ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇದೂ ಒಂದು ಟೂ-ಇನ್-ಒನ್ ಮಂದಿರ

ಮುಂಬಯಿಯೂ ಒಂದು ಹಳ್ಳಿಯಿದ್ದಂತೆ. ಇಲ್ಲೂ ಜನರು ದೇವರು ಎಂದರೆ ಎಲ್ಲೆಂದರಲ್ಲಿ ನೆಲಕ್ಕೆ ಬೀಳುವರು. ಮಾಧ್ಯಾಹ್ನಿಕ ಪತ್ರಿಕೆಯೊಂದರಲ್ಲಿ [:http://web.mid-day…|ಇವತ್ತಿನ ಅಂಕಣ ನೋಡಿ], ಹೀಗಿದೆ: "ಸಿನೆಮಾ ಮಂದಿರವೋ ದೇವತಾ ಮಂದಿರವೋ?" ಮುಂಬಯಿ ಎಂದರೆ ಬರಿಯ ಪಾಶ್ಚಾತ್ಯ ಸಂಸ್ಕೃತಿ ಅಂತ ತಿಳಿಯಬೇಡಿ. ;)

ತೇಜೋಮಯ ಚಿಂತನೆಯೊಂದರ ತುಣುಕು

1999 ಮುಗಿಯುತ್ತಾ ಬಂದಾಗ ‘ಜನವಾಹಿನಿ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ವರ್ಗಾವಣೆಯ ಆದೇಶವೂ ತಲುಪಿತ್ತು. ನನಗೆ ಅರ್ಥವಾಗದ ಕಾರಣಗಳಿಗಾಗಿ ನನ್ನನ್ನು ಚಿಕ್ಕಮಗಳೂರಿಗೆ ವರ್ಗಾಯಿಸಲಾಗಿತ್ತು. 1999ಕ್ಕೆ ವಿದಾಯ ಹೇಳಿದ ಮರುದಿನ ಅರ್ಥಾತ್ 2000ದ ಜನವರಿ ಒಂದನೇ ತಾರೀಕಿನಂದು ನಾನು ‘ಜನವಾಹಿನಿ’ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಸೇರಿಕೊಂಡೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಅಕ್ಷರಶಃ ಕೆಲಸವಿರಲಿಲ್ಲ. ಇಲ್ಲಿ ನನಗೊಬ್ಬ ಸಹಾಯಕ ವರದಿಗಾರರೂ ಇದ್ದುದರಿಂದ ಇಲ್ಲದ ಕೆಲಸ ಇಲ್ಲವೇ ಇಲ್ಲ ಎಂಬಂತಾಗಿತ್ತು. ಇಂಥಾ ಹೊತ್ತಿನಲ್ಲಿ ಎಲ್ಲಾ ಪತ್ರಕರ್ತರೂ ಮಾಡುವಂತೆ ನಾನೂ Special storyಗಳ ಹುಡುಕಾಟದಲ್ಲಿ ಮುಳುಗಿದೆ.

ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ

ತೇಜಸ್ವಿಯವರನ್ನು ಸ್ಮರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಅವರ ಚಿಂತನೆಗೆ ಕನ್ನಡಿ ಹಿಡಿಯುವಂತಹ ಅವರ ಈ ಬರಹ ಸದಸ್ಯರ ಮುಂದಿಡಲು ಬಯಸುತ್ತೇವೆ. ಈ ಬರಹ 'ಸಂಪದ'ದಲ್ಲಿ ಆಗಸ್ಟ್ ೨೦೦೫ರಂದು ಮೊದಲು ಪ್ರಕಟವಾಗಿತ್ತು.

ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಮೊದಲು ಚಾರಿತ್ರಿಕವಾಗಿ ಮೀಸಲಾತಿ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ಅದು ಹುಟ್ಟು ಹಾಕಿರುವ ವಿರೋಧಾಭಾಸಗಳನ್ನು ಮಂಡಿಸಬಯಸುತ್ತೇನೆ.

ಮೊಟ್ಟ ಮೊದಲನೆಯನದಾಗಿ ಮೀಸಲಾತಿಯ ಮೂಲ ಉದ್ದೇಶದ ಬಗ್ಗೆಯೇ ಗೊಂದಲಗಳು ಆರಂಭವಾಗಿರುವುದನ್ನು ಗಮನಿಸಬೇಕು. ಮೀಸಲಾತಿ ಜಾತಿಗಳನ್ನು ಸಮರ್ಥಿಸುವ ಜಾತೀಯತೆಯನ್ನು ಪ್ರೋತ್ಸಾಹಿಸುವ ಆಂದೋಳನವೇ? ಭಾರತದ ಸೆಕ್ಯುಲರ್ ಆಂದೋಲದ ಭಾಗವೇ? ಎಂಬುದನ್ನು ಈಗ ಸ್ಪಷ್ಟ ಪಡಿಸಬೇಕಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀ ಎಲ್.ಜಿ. ಹಾವನೂರ್ ಅವರು ಸಾರ್ವಜನಿಕ ಭಾಷಣವೊಂದರಲ್ಲಿ ಜಾತಿಗಳು ಶಾಶ್ವತ, ಇವು ಸೂರ್ಯ ಚಂದ್ರರಿರುವವರೆಗೂ ಇರುತ್ತವೆ ಎಂದಿದ್ದರು. ಜಾತಿಗಳು ಭವಿಷ್ಯದಲ್ಲೂ ಶಾಶ್ವತವಾಗಿ ಉಳಿಯುತ್ತವೆಯೋ ಇಲ್ಲವೋ ಭವಿಷ್ಯವನ್ನು ಬಲ್ಲವರಾರು? ಅದನ್ನು ಹಾವನೂರರೂ ಹೇಳಲಾರರು. ಆದರೆ ಈ ಹೇಳಿಕೆಯ ಮೂಲಕ ಹಾವನೂರರು ಪ್ರತಿನಿಧಿಸಿದ ಧೋರಣೆ ಮಾತ್ರ ಕಳವಳಕಾರಿಯಾದುದು. ಮೀಸಲಾತಿಯ ಮೂಲ ಆಶಯಗಳಲ್ಲೇ ಗೊಂದಲ ಪ್ರಾರಂಭವಾಗಿರುವುದರ ಮುನ್ಸೂಚನೆ ಇದೆಂದು ನನಗನ್ನಿಸುತ್ತದೆ.

ದೊರಕಿದ ಐನ್ಸ್ಟನ್ ರ ಮೂಲ ಹಸ್ತಪ್ರತಿ

೧೯೨೫ರಲ್ಲಿ ಪ್ರಕಟವಾದ ಆಲ್ಬರ್ಟ್ ಐನ್ಸ್ಟನ್ ರ ಸಂಶೋಧನೆಯ ಮೂಲ ಹಸ್ತಪ್ರತಿ ಲೀಡನ್ ವಿಶ್ವವಿದ್ಯಾಲಯದ ಲಾರೆಂಟ್ಸ್ ಇನ್ಸ್ಟಿಟ್ಯೂಟ್ ಫಾರ್ ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ದೊರೆತಿದೆಯೆಂದು [:http://www.timesdai…|ಟೈಮ್ಸ್ ಡೈಲಿ ವರದಿ ಮಾಡಿದೆ]. ಆ ಹಸ್ತಪ್ರತಿಯ ವಿಷಯ "ಕ್ವಾಂಟಮ್ ಥಿಯರಿ ಆಫ್ ದ ಮೊನೊ ಅಟೊಮಿಕ್ ಐಡೀಲ್ ಗ್ಯಾಸ್" ಎಂಬುದಾಗಿತ್ತೆಂದೂ, ಡಿಸೆಂಬರ್ ೧೯೨೪ರಲ್ಲಿ ಬರೆಯಲಾಗಿತ್ತೆಂದೂ ಹೇಳಲಾಗಿದೆ.

'be yourself' ಮತ್ತು 'ಸ್ವಂತಿಕೆ ಉಳಿಸಿಕೊಳ್ಳುವುದು'

ಉಪದೇಶ ಹೇಳುವಾಗ ಜನ ಕೆಲವೊಮ್ಮೆ ಇಂಗ್ಲೀಷ್ ನಲ್ಲಿ be yourself ಅಂತ ಹೇಳುತ್ತಾರೆ. ಪಶ್ಚಿಮದಲ್ಲಿ ಈ phraseನ ಬಹಳವಾಗಿ ಉಪಯೋಗಿಸುತ್ತಾರೆ. ಒಮ್ಮೆ ವಾಕಿಂಗ್ ಗಿಗೆ ಹೋಗುವಾಗ ಈ phraseಗೆ ಕನ್ನಡ ಅನುವಾದ ಹುಡುಕುತ್ತಿದ್ದೆ. ಕನ್ನಡಕ್ಕೆ literally ಅನುವಾದಿಸುವುದಾದರೆ 'ಸ್ವೇಚ್ಛಾಹಾರಿಯಾಗಿರು' ಎನ್ನಬಹುದು. ಆದರೆ ಈ ಪದವನ್ನು ನಾವು derogatory ಆಗಿ ಬಳಸುತ್ತೇವೆ. ಭಾವಾಂತರಕ್ಕೆ ಪ್ರಯತ್ನಿಸಿದರೆ, ನಿನ್ನತನ ಬೆಳೆಸಿಕೊ ಅಥವ ಸ್ವಂತಿಕೆ ಕಾಪಾಡಿಕೋ ಅಥವ ಸ್ವಂತಿಕೆ ಉಳಿಸಿಕೊ ಎನ್ನಬಹುದು. ಆದರೆ ಈ phraseಗಳ ಅರ್ಥಗಳೂ ಕೂಡ be yourself ಗೆ ಸರಿಯಾಗಿರುವಂತಹ ಅರ್ಥವನ್ನು ಕೊಡುವುದಿಲ್ಲ. be yourself ಗೆ ಹಾಗಾದರೆ ಅರ್ಥ ಏನು? ೧. ನೀನು ಏನಾಗಬೇಕೆಂದು ಕೊಂಡಿರುವೆಯೋ ಅದನ್ನು ಸಾಧಿಸು ಅಂತಲೇ ಇದರರ್ಥ?

ಕಿಟ್ಟುಪುಟ್ಟು

ಕಿಟ್ಟು ಪುಟ್ಟು ಹುಟ್ಟಿನಿಂದ ಗೆಳೆಯರು ಕ್ರಶ್ಶಿನ ಆಟ ಪಾಠ ತಾಟುಗಳಲೂ ಸೇರುವರು ಆ ಕಡೆ ಅಪ್ಪ ಅಮ್ಮಗಳು ಕೆಲಸಕೆ ಹೋಗಲು ಈ ಕಡೆ ಇವರಿಬ್ಬರೂ ಶಿಸ್ತಿನಲೇ ಬರುವರು ಅವರಿಬ್ಬರಿಗರನೂ ಕಾಯಲಿಹಳು ಒಬ್ಬಳು ಆಯಾ ಅವಳು ಸ್ವಲ್ಪ ಕಣ್ತಪ್ಪಿದರೂ ಇವರು ಮಾಯ ಸಂಜೆಯಾಗಲು ಇಬ್ಬರೂ ಆಟಕೆ ಜೊತೆ ಜೊತೆಗೆ ದಿನ ನಿತ್ಯವೂ ಆಟದಲಿ ಜಗಳವೂ ಸರ್ವೇ ಸಾಮಾನ್ಯ ಒಮ್ಮೆ ಕಿಟ್ಟು ಹೊಡೆಯುವ ಬ್ಯಾಟಿನಲಿ ಪುಟ್ಟೂಗೆ

ಮಂಕುತಿಮ್ಮನ ಕಗ್ಗ

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ । ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।। ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು । ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ

ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು । ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।। ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು । ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

ಕೊತ್ತಂಬರಿಬೀಜ ಚಟ್ನಿಪುಡಿ

ಕೊತ್ತಂಬರಿ ಬೀಜವನ್ನು ಸುವಾಸನೆ ಬರುವವರೆಗೂ ಹುರಿದುಕೊಳ್ಳುವುದು. ಕೊಬ್ಬರಿತುರಿಯನ್ನೂ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಕರಿಬೇವು ಎಲೆ ಗರಿಗರಿಯಾಗಿ ಹುರಿಯಬೇಕು. ನಾಲ್ಕು ಚಮ್ಮಚ ಎಣ್ಣೆ ಕಾಯಿಸಿ ಸಾಸಿವೆ ಸಿಡಿದ ನಂತರ ಹಿಂಗು ಹಾಕಿ ಅದರಲ್ಲಿ ಒಣಮೆಣಸಿನಕಾಯಿ ಹುರಿದು ತೆಗೆಯಬೇಕು. ಕೊತ್ತಂಬರಿ ಬೀಜದ ಜೊತೆಗೆ ಕರಿಬೇವು, ಕೊಬ್ಬರಿ, ಹುಣಸೇಹಣ್ಣಿನ ಪುಡಿ, ಉಪ್ಪು ಹಾಗೂ ಒಂದು ಸಣ್ಣ ತುಂಡು ಬೆಲ್ಲ ಮತ್ತು ಕರಿದು ತೆಗೆದ ಒಣಮೆಣಸಿನಕಾಯಿ ಸೇರಿಸಿ ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳುವುದು. ಬಾಂಡಲೆಯಲ್ಲಿರುವ ಒಗ್ಗರಣೆ ಎಣ್ಣೆಯಲ್ಲಿ ಇವನ್ನು ಕಲಸಿ ಡಬ್ಬಿಗೆ ತುಂಬಿಡಿ. ಸೂ: ಅಸಿಡಿಟಿ ಇರುವವರಿಗೆ ಊಟಕ್ಕೆ ಮೊದಲು ಮೊದಲನೆಯ ತುತ್ತಿಗೆ ಇದನ್ನು ತುಪ್ಪದ ಜೊತೆ ಬಳಸಿದರೆ ತುಂಬ ಒಳ್ಳೆಯದು.

ಸಾಂಪ್ರದಾಯಿಕ ಅಡುಗೆ

ಗೋದಿ ಹಲ್ವಾ

ಗೋದಿಯನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟಿರಬೇಕು. ಬೆಳಿಗ್ಗೆ ಅದನ್ನು ಬಸಿದು ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಅದರ ಹಾಲು ತೆಗೆದುಕೊಳ್ಳುವುದು. ಆ ಹಾಲಿನ ಜೊತೆಗೆ ಒಂದು ತೆಂಗಿನ ಕಾಯಿ ಹೋಳಿನ ಹಾಲನ್ನು ತೆಗೆದು ಬೆರೆಸಬೇಕು. ಅದರ ಜೊತೆಗೆ ೧/೨ ಲೇಟರ್ ಹಾಲು ಬೆರೆಸುವುದು. ಬೆಲ್ಲವನ್ನು ಕರಗಿಸಿ ಫಿಲ್ಟರ್ ಮಾಡಿ, ಯಾಲಕ್ಕಿ ಪುಡಿ ಸೇರಿಸಿ ಅದಕ್ಕೆ ಬೆರೆಸುವುದು. ಒಲೆಯ ಮೇಲೆ ಇಟ್ಟು ಕೈಯಾಡುತ್ತಿರಬೇಕು.