ಚಲೋ ...

ಚಲೋ ...

ರಾಮೋಜಿ (ಮೊಬೈಲಲ್ಲಿ) : "ಹಲೋ ಗಣೇಶರೆ, ಬೇಗ ಬನ್ನಿ, ನೀವೊಬ್ಬರೇ ಬಾಕಿ... ನಿಮ್ಮ ಮನೆ ಎಂಟ್ರೆನ್ಸ್ನಲ್ಲೇ ಕಾರಲ್ಲಿ ಕಾಯುತ್ತಿದ್ದೇವೆ"


ಗಣೇಶ : ಪ್ಲೀಸ್..ರಾಮೋಜಿ, ನೀವೆಲ್ಲಾ ಹೋಗಿ. ನಾನು ಮುಂದಿನ ಸಲ ಖಂಡಿತ ಬರುವೆ.


"ರಾಮಮೋಹನರೆ, ನೀವು ಹೀಗೆ ರಿಕ್ವೆಸ್ಟ್ ಮಾಡಿದರೆ ಅವರು ಬರುವುದಿಲ್ಲ. ನೋಡಿ ಈಗ.." ಎನ್ನುತ್ತಾ ಪಾರ್ಥರು ತಮ್ಮ ಬತ್ತಳಿಕೆಯಲ್ಲಿ ಗಣೇಶರಿಗೆಂದು ಸಿದ್ಧವಿದ್ದ ಬಾಣ ಬಿಟ್ಟರು- "ಜಯಂತ್, ಬೆಣ್ಣೆದೋಸೆ, ಮೈಸೂರು ಪಾಕ್ ಪ್ಯಾಕ್ ಎಲ್ಲಾ ಡಿಕ್ಕಿಯಲ್ಲಿದೆಯಲ್ಲಾ?" ಎಂದು ರಾಮೋಜಿ ಮೊಬೈಲಲ್ಲಿ ಕೇಳುವಂತೆ ಜೋರಾಗಿ ಹೇಳಿದರು. ನೆಕ್ಸ್ಟ್ ಕ್ಷಣದಲ್ಲಿ ಗಣೇಶರು ಹಿಂದಿನ ಸೀಟಲ್ಲಿ ರೆಡಿ. ರಾಮೋಜಿ ಕಾರ್ ಸ್ಟಾರ್ಟ್ ಮಾಡಿದರು.


ಕಾರು ಇನ್ನೇನು ಒಂದು ಕಿ.ಮೀ. ಹೋಗಿದೆಯೋ ಇಲ್ಲವೋ...............................


"ಮು%@ %&^%& *&^%*& *&%$ & ^%$#@......" ಬೈಗಳು ಕೇಳಲು ಶುರುವಾಯಿತು!


"ನಾವು ಹೊರಟಿರುವ ವಿಷಯ ಇವರಿಗೆ ಯಾರು ಹೇಳಿದ್ದು?"..... ಎಲ್ಲರೂ ಪಾರ್ಥರನ್ನು ಹಿಡಿದು ಚಚ್ಚುವುದರೊಳಗೆ, ಆ ಜನ ಕಾರೊಳಗೆ ಬಂದು ಕುಳಿತಾಯಿತು.


"ಋಗ್ವೇದ %&^%& *&^%*& *&%$ & ^%$#.........%$#%......."


ಎಲ್ಲರೂ ಕಾರ ಸೀಟಲ್ಲಿದ್ದ ಸ್ಪಂಜನ್ನು ಕಿತ್ತು, ಅವರವರ ಕಿವಿಗೆ ತುರುಕಿಕೊಳ್ಳುವರು. ಎರಡು ಗಂಟೆ "%&^%& *&^%*& ....." ಬಿಟ್ಟು ಬೇರೆ ಸದ್ದಿಲ್ಲದೇ ಪ್ರಯಾಣ ಸಾಗಿತು.


ರಾಮೋಜಿ : "ಸತೀಶರೆ, ಕಿವಿಯಿಂದ ಸ್ಪಂಜ್ ತೆಗೆದು, ಎಲ್ಲೀತನಕ ಮುಟ್ಟಿತು ತಿಳಿಸುವಿರಾ?"


ಸತೀಶ್(ಕಿವಿಯಿಂದ ಸ್ಪಂಜ್ ತೆಗೆದು) :"ರಾಮರಾಮ ಕೇಳಲಾರೆ, ಋಗ್ವೇದ ೭ ೩೫ನೇ ಶ್ಲೋಕ ಜೀ.." ಎಂದು ಪುನಃ ಸ್ಪಂಜ್ ಇಟ್ಟುಕೊಳ್ಳುವರು.


ಪಾರ್ಥ : "ಇಲ್ಲೇ ಎಡಕ್ಕೆ ತಿರುಗಿದರೆ ೮ ಕಿ.ಮೀ. ಹೋಗುವುದರೊಳಗೆ ತಲುಪುವೆವು.." ರಾಮೋಜಿ ಕಾರು ತಿರುಗಿಸುವರು. "ಅರೆರೆರೆ..ತಿರುಗಿಸಬೇಡಿ. ನಾನು ಹೇಳಿದ್ದು ಕಲ್ಲತ್ತಿಗಿರಿ ತಲುಪುವೆವು ಎಂದು.."


"ಪಾರ್ಥರೆ, ನೀವು ಹೀಗೆ ಹುಡುಗಾಟವಾಡಿದರೆ ನಾವು ತಲುಪುವಾಗ ರಾತ್ರಿಯಾಗುವುದು"ಎಂದು ಹೇಳಿ ಪುನಃ ನೇರ ರಸ್ತೆಗೆ ಕಾರನ್ನು ತಿರುಗಿಸಿದರು ರಾಮೋಜಿ.


ಅಂದಹಾಗೆ ಕಾರಲ್ಲಿ ರಾಮಮೋಹನರು, ಪಾರ್ಥಸಾರಥಿ, ಜಯಂತ್, ಸತೀಶ್, ಗಣೇಶ ಮತ್ತೊಬ್ಬರು ಇರುವರು ಎಂದು ಗೊತ್ತಾಯಿತು. ಸಪ್ತಗಿರಿವಾಸಿ!?ಇಲ್ಲವಾ? ಅಂತ ತಾನೆ ನಿಮ್ಮೆಲ್ಲರ ಕುತೂಹಲ......... ಅದೇ ಇನ್ನೊಂದು ಕತೆ. ಸಣ್ಣದಾಗಿ ನಾಳೆ ಹೇಳುವೆ..


-ಗಣೇಶ. 

Rating
No votes yet

Comments

Submitted by kavinagaraj Mon, 01/21/2013 - 10:27

%#!+^^%&@. . . . . .!!!!?????!!!! ವಿವಿಧತೆಯಲ್ಲಿ ಏಕತೆ!!??!!

Submitted by venkatb83 Mon, 01/21/2013 - 18:28

ಗಣೇಶ್ ಅಣ್ಣ-
ಎಲ್ಲ ಕುಶಲವೇ??
ಕ್ಷೇಮವೇ ?

ನೀವ್ ಯಾವುದರ ಬಗ್ಗೆ ಬರೆದದ್ದು ಎಂದು ಮೊದಲಿಗೆ ಗೊತ್ತಾಗಲಿಲ್ಲ...
ಆಮೇಲೆ ಗೊತ್ತಾಯ್ತು..!
ಕೆಲವು ವರ್ಷಗಳ ಹಿಂದೆ ಅಂದಂದಿನ-ಹಿಂದಿನ ದಿನಗಳ ಮುಖ್ಯ ವಿಶ್ಯಗಳ -ಸುದ್ಧಿಗಳ ಬಗ್ಗೆ ನೀವ್ ಬರೆದಿದ್ದ ಬರಹಗಳನ್ನು ಓದಿದ್ದೆ..ಈಗ ಸಂಪದದಲ್ಲಿ ಬರುವ ಬರಹಗಳು ಚರ್ಚೆ ಬಗ್ಗೆಯೇ ಒಂದು ಬರಹ ಬರೆವಿರಿ ಅದರಲ್ ಈ ಸ.ವಾ ನನ್ನು ಸೇರಿಸಿರುವಿರಿ ಎಂದು ತಿಳಿದು ಕುತೂಹಲ ಇಮ್ಮಡಿ -ಮುಮ್ಮಡಿ -ಚಾರ್ಮುಡಿ ಆಗಿದೆ...!!!
ನನಗಂತೂ ವೇದ ಪುರಾಣ ಇತ್ಯಾದಿ ಎಷ್ಟು ಎಂದೂ ಸರ್ಯಾಗಿ ಗೊತ್ತಿಲ್ಲ..
ಈಗ ನನ್ನನು ಈ ಮುಂದಿನ ಭಾಗದಲ್ಲಿ ಎಂದು ಮಾಡುವಿರೋ ನಿಮಗೆ ಬಿಟ್ಟಿದ್ದು....
ಮುಂದಿನ ಭಾಗದ ನಿರೀಕ್ಷೆಯಲ್ಲಿ...

ಶುಭವಾಗಲಿ...

\\\|||///

Submitted by ಗಣೇಶ Mon, 01/21/2013 - 23:49

In reply to by venkatb83

ಚಲೋ...೨(ಸಪ್ತಗಿರಿವಾಸಿ ಅಲಿಯಾಸ್ venkatb83 ಅಲಿಯಾಸ್ ವೆಂಕಟೇಶ್ ಅಲಿಯಾಸ್...)
ರಾಮಮೋಹನರು ಮೊದಲಿಗೆ ಸಪ್ತಗಿರಿವಾಸಿಯಲ್ಲಿಗೇ ಹೋಗಿದ್ದು. ಬಹಳ ಚಿಂತೆಯಲ್ಲಿದ್ದನು. ರಾಮೋಜಿಯವರನ್ನು ಕಂಡವನೇ "... coffee ಯಾದ ಮೇಲೇ ಮಾತನಾಡೋಣ" ಎಂದು ಹೇಳಿ, "...coffee" ಸಿ.ಡಿಯನ್ನು ಡಿ.ವಿ.ಡಿ ಪ್ಲೇಯರ್‌ನಲ್ಲಿ ಹಾಕಿದ. " ಸರ್, ಹೇಗಿದೆ? ಸೂಪರ್ ಫಿಲ್ಮ್. ನಾಯಕ ಇದ್ದಾನಲ್ಲಾ...." ಅರ್ಧಕ್ಕೆ ತಡೆದ ರಾಮೋಜಿಯವರು, "ಸಿನೆಮಾ ನಾನು ನೋಡುವುದಿಲ್ಲ. ನೀನು ಪಾಟೀಲರ ಬಳಿ ಸಿನೆಮಾ ಬಗ್ಗೆ ಮಾತನಾಡು. ಅಲ್ವೋ..ನಿನ್ನೆ ಹೇಳಿದ್ದೇನು? ಯಾಕಿನ್ನೂ ರೆಡಿಯಾಗಿಲ್ಲಾ?"
ಸಪ್ತಗಿರಿವಾಸಿ : ಕ್ಷಮಿಸಿ ಸರ್. ಎರಡು ದಿನಾ!! ಆ ಸಮಯದಲ್ಲಿ ಕಮ್ಮಿ ಅಂದರೆ ಹತ್ತು ಸಿನೆಮಾ ಇಲ್ಲೇ ನೋಡಬಹುದು. ನೀವು ಹೋಗಿ ಬನ್ನಿ."
ಹೀಗೆ ಕರೆದರೆ ಈತ ಬರುವುದಿಲ್ಲ, ಎಂದು ಯೋಚಿಸಿದ ರಾಮೋಜಿ ನೇರ ನಾಡಿಗರ ಬಳಿ ಹೋಗಿ, ಚರ್ಚಿಸಿ, ತಮ್ಮ ಕಾರಿನ ಮೇಲೆ ಕೆಲವೊಂದು ಮಾರ್ಪಾಟುಗಳನ್ನು ಮಾಡಿ, ಪುನಃ ಸಪ್ತಗಿರಿವಾಸಿಯ ಬಳಿ ಬಂದು ವಿವರಿಸಿ ಹೇಳಿದರು. ಕೇಳಿದ ಸಪ್ತಗಿರಿ ಅಕ್ಷರಶಃ ನೆಲದಲ್ಲೇ ಇರಲಿಲ್ಲ!! ಹಾಲಿವುಡ್, ಬಾಲಿವುಡ್, ಖಾಲಿವುಡ್, ಬೇಲಿವುಡ್‌...ವುಡ್‌ಗಳಲ್ಲಿ ತಯಾರಾದ ಎಲ್ಲಾ ಫಿಲ್ಮ್ ನಮ್ಮ ಸಪ್ತಗಿರಿವಾಸಿ ನೋಡಿಯಾಗಿದೆ. ಈಗ ಬಾಕಿ ಇರುವುದು-Extra-terrestrial ಗಳು ತಯಾರಿಸಿರಬಹುದಾದ ಫಿಲ್ಮ್‌ಗಳು ಮಾತ್ರ! ಅದನ್ನು ರಿಸೀವ್ ಮಾಡುವಂತಹ ಹೈ ಪವರ್ ಸ್ಯಾಟಲೈಟ್ ಟ್ರಾನ್ಸ್‌ಪೊಂಡರ್ಎಕ್ಸ್ವೈಝಡ್..ಕಾರ ಮೇಲೆ ಫಿಕ್ಸ್ ಮಾಡಿಸಿರುವೆ ಎಂದ ಕೂಡಲೇ ನೇರ ಕಾರ ಮೇಲೆ ಜಂಪ್ ಮಾಡಿದ ಸಪ್ತಗಿರಿ, ETಗಳು ತಯಾರಿಸಿದ ಸಿನೆಮಾಗಳಿಗಾಗಿ ಹುಡುಕಾಟ ಶುರುಮಾಡಿದ! ಅದಕ್ಕೇ ಸಪ್ತಗಿರಿ ಕಾರೊಳಗೆ ಇರಲಿಲ್ಲಾ..
ಅಂದ ಹಾಗೇ ಕಾರು ಈಗ ಎಲ್ಲೀವರೆಗೆ ತಲುಪಿದೆ ನೋಡೋಣವಾ?
ಕಾರು ಆಗಿನಿಂದ ಏರು ರಸ್ತೆ ಹತ್ತಲಾಗದೇ ನಿಂತೇ ಇದೆ...ಬಾನೆಟ್ ತೆಗೆದು ರಿಪೇರಿ ಕೆಲಸ ನಡೆಯುತ್ತಿದೆ. ರಿಪೇರಿ ನಂತರ ಮುಂದುವರೆಯುವುದು...
-ಗಣೇಶ.
**********************
ಸಪ್ತಗಿರಿವಾಸಿ ಹಾಗೂ ಕವಿನಾಗರಾಜರಿಗೆ ಧನ್ಯವಾದಗಳು
-ಗಣೇಶ.

Submitted by venkatb83 Tue, 01/22/2013 - 14:47

In reply to by ಗಣೇಶ

ಗಣೇಶ್ ಅಣ್ಣ-
ಮುಂದ?
ಮುಂದಿನ ಭಾಗದ ನಿರೀಕ್ಷೆಯಲ್ಲಿ.......!!
ಗಣೇಶ್ ಅಣ್ಣ ಅವ್ರಿಗೆ ಭಕ್ಹ್ಸ್ಯ ಭೂರಿ ಭೋಜನ -
ನಮಗೆ ಸಿನೆಮ ಸೀಡಿ- ಡೀವೀಡಿ...!!
ನಮ್ಮನ್ನು ಸೆಳೆಯಲು....!!
ಶುಭವಾಗಲಿ.

\|