ಕಾಲಾ ಸರೋವರ್ ಹಾಗೂ..

ಕಾಲಾ ಸರೋವರ್ ಹಾಗೂ..

ಚಿತ್ರವನ್ನು ಗಮನವಿಟ್ಟು ನೋಡಿ...


ಇದರಲ್ಲೇನಿದೆ ವಿಶೇಷ? ಮಳೆಗಾಲದಲ್ಲಿ ಎಲ್ಲಾ ರಸ್ತೆ ಬದಿ ಮೋರಿಗಳು ಹೀಗೇ ಇರುವುದು ಅಂದಿರಾ..?
 ಇದು ಇರುವ ಸ್ಥಳ- ಲಕ್ಷಾಂತರ ಮಂದಿ ಭೇಟಿ ನೀಡುವ ಲಾಲ್‌ಬಾಗ್ ಬಂಡೆ ಮೇಲೆ :(


ಮೂಗು ಮುಚ್ಚಿಕೊಂಡು ಸರ್ಕಸ್ ಮಾಡಿಕೊಂಡು  ನಾನು ಫೋಟೋ ತೆಗೆಯುತ್ತಿದ್ದರೆ, ಅಲ್ಲೇ ಆ ಗಲೀಜಿನ ಪಕ್ಕದಲ್ಲೇ ಕೆಲವರು ವ್ಯಾಯಾಮ, ಯೋಗಾಸನ ಮಾಡುತ್ತಿದ್ದರು!
ನೆಗಡಿ ಬಂದರೆ ಮೂಗು ಕತ್ತರಿಸುವ ಆಲೋಚನೆ ಮಾಡುವ ನಮ್ಮ ಜನ, ಇಲ್ಲೂ ಅದೇ ಕೆಲಸ ಮಾಡುತ್ತಿದ್ದಾರೆ. ನೀರು ನಿಂತು ಗಲೀಜು ಆಗದಂತೆ, ಮಣ್ಣು ತುಂಬಿಸಿ,

( ಮಣ್ಣಾದರೂ ಚೆನ್ನಾಗಿದೆಯಾ.. ಅದೂ ಇಲ್ಲ) ನೀರು ನಿಲ್ಲದಂತೆ ಮಾಡುತ್ತಿದ್ದಾರೆ. ಒಳ್ಳೆಯ ಐಡಿಯಾ. :(
ಬಂಡೆಗಲ್ಲಿನ ಈ ವಿಷಯ ಬಿಟ್ಟರೆ- ಲಾಲ್ ಬಾಗ್ ಸೌಂದರ್ಯ ನೋಡಲು ಐದು ಕಣ್ಣೂ ಸಾಲದು. ಬಿಟ್ಟು ಬರಲು ಮನಸ್ಸೇ ಬಾರದು.

Rating
No votes yet

Comments

Submitted by nageshamysore Wed, 06/12/2013 - 07:37

ಗಣೇಶ್ ಜಿ, ಲಾಲ್ ಬಾಗ್ ಸೌಂದರ್ಯಕ್ಕೆ ದೃಷ್ಟಿಬೊಟ್ಟಾಗಿರಲೆಂದು ಹೀಗಿಟ್ಟಿರಬೇಕು :-) ಪೋಟೊ ಸೂಪರಾಗಿದೆ - ಅದರಲ್ಲೂ ಸುಂದರ ಲಾಲ್ ಬಾಗ್ ಚಿತ್ರ ( ನಾವಂತೂ ಇಲ್ಲಿಂದಲೆ ನೋಡಬೇಕಲ್ಲಾ) - ನಾಗೇಶ ಮೈಸೂರು, ಸಿಂಗಪುರದಿಂದ

Submitted by ಗಣೇಶ Wed, 06/12/2013 - 23:30

In reply to by kavinagaraj

ಸರಿಪಡಿಸುತ್ತಿದ್ದಾರೆ ಕವಿನಾಗರಾಜರೆ, ಬಹುಷಃ ಎಲ್ಲಾ ನೀರಿನ ಹೊಂಡಗಳನ್ನು ಮುಚ್ಚಿ, ಅಲ್ಲೊಂದು ಕ್ರಾಂಕ್ರಿಟ್ ಕೆರೆ ನಿರ್ಮಿಸಿ, ಅದರೊಳಗೆ ಕಾರಂಜಿ, ವಿವಿಧ ತರಹದ ಆರ್ಟಿಫಿಶಿಯಲ್ ಮೀನುಗಳು, ಹಕ್ಕಿಗಳು,ಸೌಂಡ್ ಆಂಡ್ ಮ್ಯೂಸಿಕ್ ಮಾಡಿಯಾರು. :(

Submitted by ಶ್ರೀನಿವಾಸ ವೀ. ಬ೦ಗೋಡಿ Thu, 06/13/2013 - 13:15

In reply to by ಗಣೇಶ

[ ಎಲ್ಲಾ ನೀರಿನ ಹೊಂಡಗಳನ್ನು ಮುಚ್ಚಿ, ಅಲ್ಲೊಂದು ಕ್ರಾಂಕ್ರಿಟ್ ಕೆರೆ ನಿರ್ಮಿಸಿ, ಅದರೊಳಗೆ ಕಾರಂಜಿ, ವಿವಿಧ ತರಹದ ಆರ್ಟಿಫಿಶಿಯಲ್ ಮೀನುಗಳು, ಹಕ್ಕಿಗಳು,ಸೌಂಡ್ ಆಂಡ್ ಮ್ಯೂಸಿಕ್ ಮಾಡಿಯಾರು]

ಗೋಪಾಲಕೃಷ್ಣ ಆಡಿಗರ "ಇಂದು ನಮ್ಮೀ ನಾಡು" (http://goo.gl/Ha7bI) ಪದ್ಯ ನೆನಪಿಗೆ ಬಂತು.

Submitted by ಗಣೇಶ Fri, 06/14/2013 - 00:18

In reply to by ಶ್ರೀನಿವಾಸ ವೀ. ಬ೦ಗೋಡಿ

>>ಬಾರವೇ ಇಲ್ಲಿಗೊಂದೂ ಹಕ್ಕಿ? – ಗಿಳಿ ಪುರುಳೆ
ಕೋಗಿಲೆಯು ಗುಬ್ಬಚ್ಚಿ ಕಾಗೆ ಕೂಗೆ?
ಇರುವ ಕೋಗಿಲೆಯ ಬಡಿ, ಕೊಲ್ಲು; ಸತ್ತರೆ ಹುಲ್ಲು
ತುರುಕಿ ಇಡು ಸಾಲಾಗಿ ಕೊಂಬೆ ಮೇಲೆ! -----ಅಡಿಗರ ಕವನ ಹಾಗೂ ಮಾತುಕತೆಯ ಉತ್ತಮ ವಿಷಯ ಹಂಚಿ"ಕೊಂಡಿ"ದ್ದಕ್ಕೆ ಶ್ರೀನಿವಾಸ ಅವರಿಗೆ ತುಂಬಾ ಧನ್ಯವಾದಗಳು.

Submitted by ಗಣೇಶ Wed, 06/12/2013 - 23:25

In reply to by nageshamysore

:) ಇಲ್ಲಿದ್ದರೆ ಲಾಲ್ ಬಾಗ್‌ನ ಒಂದೊಂದು ಮರಕ್ಕೂ.. ಒಂದೊಂದು ಕವಿತೆ ಬರೆಯುವಿರಿ-ನೀವು :) ಹೇಗೆ ಕ್ಲಿಕ್ಕಿಸಿದರೂ ಸೌಂದರ್ಯವೇ ಸೌಂದರ್ಯ ತುಂಬಿದ ಲಾಲ್ ಬಾಗ್‌ನ ಫೋಟೋಗಳು ತುಂಬಾ ಇವೆ. ಇಲ್ಲಿ ಹಾಕಲು ಒಂದೆರಡು ಸಿಲೆಕ್ಟ್ ಮಾಡಲು ತುಂಬಾ ಕಷ್ಟಪಟ್ಟೆ!
ನಮ್ಮ ಕನ್ನಡದ ನೆಲ ಯಾವ ಜಾತಿ ವೆರೈಟಿ ಗಿಡ-ಮರ ಹೂ ಹಣ್ಣು ಬೆಳಸಬಹುದಾದ ನೆಲ. ಕರ್ನಾಟಕದ ಒಂದೊಂದು ಹಳ್ಳಿಯಲ್ಲೂ ವಿವಿಧ ತರಹದ ಮರಗಿಡಗಳಿರುವ ಮಿನಿ ಲಾಲ್‌ಬಾಗ್(ಕಾಲಾ ಸರೋವರ ಇಲ್ಲದ) ಬರಲಿ ಎಂದು ಆಶಿಸುವೆ.

Submitted by nageshamysore Thu, 06/13/2013 - 03:52

In reply to by ಗಣೇಶ

ಗಣೇಶ್ ಜಿ, ಕವನಕ್ಕೆ ಅಲ್ಲಿಗ್ಯಾಕೆ ಬರಬೇಕು, ನಿಮ್ಮ ಸುಂದರ ಪೋಟೊಗಳೆ ಸಾಕು! ತಗೊಳ್ಳಿ ಸದ್ಯಕ್ಕೊಂದು 'ಸಂತೆಗೆ ನೇಯ್ದ ಮೊಳ ಸೀರೆ' :-) -ನಾಗೇಶ ಮೈಸೂರು, ಸಿಂಗಪುರದಿಂದ

ಲಾಲ್ ಬಾಗಿನ ಮೊಡವೆ
------------------------------

ಕಾಲಾ ಸರೋವರದ ನಡುವೆ
ಕಸ ಕೊಚ್ಚೆ ತುಂಬಿದ ಮಡುವೆ
ಬೇಕೇಕೆ ಕಾಲಿಡುವಾ ಗೊಡವೆ
ಎಂದರೂ ಬಿಡದಿಹ ತೋಟವೆ!

ಸಸ್ಯ ಶಾಮಲೆಯೆನಲೆ ಕಡಿಮೆ
ಸಸ್ಯಕಾಶಿಗು ಮೀರಿದ ಉಪಮೆ
ನಿಸರ್ಗ ತಾನೆ ತನಗುಟ್ಟಾ ಸೀರೆ
ಕಾಡದಿರೆ ದುಶ್ಯಾಸನಾ ಮೋರೆ!

ಅಪರೂಪ ಲಾವಣ್ಯಕಿದು ಹೆಸರೆ
ಕಣ್ಣ ಹರಿದೆಲ್ಲೆಡೆಗು ಹಸಿರ್ಹಸಿರೆ
ನೆರಿಗೆ ಸೆರಗು ಸೊಬಗಿನಾ ಲೀಲೆ
ಪ್ರಕೃತಿಗಿದ ಕಲಿಸಿಕೊಟ್ಟವನ್ಯಾರೆ?

ನಾಚಿ ಕೆಂಪಾಗಿ ಕೆಂಪು ತೋಟವೆ
ಆಗುವಾ ಮುನ್ನ ಹಸಿರಿಟ್ಟ ತರವೆ
ಕೆತ್ತಿ ಗುಂಡಿ ನೆಲ ಕೆಂಪಾಗಿ ಮಣ್ಣು
ಹಳ್ಳದಿಣ್ಣೆ ಒಡವೆ ಮೊಡವೆ ಹೆಣ್ಣು!

ನಾವು ನೀವವರೆಲ್ಲ ಸೇರಿ ಪಾಡು
ನಿರಂತರವಿರಲಿ ನಿನ್ನ ಈ ಹಾಡು
ತಣಿಸುತಲಿ ದಣಿದ ಮನದ ತೆಕ್ಕೆ
ಬಿಚ್ಚಿ ಹಾರಿಸಲಿ ಬಣ್ಣಬಣ್ಣದ ರೆಕ್ಕೆ!

Submitted by ಗಣೇಶ Wed, 06/12/2013 - 23:41

In reply to by partha1059

:) ಹುಡುಕ ಬೇಕಾಗಿಯೇ ಇಲ್ಲ ಪಾರ್ಥರೆ, ಬಿಡದೇ ಅರ್ಧಗಂಟೆ ಮಳೆ ಬೆಂಗಳೂರಲ್ಲಿ ಬಂದರೆ ಸಾಕು, ಮೋರಿ ನೀರು ಸಮುದ್ರದ ಸುನಾಮಿಗಿಂತ ಜೋರಾಗಿ ನುಗ್ಗಿ ಬಂದು ಅಕ್ಕ ಪಕ್ಕದ ಮನೆಗಳನ್ನೆಲ್ಲಾ ಉರುಳಿಸುವುದು. ಎಲ್ಲಾ ಕಸವನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿಸಿ ಮೋರಿಗೆ ಎಸೆಯುವುದು ನಮ್ಮ ಜನರ ಗುಣ ಎನ್ನೋಣವಾ? ಅದೇ ಜನ ಮಾಲ್‌ಗಳಲ್ಲಿ ಎಷ್ಟೊಂದು ಕ್ಲೀನ್‌ಆಗಿ ಇರುವರು! ಒಂದು ಚೂರೂ ಕಸ ಎಸೆಯುವುದಿಲ್ಲ. ಪಾರ್ಕಲ್ಲೂ ಕಸ ಎಸೆಯಲು ಅಲ್ಲಲ್ಲಿ ಡಬ್ಬಗಳನು ಇಟ್ಟಿರುವರು. ಆದರೆ ಸಿಕ್ಕಿಸಿಕ್ಕಿದಲ್ಲಿ ಕಸ ಎಸೆಯುವರು.

Submitted by venkatb83 Thu, 06/13/2013 - 14:32

ಗಣೇಶ್ ಅಣ್ಣ ಅವರ ಕ್ಯಾಮೆರಾಕ್ಕೆ ಮತ್ತೆ ಬಿಡುವಿಲ್ಲದ ಕೆಲಸ ..!!

....ನಾಗೇಶ್ ಅವರ ಪ್ರಾಸಬದ್ಧ ಕವಿತೆ ಚೆನ್ನಾಗಿದೆ -

ಎಂದೋ ಜಮಾನದಲ್ಲಿ (ಸುಮಾರು ೬- ೭ ವರ್ಷಗಳ ಹಿಂದೆ ಗಣ ರಾಜ್ಯೋತ್ಸವದ ಪುಷ್ಪ ಪ್ರದರ್ಶನಕ್ಕೆ ಹೋದಾಗ ಲಾಲ್ ಬಾಗ್ ನೋಡಿದ್ದೇ -ಕೊನೆ ಆಮೇಲೆ ಏನಿದ್ದರೂ ಬಸ್ಸಲ್ಲಿ ಬರುವಾಗ ಹಾಗೆ ಕಣ್ಣ ಕೊನೆಯಲ್ಲಿ ನೋಡೋದು ಅಸ್ಟೆ ..
ಅಂದಿನ ಲಾಲ್ ಬಾಗ್ ಈಗ ಹೇಗೇಗೋ ಆಗಿದೆ ಎಂದು ನಿಮ್ಮ ಪೋಟೋ ನೋಡಿ ತಿಳಿಯಿತು . ವ್ಯಥೆಯೋ ಆಯ್ತು .. .
ಇರೋದೇ ಒಂದು ಲಾಲ್ ಬಾಗ್ ಅದನ್ನ ಸರ್ಯಾಗಿ ಇಟ್ಟುಕೊಳ್ಳದ ನಮ್ಮಂಥವರಿಗೆ ................ !
ಆ ಪ್ರಕೃತಿಯೇ ಪಾಠ ಕಲಿಸಲಿದೆ ..
ಮಾವು ಮೇಳ ಕ್ಕೆ ಜನ ಬರದೆ ವ್ಯಾಪಾರಿಗಳು ಕೊರಗುತ್ತಿರುವರು ಎಂದು ಪೇಪರ್ನಲ್ಲಿ ಓದಿದೆ ,ಅಲ್ಲಿಯೇ ಮೇಳ ಮಾಡುವ ಬದಲಿಗೆ ಜನರಿಗೆ ಸಿಗುವ ಹಾಗೆ ಎಲ್ಲೆಡೆ ಮಾಡಬಹುದಲ್ಲ ..
ಅಸ್ತು ದೂರ ಹೋಗಿ ಈ ಮಳೆಯಲ್ಲಿ ಗಾಳೀಲಿ ಮಾವ ತರೋಕೆ ಸಾಧ್ಯಾನ?
ಮುಂದಿನ ಪಯಣ ಕಬ್ಬನ್ ಪಾರ್ಕಿಗ ? ವಿಧಾನ ಸೌಧಕ್ಕೋ?
ಶುಭವಾಗಲಿ ...
\।

Submitted by ಗಣೇಶ Fri, 06/14/2013 - 00:33

In reply to by venkatb83

>>ಮಾವು ಮೇಳ ಕ್ಕೆ ಜನ ಬರದೆ ವ್ಯಾಪಾರಿಗಳು ಕೊರಗುತ್ತಿರುವರು ಎಂದು ಪೇಪರ್ನಲ್ಲಿ ಓದಿದೆ, ---> ಸುಳ್ಳೇ ಸುಳ್ಳು ಸಪ್ತಗಿರಿವಾಸಿ, ನಾನು ಬೆಳಗ್ಗೆ ಬೆಳಗ್ಗೆ ಎರಡೆರಡು ಬಾರಿ ಹೋಗಿದ್ದೆ. ಜನ ತುಂಬಿದ್ದರು. ಹಣ್ಣು ಕೊಳ್ಳಲು ಕ್ಯೂ ನಿಲ್ಲಬೇಕಾಗಿತ್ತು. ಬಾಡಿಗೆ ಜಾಸ್ತಿ ಮಾಡದಿರಲಿ ಎಂದು ಹಾಗೆಂದಿರಬೇಕು. ರೇಟೇನು ಅಲ್ಲಿ ಕಮ್ಮಿ ಇರಲಿಲ್ಲ. ನೀವು ಹೇಳಿದ ಹಾಗೆ ಎಲ್ಲೆಡೆ ಸಿಗುವಂತೆ ಮಾಡಿದರೆ ಚೆನ್ನ. >>>ಮುಂದಿನ ಪಯಣ ಕಬ್ಬನ್ ಪಾರ್ಕಿಗ ? ವಿಧಾನ ಸೌಧಕ್ಕೋ?->ಮನಾಲಿ!:)

Submitted by gopinatha Fri, 07/26/2013 - 16:15

ನಿಮ್ಮ‌ ವಿಶೇಷ‌ ಕ್ಯಾಮರಾ ಕಣ್ಣಿನಿಂದ‌ ಹೊರ‌ ಸಿಡಿದ‌ ಛಿತ್ರಗಳು ಕರಾರುವಾಕ್ಕಾಗಿ ಅಲ್ಲಿನ‌ ಸ್ಥಿತಿ ಗತಿಗಳನ್ನು ಬಿಂಬಿಸುತ್ತಿದ್ದವು. ಆದರೆ ಮೂಗಿಗೆ ಕ್ಲಿಪ್ ಹಾಕ್ಕೊಂಡ್ ಹೋಗಬೇಕೇನೋ ಅಲ್ವಾ

Submitted by ಗಣೇಶ Sat, 07/27/2013 - 00:33

In reply to by gopinatha

:) ಗಲೀಜಿದ್ದರೂ ಪರವಾಗಿಲ್ಲ, ನೀವಂದಂತೆ ಕ್ಲಿಪ್ ಹಾಕ್ಕೊಂಡು ಸುತ್ತಾಡೋಣ.:) ಆ ಸ್ಥಳದಲ್ಲಿ ಲೇಸರ್ ಶೋ, ಸ್ವಿಮ್ಮಿಂಗ್ ಪೂಲ್, ನರ್ತಿಸುವ ಕಾರಂಜಿಗೆ ಅವಕಾಶ ಮಾಡದಿದ್ದರೆ ಸಾಕು.