - ಕಾಲು ಚಮಚ, ಜೀರಿಗೆ - ಅರ್ಧ ಪುಟ, ಬೆಲ್ಲದ ಹುಡಿ - ೧ ಚಮಚ, ಎಣ್ಣೆ - ೩ ಚಮಚ, ಸಾಸಿವೆ - ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು - ೨ ಚಮಚ

ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿ....

ಕೆಲವೇ ಕೆಲವು ನಟನಟಿಯರು, ನಿರ್ಮಾಪಕರು, ಪ್ರದರ್ಶಕರು ಮಾತ್ರವೇ ದೊಡ್ಡ ಮಟ್ಟದ ಯಶಸ್ಸು ಕಂಡು ಹಣ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90% ಕ್ಕಿಂತ ಹೆಚ್ಚು ಆ ಕ್ಷೇತ್ರದ ಅವಲಂಬಿತರು ನಷ್ಟದಲ್ಲಿದ್ದಾರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಚಿತ್ರರಂಗ ಅವಸಾನದ ಅಂಚಿಗೆ ಬಂದು ತಲುಪುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೯೭೭)- ಕನಸು

ಅವನು ಹಾಗೇ ಏಕ ದೃಷ್ಟಿಯಿಂದ ನೋಡುತ್ತಿದ್ದಾನೆ. ಎಲ್ಲವನ್ನೂ ಕಳೆದುಕೊಂಡ  ತರಹ. ಹಲವು ವರ್ಷದ ಕನಸು ಈಗ ಕೈಜಾರಿ ಹೋಗುತ್ತಿದೆ. ದಿನಗಳನ್ನ ಲೆಕ್ಕ ಹಾಕಿ ರಾತ್ರಿ ಹಗಲು ಬೆವರು ಸುರಿಸಿ ಕೂಡಿಟ್ಟ ಹಣದಲ್ಲಿ ತನ್ನದೊಂದಿಷ್ಟು  ಅಪ್ಪನದೊಂದಿಷ್ಟು ಅಂತ ಸೇರಿಸಿ ಕನಸಿನ ಬೈಕನ್ನು ಖರೀದಿಸಿದ. ಅಪ್ಪನನ್ನೇ ಅದರಲ್ಲಿ ಕುಳ್ಳಿರಿಸಿ ಇಡೀ ಊರು ಸುತ್ತಾಡಿದ. ಸಂಭ್ರಮವೇ ಜೊತೆಯಾಗಿ ಸಾಗುತ್ತಿತ್ತು. ಸುದ್ದಿ ತಲುಪಿತು.

Image

ರೈಲ್ವೇ ಕಂಬದ ಜೇನು ಕಿತ್ತು ಸಿಕ್ಕಿಬಿದ್ದದ್ದು...! (ಭಾಗ 1)

ನಮ್ಮ ಹಳ್ಳಿಗಾಡಿನ ಅಡವಿಯಲ್ಲಿ ಇಚ್ಛಾನುಸಾರ ತಿರುಗಿ ನನ್ನದೇ ತಿರುಗಾಟದ ಜಾಲವನ್ನು ಮಾಡಿಕೊಂಡಿದ್ದ ನಾನು ನನ್ನ ಎಂಟನೇ ತರಗತಿಗೆ ನನ್ನ ವ್ಯಾಪ್ತಿಯನ್ನು ಬಿಟ್ಟು ಹಾಸ್ಟೆಲ್ ಸೇರಬೇಕಾಯಿತು.

Image