ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದದಲ್ಲಿ ಇಂದಿನಿಂದ ಕಥಾ ಮಾಲಿಕೆಗಳು

ಸಂಪದದಲ್ಲಿ ಇಂದಿನಿಂದ ಕಥಾ ಮಾಲಿಕೆಗಳನ್ನು [:http://sampada.net/…|ಹಾಕಲು ಪ್ರಾರಂಭಿಸಿದ್ದೇವೆ]. ಮಾನ್ಯ ಓ ಎಲ್ ಎನ್ ಸ್ವಾಮಿಯವರು ಕನ್ನಡದಲ್ಲಿನ ತಮ್ಮ "ಝೆನ್ ಕಥೆಗಳು" ಕಥಾಮಾಲಿಕೆಯನ್ನು ದಿನನಿತ್ಯ ಒಂದರಂತೆ ಸೇರಿಸಲು ಅನುಮತಿ ನೀಡಿದ್ದಾರೆ.ಅವರಿಗೆ ಸಂಪದದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. *** ಕಥಾ ಮಾಲಿಕೆಯನ್ನು ಸೇರಿಸಲು ಉತ್ಸುಕರು ದಯಮಾಡಿ [:http://sampada.net/…|ಫೀಡ್‌ಬ್ಯಾಕ್ ಫಾರಮ್] ನಲ್ಲಿ ಸಂದೇಶವನ್ನು ಸೇರಿಸಿ ಅಥವಾ ನನಗೊಂದು ಪ್ರೈವೇಟ್ ಮೆಸೇಜ್ ಕಳುಹಿಸಿ.

ಝೆನ್ ೧: ನಗುವ ಬುದ್ಧ

ಝೆನ್ ೧

ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.
ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ.

ಜ್ಯೋತಿಷ್ಯ - ಎಷ್ಟರ ಮಟ್ಟಿಗೆ ನಂಬಬಹುದು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲರೂ ಸಮಾನರು. ಎಲ್ಲರ ಜಾತಕಗಳಲ್ಲೂ (ಹುಟ್ಟಿದ ಸಮಯದಲ್ಲಿಯ ಗ್ರಹಗಳ ಸ್ಥಾನ ಮತ್ತು ಅವುಗಳ ಚಲನೆಯ ಬಗೆಗಿನ ಲೇಖನ) ೩೩೭ ಅಂಕಗಳು ಇರುತ್ತವೆ. ಇದನ್ನು ಮುಖ್ಯವಾಗಿ ೧೨ ವಿಷಯಗಳಾಗಿ ವಿಂಗಡಿಸಿದ್ದಾರೆ - ಆರೊಗ್ಯ, ಸಾಂಸಾರಿಕ ಜೀವನ, ಐಶ್ವರ್ಯ, ಸಾಮಾಜಿಕ ಸ್ಥಾನಮಾನ, ತಿಳುವಳಿಕೆ, ಆಯಸ್ಸು ಇತ್ಯಾದಿ. ಸರಿ ಸಮಾನವಾಗಿ ಒಂದೊಂದು ವಿಷಯ ಅಥವಾ ಮನೆಗಳಿಗೆ ೨೮ ಅಂಕಗಳು ಬರುವುವು. ೩೩೭ / ೧೨.

ಕವನ

ವಿಷಯವೇಕೆ ಕವನಕೆ
ಮನದ ಭಾವ ರೂಪಕೆ

ಹೆಪ್ಪುಗಟ್ಟಿ ಕೂತ ನೆನಪು
ಚೆಲುವಿಗಿರುವ ಆ ಒನಪು
ಕಾಣುತಿರುವ ಹಗಲುಗನಸು
ಕಂಡ ಕನಸು ಆದ ನನಸು
ಆಗದಿರಲು ಬಂದ ಮುನಿಸು
ಪ್ರಕೃತಿಯ ಈ ಸೊಗಸು

ಎಲ್ಲ ಕುಳಿತು ಎದೆಯಲಿ
ಇಟ್ಟರೊಮ್ಮೆ ಕಚಗುಳಿ
ಕೊಟ್ಟಂತೆಯೆ ಆಹ್ವಾನ
ಬರೆಯಲೊಂದು ಕವನ

ಕಥೆಯಾದಳು ಹುಡುಗಿ

ಬಹಳ ದಿನಗಳ ಮೇಲೆ ಅಮ್ಮ ಹೆತ್ತಳು ಕಣ್ಮಣಿ ಸುತೆ ಕೊನೆಗಾಲದಿ ಆಸರೆಯಾಗಲು ಕರೆದಳು ಅವಳ ಆಶ್ರಿತೆ ಮೂಲ ನಕ್ಷತ್ರದ ಎರಡನೆ ಪಾದದ ಸಂಜಾತೆ ಕಣ್ಣು ತೆರೆಯುವ ಮೊದಲೇ ತಾಯ ಕಳೆದುಕೊಂಡ ಆಶ್ರಿತೆ ಪತ್ನಿ ವಿಯೋಗದ ದು:ಖ ಮರೆಯಲು ಪತಿಗೆ ಕುಡಿತದ ಮೊರೆ ತಂದೆ ತಾಯಿಯ ಪ್ರೀತಿ ಕಾಣದ ಮಗುವಿಗೆ ಜೀವನವೇ ಹೊರೆ ಯಾವ ಅಡೆ ತಡೆಯಿಲ್ಲದೆ ಬೆಳೆಯಿತು ಮಗು ಬೇಕಾಬಿಟ್ಟಿ ಸಮಾಜ ನೋಡುತಿಹದು ಅವಳ ಸ್ಥಿತಿ ತನ್ನ ಕೈ ಕಟ್ಟಿ ಆಗಾಯಿತು ನಮ್ಮ ಹೀರೋ ಸಮಾಜ ಸೇವಕನ ಎಂಟ್ರಿ ಮುಂದೆ ಗೊತ್ತಾಗುವುದು ಅವನೆಂತಹ ಕಂತ್ರಿ ಹೇಳಿದ ಆಶ್ರಿತೆ ಇನ್ನೂ ಆಟವಾಡುವ ಕೂಸು ಮಾತಿನ ಮೋಡಿಗೆಳೆದು ಅವಳ ಮಡಿಲಿಗಿಟ್ಟ ಒಂದು ಕೂಸು ಅವಳಿಗಾಗಿ ಮರುಗುವವರಿಗೆ ಹೇಳಿದ ಹೋಗುವೆನು ದುಡಿಯಲು ದುಬಾಯಿ ದೂರದಿಂದಲೇ ಇವರೆಲ್ಲರಿಗೂ ಹೇಳಿದ ಬೈ ಬೈ ಕೂಸುಗಳನ್ನು ನೋಡಲು ಮತ್ತೆ ಬಂದ ಇನ್ನೊಬ್ಬ ಸಮಾಜ ಸೇವಕ

ಹನಿಗವನಗಳು

ಬೇಲೂರಿನ ಮೂರ್ತಿ ನನಗಾಯಿತು ಸ್ಪೂರ್ತಿ ಕೆಲವರಿಗೆ ನಾಲಗೆಗೆ ಬಿದ್ದರೆ ಟಾನಿಕ್ಕು ಸ್ಪೂರ್ತಿ ಬರುವುದು ಅವರಿಗೆ ನಿಜಕ್ಕೂ ಹೆಳವ ನಾನು ಕಾಲು ಇದ್ದರೂ ಕುರುಡ ನಾನು ಕಣ್ಣು ಇದ್ದರೂ ನನ್ನ ನಡೆಸುವಾತನೇ ದೇವನು ನನಗೆ ದಾರಿ ತೋರಿಸುವನೆ ದೇವನು ತಂಪಾದ ಗಾಳಿಯಲಿ ತೇಲುತ್ತಿರುವೆ ಸಿಹಿಯಾದ ವಾಸನೆಯ ಆಘ್ರಾಣಿಸುತ್ತಿರುವೆ ಸೊಗಸಾದ ಸಂಗೀತವನು ಕೇಳುತ್ತಿರುವೆ ಸ್ಮಶಾನ ಮೌನವ ಆನಂದಿಸುತ್ತಿರುವೆ

ಚುಟುಕ

ಪ್ರತಿಭೆಗೆ ಪುರಸ್ಕಾರ ಇದ್ದಲ್ಲಿ ಬೆಳೆಯುವುದು ಸೃಜನಶೀಲತೆ ಪ್ರಭಾವಕ್ಕೆ ಪುರಸ್ಕಾರ ಇದ್ದಲ್ಲಿ ಬೆಳೆಯುವುದು ಸ್ವಜನಶೀಲತೆ

ಕಣ್ಣು: ಪದ ಹಳತು, ಬಳಕೆ ಹೊಸತು

ಕನ್ನಡದಲ್ಲಿ ಪದಗಳನ್ನು ಸೇರಿಸಿ ಹೊಸಪದಗಳನ್ನು ಸೃಷ್ಟಿಮಾಡಿಕೊಳ್ಳುತ್ತೇವೆ. ಈಗೀಗ ಇಂಥ ಸಾಮರ್ಥ್ಯ ಭಾಷೆಗೆ ಕಡಮೆಯಾಗುತ್ತಿದೆಯೋ ಎಂಬ ಅನುಮಾನ ಕೆಲವರಲ್ಲಿಯಾದರೂ ಮೂಡಿದೆ. ಈ ಕಾಲಮ್ಮಿನಲ್ಲಿ ಕನ್ನಡದಲ್ಲಿ ಬಳಕೆಯಲ್ಲಿದ್ದ, ಈಗಿನ ಬರವಣಿಗೆಯಲ್ಲಿ ಕಾಣದಾಗಿರುವ ಕೆಲವು ಪದಗಳನ್ನು ನಿಮ್ಮ ಗಮನಕ್ಕೆ ತರುವ, ಆ ಮೂಲಕ ಮತ್ತೆ ಚಾಲ್ತಿಗೆ ತರುವ ಪ್ರಯತ್ನ. ಬೇರೆ ಬೇರೆ ಸಂದರ್ಭದ ಬರವಣಿಗೆಯಲ್ಲಿ ಬಳಸಬಹುದಾದ ಇಂಥ ಪದಗಳನ್ನು ನೀವೂ ಸೂಚಿಸಿ. ಸದ್ಯಕ್ಕೆ ಕಣ್ಣು ನನ್ನ ಆಸಕ್ತಿಯ ಪದ.

ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷ್‌ನ ‘ಪಿತ್ತ’

ಇನ್ಫೋಸಿಸ್ ನಾರಾಯಣಮೂರ್ತಿಯವರಿಗೆ ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಅವರೊಂದಿಗೆ ಸಾರ್ವಜನಿಕರಿಂದ ಫೋನ್-ಇನ್ ಕಾರ್ಯಕ್ರಮವನ್ನು ನೇರ ಪ್ರಸಾರಗೊಳಿಸಿತ್ತು. ಆ ಸಂದರ್ಭದಲ್ಲಿ ನಾನು ಸಂದರ್ಶಕನಾಗಿ ಭಾಗವಹಿಸಿದ್ದೆ. ಆ ದಿನ ನಾನು ಕೇಳಿದ ಒಂದು ಪ್ರಶ್ನೆ ಹೀಗಿತ್ತು: “ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೆ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕು ಎಂದು ಬಹುಪಾಲು ಜನರು ತಿಳಿದುಕೊಂಡಿದ್ದಾರೆ ಇದು ನಿಜವೇ?”. ಅದಕ್ಕೆ ನಾರಾಯಣ ಮೂರ್ತಿಯವರು ನೀಡಿದ ಉತ್ತರ ಎಲ್ಲರೂ ಗಮನಿಸಬೇಕಾದುದಾಗಿದೆ: “ಈ ನಂಬಿಕೆ ಸರಿಯಲ್ಲ. ಒಳ್ಳೆಯ ಆಲೋಚನಾ ಶಕ್ತಿ, ಮುಖ್ಯವಾಗಿ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಇದ್ದರೆ ಸಾಕು. ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನೂ ಅಡ್ಡಿಯಿಲ್ಲ. ಒಳ್ಳೆಯ ಮೆದುಳಿಗೂ ವಿದ್ಯಾಭ್ಯಾಸದ ಮಾಧ್ಯಮಕ್ಕೂ ಯಾವುದೇ ಸಂಬಂಧವಿಲ್ಲ.”/೧/

ಮೋಸ ಹೋಗಬೇಡಿ

"ಎಲ್ಲಿ ತನಕ ಟೋಪಿ ಹಾಕಿಸಿಕೊಳ್ಳುವವರಿರುತ್ತಾರೊ ಅಲ್ಲಿ ತನಕ ಟೋಪಿ ಹಾಕುವವರಿರುತ್ತಾರೆ". ಮೋಸ ಹೋದವರು ಇತರರಿಗೆ ಎಚ್ಚರಿಸಲು, ಮೋಸ ಹೋದವರ ಕತೆ ಗೊತ್ತಿದ್ದವರಿಗೆ ಇತರರನ್ನು ಜಾಗರೂಕಗೊಳಿಸಲು, ವಿವಿಧ ಕಂಪೆನಿ ಮತ್ತು ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಪಡೆಯಲು, ಇತ್ಯಾದಿಗಳಿಗೆ ಒಂದು ಚರ್ಚಾವೇದಿಕೆ ಸಿದ್ಧಮಾಡಲಾಗಿದೆ. ಅದರ ತಾಣಸೂಚಿ (URL) - http://groups.msn.c…. ಇದರ ಬಗ್ಗೆ ಎಲ್ಲರಿಗೆ ತಿಳಿಸ ಮತ್ತು ನೀವೂ ಬಳಸಿ.